ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › Quotes › Satyaprakash.H.K. ರವರು ಸೇರಿಸಿರುವ ನುಡಿಮುತ್ತುಗಳು

ನುಡಿಮುತ್ತು - ವಿಜಯ ಕರ್ನಾಟಕ ದಿಂದ ಆಯ್ದದ್ದು

March 10, 2006 - 12:13pm — Satyaprakash.H.K.

ನುಡಿಮುತ್ತು

ಪುಸ್ತಕದಲ್ಲಿರುವ ವಿದ್ಯೆ, ಮತ್ತೊಬ್ಬರ ಕೈಲಿರುವ ಹಣ, ಬೇಕಾದಾಗ ಬಾರದಿದ್ದರೆ
ಆ ವಿದ್ಯೆ ವಿದ್ಯೆಯಲ್ಲ, ಆ ಹಣ ಹಣವಲ್ಲ.

ಮುಚ್ಚಲು ಯತ್ನಿಸಿದರೂ ಮುಖಾಕೃತಿಯನ್ನು ಅಡಗಿಸಲು ಸಾಧ್ಯವಾಗದು.
ಮನುಷ್ಯರ ಅಂತರಂಗದ ಭಾವವನ್ನು ಅದು ಹೇಗಾದರೂ ಬಯಲಿಗೆಳೆಯುತ್ತದೆ.

ದುರ್ಜನರು ತಾವು ನಾಶವಾಗುವ ಜತೆಗೆ ಸಮೀಪವಿದ್ದ ಸಜ್ಜನರನ್ನೂ ನಾಶಪಡಿಸುತ್ತಾರೆ.

ಹಣವಿರುವುದು ಖರ್ಚು ಮಾಡಲೆಂದು, ಆದರೆ ಖರ್ಚು ಮಾಡಿದರೆ ಹಣ ಇರುವುದಿಲ್ಲ.

ಎಲ್ಲಿ ವಿದ್ಯಾಲಾಭ, ಧನಲಾಭ, ಆತ್ಮಸುಖ ಲಭಿಸುವುದಿಲ್ಲವೋ ಅಲ್ಲಿ ಕ್ಷಣವೂ ನಿಲ್ಲಬಾರದು.

ಅತಿ ಹೆಚ್ಚು ಪುಸ್ತಕ ಓದಿದವರಿಗೆ ಕೊನೇತನಕ ಅಜ್ನಾನದ ಆನಂದವೇನೆಂಬುದು ಗೊತ್ತೇ ಆಗುವುದಿಲ್ಲ.

ಹೆಂಡತಿ, ಮಕ್ಕಳು, ಭೋಗಭಾಗ್ಯಗಳು, ಬದುಕು, ಧನ ಎಲ್ಲವೂ ಅನಿತ್ಯ. ಕೀರ್ತಿಯೊಂದೇ ಸ್ಥಿರ.

ನಿಮ್ಮದು ಶ್ರೀಮಂತ ಅನುಭವವಾಗಿರಬೇಕೆಂದು ಬಯಸಿದರೆ ನೀವು ಬಡತನದಲ್ಲಿ ಬೆಳೆಯಬೇಕು.

ವಿದ್ಯೆಯು ವಿನಯವನ್ನು ಕೊಡುತ್ತದೆ, ವಿನಯದಿಂದ ಯೋಗ್ಯತೆ ಬರುತ್ತದೆ, ಯೋಗ್ಯತೆಯಿಂದ ಹಣ ಹೊಂದುತ್ತಾನೆ.

ವಿಧ್ವಾಂಸರ ಪರಿಶ್ರಮವನ್ನು ವಿದ್ವಾಂಸರೇ ಬಲ್ಲರು, ಪ್ರಸವ ವೇದನೆಯನ್ನು ಬಂಜೆ ಅರಿಯಲಾರರು.

ತಂದೆತಾಯಿಯರನ್ನು, ಗುರುವನ್ನು ಯಾರು ಅವಮಾನ ಪಡಿಸುತ್ತಾರೋ ಅವರು ಅದರ ಫಲವನ್ನೂ ಅನುಭವಿಸುತ್ತಾರೆ.

ಯಾವಾಗಲೂ ಗುಂಪಿನ ಮುಖಂಡನಾಗಿ ಹೋಗಬಾರದು. ಯಶಸ್ಸನ್ನು ಎಲ್ಲರೂ ಹಂಚಿಕೊಳ್ಳುತ್ತಾರೆ.
ಆದರೆ ವೈಫಲ್ಯವನ್ನು ನಾಯಕನ ತಲೆಗೆ ಕಟ್ಟುತ್ತಾರೆ.

ಕೀರ್ತಿಯು ನರ್ತಕಿಯಂತೆ ನರ್ತಿಸುತ್ತದೆ. ಆದರೆ ಸಜ್ಜನಿಕೆ ಬೆಳದಿಂಗಳಂತೆ ಶೋಭಿಸುತ್ತದೆ.

ಗುಣಶಾಲಿಯಾದವನು ಗುಣವನ್ನರಿಯಬಲ್ಲ, ಬಲಿಷ್ಟ ಮಾತ್ರ ಬಲವನ್ನರಿಯಬಲ್ಲ.

ಎಷ್ಟೇ ಖರ್ಚು ಮಾಡಿದರೂ ಖಾಲಿಯಾಗದೆ ದಿನವೂ ಹೆಚ್ಚಾಗುವುದೇ ವಿದ್ಯೆ.

ಯಾರ ಶಾಸ್ತ್ರವಿದ್ಯೆಯು ಕೇವಲ ಜೀವನೋಪಾಯಕ್ಕಾಗಿ ಇದೆಯೋ ಅವನನ್ನು ಜ್ನಾನವನ್ನು ಮಾರುವ ವ್ಯಾಪಾರಿ ಎನ್ನುತ್ತಾರೆ.

ಯಾವಾಗ ಮೌನದಿಂದಿರಬೇಕು ಎಂಬುದನ್ನು ತಿಳಿಯದವನಿಗೆ ಯಾವಾಗ ಮಾತನಾಡಬೇಕು ಎಂಬುದೂ ತಿಳಿಯುವುದಿಲ್ಲ.

ಭಿಕ್ಷುವು ಮನೆಮನೆಗೆ ಸುತ್ತುವುದು ಕಲಿಸಲೋಸುಗವೇ ವಿನಾ ಯಾಚನೆಗಾಗಿ ಅಲ್ಲ.

ಗುಣಶಾಲಿಯೂ ಆಗಿ ಗುಣಶಾಲಿಗಳಲ್ಲಿ ಪ್ರೇಮವನ್ನೂ ಉಳ್ಳ ಸರಳ ಸ್ವಭಾವದ ಜನರು ವಿರಳ.

ಜಲಾಶಯದ ನೀರೂ ಬತ್ತಿಹೋಗುತ್ತದೆ. ಆದರೆ ದಾನದ ಫಲ ಶಾಶ್ವತ.

ಮುಖ ಲೇಪನದಿಂದ ಮೃದಂಗವೂ ಮಧುರವಾಗಿ ಧ್ವನಿಗೈಯ್ಯುತ್ತದೆ.

ಸಜ್ಜನರು ಇತರರಿಗೆ ಅನುಕೂಲ ಮಾಡುವುದರಲ್ಲಿಯೇ ತತ್ಪರರಾಗಿರುವುದರಲ್ಲಿ ಸೋಜಿಗವೇನಿಲ್ಲ.

ಅಗೆದರೆ ಭೂಮಿ ನೀರು ನೀಡುತ್ತದೆ. ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ಫಲ ಖಚಿತ.

ಕಷ್ಟದಲ್ಲೇ ಸುಖವೂ ಅಡಗಿದೆ. ಯಾರು ಖುಷಿಯಿಂದ ಕಷ್ಟವನ್ನು ಸಹಿಸಿಕೊಳ್ಳುತ್ತಾನೋ ಅವನೇ ನಿಜವಾದ ಸುಖಿ.

ದಾನವೇ ಈ ಜಗತ್ತಿನಲ್ಲಿ ಉತ್ತಮ ಆಭರಣ, ದಾನವೇ ದಾರಿದ್ರ್‍ಯ ನಿವಾರಕ, ದಾನವೇ ಸ್ವರ್ಗದ ಮೆಟ್ಟಿಲು, ದಾನವು ಶಾಂತಿಕಾರಕವೂ ಹೌದು.

ಕೋಪ ಬಂದವನು ಹಿರಿಯರನ್ನೂ ಕೊಂದಾನು, ಸಜ್ಜನರನ್ನೂ ಕೆಟ್ಟಮಾತುಗಳಿಂದ ನಿಂದಿಸಿಯಾನು. ಆದ್ದರಿಂದ ಸಿಟ್ಟು ಆತ್ಮನಾಶಕ. - ವಿ.ಕ. - ೨೮-೬-೦೫

ಒಂದೇ ಸಾರಿ ಎರಡು ಕೆಲಸಗಳನ್ನು ಮಾಡುವುದಕ್ಕಿಂತ ಯಾವುದನ್ನೂ ಮಾಡದಿರುವುದೇ ಲೇಸು.- ಪ್ರಜಾವಾಣಿ - ೦೬-೭-೨೦೦೫

ನಮ್ಮ ಹಿಂದೆ ಅಥವಾ ಮುಂದೇನಿದೆ ಎನ್ನುವುದಕ್ಕಿಂತ ನಮ್ಮೊಳಗೇನಿದೆ ಎಂಬುದೇ ಮುಖ್ಯ. - ವಿ.ಕ. - ೦೮-೭-೨೦೦೫

ಮತ್ತೊಬ್ಬರ ಏಳಿಗೆ ಕಂಡು ಪರಿತಪಿಸದವನೇ ಉತ್ತಮ, ಪರರ ಒಳ್ಳೆಯದನ್ನು ನೋಡಿ ಸಂತಾಪವಾಗಿದ್ದರೂ ಹೊರಗೆಡಹದವನು ಮಧ್ಯಮ, ಪರಹಿತ ಕಂಡು ದ್ವೇಷಿಸುವುದಲ್ಲದೇ, ಪ್ರಕಟಪಡಿಸುವವನು ಅಧಮ. - ವಿ.ಕ. - ೧೧-೭-೨೦೦೫

ಯಾವಾಗಲೂ ತಮ್ಮ ಬಾಯಿಂದ ಬಹಳ ನಿಂದಿಸುವ ದುರ್ಜನರು ಪತನಶೀಲರು. - ವಿ.ಕ.- ೧೩-೭-೨೦೦೫

ವಾಚಾಳಿಗಳಾಡುವ ಮಾತುಗಳಲ್ಲಿ ಪ್ರಾಜ್ನನು ಒಳ್ಳೆಯದನ್ನು ಮಾತ್ರ ಆರಿಸಿಕೊಳ್ಳುತ್ತಾನೆ.
- ವಿ.ಕ. - ೧೪-೭-೨೦೦೫

ವಿದ್ಯಾವಂತರಾಗಿದ್ದರೂ ದುರ್ಗುಣಗಳಿಂದ ಕೂಡಿರುವವರನ್ನು ತಿರಸ್ಕರಿಸಬೇಕು. ನಾಗಮಣಿಯಿಂದ ಅಲಂಕೃತವಾಗಿದ್ದರೂ ಸರ್ಪ ಭಯಂಕರವಲ್ಲವೇ? - ವಿ.ಕ. - ೧೫-೭-೨೦೦೫

ಸಿಂಹಗಳು.ಸತ್ಪುರುಷರು ಜಾಗವನ್ನು ಬಿಟ್ಟುಹೋಗಿ ಬದುಕುತ್ತಾರೆ. ಕಾಗೆಗಳು,ಕೆಟ್ಟ ಜನರು ಇದ್ದಲ್ಲಿಯೇ ಸಾಯುತ್ತಾರೆ. - ೧೯-೭-೨೦೦೫ - ವಿ.ಕ.

ಹಾವಿಗೆ ಹಲ್ಲಿನಲ್ಲಿ ವಿಷವಿದೆ. ಆದರೆ ದುರ್ಜನರಿಗೆ ಎಲ್ಲ ಅಂಗಗಳಲ್ಲಿಯೂ ವಿಷವೇ ತುಂಬಿದೆ. - ೨೦-೭-೨೦೦೫ - ವಿ.ಕ.

ಅದೃಷ್ಟವೆಂಬುದು ಯಾವಾಗಲೂ ಕಾರ್ಯಚಟುವಟಿಕೆಯನ್ನೇ ಅವಲಂಬಿಸುತ್ತದೆ. - ೨೧-೭-೨೦೦೫ - ವಿ.ಕ.

ಮೊದಲ ಸಾಲಿನ ಕುರ್ಚಿಯಲ್ಲಿ ಕೂರಬೇಕೆಂಬ ಆತ್ಮ ವಿಶ್ವಾಸ ನಿಮ್ಮಲ್ಲಿರಬೇಕು. - ೨೨-೭-೨೦೦೫ - ವಿ.ಕ.

ಬೆರಳುಂಗುರ ಕಾಣೆಯಾಗಿದ್ದರೆ ಬೆರಳಾದರೂ ಉಳಿದಿದೆಯಲ್ಲ ಎಂದು ಸಮಾಧಾನಪಟ್ಟುಕೊಳ್ಳಿ. - ಇಟಲಿ ಗಾದೆ - ೨೫-೭-೨೦೦೫ - ವಿ.ಕ.

ವ್ಯಕ್ತಿತ್ವದ ಎದುರು ಸಣ್ಣತನ ಹೇಳಹೆಸರಿಲ್ಲದಂತಾಗುತ್ತದೆ. - ೨೬-೭-೨೦೦೫ - ವಿ.ಕ.

ಕೀರ್ತಿಯು ತಂತಾನೇ ಬರುವುದಿಲ್ಲ. ಅದು ವ್ಯಕ್ತಿಯ ದೃಡತೆಗೂ ದುಡಿಮೆಗೂ ಸಿಕ್ಕುವ ಪ್ರತಿಫಲ. - ೨೭-೭-೨೦೦೫ - ವಿ.ಕ.

ಚಪ್ಪಲಿಗಳೆರಡು ಮನುಷ್ಯರಂತಲ್ಲ. ಒಳ್ಳೆಯ ಮಿತ್ರರು. ಒಂದನೊಂದು ಬಿಟ್ಟಿರುವುದಿಲ್ಲ. - ೨೮-೦೭-೨೦೦೫ - ವಿ.ಕ.

ಘನತೆ, ಪ್ರಾಮಾಣಿಕತೆ, ಸತತ ಪ್ರಯತ್ನದಂತಹ ಗುಣಗಳಿದ್ದರೆ ಜಯ ನಿಮ್ಮದೇ. - ೨೯-೭-೨೦೦೫ - ವಿ.ಕ.

ಇತಿಹಾಸವನ್ನು ಯಾರು ಬೇಕಾದರೂ ನಿರ್ಮಿಸಬಹುದು; ಆದರೆ, ಅದನ್ನು ಬರೆಯುವ ಕೆಲಸ ಶ್ರೇಷ್ಟ ವ್ಯಕ್ತಿಯೊಬ್ಬನಿಂದ ಮಾತ್ರ ಸಾಧ್ಯ. - ೦೧-೦೮-೨೦೦೫ - ವಿ.ಕ.

ಅನುಭವವನ್ನು ವಿವೇಕಯುತವಾಗಿ ಬಳಸಿಕೊಂಡರೆ ಯಶಸ್ಸು ಸಾಧಿಸಬಹುದು. - ೦೨-೦೮-೨೦೦೫ - ಮಂಗಳವಾರ - ವಿ.ಕ.

ಹೊಸ ಸನ್ನಿವೇಶಗಳು ಹೊಸ ಕರ್ತವ್ಯವನ್ನು ತಿಳಿಸಿಕೊಡುತ್ತವೆ. - ೦೪-೮-೨೦೦೫ - ಗುರುವಾರ - ವಿ.ಕ.

ಸಂತೋಷವನ್ನು ಮತ್ತೊಬ್ಬರಲ್ಲಿ ಹಂಚಿಕೊಂಡರೆ ಅದು ಇಮ್ಮಡಿಯಾಗುತ್ತದೆ. - ೦೫-೦೮-೨೦೦೫ - ಶುಕ್ರವಾರ - ವಿ.ಕ.

ಎಷ್ಟೇ ತೀವ್ರವಾಗಿದ್ದರೂ ಸಿಟ್ಟು ಸಣ್ಣ ಗಿಡ. ಆದರೆ ತಿರಸ್ಕಾರ ಹೆಮ್ಮರ. - ೦೬-೦೮=೨೦೦೫ - ಶನಿವಾರ - ವಿ.ಕ.

ಸುಂದರವಾಗಿಲ್ಲವೆಂದು ಯಾರನ್ನೂ ಅವಮಾನಿಸಿ ದೂರಮಾಡಬಾರದು. - ೦೮-೦೮-೨೦೦೫ - ಸೋಮವಾರ - ವಿ.ಕ.

ಧೈರ್ಯವಾಗಿರಬೇಕೆಂದರೆ ಸುಳ್ಳು ಹೇಳಬಾರದು. - ೦೯-೦೮-೨೦೦೫ - ಮಂಗಳವಾರ - ವಿ.ಕ.

ಏನೂ ಮಾಡದಿರುವುದು, ತಪ್ಪು ಮಾಡುವುದಕ್ಕೆ ದೊರಕುವ ಅವಕಾಶ. - ೧೦-೦೮-೨೦೦೫ - ಬುಧವಾರ - ವಿ.ಕ.

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಒಂದು ಚರಿತ್ರೆಯೇ ಅಡಗಿರುತ್ತದೆ. - ೧೨-೦೮-೨೦೦೫ - ಶುಕ್ರವಾರ - ವಿ.ಕ.

ಮನಸು ಹೊಟ್ಟೆಯಂತೆ. ಅದರಲ್ಲಿ ಎಷ್ಟು ತುರುಕಿದೆವು ಎಂಬುದಕ್ಕಿಂತ ಎಷ್ಟು ಜೀರ್ಣವಾಯಿತು ಎಂಬುದು ಮುಖ್ಯ. - ೧೩-೦೮-೨೦೦೫ - ಶನಿವಾರ - ವಿ.ಕ.

ಉರುವಲಿನಲ್ಲಿ ಬೆಂಕಿ ಇರುವುದನ್ನು ತಿಳಿದವನು ಜ್ನಾನಿ ;
ಆ ಬೆಂಕಿಯನ್ನು ಬಳಸಿಕೊಂಡು ಅಡುಗೆ ತಯಾರಿಸಿದವನು ವಿಜ್ನಾನಿ. - ರಾಮಕೃಷ್ಣ ಪರಮಹಂಸ - ೧೫-೮-೨೦೦೫ - ವಿ.ಕ.- ಸೋಮವಾರ

ಯುವಕನ ಶೀಲವನ್ನು ಪರೀಕ್ಷಿಸಲು ವಿರಾಮದ ವೇಳೆಯನ್ನು ಆತ ಹೇಗೆ ಕಳೆಯುತ್ತಾನೆ ಎಂಬುದನ್ನು ನೋಡುವುದು ಅಗತ್ಯ. - ಅನಾಮಿಕ - ೧೬-೮-೨೦೦೫ - ಮಂಗಳವಾರ - ವಿ.ಕ.

ಧೈರ್ಯಶಾಲಿಯಾದ ಎದುರಾಳಿಯನ್ನು ಮಹತ್ತರವಾದ ಬಲಶಾಲಿಯೂ ಎದುರಿಸಲಾರ - ೧೭-೮-೨೦೦೫ - ಬುಧವಾರ - ವಿ.ಕ.

ಸ್ವ-ಸಹಾಯಕ್ಕಿಂತ ಮಿಗಿಲಾದ ಸಹಾಯ ಮತ್ತೊಂದಿಲ್ಲ. - ಲೋಕೋಕ್ತಿ - ೧೮-೮-೨೦೦೫ - ಗುರುವಾರ - ವಿ.ಕ.

ಬಿದ್ದಾಗ, ಎದ್ದಾಗ ಗಾಂಭೀರ್ಯದಿಂದ ನಡೆದುಕೊಳ್ಳುವುದನ್ನು ಕಲಿಯಿರಿ. ದೇವರ ಕೃಪೆ ಖಂಡಿತ ನಿಮಗೆ ಲಭಿಸುತ್ತದೆ. - ೨೦-೮-೨೦೦೫ - ಶನಿವಾರ - ವಿ.ಕ.

ಸ್ತ್ರೀಯರು ಹೇಗೆ ನಿರ್ಮಿಸುತ್ತಾರೋ ಹಾಗೆ ಆಗುತ್ತದೆ ಮನೆಗಳು. - ೨೫-೮-೨೦೦೫ - ಗುರುವಾರ - ವಿ.ಕ.

ನಮ್ಮನ್ನು ಕೆಡಿಸುವ ಹೊಗಳಿಕೆಯಿಂದ ಪಾರಾಗಬೇಕೆಂದರೆ ಕಾರ್ಯಮಗ್ನರಾಗಬೇಕು. - ೨೭-೮-೨೦೦೫ - ಶನಿವಾರ - ವಿ.ಕ.

ಮನಸ್ಸನ್ನು ಏಕಾಗ್ರಗೊಳಿಸುವುದೇ ಮಾನವನ ಯಶಸ್ಸಿಗೆ ಮೂಲ. - ೨೯-೮-೨೦೦೫ - ಸೋಮವಾರ - ವಿ.ಕ.

ಜೀವನಪರ್ಯಂತ ಸಂತಸವಾಗಿರಲು ಪ್ರಾಮಾಣಿಕತೆಯಿಂದಿರಬೇಕು. - ೩೦-೮-೨೦೦೫ - ಮಂಗಳವಾರ - ವಿ.ಕ.

ಭಗವನ್ನಾಮದಲ್ಲಿ ಭಕ್ತಿ, ನಂಬಿಕೆಯಿರಲಿ, ಚರ್ಚೆ ಮಾಡಬೇಡಿ. - ೩೧-೮-೨೦೦೫ - ಬುಧವಾರ - ವಿ.ಕ.

ಸರಿಯಾದುದೇನೆಂದು ತಿಳಿದಿದ್ದರೂ ಅದರಂತೆ ನಡೆಯದಿರುವುದು ಹೇಡಿತನ. - ೦೧-೯-೨೦೦೫ - ಗುರುವಾರ - ವಿ.ಕ.

ಪುಸ್ತಕವೆಂಬುದು ಮಾನವ ಮುಂದಿನ ಪೀಳಿಗೆಗೆ ಕಾಣಿಕೆಯಾಗಿ ಕೊಡುವ ಆಸ್ತಿ. - ೦೨-೯-೨೦೦೫ - ಶುಕ್ರವಾರ - ವಿ.ಕ.

ಎಲ್ಲವನ್ನೂ ಕೊಡುವ ದೈವವೇ ಎಲ್ಲವನ್ನೂ ತೆಗೆದುಕೊಳ್ಳುತ್ತದೆ. - ಪುರಂದರದಾಸರು - ೦೩-೯-೨೦೦೫ - ಶನಿವಾರ - ವಿ.ಕ.

ತಾರುಣ್ಯದಲ್ಲಿ ವಿವೇಕವನ್ನು ಕಳೆದುಕೊಳ್ಳದಿದ್ದರೆ ವೃದ್ಧಾಪ್ಯದಲ್ಲಿ ಅದರ ಫಲ ಸಿಗುತ್ತದೆ. - ೦೭-೯-೨೦೦೫ - ಬುಧವಾರ - ವಿ.ಕ.

ಬದುಕಿನ ಅರ್ಥವನ್ನು ತಿಳಿಯಬೇಕಾದರೆ ಅದನ್ನು ಸ್ಪಷ್ಟವಾಗಿ ಅಭ್ಯಸಿಸಬೇಕು. - ೦೯-೯-೨೦೦೫ - ಶುಕ್ರವಾರ - ವಿ.ಕ.

ಯೋಗ್ಯತೆಯೇ ಹಾಳಾದಮೇಲೆ ಹಾಳಾಗಲು ಏನೂ ಇರುವುದಿಲ್ಲ - ೧೨-೯-೨೦೦೫ - ಸೋಮವಾರ - ವಿ.ಕ.

ಮನಸ್ಸಿನಲ್ಲಿ ಏನು ಇರುತ್ತದೋ ಅದೇ ಜೀವನವಾಗುತ್ತದೆ. - ೧೪-೯-೨೦೦೫ - ಬುಧವಾರ - ವಿ.ಕ.

ಯಾವುದೂ ಶಾಶ್ವತವಲ್ಲ. ಎಲ್ಲಾ ಕನಸು, ಎಲ್ಲಾ ಭ್ರಾಂತಿ, ಮೃತ್ಯುವೊಂದೇ ಸತ್ಯ. - ಉಮರ್ ಖಯ್ಯಾಂ - ೧೫-೯-೨೦೦೫ - ಗುರುವಾರ - ವಿ.ಕ.

ಬೇರೆಯವರ ಮನಸ್ಸನ್ನು ಅರಿತು ವರ್ತಿಸುವುದು ಅದ್ಭುತ ಕಲೆ - ಎಂ.ವರದರಾಜನ್ - ೧೭-೯-೨೦೦೫ - ಶನಿವಾರ - ವಿ.ಕ.

ದೇವರ ನಾಮಸ್ಮರಣೆ ಮಾಡುತ್ತಾ ನಿಮ್ಮ ತುಟಿಗಳನ್ನು ಸದಾ ಒದ್ದೆಯಾಗಿಟ್ಟುಕೊಳ್ಳಿ. - ಮಹಮದ್ ಪೈಗಂಬರ್ - ೧೯-೯-೨೦೦೫ - ಸೋಮವಾರ - ವಿ.ಕ.

ಯಾವ ಪ್ರಯತ್ನವೂ ಇಲ್ಲದೆ ದೊರೆಯುವುದೆಂದರೆ ವೃದ್ಧಾಪ್ಯವೊಂದೆ. - ೨೦-೯-೨೦೦೫ - ಮಂಗಳವಾರ - ವಿ.ಕ.

ಆತ್ಮ ಶುದ್ಧಿಯ ಮಾರ್ಗ ಕಠಿಣ ಮತ್ತು ಕಡಿದು. ಪೂರ್ಣ ಶುದ್ಧತೆ ಸಾಧಿಸಬೇಕಾದರೆ ಕಾಯ ವಾಚಾ ಮನಸಾ ಪೂರ್ಣ ನಿರ್ವಿಕಾರವಾಗಿರಬೇಕು. - ಗಾಂಧೀಜಿ - ೨೧-೯-೨೦೦೫ - ಬುಧವಾರ - ವಿ.ಕ.

ಸಾಹಿತ್ಯದ ಉಪಕಾರ ಮನೋರಂಜನೆ ಮಾತ್ರವಲ್ಲ, ಅದು ಜೀವನ ಪ್ರಯುಕ್ತವಾದ ಒಂದು ಮಹಾಶಕ್ತಿ. - ೨೨-೯-೨೦೦೫ - ಗುರುವಾರ - ವಿ.ಕ.

ಹೆತ್ತವರನ್ನು ಗೆಲ್ಲಬಲ್ಲ ಆಯುಧವೆಂದರೆ ಪ್ರೀತಿ. ಅದಲ್ಲದೆ ಬೇರೆ ಮಾರ್ಗವಿಲ್ಲ. - ಮಹಾತ್ಮ ಗಾಂಧಿ - ೨೩-೯-೨೦೦೫ - ಶುಕ್ರವಾರ - ವಿ.ಕ.

ಹಣ ಉಳ್ಳವನೇ ಹಿರಿಯ. ಹಣ ಉಳ್ಳವನೇ ಅಭಿಮಾನಿ. ಆತನೇ ನೆಂಟ. ಹಣಹೀನನು ಜೀವಚ್ಚವ. - ನಂಜುಂಡಶತಕ - ೨೪-೯-೨೦೦೫ - ಶನಿವಾರ - ವಿ.ಕ.

ಸಂಪತ್ತು ಬಂದರೆ ತೆಂಗಿಗೆ ಎಳನೀರು ಬಂದಂತೆ, ಹೋದರೆ ಆನೆ ನುಂಗುವ ಬೇಲದ ಹಾಗೆ - ೨೬-೯-೨೦೦೫ - ಸೋಮವಾರ - ವಿ.ಕ.

ಪ್ರತಿಭೆ ಎಂದರೆ ಕಷ್ಟವನ್ನು ಮೊದಲೇ ಎದುರಿಸುವ ಶಕ್ತಿ. - ಆಸ್ಕರ್ ವೈಲ್ಡ್ - ೨೮-೯-೨೦೦೫ - ಬುಧವಾರ - ವಿ.ಕ.

ಒಣಗಿದ ಎಲೆಯ ಕಾಲವು ಮುಗಿದ ಮೇಲೆ ಕೆಳಗೆ ಬೀಳುವಂತೆ ಮನುಷ್ಯನ ಜೀವಿತಕ್ಕೂ ಒಂದು ಕೊನೆ ಇದೆ. ಪ್ರಮತ್ತನಾಗಬೇಡ. - ಮಹಾವೀರ - ೨೯-೯-೨೦೦೫ - ಗುರುವಾರ - ವಿ.ಕ.

ಮನುಷ್ಯ ಮತ್ತು ಪ್ರಾಣಿಗಳಲ್ಲಿರುವ ಅಂತರವನ್ನು ತೋರಿಸುವ ದೊಡ್ಡಗುಣ ಹಾಸ್ಯ. - ಎಡಿಸನ್ - ೩೦-೯-೨೦೦೫ - ಶುಕ್ರವಾರ - ವಿ.ಕ.

ಮಾನವನೆಂದರೆ ಪ್ರಕೃತಿಯಲ್ಲಿಯ ಸಕಲ ಸೋಜಿಗಗಳಲ್ಲಿ ಅತ್ಯಾಶ್ಚರ್ಯಕರವಾದ ಸೋಜಿಗ. - ಸೋಫೋಕ್ಲಿಸ್ - ೨೬-೧೦-೨೦೦೫ - ಬುಧವಾರ - ವಿ.ಕ.

ಪ್ರತಿದಿನ ಆರು ಲೋಟ ನೀರು, ಅರ್ಧ ಗಂಟೆ ವ್ಯಾಯಾಮ, ತಲೆಗೆ ಸ್ನಾನ - ಇವು ವೈದ್ಯನನ್ನು ದೂರವಿಡುವ ಮಾರ್ಗ - ನ್ಯೂಟನ್ - ೨೮-೧೦-೨೦೦೫ - ಶುಕ್ರವಾರ - ವಿ.ಕ.

ಸತ್ಯದಿಂದ ಭೂಮಿ ಧಾರಣ ಮಾಡುತ್ತದೆ, ಸೂರ್ಯ ಉದಯಿಸುತ್ತಾನೆ, ಗಾಳಿ ಮಾಲಿನ್ಯ ಶೋಧಿಸುವುದು, ನೀರು ಹರಿಯುವುದು. - ೩೧-೧೦-೨೦೦೫ - ಸೋಮವಾರ - ವಿ.ಕ.

ಆಪತ್ತಿನಲ್ಲಿ ರಕ್ಷಣೆಗಾಗಿ ಹಣವನ್ನು ರಕ್ಷಿಸಬೇಕು. ಹಣಕ್ಕಿಂತ ಹೆಂಡತಿಯನ್ನು ರಕ್ಷಿಸಬೇಕು. ಹಣ ಮತ್ತು ಹೆಂಡತಿಗಿಂತ ತನ್ನನ್ನು ರಕ್ಷಿಸಬೇಕು. - ೧೧-೧೧-೨೦೦೫ - ಶುಕ್ರವಾರ - ವಿ.ಕ.

ಜೀವನದಲ್ಲಿ ಸ್ನೇಹಿತರು ಬಂದು ಹೋಗುತ್ತಾರೆ. ಆದರೆ ಶತೃಗಳು ಮಾತ್ರ ಹೆಚ್ಚಾಗುತ್ತಲೇ ಇರುತ್ತಾರೆ. - ೨೮-೧೧-೨೦೦೫ - ಸೋಮವಾರ - ವಿ.ಕ.

ಬುದ್ಧಿಶಕ್ತಿಯನ್ನು ಬೆಳೆಸುವ ಗ್ರಂಥಗಳನ್ನು, ಧನಾರ್ಜನೆಗೆ ಉಪಯುಕ್ತವಾದವುಗಳನ್ನು ಹಾಗೂ ಪರಹಿತಕ್ಕೆ ಉಪಯುಕ್ತವಾದ ಶಾಸ್ತ್ರಗಳನ್ನು ಸದಾ ಓದಬೇಕು. - ಸುಭಾಷಿತ - ೦೧-೧೨-೨೦೦೫ - ಗುರುವಾರ - ವಿ.ಕ.

ಮನಸ್ಸಿನ ನೆಮ್ಮದಿಗಾಗಿಯಾದರೂ ನೇರ ದಾರಿಯಲ್ಲಿ ಹೋಗುವ ಪ್ರತಿಜ್ನೆ ಮಾಡಿರಿ - ಎಲ್.ಸಿ.ಡಗ್ಲಾಸ್ - ೨೬-೧೨-೨೦೦೫ - ಸೋಮವಾರ - ವಿ.ಕ.

ದೇವರು ಎಂದಿಗೂ ಮಾನವರೊಡನೆ ಅದಲು ಬದಲು ವ್ಯಾಪಾರಕ್ಕೆ ಇಳಿಯುವುದಿಲ್ಲ - ೨೮-೧೨-೨೦೦೫ - ಬುಧವಾರ - ವಿ.ಕ.

ನಮ್ಮನ್ನು ಆಗಿಂದಾಗ್ಗೆ ಕಾಡುವ ಚಿಂತೆಗಳು, ನಮ್ಮ ಜೀವನವನ್ನು ಹದಗೊಳಿಸಿ ಸುಗಮ ಬಾಳಿಗೆ ದಾರಿ ಮಾಡಿಕೊಡುವವುಗಳೇ ಆಗಿರುವವು. - ಜೇಮ್ಸ್ ಆಲೆನ್ - ೦೪-೧-೨೦೦೬ - ಬುಧವಾರ - ವಿ.ಕ.

ನೀವು ಸ್ವರ್ಗವನ್ನು ಕಾಣಬೇಕಾದರೆ ಅನ್ಯರೊಡನೆ ಪ್ರೀತಿಯಿಂದ ನಡೆದುಕೊಳ್ಳಿರಿ.- ನೋವಾಲಿಸ್ - ೫-೧-೨೦೦೬ - ಗುರುವಾರ - ವಿ.ಕ.

ಮನುಷ್ಯ ಸನ್ನಿವೇಶಗಳ ಕೃತಿಯಲ್ಲ, ಆದರೆ ಸನ್ನಿವೇಶಗಳೇ ಮನುಷ್ಯನ ಕೃತಿ. - ೦೭-೧-೨೦೦೬ - ಶನಿವಾರ - ವಿ.ಕ.

— ವಿಜಯ ಕರ್ನಾಟಕ ಪತ್ರಿಕೆಯಿಂದ
ಸಂಗ್ರಹಿಸಿದವರು : ಸತ್ಯಪ್ರಕಾಶ್.ಹೆಚ್.ಕೆ.

~.~
  • Login or register to post comments
  • 629 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Satyaprakash.H.K. ರವರು ಸೇರಿಸಿರುವ ನುಡಿಮುತ್ತುಗಳು
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾಟಕಗಳ ಹಬ್ಬ
  • ವಕ್ರತುಂಡೋಕ್ತಿ-ವಿಜಯಕರ್ನಾಟಕದಿಂದ ಆಯ್ದದ್ದು
  • ಎತ್ತಿನಭುಜ
  • ಗಂಡ ಹೆಂಡಿರ ವಾರ
  • ವಾರ ದಿನಮಾನ: ಹಲವು ಭಾಷೆಗಳಲ್ಲಿ
Syndicate content

ಲೇಖಕರು

Satyaprakash.H.K.'s picture

ಪೂರ್ಣ ಹೆಸರು
ಸತ್ಯಪ್ರಕಾಶ್ ಹೆಚ್ ಕೆ

ಪರಿಚಯ

ನಾನು ಹೊಸ ತರಹದ ಅಸ್ಟ್ರಾಲಜರ್. ನಾನು ಜಾತಕಗಳನ್ನು ಎಲ್ಲರೂ ನೋಡುವಂತೆ ನೋದುವುದಿಲ್ಲ. ನನ್ನದೇ ಆದಂತಹ ವಿಶೇಷ ಸಾಫ್ಟ್ ವೇರ್ ಮಾಡಿಕೊಂಡಿದ್ದೇನೆ. ನಾನು ನೋಡುವುದು ಗ್ರಹಗಳ ಕೋನದಲ್ಲಿ. ಅಂದರೆ ಅಂತರಂಗದಲ್ಲಿ ಇರುವುದೆಲ್ಲಾ ನಮ್ಮ ಕಣ್ಣಿನ ಮೂಲಕ ತಾನೇ ಕಾಣಿಸಿಕೊಳ್ಳುವುದು. ಇನ್ಯಾವುದೇ ಅಂಗದಲ್ಲೂ ಕಾಣಲು ಸಾಧ್ಯವಿಲ್ಲ ಅಲ್ಲವೇ? ಈಗ ಮರ ಬೆಳೆಯಲು ನಾವೇನು ಮಾಡುತ್ತೇವೆ? ಒಂದು ಬೀಜ ಬಿತ್ತುತ್ತೇವೆ. ಆ ಬೀಜದಲ್ಲಿ ಏನಿದೆ ಅನ್ನುವುದು ನಮಗೆ ಗೊತ್ತಿಲ್ಲ. ಅದಕ್ಕೆ ನೀರು, ಗೊಬ್ಬರ ಹಾಕಿ ಬೇರುಗಳು ಕಾಣಿಸಿಕೊಂಡರೂ ಆ ಬೇರಿನಲ್ಲಿ ಏನೇನು ಸತ್ವ ಇದೆ ಅಂತ ಆಗಲೂ ಸಹಾ ನಮಗೆ ಗೊತ್ತಾಗುವುದಿಲ್ಲ. ಅಲ್ಲವೇ? ಅದು ಪೂರ್ತಿಯಾಗಿ ಬೆಳೆದು ಕೊಂಬೆಗಳು ಹುಟ್ಟಿಕೊಂಡಮೇಲೆ ತಾನೆ ಗೊತ್ತಾಗೋದು ಆ ಬೇರುಗಳಲ್ಲಿ ಒಳ್ಳೇ ಸತ್ವ ಇದೆಯೋ ಅಥವಾ ಜೊಳ್ಳೋ ಅಂತ. ಹಾಗೆಯೇ ನಾನೂ ಸಹಾ ನೋಡುವುದು ಜಾತಕಗಳನ್ನು.
ಇದಲ್ಲದೆ ನಾನು ಆಹಾರದಲ್ಲೇ ಸುಮಾರು ರೋಗಗಳನ್ನು ಗುಣಪಡಿಸಲು ಸಾಧ್ಯ ಎಂಬುದನ್ನು ಮನಗಂಡಿದ್ದೇನೆ. ಹಾಗೂ ನಾನೇ ಸ್ವತಃ ಅದನ್ನು ಅಳವಡಿಸಿಕೊಂಡಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ramaswamy
    ಉ: ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
    December 3, 2008 - 2:28pm
  • roopablrao
    ಉ: ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
    December 3, 2008 - 2:28pm
  • roopablrao
    ಉ: ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
    December 3, 2008 - 2:26pm
  • roopablrao
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 2:25pm
  • sathvik N V
    ಉ: ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
    December 3, 2008 - 2:21pm
  • gurubaliga
    ಉ: ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
    December 3, 2008 - 2:19pm
  • savithasr
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 2:15pm
  • Rakesh Shetty
    ಉ: ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
    December 3, 2008 - 2:09pm
  • savithasr
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 2:09pm
  • Rakesh Shetty
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 2:08pm
ಇನ್ನಷ್ಟು


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator