ಸಿನಿಮಾ ಮಾಹಿತಿ - ಇಕಿರು (೧೯೫೨)
ಇಕಿರು ೧೯೫೨ ರಲ್ಲಿ ಹೊರಬಂದ ಅಕಿರಾ ಕುರೊಸಾವಾರವರು ನಿರ್ದೇಶಿಸಿದ ಜಪಾನ್ ದೇಶದ ಚಿತ್ರ. ಈ ಚಿತ್ರಕ್ಕೆ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಲಭಿಸಿದೆ.
ಅಕಿರಾ ಕುರೋಸಾವಾ ತಮ್ಮ ಹಲವು ಚಿತ್ರಗಳ ನಿರ್ದೇಶನಕ್ಕಾಗಿ ಜಗತ್ಪ್ರಸಿದ್ಧರಾದರೂ ವಿಶ್ವದಾದ್ಯಂತ ಇವರ ಕಲಾತ್ಮಕತೆಯನ್ನು ಮೆಚ್ಚಿಕೊಂಡು ನೆನೆಯುವಂತೆ ಮಾಡಿದ್ದು ಈ ಚಿತ್ರ. ಈ ಚಿತ್ರದಲ್ಲಿ ಆಕ್ಷನ್ ಇಲ್ಲ, ರೊಮ್ಯಾನ್ಸ್ ಇಲ್ಲ, ಕಾಮೆಡಿ ಇಲ್ಲ... ಆದರೆ ನಿಜಜೀವನದ ಚಿತ್ರಣವಿದೆ! ಈ ಚಿತ್ರ ಜಪಾನಿನಲ್ಲಿ ಆಗಿನ ಕಾಲದಲ್ಲಿ ಶೂಟ್ ಮಾಡಿದ್ದಾದರೂ ಕಥೆ ನಮ್ಮ ಭಾರತದ ಈಗಿನ ನಗರಸಭೆ, ನಗರಪಾಲಿಕೆಗಳ ಸ್ಥಿತಿಗೆ ಕನ್ನಡಿ ಹಿಡಿದಂತಿದೆ (ಎಂತಹ ವಿಡಂಬನೆ ನೋಡಿ... ಜಪಾನಿನವರು ಆಗ ಎದುರಿಸುತ್ತಿದ್ದ ಭ್ರಷ್ಟಾಚಾರ, ಪುಂಡಾಟ ಈಗ ನಮ್ಮಲ್ಲಿ ತಾಂಡವವಾಡುತ್ತಿದೆ. ಇದಕ್ಕೆ ಏನಾದರೂ ದಾರಿ ಇರುವುದು ಎಂಬ ಸದುದ್ದೇಶದಿಂದ ಕುರೋಸಾವಾ ಆಗ ತೆಗೆದ ಚಿತ್ರವಿದು! ಜಪಾನಿನವರು ಈ ಸಮಸ್ಯೆಯಿಂದ ಹೊರಬಂದರು - ನಮ್ಮವರು ಹೊರಬರುವರೆ? ಹೊರಬರಲು ಸಹಾಯವಾಗುವಂತೆ ನಮ್ಮಲ್ಲಿ ಇಂತಹ effective ಚಿತ್ರಗಳು ಮೂಡಿ ಬರುವುವೇ? - ಸಮಯವೇ ಹೇಳಬೇಕು)

- Login or register to post comments
- 1029 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ


RSS:
ಪ್ರತಿಕ್ರಿಯೆಗಳು
ಕಡೆಯ ಸಾಲು
ನಿಮ್ಮ ಲೇಖನದಿಂದ ಇದೊಂದು ಒಳ್ಳೆಯ ಸಿನೆಮಾ ಎಂದು ತಿಳಿಯುತ್ತಿದೆ. ಇದರ ಬಗ್ಗೆ ನಾನು ಮೊದಲೂ ಕೇಳಿದ್ದೆ. ಒಳ್ಳೆಯ ವಿಮರ್ಶೆಯನ್ನು ಇತ್ತಿದ್ದೀರ.
ಕಡೆಯ ಸಾಲಿನ ಪ್ರಕಾರ ಇದರ ಸಿಡಿ ಲಭ್ಯವಿದೆಯೇ?
ಅಥವಾ ಪೂರ್ಣ ಚಿತ್ರವನ್ನು ಕೊಂಡು ನೋಡಬೇಕೋ?
ವಂದನೆಗಳೊಂದಿಗೆ
---
ತವಿಶ್ರೀನಿವಾಸ
ಡಿವಿಡಿ ಸಿಗುತ್ತೆ
ಬಾಡಿಗೆ ಡಿವಿಡಿಗಳನ್ನಿಡುವ ಒಳ್ಳೆಯ ಅಂಗಡಿಗಳಲ್ಲೆಲ್ಲ ಇದು ಸಿಗಬಹುದು. ಮುಂಬೈನಲ್ಲಿ ಖಂಡಿತ ಸಿಕ್ಕುತ್ತದೆ. ಬಾಡಿಗೆಗೆ ಸಿಗದಿದ್ದರೆ ನೀವು ಕಂಪ್ಯೂಟರು ಸಾಮಾನು ಕೊಳ್ಳುವ ಜಾಗಗಳಲ್ಲಿ ಇಂತಹ ಸಿನಿಮಾಗಳನ್ನೂ ಇಟ್ಟಿರುತ್ತಾರೆ, ಕೇಳಿ ನೋಡಿ. (ನಮ್ಮಲ್ಲಿ, ಬೆಂಗಳೂರಿನಲ್ಲಿ ನ್ಯಾಶನಲ್ ಮಾರ್ಕೆಟ್ನಲ್ಲಿ ಸಿಗುತ್ತೆ).
ಪ್ರಶಾಂತ್ ಪಂಡಿತ್ ಮತ್ತವರ ಮಿತ್ರಸಮೂಹ ಬನಶಂಕರಿಯಲ್ಲಿ ನಡೆಸಿಕೊಡುವ ಸುಚಿತ್ರಾ ಫಿಲ್ಮ್ ಸೊಸೈಟಿ ಪ್ರದರ್ಶನದಲ್ಲೂ ಇಂತಹ (parellel ಎಂದು ಜನಪ್ರಿಯವಾಗಿರುವ) ಸಿನಿಮಾಗಳನ್ನು ತೋರಿಸುತ್ತಾರೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"