ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಅಂತರಜಾಲದಲ್ಲಿ ಕನ್ನಡ ಯಾವ ರೂಪದಲ್ಲಿ ಬೆಳೆಯುವುದನ್ನು ನೋಡ ಬಯಸುತ್ತೀರಿ?

ಕನ್ನಡ ಬಳಸುವ ಬ್ಲಾಗುಗಳು ಹೆಚ್ಚಾಗಬೇಕು
27% (97 ಮತಗಳು)
ಅಂತರಜಾಲದಲ್ಲಿ ಕನ್ನಡ ಬಳಸಿ ನಡೆಯುವ ಚರ್ಚೆ ಹೆಚ್ಚಾಗಬೇಕು
28% (102 ಮತಗಳು)
ಕನ್ನಡದ ಮೇರು ಕೃತಿಗಳು ಅಂತರಜಾಲದಲ್ಲಿ ಲಭ್ಯವಾಗಬೇಕು
26% (94 ಮತಗಳು)
ಕನ್ನಡ ದಿನಪತ್ರಿಕೆಗಳು ಯುನಿಕೋಡ್ ನಲ್ಲಿ ಸುದ್ದಿ ಆನ್ಲೈನ್ ಬಿತ್ತರಿಸಬೇಕು
18% (65 ಮತಗಳು)
Total votes: 358

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಇದೊಂದು ಸಾಧ್ಯವಾದರೆ..

ಶ್ಯಾಮ ಕಶ್ಯಪ's picture

ಕನ್ನಡಿಗರು ಅಂತರ್ಜಾಲದಲ್ಲಿ ಕನ್ನಡವನ್ನುಪಯೋಗಿಸಿ ಚರ್ಚಿಸಲು ಶುರುಮಾಡಿದರೆ, ಮಿಕ್ಕೆಲ್ಲವೂ ತಾವಾಗಿಯೇ ಶುರುವಾಗುತ್ತವೆ. ದಿನಪತ್ರಿಕೆಗಳಿಗೆ ಯೂನಿಕೋಡ್ ಬಳಸಲು ಇದರಿಂದಾವುದೇ incentive ಸಿಗದಿರಬಹುದು.. ಆದರೆ ಯೂನಿಕೋಡ್ ತಂತ್ರಾಂಶ ಕಾಲಾಂತರದಲ್ಲಿ ಮಿಕ್ಕ ತಂತ್ರಾಂಶಗಳಿಗಿಂತ ಸುಲಭವಾಗಬಹುದಾದ್ದರಿಂದ ಪತ್ರಿಕಾ ಮುದ್ರಣ ತಾನಾಗಿಯೇ ಸರಿಹೋಗಬಹುದು.
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

ಕನ್ನಡದಲ್ಲಿ ಈಗಾಗಲೇ ಹಲವು 'ಬ್ಲಾಗ್' ಗಳು ಸೇರ್ಪಡೆಯಾಗಿವೆ.

venkatesh's picture

ಮಾನ್ಯರೆ,
ಕನ್ನಡದಲ್ಲಿ ಈಗಾಗಲೇ ಹಲವು 'ಬ್ಲಾಗ್' ಗಳು ಸೇರ್ಪಡೆಯಾಗಿವೆ. ಕೆಲವಂತೂ ಅತ್ಯಂತ ಸಮರ್ಥವಾಗಿವೆ ! ಅವು ವಿದೇಶದಲ್ಲೂ ಇವೆ ಎನ್ನುವುದು ಬಹಳ ರೋಚಕವಾದ ಸಂಗತಿ ! ನಿಧಾನವಾಗಿ ಕೆಲಸ ಮಾಡಿ. ಈಗಿರುವ 'ಬ್ಲಾಗ್' ಗಳೇ ಸಾಕು. ಅವನ್ನು ಉತ್ತಮಪಡಿಸಿ. ಎಲ್ಲಿಯೂ ಸಮರ್ಥರಿಗೆ ನೋವಾಗದಂತೆ ವರ್ತಿಸಿ. ಹೊಸತನ ಇರಲಿ. ಬಹಳಸ್ಟು ಕಟ್ಟುಪಾಡು ಮಾಡಬೇಡಿ. ವ್ಯಕ್ತಿಗಳ ಕೆಲಸವನ್ನು ಲೇಖನದ ಕೆಳಗೆ ನಮೂದಿಸುವುಡು ಸರ್ವೇಸಾಮಾನ್ಯವಾದ ಸಂಗತಿ. ಬಹುಶಃ ಸ್ವಂತ ರಚನೆ ಎನ್ನುವುದು ಪೂರ್ತಿಯಾಗಿ ಸಾದ್ಯವೇ ಇಲ್ಲ ! ವಿಚಾರಗಳನ್ನು ಆಹ್ವಾನಿಸಿ; ನಿಮ್ಮ ಟಿಪ್ಪಣಿ ಬರೆಯಲು ಮರೆಯದಿರಿ ! ಆದರೆ ಬೇರುಗಳು ಶಕ್ತಿಶಾಲಿಯಾಗಿರಲಿ. ಹೆದರಬೇಡಿ. ಮುಂದುವರಿಯಿರಿ.
ವೆಂಕಟೇಶ.

'ಕನ್ನಡದಲ್ಲಿ ಚರ್ಚೆ' ಮೂಲಮಂತ್ರವಾದರೆ ...

mana's picture

ಕನ್ನಡದಲ್ಲಿ ಚರ್ಚೆ ಮೂಲಮಂತ್ರವಾದರೆ ...
ಮಿಕ್ಕೆಲ್ಲವೂ ತನ್ನಷ್ಟಕ್ಕೆ ತಾನೆ ಆಗುತ್ತದೆ!

ಅಂತರ್ಜಾಲದಲ್ಲಿ ಕನ್ನಡದವರು ನಡೆಸುವ ಚರ್ಚೆಗಳನ್ನು, ಕನ್ನಡದಲ್ಲಿಯೇ ನಡೆಸಿದರೆ ಯೂನಿಕೋಡ್ ಬಳಕೆಯೂ ಸೇರಿದಂತೆ ಮಿಕ್ಕೆಲ್ಲವೂ ತನ್ನಷ್ಟಕ್ಕೆ ತಾನೇ ಉತ್ತಮಗೊಳ್ಳುತ್ತದೆ. ಪತ್ರಿಕೆಗಳು ಅಂತರ್ಜಾಲದಲ್ಲಿ ಯೂನಿಕೋಡ್ ಮಾದರಿಯಲ್ಲಿ ಪ್ರಕಟಿಸುವುದು ಇಂದಿನ ದಿನದಲ್ಲಿ ಅವಶ್ಯಕವಾಗಿದೆ; ಗೂಗಲ್ ಮುಂತಾದ ತಾಣಗಳಿಂದ ಕನ್ನಡದಲ್ಲಿರುವ ಮಾಹಿತಿಯನ್ನು ಹುಡುಕುವುದು ಸಾಧ್ಯವಾಗುತ್ತದೆ.

ಚರ್ಚೆ ಎಂದರೆ ಸಂಪದದ ರೀತಿ ಸಂಪೂರ್ಣ ಕನ್ನಡಮಯ ತಾಣದಲ್ಲೇ ಆಗಬೇಕೆಂದೇನಿಲ್ಲ. ಯಾಹೂ ಮೆಸೆಂಜರ್, ಗೂಗಲ್ ಟಾಕ್ ರೀತಿಯ ತಂತ್ರಾಂಶಗಳಲ್ಲಿ, ಈ-ಮೈಲ್ ಗಳಲ್ಲಿ, ಕನ್ನಡ/ಕನ್ನಡಿಗರ ಫೋರಂಗಳಲ್ಲಿ ಕನ್ನಡವನ್ನು ಕನ್ನಡದಲ್ಲಿಯೇ ಉಪಯೋಗಿಸಬೇಕು.

- ಮನ

ಸಂಪದಕ್ಕೆ ಧನ್ಯವಾದಗಳು

pradeep_adiga's picture

ಗೆಳೆಯರೇ,

          ನಾನು ಒಂದು ದಿನ ಬ್ಲಾಗ್ ಸ್ಪಾಟ್ ನಲ್ಲಿ ಸರ್ಚ್ ಮಾಡಿದಾಗ ನಿಮ್ಮ ಸೈಟಿನ ಲಿಂಕ್ ಸಿಕ್ಕಿತು. ಇಲ್ಲಿನ ಯೂನಿಕೋಡ್ ಬಳಕೆಯನ್ನು ನೋಡಿ ನನ್ನ ಬ್ಲಾಗ್ ನಲ್ಲಿಯೂ ಕೂಡಾ (http://adigaru.blogs...) ಯೂನಿಕೋಡ್ ಬಳಸಲಾರಂಭಿಸಿದೆ. ಈ ಸೈಟ್ ನಿಜವಾಗಿಯೂ ಅದ್ಭ್ಹುತವಾದ ಮಾಹಿತಿಗಳನ್ನು ಹೊಂದಿದೆ. ಇದನ್ನು ಇನ್ನೂ ಉತ್ತಮವಾಗಿಸಲು ನನ್ನ ಅಳಿಲು ಸೇವೆಯನ್ನು ಇಂದಿನಿಂದ ಆರಂಭಿಸಿದ್ದೇನೆ.

ಇತೀ ನಿಮ್ಮ ವಿಶ್ವಾಸಿ,

ಪ್ರದೀಪ 

ಸ್ವಾಗತವು ನಿಮಗೆ

Sunil Jayaprakash's picture

ಅಳಿಲ ಸೇವೆಯೋ, ಹೆಮ್ಮರದ ಸೇವೆಯೋ ಅದೆಲ್ಲ ಒತ್ತಟ್ಟಿಗಿಡೋಣ. ನೀವು ನಮಗೆ, ನಮಗೆ ನೀವು ಸಿಕ್ಕಿದೆವಲ್ಲ ಸದ್ಯಕ್ಕೆ ಅಷ್ಟು ಸಾಕಲ್ಲವೇ.

ಮರೆತಿದ್ದೆ, ಸ್ವಾಗತವು ನಿಮಗೆ. ಒಳ್ಳೆಯದಾಗಲಿ.