vedumaani ರವರು ಸೇರಿಸಿರುವ ನುಡಿಮುತ್ತುಗಳು
ಇದೂ ಪೂರ್ಣ..
July 20, 2007 - 12:59pm — vedumaaniಇದೂ ಪೂರ್ಣ, ಅದೂ ಪೂರ್ಣ,
ಪೂರ್ಣದಿಂದ ಪೂರ್ಣವು ಹುಟ್ಟುತ್ತದೆ
ಪೂರ್ಣದಿಂದ ಪೂರ್ಣವನ್ನು ಕಳೆದರೆ
ಪೂರ್ಣವೇ ಉಳಿಯುತ್ತದೆ

ಉತ್ತರವು ಗಾಳಿಯಲ್ಲಿ...
July 15, 2007 - 10:02pm — vedumaaniಮನುಷ್ಯನೆನ್ನಿಸಿಕೊಳ್ಳುವ ಮುನ್ನ ಒಬ್ಬಾತ ಎಷ್ಟು ಹಾದಿಗಳ ಸವೆಯಬೇಕು?
ತೀರದ ಮರಳಲ್ಲಿ ಮಲಗುವ ಮುನ್ನ ಬಿಳಿ ಪಾರಿವಾಳವು ಎಷ್ಟು ಸಮುದ್ರಗಳ ದಾಟಬೇಕು?
ಎಂದೆಂದಿಗೂ ನಿಷೇಧಿಸಲ್ಪಡುವ ಮುನ್ನ ಎಷ್ಟು ಬಾರಿ ಫಿರಂಗಿ ಚೆಂಡುಗಳು ಹಾರಬೇಕು?
ಉತ್ತರವು ಗೆಳೆಯ, ಗಾಳಿಯಲ್ಲಿ ತೂರಿ ಹೋಗುತಿದೆ..
ಉತ್ತರವು ಗಾಳಿಯಲ್ಲಿ ತೂರಿ ಹೋಗುತಿದೆ...

July 4, 2007 - 9:53pm — vedumaani
ಈ ಜಗತ್ತೆಲ್ಲವೂ ಈಶ್ವರನದ್ದು,
ನಿನ್ನ ಪಾಲಿನದನ್ನು ಅನುಭವಿಸು
ಬೇರೆಯವರ ಪಾಲಿನದನ್ನು ಬಯಸಬೇಡ
- ಈಶಾವಾಸ್ಯೋಪನಿಷತ್ತ್
ಜಗತ್ತಿನ ಎಲ್ಲಾ ಧರ್ಮಗ್ರಂಥಗಳೂ ನಾಶವಾದರೂ ಈ ಒಂದು ಶ್ಲೋಕ ಉಳಿದರೆ ಮನುಕುಲದ ಉದ್ಧಾರಕ್ಕೆ ಅದೇ ಸಾಕು

ಮಂದಿ ಇರೋರು ನಾಲ್ಕು
April 19, 2007 - 8:57pm — vedumaaniತಿಳಿಯದವ, ತನಗೆ ತಿಳಿಯದೆಂದು ತಿಳಿಯದವ - ಮೊರ್ಖ, ಆತನನ್ನು ಖಂಡಿಸಿ
ತಿಳಿಯದವ, ತನಗೆ ತಿಳಿಯದೆಂದು ತಿಳಿದವ - ಸರಳ ಸ್ವಭಾವಿ, ಆತನಿಗೆ ತಿಳಿಹೇಳಿ
ತಿಳಿದವ, ತನಗೆ ತಿಳಿದಿದೆಯೆಂದು ತಿಳಿಯದವ - ನಿದ್ರಾಗ್ರಸ್ಥ, ಆತನನ್ನು ಎಚ್ಚರಿಸಿ
ತಿಳಿದವ, ತನಗೆ ತಿಳಿದಿದೆಯೆಂದು ತಿಳಿದವ - ವಿವೇಕಿ, ಈತನನ್ನು ಅನುಸರಿಸಿ... ಮುಂದೆ ಓದಿ »








RSS: