ನಾನು-ನಾವು
ಎಷ್ಟೋ ಸಲ ನನಗನ್ನಿಸಿದ್ದುಂಟು. ನಮಗೆ ಹಲವಾರು ಬಂಧುಗಳಿದ್ದಾರೆ, ಹಲವಾರು ಸ್ನೇಹಿತರಿದ್ದಾರೆ, ನಮ್ಮ ಜೊತೆ ಸಹಕರಿಸುವ ಹಲವಾರು ನಮ್ಮ ಸಹೋದ್ಯೋಗಿಗಳಿದ್ದಾರೆ. ಆದರೆ ಅವರೆಲ್ಲ ಒಂದು ಹಂತಕ್ಕೆ ನಮ್ಮ ಜೊತೆ ಸ್ನೇಹದಿಂದಿದ್ದರೂ ಎಲ್ಲೋ ಒಂದು ಕಡೆ ಅವರು ನಮಗೆ ತುಂಬಾ ಹತ್ತಿರವೂ ಆಗಿರುತ್ತಾರೆ.......
ನಮಗೂ ಅಷ್ಟೆ... ಗೊತ್ತಿದ್ದೋ ಗೊತ್ತಿಲ್ಲದೆಯೋ...
ನಾವು ಕೂಡಾ ಅವರಿಗೆ ತುಂಬಾ ಹತ್ತಿರವಾಗಿರುತ್ತೇವೆ... ಅಥವಾ.. ಅವರನ್ನು ದ್ವೇಷಿಸುತ್ತಿರುತ್ತೇವೆ.... ಅದೂ ಸರಿ ಅನ್ನಿ.. ಸುಖ ದು:ಖ, ಎರಡೂ ಇದ್ದರೇನೇ ಜೀವನ ತಾನೇ...
ನನ್ನ ಕೆಲವು ಸ್ನೇಹಿತರು ನನಗೆ ಆಗಾಗ ಹೇಳುತ್ತಿರುತ್ತಾರೆ... ನಮಗೆ ಬೇಸರವಾದಾಗಲೂ ನಾವು ನಮ್ಮ ಸ್ನೇಹಿತರೊದಿಗೆ ಹಂಚಿಕೊಳ್ಳಬೇಕು ಹಾಗೇನೇ ಖುಷಿಯಾದಾಗಲೂ ನಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಕು ಅಂತ...
ಎಷ್ಟು ಜನರಿಗೆ ಅಂತಹ ಒಳ್ಳೆಯ ಸ್ನೇಹಿತರನ್ನು ಪಡೆಯುವ ಭಾಗ್ಯವಿದೆ ಹೇಳಿ....
ಎಲ್ಲಿಯವರೆಗೆ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲವೋ.... ಅಲ್ಲಿಯವರೆಗೆ ಬೇರೆಯವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ಬರಿಯ ನಾನು ಆಗಿರುತ್ತೇನೆಯೇ ಹೊರತು ನಾವು ಆಗೋದಕ್ಕೆ ಸಾಧ್ಯವಿಲ್ಲ....


RSS: