ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 1000

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

'ಪ್ಲಾನೆಟ್ ಕನ್ನಡ' (Planet Kannada)

planet kannada

ಇಂದಿನಿಂದ ಹಲವಾರು ಕನ್ನಡಿಗರು ತಮ್ಮ ಬ್ಲಾಗುಗಳಲ್ಲಿ, ವೆಬ್ಸೈಟುಗಳಲ್ಲಿ ಬರೆಯುವ ಬರಹಗಳು ಒಂದೆಡೆಯೇ ಲಭ್ಯ. :)

'ಪ್ಲಾನೆಟ್ ಕನ್ನಡ' - ಕನ್ನಡ ಮಾತ್ರವಲ್ಲ ಕನ್ನಡಿಗರು ಇಂಗ್ಲಿಷಿನಲ್ಲಿ ಬರೆದದ್ದನ್ನೂ ಕಲೆಗೂಡಿಸಿ ಒಂದೆಡೆಯೇ ಓದುವ ಸೌಕರ್ಯ ನೀಡುವ ಪುಟ. ಒಟ್ಟಿನಲ್ಲಿ ಕನ್ನಡಿಗರು ಎಲ್ಲೇ ಬರೆಯಲಿ, ಒಂದೆಡೆ ಓದಲು ಲಭ್ಯವಾಗುವಂತೆ ಮಾಡುವ ಆಶಯ.

<!-- break -->

ಸದ್ಯಕ್ಕೆ 'ಸಂಪದ'ದಲ್ಲಿರುವ ಕೆಲವು ಸದಸ್ಯರ ಬ್ಲಾಗುಗಳನ್ನು, 'ಸಂಪದ'ದಲ್ಲಿರುವ ಬ್ಲಾಗುಗಳನ್ನೂ ಮತ್ತು ಕೆಲವು ಮುಖ್ಯ ಅಂಚೆಪೆಟ್ಟಿಗೆಗಳನ್ನು ಆ ಪುಟಕ್ಕೆ ಸೇರಿಸಲಾಗಿದೆ. ನಿಮ್ಮದೂ ಒಂದು ಬ್ಲಾಗು ಅಥವಾ ಅಂತರಜಾಲ ಪುಟವಿದ್ದು, ಅದಕ್ಕೂ RSS ಸೌಲಭ್ಯವಿದ್ದಲ್ಲಿ ತಿಳಿಸಿ. ಸೇರಿಸೋಣವಂತೆ. :)

'ಪ್ಲಾನೆಟ್ ಕನ್ನಡ' ಬಗ್ಗೆ ನಿಮ್ಮ ಅನಿಸಿಕೆಗಳನ್ನೂ ತಪ್ಪದೇ ತಿಳಿಸಿ.

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಹುಡುಕಾಟ ತಪ್ಪಿತು

tvsrinivas41's picture

ಕನ್ನಡದಲ್ಲಿ ಇಷ್ಟೊಂದು ತಾಣಗಳಿವೆಯಾ? ಇನ್ನೂ ಇರಬಹುದು. ಆದರೂ ಸರಿಸುಮಾರು ಎಲ್ಲವನ್ನೂ ಒಂದೆಡೆಯಲ್ಲಿ ನೋಡುವಂತಾಗಿದೆ. ಅವುಗಳಿಗಾಗಿ ನನ್ನ ಹುಡುಕಾಟ ತಪ್ಪಿಸಿದ್ದೀರ. ನನ್ನ ಫೇವರಿಟ್ ಪಟ್ತಿ ಸ್ವಲ್ಪ ಚಿಕ್ಕದಾಯಿತು. ಒಳ್ಲೆಯ ಕೆಲಸ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

ಒಂದು ತೊಂದರೆ

ಶ್ಯಾಮ ಕಶ್ಯಪ's picture

ಪ್ಲಾನೆಟ್ ಕನ್ನಡ ಅಂತರ್ಜಾಲದಲ್ಲಿ ಒಂದು ಓಯಸಿಸ್ ತರಹ...ಆದರೆ, ನನಗೆ ನೀರು ಕುಡಿಯಲು ಸ್ವಲ್ಪ ಕಷ್ಟವಾಗುತ್ತಿದೆ. ಇದು ಬಹುಶಃ ಪ್ಲಾನೆಟ್ ಕನ್ನಡದ ತೊಂದರೆ ಅಲ್ಲದಿರಬಹುದು. ಪ್ಲಾನೆಟ್ ಕನ್ನಡದ ಆರ್. ಎಸ್ ಎಸ್ ಫೀಡ್‍ನಲ್ಲಿ ಮಿಕ್ಕೆಲ್ಲಾ ಬ್ಲಾಗ್‍ಗಳನ್ನು ವೀಕ್ಷಿಸಬಹುದಾದರೂ ಬ್ಲಾಗ್‍ಸ್ಪಾಟ್ ಬ್ಲಾಗ್‍ಗಳನ್ನು ನನ್ನ ಬೆಂಕಿನರಿ ಜಾಲವೀಕ್ಷಕದಲ್ಲಿ ತೆರೆಯಲಾಗುವುದಿಲ್ಲ.. tag is not a supported protocol ಅಂತ ಸಂದೇಶ ಬರತ್ತೆ. ಜ್ಞಾನಛಕ್ಷುಗಳು ಯಾರಾದರು ಬೆಳಕು ಚೆಲ್ಲುವುದು. (ಆದಷ್ಟು ಮಟ್ಟಿಗೆ stupid geek ಆಗದೇ ಇರೋದಿಕ್ಕೆ ಪ್ರಯತ್ನ ಪಟ್ಟಿದ್ದೇನೆ ;-) )

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

ಬ್ಲಾಗರ್ ಪಜೀತಿ

hpn's picture

ಹೌದು. ನಾನೂ ಕೂಡ ಗಮನಿಸಿದ್ದೆ. ಬ್ಲಾಗರ್ ಬ್ಲಾಗುಗಳ tags ಹೀಗಿರುತ್ತದೆ:

tag:blogger.com,1999:blog-12357959.post-112975250841507051

ಮಿಕ್ಕ ಬ್ಲಾಗುಗಳಲ್ಲಿ ಇದರ ಬದಲು ಒಂದು ಲಿಂಕ್ ಇರುತ್ತದೆ. ಅಲ್ಲಿಯೇ ಆಗಿರುವುದು ಪ್ರಾಬ್ಲಮ್. RSS ರೀಡರುಗಳಲ್ಲಿ ಇದು ಪಜೀತಿ ತಂಡಿಡುತ್ತಿದೆ.

ನೋಡೋಣ, ಆದಷ್ಟು ಬೇಗ ಇದಕ್ಕೊಂದು ಸೊಲ್ಯುಶನ್ ಹುಡುಕೋಣವಂತೆ.
--

"ಹೊಸ ಚಿಗುರು, ಹಳೆ ಬೇರು"

ಸರಿಪಡಿಸಲಾಗಿದೆ, ಈಗ ಟ್ರೈ ಮಾಡಿ

hpn's picture

ಈಗ ಸರಿಪಡಿಸಲಾಗಿದೆ, ನೋಡಿ.

ಸರಿಪಡಿಸಲು ನೆರವಾದ ಮನೋಜ್‌ರವರಿಗೆ ಧನ್ಯವಾದಗಳು.

- ಹೆಚ್ ಪಿ

--

"ಹೊಸ ಚಿಗುರು, ಹಳೆ ಬೇರು"

ಧನ್ಯವಾದ

ಶ್ಯಾಮ ಕಶ್ಯಪ's picture

ಧನ್ಯವಾದ ನಾಡಿಗರೆ!

ತರಲೆ ಅನುವಾದ

pavanaja's picture

>ಬೆಂಕಿನರಿ ಜಾಲವೀಕ್ಷಕ

ನೀವು ಈ ರೀತಿ ಬರೆದಿರುವುದು ತಮಾಶೆಗೆ ಎಂದುಕೊಳ್ಳುತ್ತೇನೆ. ಯಾಕೆಂದರೆ ಅನುವಾದದ ಮೂಲಮಂತ್ರ ಪ್ರಕಾರ ಅಂಕಿತನಾಮ (proper noun) ಗಳನ್ನು ಅನುವಾದ ಮಾಡುವಂತಿಲ್ಲ. ಅದನ್ನು ಫಯರ್‌ಫೋಕ್ಸ್ (FireFox) ಎಂದೇ ಬರೆಯಬೇಕು. ದಯವಿಟ್ಟು ನನ್ನ ಲೇಖನ ಓದಿ -ಪಿಡಿಎಫ್ ರೂಪದಲ್ಲಿ ಅಥವಾ ಯುನಿಕೋಡ್ ಕನ್ನಡದಲ್ಲಿ.

ಸಿಗೋಣ,
ಪವನಜ
-----------
Think globally, Act locally