Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...

November 22, 2005 - 2:17pm — ismail

ಬೆಳಗಾವಿ ಮತ್ತು ಗಡಿಯಲ್ಲಿರುವ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ನಿರ್ಣಯವೊಂದನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸಿತ್ತು. ಇದಕ್ಕೆ ಕರ್ನಾಟಕಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ.(ಈಗ ಕರ್ನಾಟಕ ಸರಕಾರ ಬೆಳಗಾವಿ ಮಹಾನಗರ ಪಾಲಿಕೆಯನ್ನು ರದ್ದು ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಿದೆ.) ಇತ್ತೀಚೆಗೆ ಬೆಳಗಾವಿ ನಗರ ಪಾಲಿಕೆಯ ಮೇಯರ್ ವಿಜಯ್ ಪಾಂಡುರಂಗ ಮೋರೆ ಬೆಂಗಳೂರಿಗೆ ಬಂದು ಶಾಸಕರ ಭವನದಲ್ಲಿ ಇಳಿದುಕೊಂಡಿದ್ದಾಗ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು 'ಮಿಂಚಿನ ದಾಳಿ' ನಡೆಸಿ ವಿಜಯ್ ಮೋರೆಯವರ ಮುಖಕ್ಕೆ ಮಸಿ ಬಳಿದು ಹಲ್ಲೆ ನಡೆಸಿ ತಮ್ಮ ಕನ್ನಡಾಭಿಮಾನವನ್ನು ತೋರಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರ ಹಿಂಸಾತ್ಮಕ ಪ್ರತಿಭಟನೆ ಈಗ ಬಿಸಿಯೇರಿದ ಚರ್ಚೆಗಳಿಗೆ ಕಾರಣವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಈ ಮಸಿಬಳಿಯುವಿಕೆಯನ್ನು 'ಕ್ರಿಯೆಗೆ ತಕ್ಕ ಪ್ರತಿಕ್ರಿಯೆ'ಎಂದು ಸಮರ್ಥಿಸಿಕೊಂಡರು. ಇದೇ ವೇಳೆ ಜ್ಞಾನಪೀಠ ಪುರಸ್ಕೃತ ಯು.ಆರ್. ಅನಂತಮೂರ್ತಿ 'ಕನ್ನಾಡಭಿಮಾನ'ದ ಹಿಂಸಾತ್ಮಕ ಅಭಿವ್ಯಕ್ತಿಯನ್ನು ವಿರೋಧಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಶೇಖರ ಪಾಟೀಲ್ 'ಮಸಿಬಳಿದದ್ದನ್ನು ವಿರೋಧಿಸುವವರು ಮಸಾಲೆ ದೋಸೆ ಸಾಹಿತಿಗಳು'ಎಂದು ಟೀಕಿಸಿದರು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಪದ ಬಳಗ ಯು.ಆರ್ .ಅನಂತಮೂರ್ತಿಯವರನ್ನು ಸಂದರ್ಶಿಸಿದೆ. ಹಿಂಸಾತ್ಮಕ ಕನ್ನಡಾಭಿಮಾನವನ್ನು ಗೋಕಾಕ್ ಚಳವಳಿಯ ಕಾಲದಿಂದಲೂ ವಿರೋಧಿಸುತ್ತಲೇ ಬಂದಿರುವ ಅನಂತಮೂರ್ತಿ ಈ ಸಂದರ್ಶನದಲ್ಲಿ ತಮ್ಮ ಬಗೆಗಿನ ಟೀಕೆಗಳಿಗೆ ಉತ್ತರಿಸಿದ್ದಾರೆ. ಜತೆಗೆ ಕನ್ನಡದ ಸಂದರ್ಭದಲ್ಲಿ ಭಾಷೆಯ ಅಭಿವೃದ್ಧಿ, ಭಾಷಾಭಿಮಾನ, ಭಾಷಾಂಧತೆಗಳ ಕುರಿತ ತಮ್ಮ ಚಿಂತನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

 /> ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (28 MB)

ಈ ಸಂದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನೂ, ಅದರಲ್ಲಿ ಚರ್ಚಿಸಲಾಗಿರುವ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನೂ‌ ಸಂಪದದಲ್ಲಿ ಕಾಮೆಂಟ್ ಮೂಲಕ ತಿಳಿಸಿ.

ಸಂದರ್ಶನದ ವೇಳೆ ತೆಗೆದ ಕೆಲವು ಫೋಟೋಗಳು:

u r ananthmurthy

ಯು ಆರ್ ಅನಂತಮೂರ್ತಿ
ಅವರ ಆಫೀಸಿನಲ್ಲಿ.

ಆಂಜನೇಯ
ಯು ಆರ್ ಅನಂತಮೂರ್ತಿಯವರ ರೀಡಿಂಗ್ ರೂಮ್ ಪಕ್ಕದಲ್ಲಿದ್ದ ಆಂಜನೇಯ.

u r ananthmurthy

ಸೂ: ನಿಮ್ಮ ಬಳಿಯೂ ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಧ್ವನಿಮುದ್ರಣವಿದ್ದಲ್ಲಿ ಅದನ್ನು 'ಸಂಪದ'ದಲ್ಲಿ ಪ್ರಕಟಿಸಲು ನನಗೆ ಇ-ಮೇಯ್ಲ್ ಮೂಲಕ ಕಳುಹಿಸಿ.

  • ಶ್ರಾವ್ಯ (ಆಡಿಯೋ) - Podcasts
Ornamental seperator
  • Login or register to post comments
  • 3259 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 22, 2005 - 9:08pm — tvsrinivas41

೫ ನಿಮಿಷಗಳು ಮಾತ್ರ

tvsrinivas41's picture

ನನ್ನ ಕಂಪ್ಯೂಟರ್ ಸೌಂಡ್ ಸಿಸ್ಟಂನಲ್ಲಿ ತೊಂದರೆ ಇದೆ. ಮೊದಲ ೫ ನಿಮಿಷಗಳ ಮಾತು ಕೇಳುತ್ತಿದ್ದ ಹಾಗೆಯೇ ಸ್ತಬ್ಧವಾಗಿದೆ. ಅದಕ್ಕೇ ಈ ಕಡತವನ್ನು ಪೂರ್ಣವಾಗಿ ಇಳಿಸಿಕೊಂಡಿರುವೆ. (೨೭ ಎಂ ಬಿ). ನಂತರ ಇದನ್ನು ಕೇಳಿ ಉತ್ತರಿಸುವೆ.

ಒಮ್ಮೆ ನಾನು (೧೯೭೫ರಲ್ಲಿ) ಅವರ ಮನೆಗೆ ಹೋಗಿದ್ದೆ. ಮುಂಬಾಗಿಲಿನಲ್ಲೇ ಕಾಣುವಂತೆ ಏಸು ಕ್ರಿಸ್ತ ಮತ್ತು ವೆಂಕಟೇಶ್ವರನ ಫೋಟೋ ಹಾಕಿದ್ದರು. ಈಗಲೂ ಅವು ಹಾಗೆಯೇ ಇವೆಯಾ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • Email this ಪ್ರತಿಕ್ರಿಯೆ
November 22, 2005 - 10:08pm — hpn

Re: ೫ ನಿಮಿಷಗಳು ಮಾತ್ರ

hpn's picture

ತೊಂದರೆ ಇಲ್ಲ. ನಿಧಾನವಾಗಿ ಕೇಳಿ Smiling

Podcasting ಎಲ್ಲ ಕನ್ನಡಿಗರ ಮನೆಗಳಲ್ಲೂ ಕ್ಲಿಕ್ ಆಗಲು ಸ್ವಲ್ಪ ಸಮಯ ಬೇಕೇಬೇಕು. ಏಕೆಂದರೆ ಎಲ್ಲರ ಮನೆಯಲ್ಲೂ ಇನ್ನೂ ಬ್ರಾಡ್ ಬ್ಯಾಂಡ್ ಇಲ್ಲ. ಕೆಲವರು ಆಫೀಸಿನಿಂದ ಕೇಳುತ್ತಾರೆ. ಹಲವರು ಅಮೇರಿಕದಲ್ಲಿದ್ದಾರೆ (ಅಲ್ಲಿ ಇಂಟರ್ನೆಟ್ ಆರಾಮಾಗಿ ಸಿಗತ್ತೆ).

tvsrinivas41 wrote:
ಒಮ್ಮೆ ನಾನು (೧೯೭೫ರಲ್ಲಿ) ಅವರ ಮನೆಗೆ ಹೋಗಿದ್ದೆ. ಮುಂಬಾಗಿಲಿನಲ್ಲೇ ಕಾಣುವಂತೆ ಏಸು ಕ್ರಿಸ್ತ ಮತ್ತು ವೆಂಕಟೇಶ್ವರನ ಫೋಟೋ ಹಾಕಿದ್ದರು. ಈಗಲೂ ಅವು ಹಾಗೆಯೇ ಇವೆಯಾ?

ಮನೆ ಒಳಗೆ ಹೋಗಲಿಲ್ಲ. ಸೀದ ಅವರ ಆಫೀಸಿಗೆ ನುಗ್ಗಿದ್ದು. ಹಿಂದೆ ಗಾರ್ಡನ್ನಿನಲ್ಲಿದ್ರು, ಅನಂತಮೂರ್ತಿಯವರು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
November 23, 2005 - 12:46pm — ಶ್ಯಾಮ ಕಶ್ಯಪ

ಸಾಫ್ಟ್‍ವೇರ್ vs ಹಾರ್ಡ್‍ವೇರ್

ಶ್ಯಾಮ ಕಶ್ಯಪ's picture

ಅನಂತಮೂರ್ತಿಯವರು ಭಾರತೀಯರ hardware vs software abilities ಬಗ್ಗೆ ಮಾತಾಡಿದ್ರು. ಅವರ ಮಾತಿನ ಅರ್ಥವನ್ನು services ಮತ್ತು manufacturing sectorಗಳಿಗೆ generalize ಮಾಡಬಹುದು ಅನ್ನಿಸುತ್ತದೆ. ಏಕೆಂದ್ರೆ, ಅವರು ಪ್ರಸ್ತಾಪಿಸುವ ಹಾರ್ಡ್ವೇರ್ advantage ಈ manufacturing sectorಗೆ ಅನ್ವಯಿಸುತ್ತದೆ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • Email this ಪ್ರತಿಕ್ರಿಯೆ
November 23, 2005 - 12:53pm — hpn

ನಿಜ

hpn's picture

ನಿಜ. Eye-wink

ನಾರಾಯಣಮೂರ್ತಿಯವರು ಅವರಿಗೆ ಹೇಳಿದಂತೆ ನಮ್ಮಲ್ಲಿ ಹಾರ್ಡ್ ವೇರ್ ಮುಂದುವರಿಯಲು ಬೇಕಾದ infrastructure ಇಲ್ಲ... ಅದರಿಂದಾಗಿ ಹಣಹೂಡಿಕೆಯೂ ಇಲ್ಲ. ಅನಂತಮೂರ್ತಿಯವರ ವಾದ ಬರಿ ಮ್ಯಾನ್ಯುಫ್ಯಾಕ್ಚರಿಂಗ್ ಸೆಕ್ಟರಿಗೆ ಮಾತ್ರ ಓಕೆ ಕಂಪ್ಯೂಟರ್ ಸಂಬಂಧಿತ ಹಾರ್ಡ್ ವೇರ್ - ಚಿಪ್, ಪ್ರೋಸೆಸರುಗಳಿಗೆ ಪ್ರಚಂಡ ತಲೆ ಬೇಕು Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
November 23, 2005 - 8:16pm — tvsrinivas41

ಚೆನ್ನಾಗಿ ಮೂಡಿದೆ

tvsrinivas41's picture

ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ. ಪ್ರಸಕ್ತ ಕಂಪ್ಯೂಟರ್ ಅವಶ್ಯಕತೆಗಳ ಬಗ್ಗೆ ಅನಂತಮೂರ್ತಿಗಳು ತಿಳಿದುಕೊಂಡಿರುವುದು ನೋಡಿದರೆ ಆಶ್ಚರ್ಯವಾಗುತ್ತದೆ. ಒಳ್ಳೆಯ ಪ್ರಶ್ನೆಗಳನ್ನು ಅವರ ಮುಂದೊಡ್ಡಿ ಸೂಕ್ತ ಉತ್ತರ ಒದಗಿಸಿದ್ದೀರ. ಅನಂತಮೂರ್ತಿಗಳು ಕಂಪ್ಯೂಟರ್ ಉಪಯೋಗಿಸುತ್ತಿದ್ದಾರಾ?

ಸಾಹಿತ್ಯದ ಬಗ್ಗೆ ಇನ್ನೂ ಸ್ವಲ್ಪ ವಿಷಯಗಳನ್ನು ಕೇಳಬಹುದಿತ್ತೇನೋ? ಆದರೂ ಇಷ್ಟು ಕಡಿಮೆ ಸಮಯದಲ್ಲಿ ಮೂರು ಸಂದರ್ಶನಗಳನ್ನು ಚೊಕ್ಕವಾಗಿ ಧ್ವನಿಮುದ್ರಿಸಿ ನಮಗೆ ಇತ್ತಿರುವ ನಾಡಿಗರಿಗೆ ಮತ್ತು ಇಸ್ಮಾಯಿಲರಿಗೆ ವಂದನೆಗಳು. ಅಲ್ಲ! ನಿಮಗೆ ದಣಿವು ಅನ್ನುವುದು ಇಲ್ಲವೇ?

ಕನ್ನಡಿಗರಿಗೆ ಇಷ್ಟು ಸುಲಭವಾಗಿ ಅಂತರ್ಜಾಲದಲ್ಲಿ ಸಂದರ್ಶನಗಳು ಲಭ್ಯವಾಗುತ್ತಿರುವುದು ಸಾಹಿತ್ಯ ವರ್ಧನೆಯ ಸೂಚಕ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎರಡನೆಯ ಸಂಚಿಕೆ - ಕಂಬಾರರೊಂದಿಗೆ
  • ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು
  • ಐದನೆಯ ಸಂಚಿಕೆ - ಡಾ|| ಜಿ ಎಸ್ ಶಿವರುದ್ರಪ್ಪನವರೊಂದಿಗೆ
  • Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ
  • ಎಲ್ಲರಿಗೂ ಸ್ವಾಗತ!
Syndicate content
  • ಮೊದಲನೆಯ ಸಂಚಿಕೆ: ಕೆ ಪಿ ಪೂರ್ಣಚಂದ್ರ ತೇಜಸ್ವಿ
  • ಎರಡನೆಯ ಸಂಚಿಕೆ: ಚಂದ್ರಶೇಖರ ಕಂಬಾರ
  • ಮೂರನೆಯ ಸಂಚಿಕೆ: ಯು ಆರ್ ಅನಂತಮೂರ್ತಿ
  • ನಾಲ್ಕನೆಯ ಸಂಚಿಕೆ: ಲಿಂಗದೇವರು ಹಳೆಮನೆ
  • ಐದನೆಯ ಸಂಚಿಕೆ: ಜಿ ಎಸ್ ಶಿವರುದ್ರಪ್ಪ
  • ಆರನೆಯ ಸಂಚಿಕೆ: ಟಿ ಎನ್ ಸೀತಾರಾಂ
  • ಏಳನೆಯ ಸಂಚಿಕೆ: ಕೆ ಎಸ್ ನಿಸಾರ್ ಅಹಮದ್
  • ಎಂಟನೆಯ ಸಂಚಿಕೆ: ಜಿ ಟಿ ನಾರಾಯಣ ರಾವ್
  • ಒಂಬತ್ತನೆಯ ಸಂಚಿಕೆ: ವಿವೇಕ ಶಾನಭಾಗ, ಸಂದರ್ಶಕರು: ನರೇಂದ್ರ ಪೈ
  • ಹತ್ತನೆಯ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ

RSS Subscribe to the Podcasts.

ಲೇಖಕರು

ismail's picture

ಪೂರ್ಣ ಹೆಸರು
ismail

ಪರಿಚಯ

ವೃತ್ತಿಯಲ್ಲಿ ಪತ್ರಕರ್ತ. ಈ ವೃತ್ತಿಗೆ ಸಹಜವಾಗಿರುವಂತೆ ಜಗತ್ತಿನಲ್ಲ ಎಲ್ಲ ವಿಷಯಗಳ ಬಗ್ಗೆಯೂ ಆಸಕ್ತಿ ಇದೆ. ಭಾಷಾ ವಿಜ್ಞಾನ ಮತ್ತು ಅರ್ಥಶಾಸ್ತ್ರ ಮೆಚ್ಚಿನ ವಿಷಯಗಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Aravind M.S
    ಉ: ಚಂದಮಾಮನಿಗೆ ಅರವತ್ತು......
    May 9, 2008 - 5:55pm
  • gururajkodkani
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 5:25pm
  • madhava_hs
    ಉ: ಡ್ರೈವರ್‌ ಎಂಬ ಆಪತ್ಬಾಂಧವ
    May 9, 2008 - 5:19pm
  • roopablrao
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 5:00pm
  • gururajkodkani
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 4:47pm
  • savithru
    ಉ: ಉಳ್ಳವರು ಶಿವಾಲಯವ ಮಾಡುವರು
    May 9, 2008 - 4:32pm
  • savithru
    ಉ: ಚುನಾವಣಾ ಭವಿಷ್ಯ
    May 9, 2008 - 3:51pm
  • vinayudupa
    ಉ: ಚುನಾವಣಾ ಭವಿಷ್ಯ
    May 9, 2008 - 3:37pm
  • Chamaraj
    ಉ: ಡ್ರೈವರ್‌ ಎಂಬ ಆಪತ್ಬಾಂಧವ
    May 9, 2008 - 3:25pm
  • girish.rajanal
    ಉ: ಡ್ರೈವರ್‌ ಎಂಬ ಆಪತ್ಬಾಂಧವ
    May 9, 2008 - 3:20pm
ಇನ್ನಷ್ಟು

ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator