ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

ವಿವಾಹದ ವಯಸ್ಸು

December 19, 2005 - 11:46am — Sunil Jayaprakash

ಈಗ್ಗೆ ಸುಮಾರು ತಿಂಗಳ ಹಿಂದೆ ನಮ್ಮ  ದೊಡ್ಡಮ್ಮ  ಹೇಳಿದ ಮಾತಿದು. ನನ್ನ ಅಕ್ಕನಿಗೆ (ಕಸಿನ್)ವರ ಗೊತ್ತಾಗಿತ್ತು. ಆಗ ನಾವೆಲ್ಲರು ನಮ್ಮ ದೊಡ್ಡಮ್ಮನ ಮನೆಯಲ್ಲಿ ಹರಟುತ್ತಿದ್ದೆವು. ಆಗ ಇದ್ದಕ್ಕಿದ್ದ ನಮ್ಮ ದೊಡ್ಡಮ್ಮ, ನೋಡಪ್ಪ, ಸುನೀ, ನೀನು ಜಾಣ, ವರದಕ್ಷಿಣೆ ಒಂಚೂರು ತೊಗೋಬೇಡ. ಮೂರು ದಿನದ ಮದುವೆ ಬೇಕು ಅಂತ ಹೇಳಬೇಡ. ಹೆಣ್ಣು ಹೆತ್ತೋರಿಗೆ ಕಷ್ಟ ಕೊಡಬೇಡ, ಇತ್ಯಾದಿ, ಇತ್ಯಾದಿ. ಅಂತ ಉಪದೇಶ ಮಾಡುತ್ತಿದ್ದರು ಆಥವಾ ಪುಸಲಾಯಿಸುತ್ತಿದ್ದರು ಎಂದುಕೊಳ್ಳೋಣ.
ಇದೇನು ಕೊರಿತಾ ಇದ್ದಾನೆ, ಅಂತ ಅಂದುಕೊಳ್ಳಬೇಡಿ.
ಈಗ ನಾನು ಹೇಳ ಹೊರಟಿರುವುದು ಆದಲ್ಲ. ಇನ್ನೊಂದು ಸ್ವಾರಸ್ಯಕರ ವಿಷಯದ ಬಗ್ಗೆ.
ನಮ್ಮ ದೊಡ್ಡಮ್ಮ ಮುಂದುವರಿಸುತ್ತಾ, ಹುಡುಗರಿಗಾದ್ರೆ ಪರವಾಗಿಲ್ಲ, ಮದುವೆಯಾಗಕ್ಕೆ ಸ್ವಲ್ಪ ವಯಸ್ಸಾದ್ರೂ ಪರವಾಗಿಲ್ಲ. ಯಾರೂ ಕೇಳೋದಿಲ್ಲ. ಕಡೇ ಪಕ್ಷ ೨೮, ೩೦, ೩೫, ೪೦, ಹೋಗ್ಲಿ ೪೫ ಆದ್ರೂ ಪರವಾಗಲ್ಲ. ನೀನೂ ಕೂಡ ಅಷ್ಟೇ ತಡವಾಗಿ ಮದುವೆಯಾಗಪ್ಪ. ಅಂದಿದ್ರು. ನನ್ನಕ್ಕನಾದಿಯಾಗಿ ಎಲ್ಲರೂ ಗೊಳ್ಳೆಂದು ನಕ್ಕಿದ್ದುಂಟು.
ಅಲ್ಲ ೪೫ ಸ್ವಲ್ಪ ವಯಸ್ಸೇ. ಇರಲಿ, ಈ ಘಟನೆಯ ನಂತರ ಆ ಮದುವೆ ವಯಸ್ಸಿನ ಬಗ್ಗೆ ಗಮನಿಸಲಾರಂಭಿಸಿದೆ. ನಾನು ಗಮನಿಸಿದ ಒಂದು ಪ್ರಮುಖ ಅಂಶವೆಂದರೆ ಹುಡುಗರು ಹಿಂದಿಗಿಂತ ಬೇಗ ಮದುವೆಯಾಗುತ್ತಿದ್ದಾರೆ.
ಇತ್ತೀಚೆಗಷ್ಟೆ ನನ್ನ ಅಣ್ಣನೊಬ್ಬನಿಗೆ (ಕಸಿನ್) ಮದುವೆಯಾಯಿತು. ಆಗ ಅವನಿಗೆ ೨೪ ವರ್ಷ. ನೆನ್ನೆ ನನ್ನ ಸ್ನೇಹಿತನ ಮದುವೆಯಿತ್ತು. (ಇವನು ಹತ್ತನೇ ತರಗತಿಯಲ್ಲಿ ನನ್ನ ಸಹಪಾಠಿಯಾಗಿದ್ದ. ಅವನ ವಯಸ್ಸು ೨೩. ಹೌದು ೨೦೦೪ ಪಾಸ್ಸೌಟು. ಅರೆ ಹುಬ್ಬೇರಿಸಬೇಡಿ.
ಈ ನಮ್ಮ ಹುಡುಗರ ಮದುವೆ ವಯಸ್ಸು ಕಡಿಮೆಯಾಗಲು ಕಾರಣ ಹುಡುಕುತ್ತಿರಲಾಗಿ ಕೆಳಕಂಡವು ಮಹತ್ವವೆನಿಸಿದವು.
೧. ಪ್ರೇಮ ವಿವಾಹ.
೨. ಸಾಫ್ಟವೇರ್ ಬಿರುದು ಆಥವಾ ಟ್ಯಾಗ್.
೩. ಅಂತಹಾ, ಗುರುತರ ಜವಾಬ್ದಾರಿ ಇಲ್ಲದಿರುವುದು.
(ಹಿಂದೆ, ತಂಗಿಯ ಮದುವೆ, ಅಕ್ಕನ ಸಂಸಾರ, ತಮ್ಮನ ಓದು, ಇತ್ಯಾದಿಗಳು ಅಡ್ಡಿಯಾಗುತ್ತಿದ್ದವೇನೊ).

ಒಟ್ಟಿನಲ್ಲಿ ಹುಡುಗರಿಗೆ ಇದು, ಮಜಮಾಡುವ ಕಾಲ. ನಮ್ಮ ಮಂತ್ರಿವರ್ಯರೂ ಕೂಡ ಹುಡುಗರ ಮದುವೆ ವಯಸ್ಸನ್ನು  ೧೮ ಇಳಸುವ ಎಂದು ಹೇಳುತ್ತಿದ್ದಾರೆ. ನೀವೇನಂತೀರ. ಇಲ್ಲಿ ಹುಡುಗಿಯರ ಟೀಕೆ, ಟಿಪ್ಪಣಿಗಳಿಗೆ ಹೆಚ್ಚು ಮಹತ್ವ ಕೊಡುವ. ಏನನ್ನೋಣ ಪುರುಷಸಿಂಹಗಳೇ.

‹ ಆ ನಾರ್ಥಿಗೆ ಇದು ಬೇಕಿತ್ತಾ what da ›
  • ಅರಳಿ ಕಟ್ಟೆ
~.~
  • Login or register to post comments
  • 2208 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 21, 2005 - 8:54pm — tvsrinivas41

ನನ್ನ ಅನಿಸಿಕೆ

tvsrinivas41's picture

ನನ್ನ ಅನಿಸಿಕೆಯ ಪ್ರಕಾರ ಹುಡುಗರಿಗೆ ಮದುವೆಯಾಗಲು ಸೂಕ್ತ ವಯಸ್ಸು ೨೫ ರಿಂದ ೨೭ ರವರೆವಿಗೆ. ಹೆಣ್ಣುಮಕ್ಕಳಿಗೆ ೨೨ ರಿಂದ ೨೫ ರವರೆವಿಗೆ.

ಹಿನ್ನೆಲೆ - ಹುಡುಗರು (ನೀವು ಹೇಳಿದಂತೆ ತಂತ್ರಾಂಶಜ್ಞರಿಲ್ಲದಿರಬಹುದು) ಕೆಲಸಕ್ಕೆ ಸೇರಿ ೩-೪ ವರ್ಷಗಳಾಗಿದ್ದರೆ ಆರ್ಥಿಕವಾಗಿ ಸ್ವತಂತ್ರವಾಗಿರುವರು. ೩-೪ ವರ್ಷಗಳು ಸ್ವ-ಇಚ್ಛೆಯಂತೆ ಜೀವನ ಮಾಡಿರುವರು. ಇನ್ನು ಹೆಣ್ಣುಮಕ್ಕಳು ಹುಡುಗರಿಗಿಂತ ದೈಹಿಕ ಮತ್ತು ಮಾನಸಿಕವಾಗಿ ಬೇಗ ಬೆಳೆಯುವುದರಿಂದ -೩ ವರ್ಷ ಎಂದಿಟ್ಟುಕೊಳ್ಳಬಹುದು.
ಇನ್ನು ಮದುವೆ ಆಗಲು ನಿಧಾನ ಮಾಡಿದರೆ ಮುಂದೆ ಕೈಕಾಲು ಆಡದಿರುವಾಗ ಸಂಸಾರ ಒಂದು ಹಂತಕ್ಕೆ ಬಂದಿರುವುದಿಲ್ಲ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 29, 2005 - 2:05am — anil_rvce

ಕವಿಗಳ ಕ್ಷಮೆ ಕೇಳುತ್ತ ...

anil_rvce's picture

ಕೈ ತುಂಬ ದುಡಿಯುವ ವಯಸ್ಸು
ಕೆಲಸದಿ ದಣಿದಿರುವ ಮನಸ್ಸು
ಕಂಡರೆ ಅವಳ ಬಗ್ಗೆ ಕನಸು
ಆಗಲೇ ವಿವಾಹದ ವಯಸ್ಸು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 30, 2005 - 2:31pm — karthik

LOL!!

karthik's picture

LOL!!

ಆಗಲೆ ಕನಸು ಕಾಣಲು ಶುರು ಮಾಡಿದ ಹಾಗಿದೆ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 30, 2005 - 11:38pm — pradeepkishore

ವ್ಹಾರೆ! ವಾ!

pradeepkishore's picture

ಏನ್ ಗುರೂ,
ಆಗಲೆ ತೋಳ ಹಳ್ಳಕ್ಕೆ ಬಿದ್ದಿರೋ ಹಾಗಿದೆ Eye-wink

ಚೆನ್ನಾಗಿದೆ, ಹನಿಗವನ... ದಣಿದವರ ಮನಸ್ಸಿಗೆ ಮುದ ನೀಡುವವರ ಬಗ್ಗೆ ಇನ್ನೂ ಒಂದಷ್ಟು ಕವನಗಳು ಬರಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 8, 2006 - 5:46pm — anil_rvce

ಏನೂ ಇಲ್ಲ

anil_rvce's picture

ಏನೂ ಇಲ್ಲ ಗುರೂ, ಕೇವಲ ಕಳಪೆ ಕವನ ಮಾತ್ರ

ವಿವಾಹದ ವಯಸ್ಸು ಆಗಿತ್ತು
ಎದುರಿಗೆ ಚೆಲುವೆಯು ಬಂದಿತ್ತು
ಆಕೆಯ ನಗುವಿನ ಗಮ್ಮತ್ತು
ತೋಳವು ಹಳ್ಳಕ್ಕೆ ಬಿದ್ದಿತ್ತು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 8, 2006 - 7:25pm — Sunil Jayaprakash

ಹಳ್ಳ ಮತ್ತು ಪ್ರಪಾತ

Sunil Jayaprakash's picture

ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ. ಇಲ್ಲವಾದರೆ ಈಗ ಕೇವಲ ಹಳ್ಳ ನಂತರ ಪ್ರಪಾತ. ಏನು ಕಾದಿದೆಯೋ ರಂಗಾss

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 22, 2005 - 12:34pm — ಬಾಲರಾಜೀವ

ಹಾಗಾದರೆ ನಿಮ್ಮ ಮದುವೆ?

ಬಾಲರಾಜೀವ's picture

ಸುನಿಲ್ ಅವರೆ,

ಹಾಗಾದರೆ ಅತಿ ಶೀಘ್ರದಲ್ಲೇ ನಿಮ್ಮ ಮದುವೆಯ ಆಮಂತ್ರಣ ನಿರೀಕ್ಷಿಸಬಹುದೆ? Smiling
ಅಥವಾ ನಿಮ್ಮ ದೊಡ್ಡಮ್ಮ ಹೇಳಿದ ಹಾಗೆ ಇನ್ನೂ ಸಮಯವಿದೆಯೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 22, 2005 - 1:33pm — Sunil Jayaprakash

ಉ : ಹಾಗಾದರೆ ನಿಮ್ಮ ಮದುವೆ?

Sunil Jayaprakash's picture

ಅಥವಾ ನಿಮ್ಮ ದೊಡ್ಡಮ್ಮ ಹೇಳಿದ ಹಾಗೆ ಇನ್ನೂ ಸಮಯವಿದೆಯೇ?
ಹೇಳುವುದಕ್ಕೂ ಕೇಳುವುದಕ್ಕೂ ಸಮಯವಿಲ್ಲ. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ. ಈಗ ತಾನೆ, ರೈನ್ ಬೋ, ಲಂಚ್ ಬಾಕ್ಸ್ ಕಾರ್ಯಕ್ರಮದಲ್ಲಿ(ಸಮಯ ೧, ೩೭) ಲಿಂಗ ಅನುಪಾತದ ಮಾತುಕತೆ ನಡೆಯುತ್ತಿದೆ. ಅವರ ಪ್ರಕಾರ ೧೯೯೧ (೧೦೦೦ ಪುರುಷರಿಗೆ, ೯೮೦ ಪ್ಲಸ್) ಗಿಂತ ೨೦೦೧( ೧೦೦೦ ಪುರುಷರಿಗೆ ೯೪೦ಪ್ಲಸ್ ) ರಲ್ಲಿ ಲಿಂಗ ಅನುಪಾತ ಕಡಿಮೆಯಾಗಿದೆಯಂತೆ. ಇದನ್ನು ಪುರುಷ ಸಿಂಹಗಳು ಯೋಚಿಸಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 22, 2005 - 3:33pm — tvsrinivas41

ಜಾಸ್ತಿ ಯೋಚಿಸಬೇಡಿ!

tvsrinivas41's picture

ಅನುಪಾತದ ಬಗ್ಗೆ ಜಾಸ್ತಿ ಯೋಚಿಸಬೇಡಿ. ಕಂಕಣ ಬಲ ಕೂಡಿಬಂದಾಗ ಮದುವೆ ಆಗುವುದು. ಯಾವುದೂ ನಮ್ಮ ಕೈನಲ್ಲಿಲ್ಲ.

ಇನ್ನು ನೀವು ಮೇಲೆ ತಿಳಿಸಿದ ಅನುಪಾತಕ್ಕೆ ಕಾರಣ:
೧) ಮಗು ಹುಟ್ಟುವ ಮೊದಲೇ ಭ್ರೂಣಹತ್ಯೆ (ಹೆಣ್ಣಾಗಬಾರದೆಂದು)
೨) ಹೆಚ್ಚಿನ ಹೆಣ್ಣುಮಕ್ಕಳು ಮದುವೆಯಾಗದಿರುವುದು
೩) ಒಂದು ಮಗುವಿನ ಪಾಲಿಸಿ, ಇತ್ಯಾದಿ

ಇಷ್ಟಾಗಿಯೂ ಜನಸಂಖ್ಯೆ ನಿಯಂತ್ರಣದಲ್ಲಿ ಇಲ್ಲವೇ ಇಲ್ಲ. ಅದಕ್ಕೇ ಅಲ್ವೇ ನಿಸರ್ಗ ಸಂರಕ್ಷಣೆ ಆಗದಿರುವುದು ಮತ್ತು ನಿಸರ್ಗ ಮಾನವ ಜನಾಂಗದ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವುದು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 8, 2006 - 6:46am — sinchanabhat

ಸುಮ್ನೆ ಒಂದು ಮಾತು

sinchanabhat's picture

ಒಟ್ಟಿನಲ್ಲಿ ಹುಡುಗರಿಗೆ ಇದು ಮಜಾ ಮಾಡುವ ಕಾಲ ಅಂದಿದ್ದೀರಲ್ಲಾ.ನಿಮ್ಮಯೋಚನೆಯಲ್ಲಿ ಹೊಸಬದುಕಿನ ಜವಾಬ್ದಾರಿ ಎಂದರೆ ಆಟವೆ?ಮಜಾಮಾಡಲು.

ಅರೆ ನಿಮ್ಮ ಅತ್ತೆಗೆ ತಿಳಿದಿರಲಿಕ್ಕಿಲ್ಲಾ ಈಗ ಹಲವೆಡೆ( ಮಂಗಳೂರು, ಉ.ಕ,ದ.ಕ) ಜಾರಿಯಲ್ಲಿರುವುದು ವದುದಕ್ಷಿಣೆ(ಮೊದಲು ಹುಡುಗರು ತಮ್ಮನ್ನು ತಾವು ವರದಕ್ಷಿಣೆಗೆ ಮಾರಿಕೊಳ್ಳುತ್ತಿದ್ದರಲ್ಲಾ)ಮದುವೆಯಂತಹ ಜವಾಬ್ದಾರಿಯುತವಾದದ್ದಕ್ಕೆ ವಯಸ್ಸಿಗಿಂತ ಬುದ್ದಿಯ ಪ್ರೌಡತೆ ಮುಖ್ಯವೇನೋ ಅನಿಸುತ್ತದೆ.ಈಗಿನ ಕಾಲದ ಹೆಚ್ಚು ಹುಡುಗಿಯರು ಸ್ವತಂತ್ರಪ್ರಿಯರು.ಇನ್ನು ಹುಡುಗರು 18ಕ್ಕೆ ಮದುವೆಯಾಗ ಹೊರಟರೆ ಕೆಲವು ಮಹತ್ತರ ಬದಲಾವಣೆ ಆಗಬೇಕಾದೀತು.ಸಾಮಾನ್ಯವಾಗಿ ಹೆಂಡತಿಗಿಂತ ಗಂಡ ದೊಡ್ಡವನಿರುತ್ತಾನೆ.(ಅಂದರೆ ಅವನಿಗೆ ಬೇಗ ಬುದ್ದಿ ಬಲಿತಿರುವುದಿಲ್ಲವೆಂದಾಗಿರಬೇಕು Smiling))) ಗಂಡನಾದವನು ಹೆಚ್ಚು ಕಲಿತಿರುತ್ತಾನೆ.ಆದರೆ ಅವರು ಈಗ ತಮ್ಮ ಸ್ವಾಭಿಮಾನವನ್ನು ಬಿಟ್ಟು ಮದುವೆಯಾಗಬೇಕಾದೀತು,ನಂತರ ಕಲಿಯಬೇಕಾದೀತು.ನೀವೇನೋ ಹುಡುಗರು ಇದಕ್ಕೆ ಒಪ್ಪಿಕೊಂಡುಬಿಡುತ್ತೀರೋ ಏನೋ! ಆದರೆ ಹುಡುಗಿಯರು ನಾವು ಪುರುಷರಿಗೆ ಸಮಾನರು,ಅವರಿಗಿಂತ ಹೆಚ್ಚು ಎಂದು ತೋರಿಸ ಹೊರಟರೂ ಈ ವಿಷಯದಲ್ಲಿ ಅವರು ಪತಿಯಾಗುವವನು ತನಗಿಂತಾ ಹೆಚ್ಚಿನವನಾಗಿರಬೇಕು,ತನಗೆ ನಡೆಯಲು ಬರುತ್ತಿದ್ದರೂ ಆತ ನನ್ನ ಕೈಹಿಡಿದುಸಾಗಬೇಕು ಎಂದೇ ಅಂದುಕೊಳ್ಳುತ್ತಾಳೆ.
ಇನ್ನು ಪ್ರೇಮಿಗಳಿಗೆ ವಿವಾಹವಾಗುವ ಮುನ್ನ ಸ್ವಂತ ಬದುಕನ್ನು ಬದುಕಲು ಬರಬೇಕಲ್ಲವೆ? ಸಾಫ್ಟವೇರ್ ಬಿರುದಾಂಕಿತರು ಈಗೀಗ ಅವರಂತಹ(ಅದನ್ನೇ ಕಲಿತ) ಮಹಿಳೆಯರನ್ನೇ ಹುಡುಕುತ್ತಿದ್ದಾರಲ್ಲಾ.
ಹೀಗೆ ಸುಮ್ಮನೆ ಏನೇನೋ ಹೇಳಿದರೂ ಹುಡುಗರು ಈಗ ಬೇಗ ಮದುವೆ ಆಗುತ್ತಿರುವುದೇನೋ ಹೌದು.ಜೊತೆಗೆ ನಿಮ್ಮ ಕಾರಣಗಳೂ ಸಮಂಜಸವಾಗಿದೆ, ಇನ್ನೇನಾದರೂ ಕಾರಣಗಳಿವೆಯೋ ಏನೋ ನನಗೂ ತಿಳಿಯದು.ಇನ್ನು ನೀವು ಮದುವೆಯ ವಯಸ ಕುರಿತು ಯೋಚಿಸುತ್ತೀದ್ದೀರಿ ಎಂದು ತಿಳಿಸಿದ್ದೀರಾ 45ವರ್ಷಕ್ಕೇ ಮದುವೆಯಾಗಬೇಕು ಅಂದುಕೊಂಡರೆ ೨೫ರ ಹುಡುಗಿ ಸಿಗಲಿಕ್ಕಿಲ್ಲ, ೧೮ ಕ್ಕೇ ಆಗಬೇಕು ಅಂದಿದ್ದರೂ ಆ ವಯಸ್ಸಂತೂ ಮೀರಿದಹಾಗಿದೆ.Smiling))

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 8, 2006 - 12:06pm — Sunil Jayaprakash

ಮತ್ತೊೆಂದೆರೆಡು ಮಾತು

Sunil Jayaprakash's picture

sinchanabhat wrote:
ಒಟ್ಟಿನಲ್ಲಿ ಹುಡುಗರಿಗೆ ಇದು ಮಜಾ ಮಾಡುವ ಕಾಲ ಅಂದಿದ್ದೀರಲ್ಲಾ.ನಿಮ್ಮಯೋಚನೆಯಲ್ಲಿ ಹೊಸಬದುಕಿನ ಜವಾಬ್ದಾರಿ ಎಂದರೆ ಆಟವೆ?ಮಜಾಮಾಡಲು.

ಎನೆೋಪ್ಪ ತಿಳಿಯದು. ಬಹುಶಃ ಇರಲಾರದು. ಆದರೆ ಇದನ್ನು ಸಹ ನಮ್ಮ ದೊಡ್ಡಮ್ಮನೆ ಹೇಳಿದ್ದು. ಮದುವೆೆಯಾದರೆ ಜಾಲಿಯಾಗಿರಬಹುದು ಅಂತ. ಹಿರಿಯರು ಏನು ಹೇಳಿದರೋ ಅದನ್ನೇ ಯಥಾವಥ್ ಪೋಸ್ಟಿಸಿದ್ದೇನೆ. ಇಲ್ಲಿ ಹುಡುಗರು ಪದ ಕೇವಲ ಗಂಡಸರಿಗಲ್ಲ, ಹೆಂಗಸರನ್ನೂ ಒಳಗೊಂಡಿರುವ ಪದ.

ನನ್ನ ಅನಿಸಿಕೆಯೆಂದರೆ ಮದುವೆ ಜವಾಬ್ದಾರಿಯುತವಾದದ್ದು ಎಂದುಕೊಂಡು ಯಾವಾಗಲೂ ಗಂಭೀರವದನರಾಗಿರಬಾರದು ಅಥವಾ ಮುಖ ಸಿಂಡರಿಸಿಕೊಂಡಿರಬಾರದು. (ಸಿಂಗರಿಸಿ ಅಲ್ಲ ಮತ್ತೆ...).. ಒಬ್ಬರಿಗೊಬ್ಬರು ಆಗಬೇಕೇ ಹೊೆರತು ಯಾವಾಗಲೂ ಗತ್ತು, ಜಂಭ ಪ್ರದರ್ಶಿಸಬಾರದು.

sinchanabhat wrote:
ಅರೆ ನಿಮ್ಮ ಅತ್ತೆಗೆ ತಿಳಿದಿರಲಿಕ್ಕಿಲ್ಲಾ ಈಗ ಹಲವೆಡೆ( ಮಂಗಳೂರು, ಉ.ಕ,ದ.ಕ)

ಬಹುಶಃ ನಮ್ಮ ದೊಡ್ಡಮ್ಮನ ಉದ್ಧರಿಸಿ ಹೇಳುತ್ತಿದ್ದೀರ ಅನ್ನಿಸುತ್ತೆ.

sinchanabhat wrote:
ಆದರೆ ಹುಡುಗಿಯರು ನಾವು ಪುರುಷರಿಗೆ ಸಮಾನರು,ಅವರಿಗಿಂತ ಹೆಚ್ಚು ಎಂದು ತೋರಿಸ ಹೊರಟರೂ ಈ ವಿಷಯದಲ್ಲಿ ಅವರು ಪತಿಯಾಗುವವನು ತನಗಿಂತಾ ಹೆಚ್ಚಿನವನಾಗಿರಬೇಕು,ತನಗೆ ನಡೆಯಲು ಬರುತ್ತಿದ್ದರೂ ಆತ ನನ್ನ ಕೈಹಿಡಿದುಸಾಗಬೇಕು ಎಂದೇ ಅಂದುಕೊಳ್ಳುತ್ತಾಳೆ.

ಅರೆ, ಇದು ಅಮ್ಮಾವ್ರ ಗಂಡ ಚಿತ್ರ ದಲ್ಲಿ ನಾಯಕ(ಶಿವರಾಜ್ ಕುಮಾರ್) ನಾಯಕಿಗೆ(ಗೊತ್ತಿಲ್ಲ) ಹೇಳುವ ಮಾತಿದು. ಸಖತ್ ಮಜಾ ಇದೆ ಆ ಚಿತ್ರದಲ್ಲಿ.

ನಮ್ಮ ತವಿ ಶ್ರೀನಿವಾಸರು ಹೇಳಿದ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ.
೧೮ ಕ್ಕೆ ಇಳಿಸುವ ಕ್ರಮವನ್ನು ನಾನಂತೂ ಖಂಡಿತವಾಗಿ ವಿರೋಧಿಸುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 9, 2006 - 5:10am — sinchanabhat

ಕ್ಷಮಿಸಿ

sinchanabhat's picture

ಕ್ಷಮಿಸಿ ನಾನು ನಿಮ್ಮ 'ದೊಡ್ಡಮ್ಮ' ಎನ್ನಲು 'ಅತ್ತೆ 'ಅಂದುಬಿಟ್ಟಿದ್ದೇನೆ.

ಇನ್ನು ಜವಾಬ್ದಾರಿಗಳನ್ನು ಪ್ರೀತಿಸಿ,ಅಂದರೆ ಅದನ್ನು ಸಂತಸದಿಂದ ನಿಭಾಯಿಸಿ, ಆಗ ಅಲ್ಲಿ ಕೆಲವೊಮ್ಮೆ ಗಂಭೀರವದನ ಕಂಡರೂ ಮುಖ ಸಿಂಡರಿಸುವ ಪ್ರಶ್ನೆಯೇ ಬರುವುದಿಲ್ಲ.ಒಬ್ಬರಿಗೊಬ್ಬರು ಆದಾಗಲೇ ಆ ಸಾಂಗತ್ಯ ವೆಂಬುದರಲ್ಲಿ ಸುಂದರ ಅರ್ಥ ಕಾಣುವದು.ಇನ್ನು ಗತ್ತು ಜಂಭಗಳನ್ನು ತೋರಿಸಬಾರದೆಂಬ ನಿಮ್ಮ ಮಾತು ನಿಜವಾದದ್ದು, ಅರಿಯುವಂತದ್ದು(ಅದು ಮದುವೆಯ ನಂತರ ಗಂಡಸರಿಗೇ ಸ್ವಲ್ಪ ಜಾಸ್ತಿಯೇನೋ).
ಅಮ್ಮವ್ರಗಂಡನಿಗೆ ಅಂತಾ ಮಾತುಗಳನ್ನು ಹೇಳಕ್ ಬರತ್ತಾ! ನಾನು ಆ ಚಿತ್ರವನ್ನು ನೋಡಿಲ್ಲ,ಈಗ ಒಮ್ಮೆ ನೋಡಬೇಕಾಯಿತು.Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 15, 2008 - 1:01am — ravikeerthi

ಉ: ಮತ್ತೊೆಂದೆರೆಡು ಮಾತು

ravikeerthi's picture

parvagila 2 varshadha hindina baraha adhru manassige mudha niduthede, tamase agiyu idhe.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 15, 2008 - 9:05am — Sunil Jayaprakash

ಉ: ಮತ್ತೊೆಂದೆರೆಡು ಮಾತು

Sunil Jayaprakash's picture

ರವಿಕೀರ್ತಿ, ನಿಮಗೆ ಬರಹ ಇಷ್ಟವಾಗಿದ್ದು ನನಗೂ ಸಂತೋಷ. ಅಂದಹಾಗೆ, ಮೇಲಿನ ಬರಹದಲ್ಲಿ ಪ್ರಸ್ತಾಪವಾಗಿದ್ದ ಇಬ್ಬರಿಗೆ ಈಗ ಮಗು ಆಗಿದೆ Sticking out tongue ತಾಯಿ-ಮಗು ಹಾಗೆಯೇ ಬಡಪಾಯಿ ತಂದೆ ಕೂಡ ಆರೋಗ್ಯವಾಗಿದ್ದಾರೆ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 19, 2008 - 12:02am — ಗಣೇಶ

ಉ: ಮತ್ತೊೆಂದೆರೆಡು ಮಾತು

ಗಣೇಶ's picture

ಸುನಿಲ್,
ನೀವು ಮದುವೆಯಾಗಲು ಹೊರಟಿದ್ದಾ ಅಥವಾ ಯುದ್ಧಕ್ಕಾ ಗೊತ್ತಾಗಲಿಲ್ಲ. Smiling
ಅಲ್ಲಲ್ಲಿ 'ಪುರುಷಸಿಂಹ' ಪದ ಉಪಯೋಗಿಸಿದ್ದರಿಂದ ಹರಿಣಗಳು ಪ್ರತಿಕ್ರಿಯಿಸಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 19, 2008 - 10:19pm — Sunil Jayaprakash

ಉ: ಮತ್ತೊೆಂದೆರೆಡು ಮಾತು

Sunil Jayaprakash's picture

ನಮ್ಮನ್ನು ನಾವು, ಪುರುಷಸಿಂಹಗಳು ಅಂತ ಕರೆದುಕೊಳ್ಳುವುದು ನಮ್ಮಯ ಆತ್ಮವಿಶ್ವಾಸದ ಪ್ರತೀಕ. ಅದಕ್ಕೆ ಹರಿಣಿಗಳೇಕೆ ಹೆದರಿಕೊಂಡು ವರೆಚ್ಚಿಗೆ ಸರಿದರೋ ನಾ ಕಾಣೆ, ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 21, 2008 - 12:17pm — mahesha

ಉ: ಮತ್ತೊೆಂದೆರೆಡು ಮಾತು

mahesha's picture

ಸುನಿಲ ಮದುವೆ ಆಗಲ್ಲ.. ಅವರು ಆಗೋದು ವಿವಾಹ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2006 - 11:28am — Sunil Jayaprakash

ಇದೇ ಧಾಟಿಯಲ್ಲಿ

Sunil Jayaprakash's picture

ಇದೇ ಧಾಟಿಯಲ್ಲಿ, CNN-IBN ನಲ್ಲಿ ಒಂದು ವರದಿ ಪ್ರಕಟವಾಗಿದೆ. ಬಹುಶಃ generation gap ನಲ್ಲಿ ಇದೂ ಸಹ ಬರುತ್ತದೆ ಎನಿಸುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 12:57pm — kannadakanda

ಉ: ವಿವಾಹದ ವಯಸ್ಸು

kannadakanda's picture

ಮದುವೆಯಾಗಲು ಹೆಣ್ಣಿಗೆ ೧೮-೨೨ ವಯಸ್ಸು ಗಂಡಿಗೆ ೨೦-೨೫ ಇದ್ದರೆ ಮುಂದೆ ಅವರ ಬಾೞು ಹಸನು. ಅವರು ಐವತ್ತು ಮೀಱುವುದಱೊಳಗೆ ಅವರಿಗೆ ವಯಸ್ಸಿಗೆ ಬಂದ ಮಕ್ಕಳಿರುತ್ತಾರೆ. ಸುಮಾರು ೪೫-೫೦ ವರ್ಷಕ್ಕೆಲ್ಲ ನಮಗೆ ಊಱುಗೋಲಾಗುವ ಮಕ್ಕಳಿರುತ್ತಾರೆ. ನೀವೇನಂತೀರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 1:15pm — mahesha

ಉ: ವಿವಾಹದ ವಯಸ್ಸು

mahesha's picture

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2008 - 2:18pm — Sunil Jayaprakash

ಉ: ವಿವಾಹದ ವಯಸ್ಸು

Sunil Jayaprakash's picture

ಮಳ್ಳ ಮಳ್ಳ, ಮಾಯ್ಸ, ಮಂಚಕ್ಕೆ ಕಾಲೆಷ್ಟು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಗೀತ ಪಾಠದ ಮೊದಲ ಗೀತೆ
  • ಹನಿಕವನಗಳು
  • 7 ಮದುವೆ ಅನುಭವ
  • ಪ್ರೀತಿ..........?
  • ಅಪ್ಪಾ..ಅಪ್ಪಾ..ನನಗೆ ಹದಿನೆಂಟಾಯ್ತಪ್ಪಾ..
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ಜ್ಯೋತಿಷ್ಯ..ವೈಜ್ಞಾನಿಕ ?
  • "ಶಂಖದಿಂದ ಬಂದರೆ ತೀರ್ಥ..."
  • ನರಸಿಂಹ ಸಾಲಿಗ್ರಾಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 3:01am
  • anivaasi
    ಉ: ಬಿಗುಮಾನದ ಚಿತ್ರಗಳು
    September 8, 2008 - 2:25am
  • anivaasi
    ಉ: ಜೀವ ಕಾಯುವುದೇತಕೆ?
    September 8, 2008 - 2:24am
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 1:57am
  • manjunath s reddy
    ಉ: ಜೀವ ಕಾಯುವುದೇತಕೆ?
    September 8, 2008 - 1:41am
  • manjunath s reddy
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 1:31am
  • nekkar_guru
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 8, 2008 - 1:29am
  • nekkar_guru
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 8, 2008 - 1:07am
  • mayakar
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 12:16am
  • raghava
    ಉ: ಮೊದಲ ಚಿತ್ರ
    September 8, 2008 - 12:13am
ಇನ್ನಷ್ಟು


ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator