ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › olnswamy ರವರ ಬ್ಲಾಗ್

ಸಂಪದ ಏನು ಮಾಡಬಹುದು

July 29, 2005 - 8:16am — olnswamy

ಗೆಳೆಯರೆ, ಸಂಪದ ಒಂದು ಕುತೂಹಲಕಾರಿ ಪ್ರಯತ್ನ. ಇದು ಕೇವಲ ಸಾಹಿತ್ಯಕ್ಕೆ ಎಂದು ಲಿಮಿಟ್ ಆಗುವ ಬದಲು ಕನ್ನಡ, ಕನ್ನಡದ ಬದುಕು, ಭಾಷೆ, ಅಷ್ಟೇ ಯಾಕೆ, ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಕನ್ನಡದ ಮುಖಾಂತರ ತಿಳಿಯುವ ತಿಳಿಸುವ ತಾಣ ಆಗಬೇಕು.

ಪ್ರಶ್ನೆ ಉತ್ತರದಂಥ ಒಂದು ಮೂಲೆ ಇಲ್ಲಿ ಆದರೆ ಎಷ್ಟು ಚೆನ್ನ. ಈ ಸೈಟಿನ ನೋಡುಗ/ಓದುಗರು ಕೇಳುವ ಪ್ರಶ್ನೆಗಳು ಮತ್ತು ಅವುಗಳಿಗೆ ಒಂದಲ್ಲ ಹಲವು ಉತ್ತರಗಳು ಸಿಗುವಂತಾದರೆ ದಿನವೂ ಹೊಸತು ಇರುವಂತಾಗುತ್ತದೆ.

ಬರೆಯುವ ತೊಡಕು: ಇನ್ನೊಂದು ಉಪಯುಕ್ತ ಶೀರ್ಷಿಕೆ ಆಗಬಹುದು. ಬಹಳ ಜನ ಬರೆಯುವ ಬಗ್ಗೆ ಏನೇನೋ ತೊಂದರೆಗಳನ್ನು ಎದುರಿಸುತ್ತಾರೆ. ಅವುಗಳನ್ನು ಇಲ್ಲಿ ಹಂಚಿಕೊಂಡು ನಮ್ಮ ಸಂಪದ ಸಂಪದ್ಭರಿತವಾಗುವಂತೆ ಮಾಡಬಹುದು.

ಈ ವಿಳಾಸ: ಕನ್ನದದ ಜನರ ಕುತೂಹಲ ತಣಿಸುವಂಥ, ಉಪಯುಕ್ತವಾದ ಈ ತಾಣಗಳ ವಿಳಾಸಗಳನ್ನು ಪೋಸ್ಟ ಮಾಡಬಹುದು.

ಇದನ್ನು ಓದಿ: ಓದುಗ/ನೋಡುಗರು ಇತರ ಸಹ ಜಾಲಿಗರಿಗೆ ಸೂಚಿಸಬಯಸುವ ಓದು ಸಾಮಗ್ರಿಗಳು ಉಪಯುಕ್ತವಾಗುತ್ತವೆ

ಏನು ಬೇಕು: ಸಂಪದದಲ್ಲಿರಬೇಕಾದ ಸಂಗತಿಗಳ ಬಗ್ಗೆ ಬಯಕೆ ಪಟ್ಟಿ, ವಿಷ್ ಲಿಸ್ಟ್, ಅನ್ನುತ್ತಾರಲ್ಲ ಅದು ಇದ್ದರೆ ಚೆನ್ನ.

ಏನನ್ನಿಸುತ್ತದೆ?

~.~
  • olnswamy ರವರ ಬ್ಲಾಗ್
  • Login or register to post comments
  • 1584 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 3, 2007 - 12:29pm — venkatesh

ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..!

venkatesh's picture

ಒ.ಎನ್.ಎಲ್.ಸ್ವಾಮಿಯವರಿಗೆ,

ನಿಮ್ಮ ಅನಿಸಿಕೆಗಳು ಬಹಳ ಸರಿಯಾಗಿವೆ.ನನಗೆ ಇನ್ನೂ ತಿಳಿಯದ ಸಂಗತಿಯೆಂದರೆ, ಸಂಪದದಲ್ಲಿ ಗಂಭೀರವಾಗಿ ಓದುವವರ ಸಂಖ್ಯೆ ತೀರಾ ಕಡಿಮೆಯೆಂದು ನನ್ನ ಅಭಿಮತ. ಇನ್ನು ಸ್ಪಂದಿಸುವವರು ಬೆರಳೆಣಕೆ. ಒಪ್ತೀರ ! ನಾನೂ ತಪ್ಪಿರುವ ಸಾಧ್ಯತೆಗಳಿವೆ.

ಸಾಹಿತ್ಯ, ಬದುಕು,ಜಗತ್ತಿನ ಯಾವುದೆ ಪ್ರಕರಣಕ್ಕೆ ನಮ್ಮ ಸ್ಪಂದನೆ ಆಗಬೇಕು. ಯಾವಾಗ. ಇದು ಪ್ರಶ್ನೆ !

ಸದ್ಯ "ಕನ್ನಡ ಭಾಶಾಪಂಡಿತರ ಹಾವಳಿ" ಸದ್ಯಕ್ಕೆ ಬ್ಯಾಡ ಮಾರಾಯ್ರೆ ! ಪದ, ತತ್ಸಮವೋ ತದ್ಭವವೋ, ಅಥವ ಇದು ಕನ್ನಡವೇ... ಅನ್ನುವ ಗೊಂದಲದಲ್ಲೇ ತಮ್ಮ 'ಪಾಂಡಿತ್ಯ ಪ್ರದರ್ಶನ ಮಾಡುವ ಸರ್ಕಸ್' ಇನ್ನು ಸಾಕು !

ಓದುಗರ ಬಯಕೆ ಪಟ್ಟಿ ಸರಿಯಾಗಿದೆ ! ಇದು ಖಂಡಿತ ಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 3, 2007 - 4:28pm — hpn

Re: ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..!

hpn's picture

venkatesh wrote:
ಸಂಪದದಲ್ಲಿ ಗಂಭೀರವಾಗಿ ಓದುವವರ ಸಂಖ್ಯೆ ತೀರಾ ಕಡಿಮೆಯೆಂದು ನನ್ನ ಅಭಿಮತ. ಇನ್ನು ಸ್ಪಂದಿಸುವವರು ಬೆರಳೆಣಕೆ. ಒಪ್ತೀರ ! ನಾನೂ ತಪ್ಪಿರುವ ಸಾಧ್ಯತೆಗಳಿವೆ.

Statisticsನಂತೆ, ಹೋದ ತಿಂಗಳು ಶೇಖಡಾ 22,228- ಪ್ರತಿನಿತ್ಯ ಬಂದು ಹೋದವರ ಸಂಖ್ಯೆ (daily avg. 22,228 visitors). ಓದಿದ ಒಟ್ಟು ಪುಟಗಳ ಸಂಖ್ಯೆ - 6,89,080 (ನವೆಂಬರಿನಲ್ಲಿ ಇದು ಸುಮಾರು ಒಂದು ಮಿಲ್ಲಿಯನ್ ಮುಟ್ಟಿತ್ತು). ಈ ಅಂಕಿ ಅಂಶ ಪ್ಲಾನೆಟ್ ಕನ್ನಡವನ್ನು ಹೊರತುಪಡಿಸಿ.

ಹೆಚ್ಚಿನ ಕುತೂಹಲವಿದ್ದವರಿಗೆ ಕೆಳಗಿನ ಲಿಂಕುಗಳು:
* http://sampada.net/image/2701
* http://sampada.net/image/2703

(btw, ಓ ಎಲ್ ಎನ್ ರವರ ಈ ಪಟ್ಟಿ ಒಂದು ವರ್ಷ ಐದು ತಿಂಗಳು ಹಿಂದೆ ಬರೆದದ್ದು)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 3, 2007 - 5:15pm — venkatesh

Re: ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..!

venkatesh's picture

ನಿಮ್ಮ ಅಂಕಿ -ಅಂಶಗಳಿಗೆ ಧನ್ಯವಾದಗಳು. ಸಂಪದದ ದಾಖಲೆಗಳು ನಿಜಕ್ಕೂ ಅಭಿನಂದನಾರ್ಹ ! ಅದರಲ್ಲಿ ಎರಡು ಮಾತಿಲ್ಲ ! ನಾನು ಹೇಳುತ್ತಿರುವುದು, ಸೀರಿಯಸ್ ಓದುಗರನ್ನು ಕುರಿತು. ಬರಿ ಪ್ರತಿನಿತ್ಯ ಬಂದು ಹೋಗುವವರನ್ನಲ್ಲ. ಮತ್ತು ಸುಮ್ಮನೆ ಪುಟಗಳನ್ನು ತಿರುವುಹಾಕುವುವರನ್ನನ್ನೂ ಅಲ್ಲ. ಆದರೆ ಅದಕ್ಕೆ ಸ್ಪಂದಿಸುವರನ್ನು. ಅಷ್ಟೆ. ಇದು ಸೀಮಿತವಾಗಿರಲಿ. ನಾನೂ ಇದಕ್ಕೆ ಹೊರತಾಗಿಲ್ಲ ! ನಾನು ಯರನ್ನೂ ದೂಶಿಸುತ್ತಿಲ್ಲ !

ಧನ್ಯವಾದಗಳು.

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 3, 2007 - 7:16pm — hpn

Re: ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..!

hpn's picture

ನಿಮ್ಮ ಮಾತು ಒಪ್ಪುವಂತಾದ್ದೆ - ಅದನ್ನು ಅನುಮೋದಿಸಿಯೇ ಅಂಕಿ ಅಂಶಗಳಿಗೆ ಕನ್ನಡಿ ಹಿಡಿದದ್ದು.

ಕನ್ನಡಿಗರಲ್ಲಿ ಹೆಚ್ಚು ಜನ ಓದ್ತಾರೆ, ಪುಟಗಳನ್ನು ತಿರುವು ಹಾಕಿ ನೋಡ್ತಾರೆ ಆದರೆ ಭಾಗವಹಿಸುವುದರಲ್ಲಿ *ಬಹಳ ಹಿಂದೆ* ಎಂಬುದು ತಿಳಿದ ವಿಷಯವೇ. Smiling

ಈ ವಿಷಯವಾಗಿ ಇಸ್ಮಾಯಿಲ್ ಬಹಳ ಹಿಂದೆ ಕನ್ನಡಿಗರ ಅತಿ ದೊಡ್ಡ ಸಮಸ್ಯೆ ಎಂಬ ಲೇಖನ ಬರೆದಿದ್ದರು ಕೂಡ.

ಬದಲಾವಣೆಯಾಗುತ್ತಿದೆ ಎಂದು ನಂಬುತ್ತೇನೆ. ಆದರೆ ಬದಲಾವಣೆ ನಿಧಾನ - ಏನೂ ಮಾಡಲಾಗದು. ಪ್ರತಿಯೊಬ್ಬರೂ conscious ಆಗಿ ಭಾಗವಹಿಸಿದರೆ ಮಾತ್ರ ಬದಲಾವಣೆ ಕ್ಷಿಪ್ರ ಗತಿಯಲ್ಲಿ ಸಾಧ್ಯ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 3, 2007 - 7:46pm — venkatesh

Re: ಸಂಪದ ಎಲ್ಲಾ ಮಾಡ್ತಿದೆ ....! ನಿಧಾನವಾಗಿ ಬದಲಾವಣೆ ಆಗಬಹುದು..!

venkatesh's picture

ಸರಿ ಸಾರ್,

ನಿಧಾನವಾಗಿ ಪರಿವರ್ತನೆ ಆಗಬಹುದು. ಇಸ್ಮೈಲ್ ರ ವಿಚಾರ ಓದಿದೆ.
ಮತ್ತೊಮ್ಮೆ ಕೆಳಗೆ ಕಂಡ ಅಂಕೆ- ಸಂಖ್ಯೆ ಗಳು ಸ್ವಲ್ಪ 'ಮುದ' ನೀಡುವುದು ಸಮಾಧಾನಕರವಾದ ಸಂಗತಿ !

೧,೬೬೦ ಸದಸ್ಯರು.
೮೩೧ ಲೇಖನಗಳು
೮೨೧ ಬ್ಲಾಗ್ ಗಳು
೨೯೧ ಚರ್ಚೆಯ ತಂತುಗಳು
೩,೮೪೫ ಪ್ರತಿಕ್ರಿಯೆಗಳು - ಒಳ್ಳೆಯ ಸಾಧನೆ !

ಒಹ್ ! ಉತ್ತಮ ಸಾಧನೆ ! ! ತ್ವರೆ ಬೇಡ- ಆಗಲಿ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2007 - 1:10am — Shyam Kishore

Re: ಸಂಪದ ಎಲ್ಲಾ ಮಾಡ್ತಿದೆ .! "ಕಾಯುವಿಕೆಗಿಂತ ಮಿಗಿಲಾದ ತಪವಿಲ್ಲ"!!!

Shyam Kishore's picture

ನಾನೇನೂ ಬಹಳ ಹಳೆಯ ಸದಸ್ಯನಲ್ಲ ಹೀಗೇ ಅಂತ ಹೇಳೋಕೆ! ಆದರೆ ನನ್ನ ಅಭಿಪ್ರಾಯದಲ್ಲಿ ಈ ಸಮಸ್ಯೆ ಕೇವಲ ಸಂಪದದ್ದಲ್ಲ. ಕನ್ನಡದ ಬಗ್ಗೆ ಯಾವುದೇ ಯೋಜನೆ ತೆಗೆದುಕೊಂಡರೂ (ಸಾಹಿತ್ಯ ಇರಬಹುದು, ಸಂಘಟನೆ ಇರಬಹುದು ಇತ್ಯಾದಿ ಇತ್ಯಾದಿ) ಈ ಸಮಸ್ಯೆ ಎದುರಾಗುತ್ತೆ ಅಲ್ಲವೇ?

ಆದರೆ ಎಷ್ಟೇ ಮನಸ್ಸಿದ್ದರೂ ಕೆಲವೊಮ್ಮೆ ದಿನನಿತ್ಯದ "ಬಿಡುವಿರದ ದುಡಿತದಲ್ಲಿ ಹವ್ಯಾಸದ ಬೆಡಗು ಬಲಿಯಾಗಿಬಿಡುತ್ತದೆ" Cry

ನನಗನ್ನಿಸೋದು ಇಷ್ಟೇ. ನಮಗೆ ತೋಚಿದ ರೀತಿ ನಾವು ಬದಲಾವಣೆಯ ಹರಿಕಾರರಾಗೋಣ (agents of change). ಪ್ರತಿಯೊಬ್ಬರೂ ಹೀಗೆ ಯೋಚಿಸಿದಲ್ಲಿ ಎಲ್ಲವೂ ಸರಿಹೋಗಬಹುದು ಅಲ್ವಾ?.

- ಶ್ಯಾಮ್ ಕಿಶೋರ್ (http://manada-maatu.blogspot.com/index.html)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಕಾವ್ಯ
  • ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
  • ನಾನು ಯಾವ ಆತ್ಮ
  • ಕನಸ್ಸು
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 28 ಅತಿಥಿಗಳು ಆನ್ಲೈನ್ ಇರುವರು.


ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator