ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಕನ್ನಡಕ್ಕಿಂದು ಬೇಕಾಗಿರುವುದು...

December 5, 2005 - 4:05pm — hpn

'activism' ಅಲ್ಲ, ಬದಲಿಗೆ ಕನ್ನಡದ ಬಳಕೆ, ಸಾಹಿತ್ಯದ ಬೆಳವಣಿಗೆ - ತೆಲುಗು, ತಮಿಳು ಮುಂತಾದ ಭಾಷೆಗಳಿಗಾದಂತೆ ಭಾಷಾ ಬೆಳವಣಿಗೆ, ಮತ್ತು ಓದು ಬರಹಗಳಲ್ಲಿ ಬಳಕೆ!

ಹೀಗೆ ಹೇಳುತ್ತಿರುವುದು ನಾನಲ್ಲ. ಎಷ್ಟೋ ದಿನಗಳಿಂದ ಮನಸ್ಸಿನಲ್ಲಿದ್ದದ್ದನ್ನೇ endorse ಮಾಡುವ ಹಾಗೆ ಇಂದಿನ ಡೆಕ್ಕನ್ ಹೆರಾಲ್ಡ್ ನಲ್ಲಿ ಮೂಡಿಬಂದ ಲೇಖನದಲ್ಲಿ ಲೇಖಕರೊಬ್ಬರು ಬರೆದದ್ದು.

ಇಂದು ಕನ್ನಡಕ್ಕೆ "ಹೋರಾಟ" ಬೇಕಾಗಿದೆ ಎಂದು ಹೇಳುವವರು 'ರಾಜಕೀಯ' ಪ್ರೇರಿತರೆ... ಅಥವಾ ಕನ್ನಡವನ್ನು ಮೂಲವಾಗಿಸಿಟ್ಟುಕೊಂಡು ಒಂದಲ್ಲ ಒಂದು ರೀತಿಯ ಸ್ವಾರ್ಥವನ್ನು ಬಯಸುವವರು ಎಂದು ಹೇಳಿದರೆ ತಪ್ಪಾಗದು. ಕನ್ನಡ ಬಳಸದ, ಕನ್ನಡ ಪುಸ್ತಕಗಳನ್ನೋದದ, ಕನ್ನಡ ಪತ್ರಿಕೆಗಳನ್ನೋದದ ಹಲವರು 'ಕನ್ನಡಿಗರು' ಹೋರಾಟ ನಡೆಸಲು ಮಾತ್ರ 'ನಾ ಮುಂದು ತಾ ಮುಂದು' ಅನ್ನುತ್ತಾ ಇರೋದು ವಿಡಂಬನೆಯಲ್ವೆ?

ಲೇಖನದಿಂದ:

"What Kannadigas lack is the reading habit vis-a-vis other communities, be it a newspaper or any other form of literature. "

"More than a fighting spirit, what needs to be improved upon are reading habits, study of literature, and recognition to latent literary talents so that this get its due space in the comity of Kannada society."

"Even this crisis is showcased in terms of the Kannada movie world, and, unfortunately, it is the movie buffs who decide the pro-Kannada movements."

"For, the development or otherwise of a language depends upon the growth of literature. But unfortunately, in Karnataka, it is the movie field which rules the roost."

ನೀವೇನು ಹೇಳ್ತೀರಿ? Smiling

  • ಪ್ರಚಲಿತ
~.~
  • hpn ರವರ ಬ್ಲಾಗ್
  • Login or register to post comments
  • 1510 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 6, 2005 - 12:13pm — srikanth

activism ಕುರಿತು

srikanth's picture

ಲೇಖನದಲ್ಲಿನ ಅಭಿಪ್ರಾಯವು ನನ್ನ ಅಭಿಪ್ರಾಯವೂ ಕೂಡ.ಎಷ್ಟೋ ಜನ ಬೀದಿ ಬದಿಗಳಲ್ಲಿ ಮಾರುವ sidney sheldon, dan brown ಪುಸ್ತಕಗಳನ್ನು ಕೊಳ್ಳುತ್ತಾರೆ .(ಅವುಗಳನ್ನು ಓದುತ್ತರೋ ಇಲ್ಲವೋ ಅದು ಬೇರೆ ವಿಚಾರ) ಆದ್ರೆ ಕನ್ನಡ ಲೇಖಕರ ಪುಸ್ತಕಗಳ ಬಗ್ಗೆ ಇರೋ ಅಸಡ್ಡೆ ನನಗೆ ಸ್ವಲ್ಪ ಅಚ್ಚರಿನೇ ಮೂಡಿಸುತ್ತೆ. ಈ ಮಾತು ಕನ್ನಡಕ್ಕೆ ಮಾತ್ರ ಸೀಮಿತವಾಗದೇ ಎಲ್ಲ ಪ್ರಾಂತೀಯ ಭಾಷೆಗಳಿಗೂ ಅನ್ವಯಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 6, 2005 - 5:06pm — hpn

ಕನ್ನಡ ಪುಸ್ತಕಗಳು

hpn's picture

ನಿಜ. ಕನ್ನಡ ಪುಸ್ತಕಗಳಿಗೆ ಬಹುಶಃ better marketing ಹಾಗೂ publicityಯ ಅವಶ್ಯಕತೆ ಇದೆ. ಜನರ ಮನದಲ್ಲಿ ನಿಲ್ಲುವುದು ಅವರಿವರು ಮಾತನಾಡಿಕೊಳ್ಳುತ್ತಿರುವುದು, ಬೇರೊಬ್ಬರು ಕೊಂಡು ತರುತ್ತಿರುವ ವಸ್ತುಗಳ ಬಗ್ಗೆ.

ಕನ್ನಡ ಟಿ ವಿ ಚಾನಲ್ಲುಗಳಲ್ಲಿ ಈ ರೀತಿ ಮಾಡ್ತಾರೋ ಇಲ್ವೋ ಗೊತ್ತಿಲ್ಲ (ನಾನು ಹೆಚ್ಚಾಗಿ ಟಿ ವಿ ನೋಡಲ್ಲ)... ಸಿನಿಮಾಗಳ ಪರಿಚಯ ಜನರಿಗೆ ನೀಡಿದಂತೆ ಪುಸ್ತಕಗಳ ಬಗ್ಗೆಯೂ ನೀಡಬಹುದು. ಕನ್ನಡ ಪುಸ್ತಕಗಳನ್ನು ಕೊಳ್ಳೋದು, ಅದನ್ನು ಓದೋದು popular cultureನಲ್ಲಿ (ಇಂಗ್ಲಿಷಿನಲ್ಲಾದಂತೆ) ಅಡಕವಾದ್ರೆ ಸಾಕು, ಕನ್ನಡದ ಸಾಹಿತ್ಯ ಎಷ್ಟೋ ಬೆಳವಣಿಗೆಯಾಗುತ್ತೆ, ಅದರೊಂದಿಗೆ ಕನ್ನಡ ಬಳಕೆಯೂ ಹೆಚ್ಚತ್ತೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 17, 2006 - 10:01pm — ಪ್ರದೀಪ್ ಬೆಳಗಲ್

ಕನ್ನಡಕ್ಕಿಂದು ಬೇಕಾಗಿರುವುದು....

ಪ್ರದೀಪ್ ಬೆಳಗಲ್'s picture

ವ್ಯಕ್ತ ಪಡಿಸಿರುವ ನಿಲುವು ಸರಿಯಾಗಿಯೇ ಇದೆ. ಪತ್ರಿಕೆಗಳು, ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳಸ ಬೇಕಿದೆ. ನನ್ನ ಸಂಬಂಧಿಕರೊಬ್ಬರಿಗೆ ನಿಮ್ಮ ಆದಾಯದ ಎಷ್ಟು ಭಾಗ ಪುಸ್ತಕಗಳಿಗೆ ಖರ್ಚು ಮಾಡುತ್ತೀರೆಂದು ಪ್ರಶ್ನಿಸಿದರೆ ಅವರಿಗೇಕೋ ಇರುಸು ಮುರುಸಾಯಿತು. ಅಲ್ಲಾ ಸ್ವಾಮಿ ನಿಮ್ಮ ಸ್ಥಳದಲ್ಲಿ ನಿಮ್ಮ ಆಯ್ಕೆಯ ಪುಸ್ತಕಗಳು ಲಭ್ಯವಿಲ್ಲವೆನ್ನಿ, ನೀವು ಬೇರೆ ಊರಿಗೆ ಓದಾಗ ತರಬಹುದಲ್ಲವೆ?

ವಾಸ್ತವದಲ್ಲಿ ಕನ್ನಡ ಪುಸ್ತಕ ಮಳಿಗೆಗಳು ಹಲವು ಪಟ್ಟಣಗಳಲ್ಲಿ ಇಲ್ಲ. ಈ ಬಗೆಗೆ ಕನ್ನಡ ಸಾಹಿತ್ಯ ಪರಿಷತ್ ನ ಕೆಲವರೊಂದಿಗೆ ಚರ್ಚಿಸಿದೆ. ಅದು ಬೀಜ ವೃಕ್ಷ ನ್ಯಾಯದಂತಾಗಿದೆ. ಕನ್ನಡ ಪುಸ್ತಕಗಳು ಕೊಳ್ಳಲು ಮಾರಾಟಗಾರರು ಬೇಕು, ಮಾರಟಾಗಾರರು ಮುಂದೆ ಬರಬೇಕೆಂದರೆ ಕನ್ನಡ ಪುಸ್ತಕ ಕೊಳ್ಳುವವರಿರ ಬೇಕು. ಇಷ್ಟೆಲ್ಲ ಕನ್ನಡ ಉತ್ಸವ ಮಾಡುವಲ್ಲಿ ಹಣ ಚೆಲ್ಲುವ ಕೆಲವರಾದರೂ ಈ ಬಗೆಗೆ ಯೋಚಿಸುವಂತಾಗಲಿ.

ಕನ್ನಡದ ಹಲವು ಸಮಸ್ಯೆಗಳ ಬಗೆಗೆ ಚರ್ಚಿಸುವರರಲ್ಲಿ ಪಿ ವಿ ನಾರಾಯಣ ಪ್ರಮುಖರು. ಅವರು `ಕನ್ನಡ ರಾಷ್ಟ್ರೀಯತೆ`ಯ ಪರಿಕಲ್ಪನೆಯನ್ನೂ ಗಂಭೀರವಾಗಿಯೇ ಪ್ರತಿಪಾದಿಸುತ್ತಿರವವರಲ್ಲಿ ಪ್ರಮುಖರು. ಅವರ ಲೇಖನ `ಭಾರತಕ್ಕೊಂದು `ದ್ವಿಪೌರ` ನೀತಿ` ಒಂದು ವರ್ಷದ ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಇದು ಭಾಷಾ ವಲಸೆಗಳ ಪರಿಣಾಮದಿಂದ ಉಂಟಾಗುವ ಸಮಸ್ಯೆಗಳೆಡೆ ನಮ್ಮ ಗಮನ ಸೆಳೆಯುತ್ತದೆ. ಆಸಕ್ತರು ಲೇಖನವನ್ನು ಓದಬಹುದು.

http://www.prajavani.net/dec072004/870120041207.php

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 22, 2006 - 6:59pm — Aravinda

ನಿಮ್ಮ ಮಾತನ್ನ ನಾನೂ ಒಪ್ಪುತ್ತೇನೆ !

Aravinda's picture

ಇದು ನೂರಕ್ಕೆ ನೂರರಷ್ಟು ಸತ್ಯ. ಇಂಥದ್ದೇ ಅನುಭವ ನನಗೂ ಆಗಿದೆ. ಎಷ್ಟೋ ಜನ ಕನ್ನಡದವರೆಂದು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ ಆದರೆ ಕನ್ನಡ ಓದಲೂ ಸಹ ಬರುವುದಿಲ್ಲ ಎನ್ನುವುದು ವಿಪರ್ಯಾಸ !

ಧನ್ಯವಾದಗಳೊಂದಿಗೆ ಅರವಿಂದ http://www.belaku.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾಲೇಜು ಹುಡುಗರ ಕವನಗಳು
  • ಪ್ರಿಯಹಿತವಚನ
  • ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ
  • ಪ್ರಜಾವಾಣಿಯಲ್ಲಿ ನಾ ಕಸ್ತೂರಿಯವರ ಬಗ್ಗೆ ಲೇಖನ
  • ಕರ್ನಾಟಕದಲ್ಲಿ ನಿರಾಶ್ರಿತರಾಗಲು ಸೈಕ್ಲೋನ್ ಬೇಕಿಲ್ಲ!
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
  • ಸಾರ್ಥಕತೆ
  • ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ....
  • ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
  • ಅವಳು ಕಥೆಯಾಗಿಯೇ ಉಳಿದಳು!
  • ಮೊಗ್ಗಿನ ಮನಸು.. ಉತ್ತಮವಾದ ಸಂದೇಶ
  • ವಿಶ್ವಾಸಮತ: ಆನೆಗೆ ಅನ್ಯಾಯ!
  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:30pm
  • vikashegde
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 25, 2008 - 3:28pm
  • vikashegde
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:26pm
  • mahesha
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:25pm
  • mahesha
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:23pm
  • rashmi_pai
    ಉ: ಮೌನ
    July 25, 2008 - 3:13pm
  • roshan_netla
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 3:08pm
  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 30 ಅತಿಥಿಗಳು ಆನ್ಲೈನ್ ಇರುವರು.


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator