ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › pavanaja ರವರ ಬ್ಲಾಗ್

ಕುಣಿತ ಗೊತ್ತಿಲ್ಲದವರು ರಂಗಸ್ಥಳ ಓರೆ ಎಂದರಂತೆ

December 24, 2005 - 10:11pm — pavanaja

ಪ್ರಜಾವಾಣಿ ಪತ್ರಿಕೆಯಲ್ಲಿ ಕೆ. ಆರ್ ಚಂದ್ರಶೇಖರ ಎಂಬವರು ಎಲ್ಲ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡುವ ತಂತ್ರಾಂಶವೊಂದನ್ನು ತಯಾರಿಸಬೇಕು ಎಂಬ ಪ್ರಸ್ತಾಪವನ್ನು ಮುಂದಿಟ್ಟರು. ಅದಕ್ಕೆ ಪ್ರತಿಕ್ರಿಯೆಯಾಗಿ ಚ. ಹ. ರಘುನಾಥ ಅವರು ಸದ್ಯಕ್ಕೆ ಅನುವಾದದ ತಂತ್ರಾಂಶ ತುಂಬ ದೂರದ ಕನಸು. ಅತೀ ಅಗತ್ಯವಾಗಿ ಆಗಬೇಕಾದ ಇತರೆ ಕೆಲಸಗಳೇ ಬಾಕಿ ಇವೆ ಎಂದು ಬರೆದರು. ಈ ವಿಷಯವನ್ನು ನಾನೂ ಒಪ್ಪುತ್ತೇನೆ. ರಘುನಾಥ ಅವರು ತಮ್ಮ ಮಾತಿಗೆ ಉದಾಹರಣೆಯಾಗಿ ಕನ್ನಡದಲ್ಲಿ ಇನ್ನೂ ಹಲವಾರು ರೀತಿಯ ಕೀಲಿಮಣೆಗಳು ಚಾಲ್ತಿಯಲ್ಲಿರುವುದನ್ನು ಪ್ರಸ್ತಾಪಿಸಿದರು. ಹಾಗೆಯೇ ಹಲವರು ಇಂಗ್ಲಿಶ್ ಲಿಪಿಯಲ್ಲಿ ಕನ್ನಡವನ್ನು ಬರೆದು (ಟೈಪಿಸಿ) ಇಮೈಲ್ ಮಾಡುವುದನ್ನು ಪ್ರಸ್ತಾಪಿಸಿದರು. ಅವರ ಪ್ರಕಾರ ಕನ್ನಡದಲ್ಲಿ ಬೆರಳಚ್ಚು ಮಾಡುವುದನ್ನು ಕಲಿಯುವುದು ಒಂದು ಹೆಚ್ಚಿನ ಕೆಲಸ. ನಾನು ಕೇಳುತ್ತೇನೆ -"ನೀವು ಹುಟ್ಟುವಾಗ ಇಂಗ್ಲಿಶ್ ಕೀಲಿಮಣೆಯನ್ನು ಕಲಿತುಕೊಂಡೇ ಹುಟ್ಟಿ ಬಂದಿರೇ? ಇಂಗ್ಲಿಶ್ ಕೀಲಿಮಣೆ ಕಲಿಯುವುದು ನಿಮಗೆ ಕಷ್ಟವಾಗಲಿಲ್ಲ. ಅದು ಒಂದು ಹೆಚ್ಚಿನ ಕೆಲಸವಾಗಲಿಲ್ಲ. ಕನ್ನಡದ ಕೀಲಿಮಣೆ ಕಲಿಯುವುದು ಮಾತ್ರ ಯಾಕೆ ಹೆಚ್ಚಿನ ತೊಂದರೆಯ ಕೆಲಸ ಎಂದೆನಿಸುತ್ತದೆ?". ರಘುನಾಥ ಅವರ ಮಾತುಗಳಿಗೆ ನನ್ನ ವಿಶೇಷವಾದ ಅಡ್ಡಿಯೇನಿಲ್ಲ.

ಈಗ ಸುಭಾಷ್ ಹೂಗಾರ ಅವರ ಪ್ರತಿಕ್ರಿಯೆಯನ್ನು ಗಮನಿಸೋಣ. ಅವರ ಲೇಖನದಲ್ಲಿ ಏನೇನೂ ಮಾಹಿತಿಯಿಲ್ಲ. ಕೇವಲ ಆರಾಮ ಕುರ್ಚಿ ತನಿಖಾವರದಿ ಎನ್ನಲು ಅಡ್ಡಿಯಿಲ್ಲ. ಒಂದು ಲೇಖನ ಬರೆಯುವವರು ಮೂಲಭೂತವಾದ ಅಧ್ಯಯನ ಮಾಡಬೇಕು ಎಂಬ ಮೂಲಭೂತವಾದ ಸಿದ್ಧಾಂತವನ್ನೇ ಹೂಗಾರರು ಕಲಿತಿಲ್ಲ ಎನ್ನುವುದು ಅವರ ಲೇಖನದಿಂದ ವೇದ್ಯವಾಗುತ್ತದೆ. ಕನ್ನಡವನ್ನು ಗಣಕದಲ್ಲಿ ಅಳವಡಿಸಲು ಎಷ್ಟೆಲ್ಲ ಕೆಲಸಗಳು ನಡೆದಿವೆ, ಎಷ್ಟೆಲ್ಲ ತಂತ್ರಾಂಶಗಳು ಲಭ್ಯವಿವೆ - ಈ ವಿಷಯಗಳ ಬಗ್ಗೆ ಸ್ವಲ್ಪವೂ ಮಾಹಿತಿ ಸಂಗ್ರಹಿಸದೆ ಬರೆದಿದ್ದಾರೆ. ಕೊನೆಯಲ್ಲಿ ಬರೆಯುತ್ತಾರೆ -"ಆದರೆ, ಸದ್ಯಕ್ಕೆ ಕನ್ನಡ ಪದಗಳನ್ನು ಇಂಗ್ಲಿಶ್ ಅಕ್ಷರಗಳ ಮೂಲಕ ಬರೆಯಬಹುದು ಎನ್ನುವ ಸಲಹೆ ಸೂಕ್ತವೆನ್ನಿಸುತ್ತದೆ". ಸ್ವಾಮಿ ಹೂಗಾರರೆ, ನಿಮಗೆ ವಿಷಯಜ್ಞಾನವಿಲ್ಲದಿದ್ದರೆ ಸುಮ್ಮನೆ ಬಾಯಿಮುಚ್ಚಿ ಕುಳಿತುಕೊಳ್ಳಿ. ಕನ್ನಡವನ್ನು ಇಂಗ್ಲಿಶ್ ಮೂಲಕ ಬರೆಯಬೇಕಾದ ಕಾಲ ಎಂದೋ ಕಳೆದುಹೋಗಿದೆ. ಪ್ರಜಾವಾಣಿ ಪತ್ರಿಕೆಯಲ್ಲೇ ಈ ಬಗ್ಗೆ ಸವಿವರವಾದ ಲೇಖನ ಒಂದು ವರ್ಷದ ಹಿಂದೆಯೇ ಬಂದಿತ್ತು (ಆ ಲೇಖನ ಚಿತ್ರಗಳ ಸಹಿತ ಇಲ್ಲಿದೆ). ನಿಮಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಸಲು ಗೊತ್ತಿಲ್ಲವೆಂದಾದರೆ ಅದು ಸಾಧ್ಯವೇ ಇಲ್ಲವೆಂಬಂತಹ ಹೇಳಿಕೆ ನೀಡಬೇಡಿ. ಪ್ರಜಾವಾಣಿ ಪತ್ರಿಕೆಯನ್ನು ಕನಿಷ್ಠ ೪೦ ಲಕ್ಷ ಮಂದಿ ಓದುತ್ತಾರೆ. ಇಷ್ಟು ಜನರನ್ನು ತಪ್ಪು ದಾರಿಗೆಳೆಯಬೇಡಿ. ಲೇಖನ ಬರೆಯುವ ಮೊದಲು ಸ್ವಲ್ಪ ಸಂಶೋಧನೆ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ.

ಸಿಗೋಣ,
ಪವನಜ

~.~
  • pavanaja ರವರ ಬ್ಲಾಗ್
  • Login or register to post comments
  • 946 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 25, 2005 - 9:38am — tvsrinivas41

ಪ್ರತಿಕ್ರಿಯೆ ಕಳುಹಿಸಿದ್ದೀರಾ?

tvsrinivas41's picture

ಸರಿಯಾಗಿ ಉತ್ತರಿಸಿದ್ದೀರ ಸಾರ್.
ನಿಮ್ಮಂತಹವರ ಮಾರ್ಗದರ್ಶನದ ಅವಶ್ಯಕತೆ ಬಹಳವಾಗಿ ಬೇಕಿದೆ.
ಇದನ್ನು ಪ್ರಜಾವಾಣಿ ಪತ್ರಿಕೆಗೆ ಕಳುಹಿಸಿದ್ದಿರಾ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 25, 2005 - 6:57pm — pavanaja

Re: ಪ್ರತಿಕ್ರಿಯೆ ಕಳುಹಿಸಿದ್ದೀರಾ?

pavanaja's picture

tvsrinivas41 wrote:
ಸರಿಯಾಗಿ ಉತ್ತರಿಸಿದ್ದೀರ ಸಾರ್.
ಇದನ್ನು ಪ್ರಜಾವಾಣಿ ಪತ್ರಿಕೆಗೆ ಕಳುಹಿಸಿದ್ದಿರಾ?

ಇದನ್ನು ಪ್ರಜಾವಾಣಿಗೆ ಕಳುಹಿಸಿಲ್ಲ. ಇದೇ ರೂಪದಲ್ಲಿ ಕಳುಹಿಸಿದರೆ ಅವರು ಪ್ರಕಟಿಸುವುದೂ ಇಲ್ಲ. ಅದಕ್ಕಾಗಿ ಬೇರೆಯೇ ರೂಪದಲ್ಲಿ ಮತ್ತು ಸ್ವಲ್ಪ ಸೌಮ್ಯವಾದ ಭಾಷೆಯಲ್ಲಿ ಬರೆಯಬೇಕು. ಸಮಯವಾದರೆ ಬರೆದು ಕಳುಹಿಸುತ್ತೇನೆ.

ಸಿಗೋಣ,
ಪವನಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೆ ಎಸ್ ನ ಸ್ಮರಣೆ
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯಾಗಾರ
  • ತೀ ನಂ ಶ್ರೀ
  • 'ಸವಾಯ್ ಗಂಧರ್ವ'
  • ಸಿಹಿ ಸುದ್ಧಿ - ಫೈರ್ಫಾಕ್ಸಿನಲ್ಲಿ ಪ್ರಜಾವಾಣಿ ಓದಬಹುದು
Syndicate content

ಲೇಖಕರು

pavanaja's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
  • hamsanandi
    ಉ: ಕೌಮಾರೀ ಗೌರೀ ವೇಳಾವಳಿ
    September 5, 2008 - 9:51pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 9:46pm
  • kalpana
    ಉ: ಪುರಂದರದಾಸರ ಎರಡು ಪದಗಳು
    September 5, 2008 - 9:17pm
  • cmariejoseph
    ಉ: ಚಂದಿರನ ನೋಡಿದವ
    September 5, 2008 - 8:56pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 336 ಅತಿಥಿಗಳು ಆನ್ಲೈನ್ ಇರುವರು.


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator