ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

Punching Machine

February 20, 2006 - 7:26pm — Sunil Jayaprakash

ಸ್ನೇಹಿತರೆ, ಈ ಪಂಚಿಂಗ್ ಮೆಷಿನ್ ಗೆ ಕನ್ನಡದಲ್ಲಿ ಏನಂತ ಹೇಳುವುದು ಸ್ವಲ್ಪ ತಿಳಿಸಿಕೊಡುತ್ತೀರಾ.

Punching machine, ತೂತು ಮಾಡಲು ಬಳಕೆಗೆ ಬರುವ ಪರಿಕರ(ಪರಿಕರ ಕನ್ನಡವೋ, ಸಂಸ್ಕೃತವೋ). ವಾಸ್ತವವಾಗಿ ಇಂತಹ ವಸ್ತುಗಳಿಗೆ ಕನ್ನಡ ಪದಗಳಿರುತ್ತವೆ. ದೂರದ ಉರುಗಳಲ್ಲಿರುವ ನಮ್ಮ ಸರ್ಕಾರಿ ಕಛೇರಿಗಳಲ್ಲಿ, ಮರಗೆಲಸದವರು ಅಚ್ಚ ಕನ್ನಡ ಉಪಯೋಗಿಸುತ್ತಿರುತ್ತಾರೆ, ಆದರೆ ನಗರವಾಸಿಗಳಾದ ನಮಗೆ ಅವುಗಳು ತಿಳಿಯದ ಕಾರಣ, ಕನ್ನಡ ಪದಗಳೇ ಇಲ್ಲ ಎಂಬ ನಿರ್ಣಯಕ್ಕೆ ಬಂದಿರುತ್ತೇವೆ. ಇದು ದಸ್ತಾವೇಜುಗಳನ್ನು ಸಮಾನವಾಗಿ ಜೋಡಿಸಲು ಬಳಕೆಗೆ ಬರುತ್ತದೆ.

‹ ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ. ಮುಸ್ಸಂಜೆ ಮಾತು ಚಿತ್ರದ ಹಾಡುಗಳು ›
  • ಅರಳಿ ಕಟ್ಟೆ
~.~
  • Login or register to post comments
  • 816 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 22, 2006 - 11:40am — shreekant.mishrikoti

Punching Machine -ಗೆ ತೂತಕ ಎನ್ನಿ!

shreekant.mishrikoti's picture

Punching Machine -ಗೆ ತೂತಕ ಎನ್ನಿ!

ನಮ್ಮ ಬ್ಯಾಂಕ್ ನಲ್ಲಿ ವೋಚರ್ ಗಳನ್ನು ಸಿಕ್ಕಿಸಲು ಟೇಬಲ್ ಮೇಲೆ ಇಟ್ಟುಕೊಂಡಿದ್ದ ಮೊಳೆಯಿರುವ ಸಾಧನಕ್ಕೆ ಚುಚ್ಚುಗ ಅಂತಿದ್ವಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 22, 2006 - 12:11pm — hpn

ಪಂಚಿಂಗ್ ಮೆಶಿನ್

hpn's picture

>Punching Machine -ಗೆ ತೂತಕ ಎನ್ನಿ!

ನಟ್ಟು ಬೋಲ್ಟುಗಳಿಗೂ ಹೊಸ ಹೆಸರುಗಳನ್ನ ಇಡಿ ಹಾಗಾದ್ರೆ Sticking out tongue

ಕಟ್ಟಿಂಗ್ ಪ್ಲೇಯರ್, ಪಂಚಿಂಗ್ ಮೆಶಿನ್ ಮುಂತಾದ ಇಂಗ್ಲಿಷ್ ಪದಗಳು ಇಂಗ್ಲಿಷಿನಂತೆಯೇ ಬಳಸಿದರೆ ವಾಸಿ. ಹೊಸ ಪದಗಳನ್ನು ನಾಮಕರಣ ಮಾಡೋದ್ರಿಂದ ಎಲ್ಲರ ತಲೆ ಕೆಡಿಸೋ ಕೆಲ್ಸ ಮಾಡ್ತೀವಿ, ಅಷ್ಟೆ!

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 22, 2006 - 12:49pm — ಮಹೇಶ ಭೋಗಾದಿ

Nut/screw = ತಿರುಪು, bolt = ಚಿಲಕ.

ಮಹೇಶ ಭೋಗಾದಿ's picture

Nut/screw = ತಿರುಪು.
bolt = ಚಿಲಕ.

ನನ್ನ ಅನಿಸಿಕೆಯಲ್ಲಿ ಕನ್ನಡಪದಗಳನ್ನು ಸೃಷ್ಟಿಸುವುದರಿಂದ ಕನ್ನಡದ ಪದಸಂಪತ್ತು ಹೆಚ್ಚುತ್ತದೆ.
ಮತ್ತು ಮುಖ್ಯವಾಗಿ ಬೇರೆ ಭಾಷೆಯ ಪದಗಳು ಕನ್ನಡದಲ್ಲಿ ಕಡಮೆಯಾಗುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 22, 2006 - 1:15pm — shreekant.mishrikoti

ಹೊಸ ಪದಗಳನ್ನು ನಾಮಕರಣ -ತಲೆ ಕೆಡಿಸೋ ಕೆಲ್ಸ

shreekant.mishrikoti's picture

ಹೊಸ ಪದಗಳ ಸೃಷ್ಟಿಯಿಂದ ತಲೆ ಕೆಡಬೇಕಿಲ್ಲ ; ಪ್ರಯತ್ನ ಮಾಡುತ್ತ ಇರುವದರಲ್ಲಿ ತಪ್ಪೇನು? ಕನ್ನಡದ ಜಾಯಮಾನಕ್ಕೆ ಹೊಂದುತ್ತಿದ್ದರೆ , ಜನರು ಬಳಕೆಗೆ ತಂದರೆ , ಒಗ್ಗಿ ಹೋಗುತ್ತೇವೆ. ಎಲ್ಲ ಕಾಲಕ್ಕೂ ನಡೆಯುತ್ತಿರುವದು ಹಾಗೆಯೇ. ( ಪತ್ರಿಕೆಗಳನ್ನು ಗಮನಿಸುತ್ತಿದ್ದರೆ ಇದು ಸ್ಪಷ್ಟವಾಗುತ್ತದೆ.)

ಇಂಗ್ಲೀಷಿನ ಪದಕ್ಕೆ ಈಗ ಹೇಗೆ ಒಗ್ಗಿದ್ದೀವಿ? ಇಂಗ್ಲೀಷ್ ಪದ ಬಲ್ಲವರಿಗೆ ಕನ್ನಡ ಶಬ್ದ ನೋಡಿ ಸ್ವಲ್ಪ ಇರುಸುಮುರುಸಾಗುವದು ಸಹಜ ; ಬರಿಯ ಕನ್ನಡ ಗೊತ್ತಿರುವವನಿಗೆ ಇಂಗ್ಲೀಷ ಪದ ಎದುರಾದರೆ ಹೇಗಿದ್ದೀತು ? ಅದರ ಬದಲು ಈಗಾಗಲೇ ಅವನಿಗೆ ಗೊತ್ತಿರುವ ಕನ್ನಡಪದವನ್ನು ಆಧರಿಸಿದ ಪದ ಇದ್ದರೆ ಬೇಗ ಅರ್ಥ ಮಾಡಿಕೊಳ್ಳುತ್ತಾನೆ ಅಲ್ಲವೆ?

( ನಾವು ಬೋಲ್ಟ್ ಅನ್ನುವದಕ್ಕೆ ನಮ್ಮ ಹಿರಿಯರು ಚಿಲಕ ಅನ್ನುತ್ತಿದ್ದರು ಎನ್ನುವದನ್ನು ಮರೆಯಕೂಡದು. ಈಗಾಗಲೇ ಅವರು ಉಪಯೋಗಿಸುತ್ತಿದ್ದ ಕನ್ನಡ ಶಬ್ದಗಳು ಮರೆಗೆ ಸರಿಯುತ್ತಿವೆ . ಹೊಸ ಶಬ್ದಗಳನ್ನು ಬಿಡಿ , ಇರುವ ಶಬ್ದ ಉಳಿಸಿಕೊಳ್ಳಬೇಕಿದೆ!- 'ಬೆಳದಿಂಗಳ ಬಾಲೆ' ಸಿನಿಮಾದಲ್ಲಿ ನಾಯಕ ಶಬ್ದಕೋಶ ತರಲು ಹೇಳಿದರೆ ಕೆಳಗಿನವನು ಕಕ್ಕಾಬಿಕ್ಕಿ!? 'ಕನ್ನಡದಲ್ಲಿ ಡಿಕ್ಷನರಿ ಅಂತಾರಲ್ಲಯ್ಯಾ , ಅದನ್ನು ತಗೊಂಬಾ' ಅಂತ ಹೇಳುತ್ತಾನೆ!)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 22, 2006 - 3:25pm — Sunil Jayaprakash

ಮಹತ್ವಾಕಾಂಕ್ಷೆ

Sunil Jayaprakash's picture

ಯಾವ ಸಿನಿಮಾ ಜ್ಞಾಪಕಕ್ಕೆ ಬರುತ್ತಿಲ್ಲ. ಆದರೆ ಚಿತ್ರದ ಹಾಡುಗಳು ನೆನಪಿನಲ್ಲಿವೆ.

ಆ ಸಿನಿಮಾದ ಒಂದು ಹಾಡು - ನಿಂಗಿ, ನಿಂಗಿ, ನಿಂಗೀ - ಆಸೆ ಕದ್ದೀಯಲ್ಲೆ ನಿಂಗಿ.

ಅದೇ ಚಿತ್ರದಲ್ಲಿ ಮತ್ತೊಂದು ಹಾಡು ಇದೆ,

ಅ ಆ ಇ ಈ ಎ ಏ ಐ ಒ ಓ ಔ ಅಂ ಅಃ -  ( ಪ್ರಾಸಕ್ಕಾಗಿ ಋ ಇಲ್ಲ ಅದರಲ್ಲಿ)

ಓಯ್ ಕನ್ನಡ ಪಂಡಿತರೆ,

ಏನ್ ಕನ್ನಡ ಕೂಸುಗಳೇ ಅಂತ

ಆ ಹಾಡಿನಲ್ಲಿ  ಒಂದು ಸಾಲು ಬರುತ್ತದೆ.

ಇಂಗ್ಲಿಷ್ ಭಾಷೆ ದೊಡ್ಡದಾಯ್ತ್ಯಾಕೆ - ತಾಯಿ ಭಾಷೆನ ಅವ್ರು ಪ್ರೀತಿ ಮಾಡಿದ್ದಕ್ಕೆ.

ಕನ್ನಡದ ಭಾಷೆ ಚಿಕ್ಕದಾಯ್ತ್ಯಾಕೆ - ಕೊಡ್ದೇನೆ ಬರೆ ತೊಗೊಂಡಿದ್ದಕ್ಕೆ, 

 ಇರುವ ಪದಗಳನ್ನು ಬಿಟ್ಟು ಸುಮ್ಸುಮ್ನೆ, ಬಳಕೆಯಲ್ಲಿಲ್ಲ ಅಂತ ಕೈ ಚೆಲ್ಲುತ್ತಾ ಕೂತರೆ, ನಮ್ಮ ಭಾಷೆ ನಿಜವಾಗಿಯೂ ಶಾಸ್ತ್ರೀಯ ಭಾಷೆಯೆ ಆಗುತ್ತದೆ. ಅಂದರೆ ಒಳ್ಳೆಯ ಭಾಷೆ ಅಂತ ಎಲ್ಲರಿಗೂ ತಿಳಿದಿರುತ್ತೆ. ಆದರೆ ಯಾರೂ ಬಳಸುವುದಿಲ್ಲ. ಹಾಗಾಗಿ ಕನ್ನಡ ಪದಗಳ ಸೃಷ್ಠಿಯಾಗಲೇ ಬೇಕು. ಅಂದ ಹಾಗೆ ಹೊಸ ಪದ ಎನ್ನುವಾಗ ಜಾಗರೂಕರಾಗಿರಬೇಕು.

ನಾವು ಯಾವುದನ್ನು ಹೊಸದು ಎನ್ನುತ್ತೇವೋ, ಎಷ್ಟೋ ಬಾರಿ ಅದು ಈಗಾಗಲೇ ಇರುತ್ತದೆ, ಆದರೆ ಬಳಕೆಯಲ್ಲಿಲ್ಲದೆ ನಮಗೆ ಗೊತ್ತಿರುವುದಿಲ್ಲ.  ನಟ್ಟು ಬೋಲ್ಟುಗಳಿಗೆ ಕನ್ನಡ ಪದಗಳಿವೆ, ಈಗಲೂ ನಮ್ಮ ಮನೆಗಳಲ್ಲಿ ಮನೆ ಚಿಲಕ ಸರಿಯಾಗಿ ಹಾಕಿದ್ಯಾ, ವಾಲೆ ತಿರುಪು ಎಲ್ಲಿ ಬೀಳುಸ್ಕೊಂಡೆ. ಅಂತಾನೆ ಕೇಳೋದು.

ನಾವು ಹೀಗೆ ನಿರ್ಲಕ್ಷ್ಯ ಭಾವದಿಂದಿದ್ದರೆ, ನಮ್ಮ ಮಹತ್ವಾಕಾಂಕ್ಷೆಗಳಾದ ಕಾನೂನು, ವೈದ್ಯಕೀಯ ಕಲಿಕೆಗಳನ್ನು ಕನ್ನಡದಲ್ಲಿ ನಡೆಸುವ ಕನಸು ಕನಸಾಗಿಯೇ ಉಳಿಯುತ್ತದೆ.

ಕೇವಲ ನಮ್ಮ ನೆಲವನ್ನ ಬೇರೆಯವರಿಗೆ ದಾನ ಮಾಡುವುದಲ್ಲ, ನಮ್ಮ ಭಾಷೆಯ ಪದಗಳನ್ನೂ ಬೇರೆಯವರಿಗೆ ಕೊಡಬೇಕು ಆಗಲೇ ನಾವು ಬೆಳೆಯುವುದು.

ಕನ್ನಡವನ್ನ ಹೇಗೆ ಕೊಲೆ ಮಾಡಬೇಕು ಎಂದು ತಿಳಿಯಬಯಸಿದರೆ ಇತ್ತೀಚಿನ ಟಿವಿ ಕಾರ್ಯಕ್ರಮಗಳನ್ನು ನೋಡಬೇಕು. ಇಂದು, ಅಂದರೆ, 22, ಫೆಬ್ರವರಿ, 2006, ಸುಮಾರು ಹನ್ನೊಂದು ಅಷ್ಟ್ಹೋತ್ತಿಗೆ (ಸರಿಯಾದ ಸಮಯ ತಿಳಿದಿಲ್ಲ) ಪ್ರಸಾರವಾದ ಅದ್ಯಾವುದೋ ಮೇಕಪ್ ಕಾರ್ಯಕ್ರಮ ವೀಕ್ಷಿಸಿ.  ಅದರಲ್ಲಿ ಒಬ್ಬ ಮಹಿಳೆ ಹೇಗೆ ಮೇಕಪ್ ಮಾಡಬೇಕು, ಮಾಲಿಷ್ ಮಾಡಬೇಕು ಹೇಳುತ್ತಿದ್ದಳು. ಅವಳು ಹೇಳುತ್ತಿದ್ದ ಮಾತುಗಳನ್ನು ಗಮನಿಸಿ. ಅ(ದುರ)ದೃಷ್ಟವಷಾತ್ ಆ ಕಾರ್ಯಕ್ರಮ ನೋಡಿದೆ.

functionಗೆ two days before face pack apply ಮಾಡಿ.

(ಕಾರ್ಯಕ್ರಮಕ್ಕೆ ಎರಡು ದಿನ ಮುಂಚೆ face pack ಉಪಯೋಗಿಸಿ ಅಂತ ಹೇಳಬಹುದಿತ್ತಲ್ಲವೆ.)

faceನಲಿರುವ ಸೋಪನ್ನು cottonಅಲ್ಲಿ ತೆಗೀರಿ. ಇದು ಉದಾಹರಣೆ ಅಷ್ಟೇ

ಇದಕ್ಕೆ ಕಾರಣ, ಟಿವಿ ವಾಹಿನಿಯವರ ಕನ್ನಡದ ಬಗೆಗಿನ ದಿವ್ಯ ನಿರ್ಲಕ್ಷ್ಯ. ಮತ್ತು ನಿಷ್ಕಾಳಜಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 22, 2006 - 2:50pm — ಮಹೇಶ ಭೋಗಾದಿ

Punching Machine - ರಂಧ್ರಕ

ಮಹೇಶ ಭೋಗಾದಿ's picture

ದಯವಿಟ್ಟು ಇದನ್ನು ಅಧಿಕ ಪ್ರಸಂಗವೆಂದು ತಿಳಿಯ ಬೇಡಿ.

ಕನ್ನಡದಲ್ಲಿ ಉಪಕರಣಗಳ ಹೆಸರು ಸಾಮಾನ್ಯವಾಗಿ "ಇಗೆ" ಯಿಂದ ಕೊನೆಗೊಳ್ಳುವುವು.
ಉದಾ: ಸುತ್ತಿಗೆ, ಬಾಚಣಿಗೆ, ಸೀರೆಣಿಗೆ, ಈಳಿಗೆ, ಲಟ್ಟಣಿಗೆ, ಬೀಸಣಿಗೆ, ಸುಟ್ಟಣಿಗೆ, ಮುಂತಾದವು.

ಸಂಸ್ಕೃತದಲ್ಲಿ "ಕ" ಅಥವಾ "ಕಾ"ಯಿಂದ ಕೊನೆಗೊಳ್ಳುವುವು.
ಉದಾ: ಕಂಕತೀಕಾ(ಬಾಚಣಿಗೆ), ಪ್ರಸಾಧನಕ, ವಾಹಕ.

Punching Machine ಗೆ ರಂಧ್ರಕ ವನ್ನಬಹುದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 22, 2006 - 3:53pm — shreekant.mishrikoti

ತೂತುಗ/ ತೂತಿಗೆ

shreekant.mishrikoti's picture

ಹಾಗಾದರೆ ತೂತುಗ/ ತೂತಿಗೆ ಎನ್ನಬಹುದು , ರಂಧ್ರ ಸಂಸ್ಕೃತವಾದ್ದರಿಂದ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಚ್ಚ ಕನ್ನಡ ಪದಗಳ ಬಗ್ಗೆ ನನ್ನ ಕೆಲವು ವಿಚಾರಗಳು
  • ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?...
  • ನಮ್ಮ ಕನ್ನಡವನ್ನು develop ಮಾಡಿ.
  • ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?...
  • ಏಕ ಭಾಷೆಯ ಕಡೆ ಸಾಗಿದ್ದೇವೆಯೇ...
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:52pm
  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:37pm
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:19pm
  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
ಇನ್ನಷ್ಟು


ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator