Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಎರಡನೆಯ ಸಂಚಿಕೆ - ಕಂಬಾರರೊಂದಿಗೆ

November 15, 2005 - 8:18pm — hpn

"ಸಿರಿಸಂಪಿಗೆಯ ಕವಿ ಚಂದ್ರಶೇಖರ ಕಂಬಾರರನ್ನು ಕನ್ನಡಿಗರಿಗೆ ಪರಿಚಯಿಸುವ ಅಗತ್ಯವಿಲ್ಲ. ಜಾನಪದವನ್ನು ತಮ್ಮ ಕೃತಿಗಳ ಕಸುವಾಗಿಸಿಕೊಂಡು ಜನಭಾಷೆಯಲ್ಲಿ ಕಾವ್ಯ ರಚಿಸಿದವರು ಕಂಬಾರರು. ಕನ್ನಡ ವಿಶ್ವ ವಿದ್ಯಾಲಯದ ಸ್ಥಾಪಕ ಕುಲಪತಿಗಳಾಗಿ ವಿಶ್ವ ವಿದ್ಯಾಲಯವನ್ನು ಕಟ್ಟಿದ ಕಂಬಾರರು ಈಗ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು. ಸಂಪದ ಬಳಗ ಇವರ ಸಂದರ್ಶನವನ್ನು ಪ್ರಸ್ತುತಪಡಿಸುತ್ತಿದೆ.
ಚಂದ್ರಶೇಖರ ಕಂಬಾರರ ಸಂದರ್ಶಕ ಎನ್.ಎ.ಎಂ.ಇಸ್ಮಾಯಿಲ್. ಇವರು ಉದಯವಾಣಿಯಲ್ಲಿ ಹಿರಿಯ ಉಪ ಸಂಪಾದಕರಾಗಿದ್ದಾರೆ. ಸಂಪದ ಬಳಗದ ಸಕ್ರಿಯ ಸದಸ್ಯರು ಮತ್ತು ನಿರ್ವಾಹಕರಲ್ಲಿ ಒಬ್ಬರು."

 /> ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (18 MB)

ಈ ಸಂದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನೂ, ಅದರಲ್ಲಿ ಚರ್ಚಿಸಲಾಗಿರುವ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನೂ‌ ಸಂಪದದಲ್ಲಿ ಕಾಮೆಂಟ್ ಮೂಲಕ ನೀವು ಸೇರಿಸಬಹುದು.

ಸಂದರ್ಶನದ ವೇಳೆ ತೆಗೆದ ಕೆಲವು ಫೋಟೋಗಳು:

ck
ಇಸ್ಮಾಯಿಲ್ ರವರೊಂದಿಗೆ ಕಂಬಾರರು.

ಚಂದ್ರಶೇಖರ ಕಂಬಾರ

ಚಂದ್ರಶೇಖರ ಕಂಬಾರ

ಸೂ: ನಿಮ್ಮ ಬಳಿಯೂ ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಧ್ವನಿಮುದ್ರಣವಿದ್ದಲ್ಲಿ ಅದನ್ನು 'ಸಂಪದ'ದಲ್ಲಿ ಪ್ರಕಟಿಸಲು ನನಗೆ ಇ-ಮೇಯ್ಲ್ ಮೂಲಕ ಕಳುಹಿಸಿ.

  • ಶ್ರಾವ್ಯ (ಆಡಿಯೋ) - Podcasts
Ornamental seperator
  • Login or register to post comments
  • 3310 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 15, 2005 - 9:16pm — tvsrinivas41

ಎರಡನೆಯ ಸಿಕ್ಸರ್!

tvsrinivas41's picture

ಸಂಪದ ಪಾಡ್‍ಕಾಸ್ಟ್ ತಂಡದಿಂದ ಎರಡನೆಯ ಬಾಲಿಗೂ ಸಿಕ್ಸರ್ ಹೊಡೆತ. ಭಾವಚಿತ್ರಗಳು ಬಹಳ ಚೆನ್ನಾಗಿವೆ. ಆದರೆ ಸ್ವಲ್ಪ ಡಾರ್ಕ್ ಆಯಿತು ಅನ್ನಿಸತ್ತೆ. ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ. ಇದನ್ನು ನಡೆಸಿಕೊಟ್ಟ ಇಸ್ಮಾಯಿಲ್ ಅವರಿಗೆ ವಂದನೆಗಳು. ಹಾಂ! ಇವೆಲ್ಲದರಲ್ಲೂ ಎಲೆ ಮರೆಯ ಕಾಯಿಯಂತಿರುವ ನಾಡಿಗರಿಗೂ ವಂದನೆಗಳು.

ಬಹಳ ಕಡಿಮೆ ಸಮಯದಲ್ಲಿ ಎರಡು ಸಂದರ್ಶನಗಳನ್ನು ಒದಗಿಸಿಕೊಟ್ಟಿದ್ದೀರಿ. ನನ್ನಿಂದಂತೂ ಏನೂ ಮಾಡಕ್ಕಾಗ್ತಿಲ್ಲ. ಮಾಡಿದ ನಿಮಗೆ ನನ್ನ ಕಡೆಯಿಂದ ವಿಶೇಷ ಧ್ಯಾಂಕ್ಸು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • Email this ಪ್ರತಿಕ್ರಿಯೆ
November 16, 2005 - 10:40pm — ismail

ಹೊಗಳಿ ಹೊನ್ನ ಶೂಲಕ್ಕೇರಿಸದಿರಿ

ismail's picture

ತಮ್ಮ ಹೊಗಳಿಕೆ, ಅಭಿನಂದನೆಗಳಿಗೆ ಧನ್ಯವಾದಗಳು. ಚೆನ್ನಾಗಿದೆ ಎಂದಷ್ಟೇ ಹೇಳಿದರೆ ನಮ್ಮ ಕೆಲಸದ ಗುಣಮಟ್ಟ ಎಂಥದ್ದು ಎಂಬುದು ಅರ್ಥವಾಗುವುದಿಲ್ಲ. ನಾನಂತೂ ಇದೇ ಮೊದಲ ಬಾರಿಗೆ ಈ ಬಗೆಯ ಸಂದರ್ಶನಗಳಲ್ಲಿ ತೊಡಗಿದ್ದೇನೆ. ಪತ್ರಿಕೆಗಳಿಗಾಗಿ ಸಂದರ್ಶಿಸುವಾಗ ನನ್ನ ಧ್ವನಿ ಹೇಗಿದೆ. ಎಷ್ಟು ಸ್ಪಷ್ಟವಾಗಿದೆ ಎಂಬ ಸಮಸ್ಯೆಗಳಿರುವುದಿಲ್ಲ. ಧ್ವನಿಮುದ್ರಿತ ಸಂದರ್ಶನವನ್ನು ಬರೆಹಕ್ಕೆ ಇಳಿಸುವಾಗ ಸರಿಪಡಿಸುವ ಅವಕಾಶವೂ ಇರುತ್ತದೆ. ಧ್ವನಿ ಮುದ್ರಣ ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ಅದರಿಂದಾಗಿ ಕೆಲವು ಅನುಕೂಲಗಳು ಇವೆಯಾದರೂ ಮಾತಿನ ಧ್ವನಿಯನ್ನು ಬದಲಾಯಿಸಲು ಸಾಧ್ಯವೇ. ಮಾತಿನ prosodyಯನ್ನು ಹೇಗೆ ಬರೆಹದಲ್ಲಿ ತರಲು ಹೇಗೆ ಸಾಧ್ಯವಿಲ್ಲವೋ ಹಾಗೇ ಬರೆಹದ ಸ್ವಾತಂತ್ರ್ಯ ಧ್ವನಿ ಮುದ್ರಿತ ಸಂದರ್ಶನದಲ್ಲಿ ಇರುವುದಿಲ್ಲ.
ಈ ಮಿತಿಗಳ ಮಧ್ಯೆ ವೃತ್ತಿಪರ ಸಂದರ್ಶಕರಲ್ಲದ ನಾವು ಹಿರಿಯ ಸಾಹಿತಿಗಳನ್ನು ಸಂದರ್ಶಿಸುವ ಸಾಹಸ ಮಾಡುತ್ತಿದ್ದೇವೆ. ಇದನ್ನು ಇನ್ನಷ್ಟು ಚೆನ್ನಾಗಿ ಮಾಡುವುದಕ್ಕಾಗಿ ನಮಗೆ ನಮ್ಮ ಪ್ರಯತ್ನದ ಮೌಲ್ಯ ಮಾಪನ ಬೇಕಾಗಿದೆ.

ಇಸ್ಮಾಯಿಲ್

  • Login or register to post comments
  • link
  • Email this ಪ್ರತಿಕ್ರಿಯೆ
November 16, 2005 - 10:52pm — msanjay75

msanjay75's picture

ಇಸ್ಮಾಯಿಲ್ಅವರೆ, ನಾನು ಸಾಮಾನ್ಯವಾಗಿ ಒಬ್ಬ tough critic, ಆದರೆ ಈ ಸನ್ನಿವೇಶದಲ್ಲಿ ನನಗೆ ಬರಿ positive ಅಭಿಪ್ರಾಯಗಳಿದ್ದಾವೆ... audio ತುಂಬ ಸ್ಪಷ್ಟವಾಗಿತ್ತು... ನಿಮ್ಮ ಧ್ವನಿ ನಿಜವಾಗಲೂ professional ಆಗಿತ್ತು - ಇದೇ ಮೊದಲನೆಯ ಬಾರಿ ಎಂದರೆ ನನಗೆ ನಿಜವಾಗಲೂ ಆಶ್ಚರ್ಯವಾಗುತ್ತೆ! Smiling

  • Login or register to post comments
  • link
  • Email this ಪ್ರತಿಕ್ರಿಯೆ
November 17, 2005 - 11:48pm — muralihr

ಇಸ್ಮಾಯಿಲ್ ಸ್ಫೂರ್ತಿ

muralihr's picture

ಇಸ್ಮಾಯಿಲ್ ಸ್ಫೂರ್ತಿ ಬಸವಣ್ಣರವರ ಈ ವಚನವೇ ??

ಬಯಿದವರೆನ್ನ ಬ೦ಧುಗಳೆ೦ಬೆ
ನಿ೦ದಿಸಿದವರೆನ್ನ ತ೦ದೆ ತಾಯಿ ಗಳೆ೦ಬೆ
ಆಳಿಗೊ೦ಡವರೆನ್ನ ಆಳ್ದವರೆ೦ಬೆ
ಜರಿದವರೆನ್ನ ಜನ್ಮ ಬ೦ಧುಗಳೆ೦ಬೆ
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆ೦ಬೆ
ಕೂಡಲ ಸ೦ಗಮದೇವ.

  • Login or register to post comments
  • link
  • Email this ಪ್ರತಿಕ್ರಿಯೆ
November 16, 2005 - 10:46pm — msanjay75

ಕಂಬಾರರವರ ಮಾತುಗಳಿಂದ...

msanjay75's picture

...ಕಲಿಯಲು ತುಂಬಾ ಇದೆ... ಅವರ unique ideas (esp creativity ಬಗ್ಗೆ) ನನಗೆ ತುಂಬ ಹಿಡಿಸಿದವು (ಪದೆ ಪದೆ ಕೇಳಿದೆ Smiling)

- "ಕಲೆ ಜೀವನದ ಪ್ರತಿಬಿಂಬ" ... ಇದರ ಬಗ್ಗೆ ತುಂಬ ಚೆನ್ನಾಗಿ ವಿವರಿಸಿದ್ದಾರೆ
- "ಅನುಭವೇ ಪ್ರಮಾಣ ಹೊರತು ಭೌಧಿಕತೆ ಅಲ್ಲ. ಭೌಧಿಕತೆಗೆ ಅರ್ಥಗಳಿರುತಾವೆ, ಅನುಭವವಿರೊಲ್ಲ"
- "creativity ನಾಶವಾದರೆ ನೀವು ಮನುಷ್ಯರೇನ್ರಿ?"

_____________________________

ismail ಮತ್ತು ಎಲ್ಲರಿಗು ತುಂಬ ತುಂಬ thanks! ಒಂದು ಚಿಕ್ಕ ಸಲಹೆ: podcast + ಚಿತ್ರಗಳೊಂದಿಗೆ,interviewee ಅವರ background summary ಇದೆ, ಅದರೊಂದಿಗೆ, ಅವರ biography/works/ಇತ್ಯಾದಿಗಳಿಗೆ links ಇದ್ದರೆ ಚೆನ್ನಾಗಿರುತಿತ್ತು ಅನ್ಸುತ್ತೆ.

---------------------------
- ಸಂಜಯ
---------------------------
ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೇನಿಲ್ಲ ಸುಳ್ಳು
---------------------------
typing/spelling ತಪ್ಪಿದ್ದರೆ ದಯವಿಟ್ಟು ತಿದ್ದಿ... ...ಇಲ್ಲದಿದ್ದರೆ ನಾನು ಕಲಿಯುವುದು ಹೇಗೆ! ---------------------------

  • Login or register to post comments
  • link
  • Email this ಪ್ರತಿಕ್ರಿಯೆ
November 17, 2005 - 7:22pm — hpn

ತಿದ್ದಿರುವೆ

hpn's picture

ಒಂದೆರಡು ತಪ್ಪುಗಳನ್ನ ತಿದ್ದಿದೀನಿ ನೋಡ್ರಿ Smiling

ಅದರೊಂದಿಗೆ, ಅವರ biography/works/ಇತ್ಯಾದಿಗಳಿಗೆ links ಇದ್ದರೆ ಚೆನ್ನಾಗಿರುತಿತ್ತು ಅನ್ಸುತ್ತೆ.

ಇದನ್ನ ಮುಂದಿನ ಸರ್ತಿಯಿಂದ ಸೇರಿಸೋಣವಂತೆ. ಸಾಮಾನ್ಯವಾಗಿ ಕನ್ನಡ ಪುಸ್ತಕಗಳನ್ನೋದಿದವರಿಗೆ ಕಂಬಾರರು, ತೇಜಸ್ವಿಯವರು ಮತ್ತು ಅನಂತಮೂರ್ತಿಯವರಂತಹ ಸಾಹಿತಿಗಳ ಬಗ್ಗೆ ತಿಳಿಸುವ ಅಗತ್ಯ ಬರುವುದಿಲ್ಲ. ಆದರೆ ಇತ್ತೀಚೆಗೆ ನಮ್ಮ ನಿಮ್ಮಂತ ಕೆಲವರು ಕನ್ನಡ ಪುಸ್ತಕಗಳನ್ನು ಹೆಚ್ಚಾಗಿ ಓದಿಲ್ಲದಿರುವುದರಿಂದ ನೀವು ಕೊಟ್ಟಿರೋದು ಒಳ್ಳೆ ಐಡಿಯ. ಮುಂದಿನ podcast ನಿಂದ ತಪ್ಪದೇ ಚಾಲನೆಗೆ ತರುತೇವೆ. Smiling

ಇನ್ನೊಂದು ಮಾಹಿತಿ : ಮುಂದಿನ podcast ಅನಂತಮೂರ್ತಿಯವರೊಂದಿಗಿನ ಸಂದರ್ಶನ Eye-wink ಸದ್ಯದಲ್ಲೇ ನಿರೀಕ್ಷಿಸಿ!

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
November 22, 2005 - 4:25pm — Rohit

ಕಂಬಾರರ ಕಂಠಸಿರಿ

Rohit's picture

ಹರಿಯವರೆ, ಕಂಬಾರರು ಒಳ್ಳೇ ಹಾಡುಗಾರರೂ ಕೂಡ...ಅವರ ಒಂದು ಗೀತೆಯೊಂದನ್ನೂ ಧ್ವನಿಮುದ್ರಿಸಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಅವರ ಕಂಠಸಿರಿ ಕೇಳುವ ಭಾಗ್ಯ ಎಲ್ಲರಿಗೂ ಲಭ್ಯವಾಗುತ್ತಿತ್ತು...

  • Login or register to post comments
  • link
  • Email this ಪ್ರತಿಕ್ರಿಯೆ
November 22, 2005 - 4:39pm — hpn

ಖಂಡಿತ

hpn's picture

ಮತ್ತೊಮ್ಮೆ ಕಂಬಾರರನ್ನು ಸಂದರ್ಶನ ಮಾಡುವಾಗ ಖಂಡಿತ ಕೇಳಿ ನೋಡಬಹುದು. ಅವರ ಮನೆಯಿರುವುದು ನಮ್ಮ ಮನೆಯ ಹತ್ತಿರವೇ. ಹೋಗೋದೇನೂ ಕಷ್ಟ ಆಗೋದಿಲ್ಲ. ಅವರು ಸೈ ಅಂದ್ರೆ ಆಯ್ತು, ನಮ್ಗೇನು ರೆಕಾರ್ಡ್ ಮಾಡ್ಲಿಕ್ಕೆ? Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...
  • ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು
  • ಐದನೆಯ ಸಂಚಿಕೆ - ಡಾ|| ಜಿ ಎಸ್ ಶಿವರುದ್ರಪ್ಪನವರೊಂದಿಗೆ
  • Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ
  • ೪ನೆಯ ಸಂಚಿಕೆ: ಭಾಷಾ ತಜ್ಞ ಲಿಂಗದೇವರು ಹಳೆಮನೆಯವರೊಂದಿಗೆ
Syndicate content
  • ಮೊದಲನೆಯ ಸಂಚಿಕೆ: ಕೆ ಪಿ ಪೂರ್ಣಚಂದ್ರ ತೇಜಸ್ವಿ
  • ಎರಡನೆಯ ಸಂಚಿಕೆ: ಚಂದ್ರಶೇಖರ ಕಂಬಾರ
  • ಮೂರನೆಯ ಸಂಚಿಕೆ: ಯು ಆರ್ ಅನಂತಮೂರ್ತಿ
  • ನಾಲ್ಕನೆಯ ಸಂಚಿಕೆ: ಲಿಂಗದೇವರು ಹಳೆಮನೆ
  • ಐದನೆಯ ಸಂಚಿಕೆ: ಜಿ ಎಸ್ ಶಿವರುದ್ರಪ್ಪ
  • ಆರನೆಯ ಸಂಚಿಕೆ: ಟಿ ಎನ್ ಸೀತಾರಾಂ
  • ಏಳನೆಯ ಸಂಚಿಕೆ: ಕೆ ಎಸ್ ನಿಸಾರ್ ಅಹಮದ್
  • ಎಂಟನೆಯ ಸಂಚಿಕೆ: ಜಿ ಟಿ ನಾರಾಯಣ ರಾವ್
  • ಒಂಬತ್ತನೆಯ ಸಂಚಿಕೆ: ವಿವೇಕ ಶಾನಭಾಗ, ಸಂದರ್ಶಕರು: ನರೇಂದ್ರ ಪೈ
  • ಹತ್ತನೆಯ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ

RSS Subscribe to the Podcasts.

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 11:28pm
  • prasannasp
    ಉ: ಡ್ರಿಂಕ್ ಡ್ರೈವ್ !
    May 9, 2008 - 11:10pm
  • prasannasp
    ಉ: ಡ್ರಿಂಕ್ ಡ್ರೈವ್ !
    May 9, 2008 - 11:06pm
  • uniquesupri
    ಉ: ಚುನಾವಣಾ ಭವಿಷ್ಯ
    May 9, 2008 - 10:59pm
  • prasannasp
    ಉ: ಸಣ್ಣ ಟ್ರಿಪ್
    May 9, 2008 - 10:47pm
  • hamsanandi
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 9:30pm
  • hamsanandi
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 9:25pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 8:41pm
  • smurthygr
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 9, 2008 - 8:23pm
  • smurthygr
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 8:00pm
ಇನ್ನಷ್ಟು

ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator