ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

'ಮೋರೆ'ಗೆ ಕಪ್ಪು ಬಳಿದರು

November 12, 2005 - 11:00am — prakashaka

ನೆನ್ನೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರ ಪ್ರತಿಭಟನೆ ಬಾಳಾ ಜೋರಾಗಿತ್ತು.
ಕನ್ನಡ ನೆಲದಲ್ಲಿದ್ದು ಕನ್ನಡಿಗರಾಗಿ, ಕರ್ನಾಟಕವನ್ನು ದ್ವೇಶಿಸುವ ಈ ಮೋರೆಯಂಥವರನ್ನು ಯಾವತ್ತೂ ಕ್ಷಮಿಸಬಾರದು.
ಇದು ಇನ್ನುಳಿದವರಿಗೆ ಪಾಟವಾಗಬೇಕು.
ಇನ್ನು ಮುಂದೆ ಗಡಿನಾಡ ಕನ್ನಡಿಗರು ಇಂತಹ ಮನೆ ಮುರಕರನ್ನು ಮಟ್ಟ ಹಾಕುವಲ್ಲಿ ರಕ್ಷಣಾ ವೇದಿಕೆಯವರಲ್ಲದೆ ಕನ್ನಡ ಜನರೂ ಕೈ ಮಿಲಾಯಿಸಬೇಕು.

ಜೈ ಕರ್ನಾಟಕ ಮಾತೆ

  • ಪ್ರಚಲಿತ
~.~
  • Login or register to post comments
  • 1619 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 12, 2005 - 5:17pm — hpn

ಮುಖಕ್ಕೆ ಕಪ್ಪು ಬಣ್ಣ

hpn's picture

ಮುಖಕ್ಕೆ ಕಪ್ಪು ಬಣ್ಣ ಹಚ್ಚಿದ್ದು ಅತಿಯಾಯ್ತು ಎನ್ನೋದು ನನ್ನ ಅಭಿಪ್ರಾಯ. ದಿನಪತ್ರಿಕೆಗಳಲ್ಲಿ ಈ ಬಗ್ಗೆ ಚಿತ್ರಗಳನ್ನು ನೋಡಿದೆಯಾದರೂ ಮಾಮ್ಲಾ ಏನು ಎಂದು ತಿಳೀಲಿಲ್ಲ.
ಕಪ್ಪು ಬಣ್ಣ ಬಳಿಸಿಕೊಂಡ ಮೋರೆ ಮಾಡಿದ್ದೇನು?

--
http://hpnadig.net/blog
http://kn.wikipedia.org

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 14, 2005 - 12:21pm — beluru

ಹಾಗಾದ್ರೆ...

beluru's picture

ಹಾಗಾದ್ರೆ ಬೇರೆ ಯಾವ ಬಣ್ಣ ಬಳೀಬೇಕಿತ್ತು ಹೇಳಿ...!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 14, 2005 - 1:46pm — hpn

ಯಾವ ಬಣ್ಣವೂ ಬಳೆಯಬಾರದಿತ್ತು

hpn's picture

ಯಾವ ಬಣ್ಣವೂ ಬಳೆಯಬಾರದಿತ್ತು. ರೋಹಿತ್ ಮತ್ತು ತ ವಿ ಶ್ರೀ ಮೇಲೆ ತಿಳಿಸಿದಂತೆ ಇದು 'ಶಿವಸೇನೆ' ರೀತಿಯ activism. ಶಿವಸೇನೆಗೇನಾಯಿತು ಎಂಬುದು ನಮಗೆಲ್ಲ ತಿಳಿದಿದೆಯಲ್ಲವೆ?

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 14, 2005 - 2:52pm — ismail

ಕನ್ನಡಿಗರ ದೌರ್ಬಲ್ಯ

ismail's picture

ಬೆಳಗಾವಿಯ ಮಹಾನಗರ ಪಾಲಿಕೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಬೇಕು ಎಂಬ ನಿರ್ಣಯ ಅಂಗೀಕರಿಸುವಾಗ ಅದನ್ನು ವಿರೋಧಿಸಲು ಅಲ್ಲಿ ಪಾಲಿಕೆಯ ಕನ್ನಡಿಗ ಸದಸ್ಯರೇ ಇರಲಿಲ್ಲವಂತೆ!
ಪ್ರಜಾಸತ್ತಾತ್ಮಕವಾದ ಮಾರ್ಗದಲ್ಲಿಯೇ ಇದನ್ನು ತಡೆಯಬಹುದಾದ ಅವಕಾಶವನ್ನು ಹಾಳು ಮಾಡಿಕೊಂಡದ್ದು ಕನ್ನಡಿಗರೇ. ಇಷ್ಟಕ್ಕೂ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂ.ಇ.ಎಸ್. ಅಧಿಕಾರಕ್ಕೆ ಏರುವುದು ಹೇಗೆ? ಇವರು ಗಳಿಸುವ ಓಟುಗಳ ಪ್ರಮಾಣವೆಷ್ಟು?
ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರಷ್ಟೇ ಸಮಸ್ಯೆ ಪರಿಹರಿಸಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 14, 2005 - 3:04pm — hpn

ಜವಾಬ್ದಾರಿ ಮರೆತರು

hpn's picture

ಬೆಳಗಾವಿಯ ಮಹಾನಗರ ಪಾಲಿಕೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ನಿರ್ಣಯ ಅಂಗೀಕರಿಸುವಾಗ ಅದನ್ನು ವಿರೋಧಿಸಲು ಅಲ್ಲಿ ಪಾಲಿಕೆಯ ಕನ್ನಡಿಗ ಸದಸ್ಯರೇ ಇರಲಿಲ್ಲವಂತೆ!

ಒಳ್ಳೆಯ ವಿಚಾರ ತಿಳಿಸಿದ್ದೀರಿ, ನೋಡಿ. ತಮ್ಮ ಜವಾಬ್ದಾರಿ ತೋರಿಸುವ ಸಮಯ ಬಂದಾಗ ಅದನ್ನ ಮರೆತು ಈಗ activism ಮಾಡಿದ್ರೆ ಏನು ಬಂತು? Smiling
--  
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2005 - 2:41am — jaideva

ಅಕ್ಟಿವಿಸಂ ಕೂಡ ಬೇಕಲ್ಲವೇ ?

jaideva's picture

ಈ ಮೇಲಿನ ಅಭಿಪ್ರಾಯಗಳನ್ನೆಲ್ಲಾ ... 'ಟೀಕಾಚಾರ್ಯರ ಸಹಜ ತೆವಲುಗಳು..' ಅಂತಲೋ ಅಥವಾ ಬೇರಾವುದಾದರು ಒರಟು ಮಾತಿನಿಂದ ... ತಳ್ಳೀಹಾಕುವುದು ಹೇಗೆ ತಪ್ಪಾಗಬಹುದೋ... ಹಾಗೆಯೇ, ಕ್ರಿಯಾಶೀಲರಾಗಿ, 'ದಂಡಂ ದಶಗುಣಂ' ಮಾರ್ಗ ಹಿಡಿದಿರುವವರನ್ನು ಹೀಗಳೆಯುವುದು ಸರಿಯಲ್ಲವೇನೋ ??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2005 - 3:27am — hpn

activism ಯಾಕೆ ಕೂಡದು

hpn's picture

ಏನೇ ವಿಚಾರ ಕೈಗೆತ್ತಿಕೊಂಡ್ರೂ ಅದನ್ನ ಕಾರ್ಯಗತಗೊಳ್ಸೋದಕ್ಕೆ ಹಲವಾರು ವಿಧಾನಗಳಿರುತ್ವೆ. ಕಣ್ಮುಚ್ಕೊಂಡು, ಭಾವೋದ್ವೇಗಕೊಳ್ಗಾಗಿ activism ಸಪೋರ್ಟ್ ಮಾಡೋದಲ್ಲಾರೀ... ಸ್ವಲ್ಪ ವಿವೇಚನೆ ಬಳಸಿ ಆಲೋಚಿಸಿ ನೋಡ್ವೇಕು.

ಈಗ ಇವ್ರೆಲ್ಲಾ ಮಾಡಿದ್ದು ಕೊನೆಗೆ ಏನಾಯ್ತು? ಮ.ಏ.ಸ. ಗೆ ಭಿಟ್ಟಿ ಪಬ್ಲಿಸಿಟಿ! 'ಮಹಾರಾಷ್ಟ್ರ ಏಕೀಕರಣ' ಎಂಬುದೊಂದು ಇದೆ ಅಂತ ಎಷ್ಟು ಜನಕ್ಕೆ ಇದುವರೆಗೂ ಗೊತ್ತಿತ್ತು?

ನೀವು ಹೇಳೋ ಈ 'ದಂಡಂ ದಶಗುಣಂ' ಪಾಲಿಸಿಗೆ ಕೈಹಾಕಿ ಕೆಟ್ಟ ಇಮೇಜ್ ಪಡ್ಕೊಂಡ್ರು ನಮ್ ಕನ್ನಡ ಜನ. ಈಗ ಸಿಂಪೆಥಿ ಅವರ ಕಡೆಗೇನೆ! ಒಂದಷ್ಟು ಸಿವಿಲೈಸ್ಡ್ ಆಗಿ ನಡ್ಕೊಂಡು ವಿವೇಚನೆಯಿಂದ ಕಾರ್ಯವೆಸಗಬಹುದಿತ್ತೇನೊ... ಸಿಟ್ಟಿನ ಕೈಗೆ ಬುದ್ಧಿ ಕೊಟ್ರೆ ಏನೂ ಸಾಧಿಸಲಾಗುವುದಿಲ್ಲ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ, ಅಷ್ಟೆ!

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2005 - 8:50am — pavanaja

ಮಸಿಯಲ್ಲದೆ ಫೇರ್ ಆಂಡ್ ಲವ್ಲೀ ಹಚ್ಚಬೇಕಿತ್ತೇ?

pavanaja's picture

ಬೆಳಗಾವಿಯ ಮೇಯರ್ ಮುಖಕ್ಕೆ ಮಸಿಯಲ್ಲದೆ ಫೇರ್ ಆಂಡ್ ಲವ್ಲೀ ಹಚ್ಚಬೇಕಿತ್ತೇ? ಹೀಗೆಂದು ಕೇಳಿದ್ದು ಪೂರ್ಣಚಂದ್ರ ತೇಜಸ್ವಿಯವರು. ಈ ದಿನದ (೧೮-೧೧-೨೦೦೫) ಕನ್ನಡ ಪ್ರಭ ಓದಿ. ಈ ವರದಿಯನ್ನು ಇಂದೇ ಓದಬೇಕು. ನಾಳೆಗೆ ಅವರ ಲಿಂಕ್ ಕೆಲಸ ಮಾಡಲಾರದು.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2005 - 9:39pm — srivathsajoshi

ಕನ್ನಡಪ್ರಭ ಅಂತರ್ಜಾಲ ಕುಣಿಕೆಗಳು

srivathsajoshi's picture

ಕನ್ನಡಪ್ರಭ ಅಂತರ್ಜಾಲ ಆವೃತ್ತಿಯ ಕುಣಿಕೆಗಳು ಒಂದೇ ದಿನ ಊರ್ಜಿತವಾಗಿರುವುದಂತ ಏನೂ ಇಲ್ಲ.

ಇದೇ ಪುಟದ ಕುಣಿಕೆಯನ್ನು ಈ ರೀತಿ ಉಪಯೋಗಿಸಿದರೆ ಇವತ್ತು ಮಾತ್ರವಲ್ಲ, ನಾಳೆಯೂ, ನಾಡಿದ್ದೂ, ಮುಂದಿನ ದಿನಗಳಲ್ಲೂ ಆ ಪುಟ ನಿಮಗೆ ಲಭ್ಯವಿರುತ್ತದೆ!

ನಿಮ್ಮ ಮಾಹಿತಿಗಾಗಿ ಬರೆದೆ.

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 19, 2005 - 10:07pm — hpn

ಕನ್ನಡ ಪ್ರಭ

hpn's picture

ತಂತ್ರಜ್ಞಾನದ ಮಟ್ಟದಲ್ಲಿ ಪ್ರಜಾವಾಣಿ ತಾಣ ಕನ್ನಡಪ್ರಭ ತಾಣಕ್ಕಿಂತ ಉತ್ತಮ. ಆದರೆ ಇವೆರಡೂ ತಾಣಗಳು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು CNN, BBC ರೀತಿಯ ತಾಣಗಳಾಗಬೇಕು. ಸದ್ಯಕ್ಕೆ ಬರಿಯ ಜಾಹಿರಾತಿನ ಆಸೆಗೆ ಹಂಗೂ ಹಿಂಗೂ ಒಂದು ವೆಬ್ಸೈಟ್ ಮಾಡಿ ಬಿಸಾಕಿದ್ದಾರೆ ನಮ್ಮ ಕನ್ನಡ ಪತ್ರಿಕೆಗಳವರು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2005 - 2:10pm — anoopkittur

ಇದೇ ಸ್ವಾಮೀ ನಾನು ಹೇಳಿದ್ದು.........

anoopkittur's picture

ರಣಧೀರರ ಈ ಕೆಲಸ ಎಂ.ಇ.ಎಸ್ ನವರಿಗೆ ಪಬ್ಲಿಸಿಟಿ ಕೊಡುವುದು ಮುಂದಿನ ವಿಷಯ.... ಸತ್ತ ಎಂ.ಇ.ಎಸ್ ನ ಹೆಣಕ್ಕೆ ರಣಧೀರರು ಜೀವ ಕೊಟ್ಟರು.

ಇನ್ನೊಂದು ವಿಷಯ..... ಇಂತಹದ್ದೇ ಕೆಲಸ ಬಜರಂಗಿಗಳು ಮಾಡಿದ್ದರೆ?..... ಚಂಪಾನಂತಹ ಸೋಗಲಾಡಿಗಳು ಏನೆನ್ನುತ್ತಿದ್ದರು? ಹುಚ್ಚು ಕೆಲಸ,ಭಯೋತ್ಪಾದನೆ ಯಾರೇ ಮಾಡಿದರೂ ತಪ್ಪೇ... ರಣಧೀರರಿಲಿ, ಬಜರಂಗಿಗಳಿರಲಿ....

ಇನ್ನೊಂದು ಮಾತು... ಪೋಲೀಸರು ಕೇಸ್ ಹಾಕಿದರೆ ಅದನ್ನು ಎದುರಿಸುವ ತಾಕತ್ತು ಇಲ್ಲದವರು ಅಂತಹ ಕೆಲಕ್ಕೆ ಕೈ ಹಾಕಲೇ ಬಾರದು. ಈಗ ಕೇಸ್ ಹಿಂತೆಗೆದುಕೊಳ್ಳಿ ಎಂದು ಕೂಗಿಕೊಳ್ಳುತ್ತಿರುವುದೇಕೆ???

ಕೊನೆಯ ಮಾತು..... ಬೆಂಗಳೂರಿನ ಈಗಿನ ಮೇಯರ್ ಗೆ.. ಮುಂಬರುವ ಮೇಯರಮ್ಮನಿಗೆ ಕನ್ನಡ ಸರಿ ಬರುವುದಿಲ್ಲವಂತೆ "ಚಂಪಾ ಅವರೇ ಹೌದಾ??? ದಯವಿಟ್ಟು ಚೆಕ್ ಮಾಡಿ.... ಮಸಿ ಡಬ್ಬ ಹಾಗೇ ಇಡಲು ರಣಧೀರರಿಗೆ ಹೇಳ ಬೇಕಾಗಬಹುದು" ಆದರೆ ಅದನ್ನು ಮಾಡುವ ಗಂಡಸುತನ ಇವರಿಗೆ ಇದೆಯೇ????

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 14, 2005 - 4:56pm — pavanaja

ಕನ್ನಡಿಗರೂ ಎಂದಿಗೂ ಹಾಗೆಯೇ

pavanaja's picture

ಕನ್ನಡಿಗರು ಯಾವಾಗಲೂ ಹಾಗೆಯೇ. ಕೇಂದ್ರದ ಲೋಕಸಭೆಯಲ್ಲಿ ಹಾಗೂ ರಾಜ್ಯ ಸಭೆಯಲ್ಲಿ ಕರ್ನಾಟಕದ ಎಲ್ಲ ಸಂಸದರು ಒಟ್ಟು ಸೇರಿ ಕನ್ನಡದ ಬಗ್ಗೆ ಹೋರಾಡಿದ ದಾಖಲೆ ಇದೆಯೇ? ತಮಿಳುನಾಡಿನವರನ್ನು ನೋಡಿ. ಕಾವೇರಿ ನೀರಿನ ವಿಷಯ ಬಂದಾಗ ತಮಿಳುನಾಡಿನ ಎಲ್ಲ ಸದಸ್ಯರು ಪಕ್ಷಭೇದ ಮರೆತು ಒಂದಾಗುತ್ತಾರೆ.

ಧನಂಜಯ ಕುಮಾರ್ ಅವರು ತುಳು ಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಸೇರಿಸಬೇಕೆಂಬ ಕೋರಿಕೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಈ ವಿಷಯ ಚರ್ಚೆಗೆ ಬಂದಾಗ ಅವರೊಬ್ಬರನ್ನು ಬಿಟ್ಟರೆ ಕರ್ನಾಟಕದ ಯಾವ ಸದಸ್ಯರೂ ಹಾಜರಿರಲಿಲ್ಲ.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2005 - 2:13pm — anoopkittur

ಕೇಸರಿ ಬಣ್ಣ

anoopkittur's picture

ಕೇಸರಿ ಬಣ್ಣ ಆಗಬಹುದು.... ಅದು ಮರಾಠಿಗರ ಆಫೀಶಿಯಲ್ ಬಣ್ಣ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 13, 2005 - 1:57pm — tvsrinivas41

ಅಲ್ಲಿಯವರಿಗೆ ಇಲ್ಲಿ!

tvsrinivas41's picture

ಬೆಳಗಾವಿಗೇ ಹೋಗಿ ಇದನ್ನು ಮಾಡಬಹುದಿತ್ತು. ಇಲ್ಲಾಂದ್ರೆ ಬೆಳಗಾವಿಯ ಕಾರ್ಯಕರ್ತರಿಂದ ಮಾಡಿಸಬಹುದಿತ್ತು. ಹೋಗಲಿ, ಈ ಕೃತ್ಯದಿಂದ ಸಾಧಿಸಿದ್ದಾದರೂ ಏನು? ಮಾಡೋದೆಲ್ಲಾ ಮಾಡಿ ಈಗ ಸರ್ಕಾರದ ಮುಂದೆ ನಮಗೇನೂ ಮಾಡಬೇಡಿ ಎಂದು ಬೇಡಿಕೊಳ್ಳುವುದೇಕೆ?

ಇದರಿಂದ ಕರ್ನಾಟಕದ ಮರಾಠಿ ಭಾಷಿಗರಿಗೆ ಪಾಠ ಕಲಿಸಿದಂತಾಯ್ತೋ ಅಥವಾ ರೊಚ್ಚಿಗೆಬ್ಬಿಸಿದಂತಾಯ್ತೋ?

ಇವರನ್ನು ಚುನಾವಣೆಗಳಲ್ಲಿ ಎದುರಿಸಿ ಸೋಲಿಸಿದರೆ ಆಗ ನಿಜವಾದ ಶಕ್ತಿಯ ಪ್ರದರ್ಶನವಾಗುವುದು.

ಇಂತಹದ್ದೇ ಕಾರ್ಯ ಮಾಡುತ್ತಿದ್ದ ಶಿವಸೇನೆ ಈಗ ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ನೋಡಿದ್ದೀರಲ್ಲ.

ಇದು ನನ್ನ ಸ್ವಂತ ಅಭಿಪ್ರಾಯವಷ್ಟೇ. ಅವರವರಿಗೆ ಅವರದ್ದೇ ಆದ ಅಭಿಪ್ರಾಯಗಳಿರುತ್ತವೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 14, 2005 - 12:36pm — Rohit

ಬೆಂಗಳೂರಲ್ಲಿ ಮಾತ್ರ ಕನ್ನಡ ವೇದಿಕೆ

Rohit's picture

ನಾನಂದುಕೊಂಡಿದ್ದನ್ನೇ ಹೇಳಿದ್ರಿ ಶ್ರೀನಿವಾಸ್ರವರೆ. ಇವರಿಗೆ ಬೆಳಗಾವಿಗೆ ಹೋಗಿ ಈ ಕೃತ್ಯ ಮಾಡುವಷ್ಟು ಧೈರ್ಯವಾದ್ರೂ ಎಲ್ಲಿ ಬರಬೇಕು. ಪ್ರಚಾರಕ್ಕಾಗಿ ಆ ಯಪ್ಪಾ ಬೆಂಗಳೂರಿಗೆ ಬಂದಾಗ ಮಾಡಿದ್ದಾರೆ. ಶಿವಸೇನೆಯಂಥ ಸಂಘಟನೆಯೇ ಈ ರಕ್ಷಣಾ ವೇದಿಕಯೂೆ ಕೂಡ. ಜನರ ಸೆಂಟಿಮೆಂಟನ್ನ ಕ್ಯಾಷ್ ಮಾಡಿಕೊಳ್ಳೋಕೆ ಪ್ರಯತ್ನಿಸ್ತಿದಾರೆ. ಎಂಇಎಸ್ ನವರದ್ದೂ ಅದೇ ಕತೇನೇ. ಮುಖ್ಯವಾಗಿ ನಮ್ಮ ಜನರೆಲ್ಲ ವಿದ್ಯಾವಂತರಾಗಿ(ಕೇವಲ ಅಕ್ಷರಸ್ಥರಲ್ಲ) ತಮ್ಮ ಸ್ವಂತ ವಿಚಾರಶಕ್ತಿ ಬೆಳೆಸಿಕೊಳ್ಳುವವರೆಗೆ ಇಂತಹವರ ಆಟ ಇದ್ದಿದ್ದೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 2:14pm — mahesha

ಉ: 'ಮೋರೆ'ಗೆ ಕಪ್ಪು ಬಳಿದರು

mahesha's picture

Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...
  • ಕರ್ನಾಟಕ ರಕ್ಷಣಾ ವೇದಿಕೆ - ಒಂದು ಹೊಸ ದಿಗಂತ
  • ನೈರುತ್ಯ ರೈಲ್ವೇ ವಲಯದ ಕನ್ನಡ ವಿರೋಧಿ ನಿಲುವಿನ ವಿರುದ್ಧ ಕ.ರ.ವೇ ಪ್ರತಿಭಟನೆ
  • ಕನ್ನಡೆವೇ ಇರಲಿ, ಬೇಡವೆಂದರೆ ಮಾಡು ಜಾಗ ಖಾ(ಲೀ)-ರಘೋತ್ತಮ್ ಕೊಪ್ಪರ
  • ಅರ್ಬನ್ ಲ್ಯಾಡ್ಸ್
Syndicate content

ಲೇಖಕರು

prakashaka's picture

ಪರಿಚಯ

www.prakashaka.com ಅಂತರ್ಜಾಲ ತಾಣದ ಸಂಪಾದಕನಾಗಿರುವ ನಾನು, ಮೂಡಬಿದ್ರೆಯ ಕಾಲೇಜಿನಲ್ಲಿ ಗಣಕಯಂತ್ರ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.
ನನ್ನ ಸ್ವಂತ ಊರು, ಮಂಗಳೂರು ತಾಲೂಕಿನ ಉಳೆಪಾಡಿ ಎಂಬ ಚಿಕ್ಕ ಹಳ್ಳಿ.
ಅಂತರ್ಜಾಲದಲ್ಲಿ ಕನ್ನಡ ಪತಾಕೆಯು ಸದಾ ಹಾರುತ್ತಿರಬೇಕೆಂಬುದೇ ನನ್ನ ಆಸೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
  • ಗೂಗಲ್ ಅನುವಾದಕ... ಅವಾಂತರ
  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 8, 2008 - 9:20am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 8:54am
  • savithasr
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 8, 2008 - 8:53am
  • anil.ramesh
    ಉ: ಎಸ್ಸೆಮ್ಮೆಸ್ ಕತೆ
    October 8, 2008 - 8:52am
  • anil.ramesh
    ಉ: ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಬಗೆಗಿನ ಎಸ್ ಎಮ್ ಎಸ್
    October 8, 2008 - 8:50am
  • anil.ramesh
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 8:49am
  • anil.ramesh
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 8:43am
  • savithasr
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 8, 2008 - 8:36am
  • savithru
    ಉ: ತೋಡು ಮತ್ತು ಮೊಗೆ
    October 8, 2008 - 8:35am
  • savithasr
    ಉ: ಎಸ್ಸೆಮ್ಮೆಸ್ ಕತೆ
    October 8, 2008 - 8:25am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 99 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಅಬ್ಯಾಸಗಳನ್ನು ನಾವು ಸೃಷ್ಟಿಸುತ್ತೇವೆ, ಅನಂತರ ಅಭ್ಯಾಸಗಳು ನಮ್ಮನ್ನು ಸೃಷ್ಟಿಸುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator