rklava ರವರು ಸೇರಿಸಿರುವ ನುಡಿಮುತ್ತುಗಳು
ನುಡಿಮುತ್ತು 6534
December 5, 2007 - 1:53pm — rklava"ತನುವ ತೋಂಟವ ಮಾಡಿ,
ಮನವ ಗುದ್ದಲಿ ಮಾಡಿ,
ಅಗೆದು ಕಳೆದೆನಯ್ಯಾ ಭ್ರಾಂತಿಯ ಬೇರ"

ನುಡಿಮುತ್ತು 6407
November 26, 2007 - 4:43pm — rklava"ಕಬ್ಬು ಅಗೆದು ತಿನ್ನುವುದು ಪ್ರಕೃತಿ; ಹಿಂಡಿ ರಸ ತೆಗೆದು ಕುಡಿಯುವುದು ಸಂಸ್ಕೃತಿ;
ರಸವನ್ನು ಕೊಳೆಯಿಸಿ, ಹೆಂಡ ಮಾಡಿ ಕುಡಿಯುವುದು ವಿಕೃತಿ"

ನುಡಿಮುತ್ತು 6327
November 19, 2007 - 1:07pm — rklava"ಹಣ ಕೂಡಿಟ್ಟರೆ ಈ ಜಗತ್ತು ಬಂಡವಾಳಷಾಹಿ ಎನ್ನುತ್ತದೆ.
ಹಣ ಕಳೆದರೆ ಈ ಜಗತ್ತು ದುಂದುವೆಚ್ಚ ಎನ್ನುತ್ತದೆ.
ಹಣಗಳಿಸದಿದ್ದರೆ ಕೆಲಸಗೇಡಿ ಎನ್ನುತ್ತದೆ.
ಒಟ್ಟಿನಲ್ಲಿ ಹೇಗೂ ಅಪವಾದ ತಪ್ಪದು "

ನುಡಿಮುತ್ತು 6326
November 19, 2007 - 1:05pm — rklava"ನಿನಗೆ ಯಾವುದಾದರೂ ವಿಷಯ ತಿಳಿದಿದ್ದರೆ,
ಅದನ್ನು ಮರೆಯದೆ ಹಾಗೆಯೇ ಉಳಿಸಿಕೊ.
ನಿನಗೆ ಯಾವುದಾದರೂ ವಿಷಯ ತಿಳಿಯದಿದ್ದರೆ,
ತಿಳಿದಿಲ್ಲ ಎಂದು ಒಪ್ಪಿಕೊಳ್ಳುವುದೇ ಜಾಣತನ"








RSS: