muralihr ರವರು ಸೇರಿಸಿರುವ ನುಡಿಮುತ್ತುಗಳು
ಕಾರ೦ತ ಉವಾಚ -- >>ಬಾಳ್ವೆಯೇ ಬೆಳಕು - ಆಯ್ದ ನುಡಿ ಮುತ್ತುಗಳು
November 6, 2005 - 11:18am — muralihrಬದುಕಿನ ಉಪಯೋಗ ನಮಗೆ ದೊರೆಯಲು ಅದರಿ೦ದ ಬೆಳಕು,
ಸುಖಗಳು ಸಿಗಲು, ಮೊದಲು ಅರಿವಿನಿ೦ದ ನಾವು ಬದುಕುವುದನ್ನು ಕಲಿಯಬೇಕು.
ದು:ಖ ಅನುಭವಿಸಲು ಮನುಷ್ಯನು ಜಡನಾಗುವುದು ಹಿತವೆ೦ದು ಕ೦ಡರೂ,
ಆಗ ಸುಖದ ಅನುಭವಕ್ಕೂ ಅವನು ಜಡನಾಗುತ್ತಾನೆ.
ಬಾಳ್ವೆಯೆ೦ದೊಡನೆ ಏಕೆ ನಾಗಲೋಟ ? ಬಾಳ್ವೆಯಲ್ಲಿ ದು:ಖವಿದೆ,
ನೋವಿದೆ - ಎ೦ಬುದರಿ೦ದಲೇನು ? ಅದಕ್ಕೆ ಮಾರುತ್ತರೆವಿಷ್ಟೆ- ಸವಿಯಿಲ್ಲವೇ ?
ಬಾಳ್ವೆ ಅದೂ ಅಲ್ಲ, ಬಾಳ್ವೆ ಬರಿಯ ಇದೂ ಅಲ್ಲ, ಬೇವಿನೊಡನೆ ಬೆರೆತ ಬೆಲ್ಲದ೦ತೆ.
ಸಾವಿಗಿ೦ತ ಪಾರಾಗುವುದಕ್ಕಿ೦ತ ದೊಡ್ಡ ಸ೦ಗತಿ ಬದುಕುವುದು ಎ೦ದು
ಮನುಷ್ಯ ಕೋಟಿ ವಿಚಾರ ಮಾಡತೊಡಗಿದಲ್ಲಿ, ನಮ್ಮ ಬದುಕು ಇನ್ನಷ್ಟು
ಸುಗಮವಾದೀತು, ಸಹನೀಯವಾದೀತು, ರಸವತ್ತಾದೀತು.
ಬಾಳ್ವೆಗೆ ಅ೦ಟಿರುವ ಹುಟ್ಟು ಸಾವುಗಳು ಬಾಳಿನ ಹೆಚ್ಚಳಕ್ಕಾಗಿಯೇ ಇವೆಯೆ೦ದು
ನಾವೇಕೆ ತಿಳಿಯಬಾರದು ? ಹೀಗೆ ಬದುಕಿನ ವಿಚಾರವಾಗಿ ವಿವೇಚಿಸುತ್ತಾ
ಹೋದಲ್ಲಿ ನಮ್ಮ ಬದುಕಿಗೆ ಹೊಸ ಕಳೆ ಪ್ರಾಪ್ತಿಸಬಹುದು.
ಯಾವಾತ ತಾನು ಚೆನ್ನಾಗಿ ಬದುಕ್ಕಿದ್ದೇನೆ ಎ೦ದು ಧೈರ್ಯ ಪಡಬಲ್ಲನೋ,
ಅವನು ಸಾವಿಗೆ ಅ೦ಜುವುದಿಲ್ಲಾ.ಚೆನ್ನಾಗಿ ಬದುಕಿದವನು ಸಾವನ್ನು ಹಿತವಾಗಿಯೇ
ತಿಳಿಯುತ್ತಾನೆ.
ಸಾವು ಹುಟ್ಟುಗಳೆ೦ಬ ಮಾತುಗಳು ಜತೆಯಾಗಿ ಹೋಗುತ್ತವೆ;
ಆದರೂ ಜನರ ಭೀತಿ ಸಾವಿನ ಕಡೆಗೇನೆ ಇದೆ.ಹುಟ್ಟಿಗಾಗಿ ಹೆದರುವುದಿಲ್ಲಾ.
ನಾವು ಹೆದರಿದರೂ ಹುಟ್ಟಿದವನೂ ಸಾಯ ಬೇಕಲ್ಲಾ ಎ೦ಬ ಹೆದರಿಕೆಗೆ.
ಹುಟ್ಟಿದವನೂ ಕೆಲ ದಿನವಾದರೂ ಇರುತ್ತಾನಲ್ಲಾ - ಎ೦ಬ ಸ೦ತೋಷಕ್ಕೆ ಅವಕಾಶ ಬೇಡವೇ ?
ಬಾಳ್ವೆ ಸ್ವಿಕಾರಕ್ಕಿದೆ , ನಿರಾಕರಣೆಗಲ್ಲ.
ಬಾಳ್ವೆ ಬ೦ದಿರುವುದೇ ನಮ್ಮ ಪ್ರಯೋಜನಕ್ಕಾಗಿ ,ಬಾಳ್ವೆ ಬ೦ದಿರುವುದು ಅದರ ನಿರಾಕರಣೆಗಲ್ಲಾ.
ನಾವು ಹುಟ್ಟಿದ್ದೇವೆ ಎ೦ಬ ಒ೦ದೇ ಕಾರಣದಿ೦ದ ನಮ್ಮ ಹುಟ್ಟು ನಮಗೆ ಪ್ರಯೋಜನಕಾರಿಯೆ೦ದು
ತಿಳಿಯಬೇಕು.
ಕ೦ಡ ನೋಟವನ್ನೇ ಕಾಣುತ್ತಾ, ಕ೦ಡ ಬಳಗದಲ್ಲಿಯೇ ಬೆರೆಯುತ್ತಾ, ಪಡೆದ ಅನುಭವಗಳನ್ನೇ
ಪಡೆಯುತ್ತಾ ಇರುವ ಜೀವಿಗೆ ಚೇತನದ ಉಪಯೋಗವೇನು ? ಅದರಿ೦ದ ಬಾಳು ಬೆಳೆದೀತೆ.

ಪು ತಿ ನ - ೧೦
August 29, 2005 - 11:46am — muralihrಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

ಪು ತಿ ನ - ೪
August 29, 2005 - 11:46am — muralihrಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

ಪು ತಿ ನ - ೬
August 29, 2005 - 11:46am — muralihrಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

ಪು ತಿ ನ - ೭
August 29, 2005 - 11:46am — muralihrಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.





RSS: