ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

venkatesh ರವರು ಸೇರಿಸಿರುವ ನುಡಿಮುತ್ತುಗಳು

ಶಂಕರಲಿಂಗ ಸ್ತೋತ್ರಂ

January 29, 2007 - 1:41pm — venkatesh

ಶಂಕರಲಿಂಗಾ ಸದ್ಗುರು ತಂದೆ ನಾ ನಿಮ್ಮ ಪಾದವ ನಂಬಿ ಬಂದೇ [ಪ]
ಶಂಕೆಯ ಹರಿಸೊ ಸಂಕಟ ಬಿಡಿಸೋ ಕಿಂಕರನಾದೆನು ಭುವಿಯೊಳಗೇ [ಅ.ಪ]

ಆತ್ಮ ವಿಚಾರವ ನಿತ್ಯವು ಬೊಧಿಪ ಪ್ರತ್ಯಗಾತ್ಮನೂ ನೀ ಎನಗೇ
ಭಕ್ತಿಯಿಂದಲೀ ಬೇಡಿಕೊಂಬೆನೂ ಕೃಪೆಮಾಡೊ ಸದ್ಗುರು ತಂದೇ [೧]

ಅಂಗಅಂಗದಾ ಸಮರಸವನ್ನೂ ಹಿಂಗದೆ ಪೇಳೈ ನೀ ಎನಗೇ
ಸಂಗರಹಿತನಾಗಿ ಮಾಡೆನ್ನ ಬಳಲು ತಿರುವೆನೋ ಭುವಿಯೊಳಗೇ [೨]

ಜನನಿಯು ನೀನೇ ಜನಕನು ನೀನೇ ತನುಮನ ಧನಗಳು ನಿನದಯ್ಯಾ
ನಿನಗೊಪ್ಪಿಸಿಹೆನು ಕಾಯೋ ಎನ್ನನು ಕರುಣದಿ ನೋಡೋ
ಗುರುತಂದೆ. [೩]

ಧರೆಯೊಳಧಿಕವಾದ ಹೆಳವನ ಗಿರಿಯೊಳು ಪರಿಪರಿ ಲೀಲೆಯ ತೋರುತಲೀ
ಶರಣಾಗತರಾಗಿಹ ಭಕ್ತರನು ಪರಿಪಾಲಿಸೋ ನೀ ಗುರು ತಂದೇ [೪]

— ಶ್ರೀ. ಶ್ರೀ ಶಂಕರಲಿಂಗಭಗವಾನ್ ಸರಸ್ವತಿ ಪರಮಹಂಸರು, ಹೊಳಲ್ಕೆರೆ ತಾಲೂಕಿನ ನುಲೇನೂರಿನಲ್ಲಿ ಜನಿಸಿದರು.ಅಲ್ಲಿನ ಶ್ರೀ ರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮಾಡಿದರು. ನೂಲೇನೂರಿನಲ್ಲಲ್ಲದೆ, ಹರಿಹರ ತಾಲ್ಲೂಕಿನ, ಹೆಳವನ ಕಟ್ಟೆಯಲ್ಲಿ (ಕುಮಾರನ ಹಳ್ಳಿ) ಶ್ರೀ.ರಂಗನಾಥಾಶ್ರಮವನ್ನು ಸ್ಥಾಪಿಸಿದ್ದಾರೆ. ಮಲ್ಲಾಡಿಹಳ್  ಮುಂದೆ ಓದಿ »

~.~
  • 324 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮಲ್ಲಳ ಸ್ಕೂಲ್ ಮನೆಲಲ್ವೆ .

January 16, 2007 - 8:34am — venkatesh

ಮಲ್ಲಳ ಸ್ಕೂಲ್ ಮನೆಲಲ್ವೆ

— ಇದನ್ನು ಶ್ರೀ.ಟಿ.ಪಿ. ಕೈಲಾಸಂರವರು ತಮ್ಮ 'ಟೊಳ್ಳು-ಗಟ್ಟಿ' ನಾಟಕದಲ್ಲಿ ಹೇಳಿದ ನೆನಪು. 'ಬೀಚಿ' ಯವರು ಅದನ್ನೇ ಹೇಳಿದರೆ ಅಡ್ಡಿಯೇನು ?

~.~
  • 251 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ತಿರುಕರ ನುಡಿ ಮುತ್ತುಗಳು :

January 13, 2007 - 7:34pm — venkatesh

* ಅಲ್ಲಾನಲ್ಲಿ ನಂಬುಗೆ, ಪುನರುತ್ಥಾನದಲ್ಲಿ, ನಂಬುಗೆ, ಪುಣ್ಯಕಾರ್ಯಗಳಲ್ಲಿ ನಂಬುಗೆ
ಈ ಮೂರು ನಂಬುಗೆಯಿಂದ ಜೀವನ ನಡೆಯಿಸುವವನು ಯಾರೇ ಆದರೂ ಆತನಿಗೆ
ಸಂಪೂರ್ಣತೆಯೂ, ಮೋಕ್ಷವೂ ಉಂಟಾಗುತ್ತದೆಂದು ಹೇಳುತ್ತದೆ ಖುರಾನ್.

* ಭಗವಂತನ ಒಲುಮೆಗಾಗಿ ಎಲ್ಲ ಕಾರ್ಯವನ್ನೂ ಯಜ್ಞಭಾವದಿಂದ ಮಾಡಿ
ನಮ್ಮಲ್ಲಿಯ ಪಶುತ್ವವನ್ನು ಅದರಲ್ಲಿ ಬಲಿಕೊಡಬೇಕು.

* ಜೀವಧಾರಿಗಳಾದ ಮಾನವರೇ ಅಭಿನಯಕಾರರು, ವಿಶಾಲ ಪ್ರಪಂಚವೇ ಒಂದು
ರಂಗಭೂಮಿ, ಜೀವರುಗಳ ಜೀವನವೇ ಒಂದು ಮಹಾನಾಟಕ.

* ಪೂಜೆಯ ಸಾನುಗಳನ್ನು ತರಲು ಸಂತೆಗೆ ಹೋದ ಒಬ್ಬ ವ್ಯಕ್ತಿಯು ಅಲ್ಲಿ
ಮಾರಾಟಕ್ಕೆ ಬಂದ ಸಾಮನುಗಳಿಂದ ಆಕರ್ಷಿತನಾಗಿ ಯಾವಯಾವುದೋ
ಸಾಮಾನುಗಳನ್ನು ತಂದು, ತಿರು ತಿರುಗಿ ಪೂಜೆ ಸಾಮಾನಿಗಾಗಿ ಸಂತೆಗೆ
ಹೋಗುವಂತೆ ಪರಮಾತ್ಮನು ಜೀವರುಗಳಿಗೆ ಲೋಕದಿಂದ ಭಕ್ತಿಯ ಜಲವನ್ನು
ತುಂಬಿಕೊಂಡು ಬಾ ಎಂದು ಕಳುಹಿಸಿದರೆ ಜೀವರುಗಳು ಪ್ರಪಂಚದ ಮಾಯಾ
ಜಾಲದಲ್ಲಿ ಸಿಕ್ಕು ಒದ್ದಾಡುತ್ತಾ ಹುಟ್ಟು ಸಾವಿನ ಪರಿಭ್ರಮಣಕ್ಕೆ ಗುರಿಯಗಿ
ಒದ್ದಾಡುತ್ತಿರುತ್ತಾರೆ.

* ಮರುದ್ವನಿಗೊಡುವ ಪ್ರಪಂಚವಿದು. ಬಿರುನುಡಿಗೆ-ಬಿರುನುಡಿ, ಪ್ರೇಮಕ್ಕೆ- ಪ್ರೇಮ
ಇದು ಪ್ರಪಂಚ ಧರ್ಮ.

* ಜ್ಞಾನ ಮತ್ತು ಬ್ರಹ್ಮಪಟ್ಟವು ಯವುದೇ ಒಂದು ಜಾತಿಗೆ ಮೀಸಲಾದ ಸ್ವತ್ತಲ್ಲ;
ಅದು ಯಾವನೇ ಶ್ರದ್ಧಾವಂತ ಸಾಧಕನಿಗೆ ದೊರೆಯುವ ಅಂತಿಮ ಫಲ.

* ಸಾಮಾನ್ಯ ವ್ಯಕ್ತಿಗಿಂತ ರಾಷ್ಟ್ರಕ್ಕಾಗಿ ದುಡಿವ ನಿಷ್ಕಾಮಕರ್ಮಿ ಸೇವಾ ಧುರೀಣರನ್ನು
ಜನತೆ, ಸಮಾಜ, ಪುರಸ್ಕರಿಸಬೇಕು; ಗೌರವಿಸಬೇಕು.

* ನಮ್ಮದೆಲ್ಲ ವೇದಿಕೆಯ ಭಾಷಣದಲ್ಲಿ ಏಕತೆಯ ಜೀವನ; ಆಚರಣೆಯಲ್ಲಿ ನೀವು
ನೀವೆ- ನಾವು ನಾವೇ.

— ಮೇಲಿನ ವಾಕ್ಯಗಳನ್ನು ಅವರ 'ಜೋಳಿಗೆಯ ಪವಾಡದಿಂದ' ಆಯ್ಕೆ ಮಾಡಿ ಕೊಡಲಾಗಿದೆ.
ಶ್ರೀ. ಶ್ರೀ. ರಾಘವೇಂದ್ರಸ್ವಾಮಿಗಳು 'ತಿರುಕ' ಎಂಬ ಕಾವ್ಯನಾಮದಲ್ಲಿ ರಚಿಸಿದ ನಾಟಕ, ಕವಿತೆ, ಕಾದಂಬರಿ, ಯೋಗಾಭ್ಯಾಸ, ಗಳನ್ನು ಒಳಗೊಂಡ ಹಲವಾರುಗ್ರಂಥಗಳು ಪಟ್ಟಿಯಲ್ಲಿವೆ ; 'ಸ್ವಯಂ ವೈದ್ಯ' ಎಂಬ ಪುಸ್ತಕ, ಒಂದು ಬಹುಉಪಯೋಗಿಯಾದ ಗ್ರಂಥ.  ಮುಂದೆ ಓದಿ »

~.~
  • 248 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ತಿರುಕರ ನುಡಿ ಮುತ್ತುಗಳು.

January 12, 2007 - 7:50pm — venkatesh

ನಾಳೆ ಸುಖವೋ ದುಖಃವೋ ಬಲ್ಲವರ್ಯಾರು ? ಇರುವ ನಾಲ್ಕು ದಿನ ಸಮಾಜಕ್ಕೆ
ಉಪಕಾರಿಗಳಾಗಿ ಬಾಳುವುದನ್ನು ಕಲಿಯಿರಯ್ಯಾ.

ಜಾತಿ ಜಾತಿ ಹೆಸರಿನಲ್ಲಿ ಬಡಿದಾಡಬೇಡಿರಯ್ಯಾ. ಆ ಜಾತಿ ಈ ಜಾತಿಎಂಬುವುಗಳೆಲ್ಲಾ ರಾಷ್ಟ್ರಮಹಾಪುರುಷನ ಅಂಗಾಂಗಗಳು ಕಾಣಿರಯ್ಯಾ ಎಂತೆಂಬೆನಾ ಪರಮೇಶದಾಸ.

ಶವಾಸನವೆಂದರೆ ಕೈಕಾಲು ಚಾಚಿ ಮಲಗುವುದಲ್ಲ, ಜೊತೆಯಲ್ಲಿ ಮನಸ್ಸು ಶವವಾಗಬೇಕು.

ಬೆಣ್ಣೆಯನ್ನು ಒಲೆಯಮೇಲಿಟ್ಟು ಕಾಸುವಾಗ ಅದು ಚುರ್ ಚುರ್ ಎಂದು ಧ್ವನಿಗೈಯುತ್ತದೆ, ಆದರೆ ಅದೇ ಬೆಣ್ಣೆ ತುಪ್ಪವಾದಾಗ ಅಲ್ಲಿ ನಿಶ್ಯಬ್ದ, ಅದೇ ರೀತಿ ಸಾಧಕನು ಸಿಧ್ಧನಾದಾಗ ಅಲ್ಲಿ ಮೌನ.

— ಶ್ರೀ. ಶ್ರೀ. ರಾಘವೇಂದ್ರ ಸ್ವಾಮಿಗಳು ಮಲ್ಲಾಡಿ ಹಳ್ಳಿಗೆ ಆಗಮಿಸಿ, ಅಲ್ಲಿನ ಜನರನ್ನು ಉದ್ಧಾರಮಾಡಿದರು.ಬೆಂಗಡಾಗಿದ್ದ ಆ ಹಳ್ಳಿಯಲ್ಲಿ ಈಗ ಶಾಲೆ, ಕಾಲೇಜ್ ಮತ್ತು ಇನ್ನಿತರ ವಿದ್ಯಾ ಸಂಸ್ಥೆಗಳು ಚೆನ್ನಾಗಿ ಕೆಲಸ ಮಾಡುತ್ತಿವೆ. ಆ ಚೇತನಕ್ಕೆ ಶರಣು.  ಮುಂದೆ ಓದಿ »

~.~
  • 393 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ತಿರುಕರ ನುಡಿ ಮಾಣಿಕ್ಯಗಳು .. !

January 10, 2007 - 11:04pm — venkatesh

"ಮೌನದಾಚರಣೆಯಲ್ಲಿ ಕೆಲವರು ಕಾಗದದ ಮೇಲೆ, ಸ್ಲೇಟಿನಮೇಲೆ ಬರೆದು ತೋರಿಸಿದರೆ ಮತ್ತೆ ಕೆಲವರು ಕೈಕಾಲು ಅಲ್ಲಾಡಿಸಿ ಅಭಿನಯಿಸಿ ತೋರಿಸುತ್ತಾರೆ. ಆದರೆ ಇವುಗಳೆಲ್ಲ ಮೌನವಲ್ಲ. ನೃತ್ಯಾಭಿನಯ; ಆದರೆ ನಿಜವಾದ ಮೌನದಲ್ಲಿ ಮನಸ್ಸು ಮೌನವಾಗಿರಬೇಕು".

'ಯೋಗಿಗಳ ಸಿದ್ದಸ್ಥಿತಿಯಲ್ಲಿ ಅವರು ಮೌನವಾಗಿರುತ್ತಾರೆ'.

"ಸೃಷ್ಟಿ, ಸ್ಥಿತಿ,ಲಯ ಕರ್ತೃಗಳಾದ ಬ್ರಹ್ಮ, ವಿಷ್ಣು, ಮಶೆಶ್ವರರನ್ನು ಅವರವರ ಕಾರ್ಯಕ್ಷೇತ್ರದಲ್ಲಿ ಬೇರೆ ಬೇರೆಯಾಗಿ ಹೆಸರಿಸಿದರೂ ಮೂಲ ಚೈತನ್ಯವು ಒಂದೇ ಆಗಿರುತ್ತದೆ. ಅದೇ ಪರಬ್ರಹ್ಮ".

"ಚೆನ್ನಾಗಿ ಸುಟ್ಟ ಮಡಕೆಯನ್ನು ನೀರಲ್ಲಿ ಮುಳುಗಿಸಿಟ್ಟರೆ ಅದು ಕರಗುವುದಿಲ್ಲ. ಅದೇ ಸುಡದ ಹಸಿ ಮಡಕೆಯನ್ನು ನೀರಲ್ಲಿರಿಸಿದರೆ ಅದು ಮಣ್ಣೇ ಆಗುತ್ತದೆ. ಅದರಂತೆಯೇ ಸಿದ್ಧಿಯನ್ನು ಪಡೆದ ಯೋಗಿಯು ಎಲ್ಲೇ ಇದ್ದರೂ ಆತನು ಕೆಡುವುದಿಲ್ಲ. ಅದೇ ಢೋಂಗಿ ಸನ್ಯಾಸಿಗೆ ಎಲ್ಲೂ ಬೆಲೆ ಇರುವುದಿಲ್ಲ".

— ಪೂಜ್ಯ, ಶ್ರೀ ರಾಘವೇಂದ್ರಸ್ವಾಮಿಗಳ ಕಾವ್ಯನಾಮ, ತಿರುಕ ಎಂದು ! ಅವರೊಬ್ಬ ಕರ್ಮಯೋಗಿ, ವಿಭೂತಿಪುರುಷರು. ಬೆಂಗಾಡಿನಂತಿದ್ದ ಮಲ್ಲಾಡಿಹಳ್ಳಿಯನ್ನು 'ಓಯಸಿಸ್'ಆಗಿ ಮಾರ್ಪಡಿಸಿದ ಮಹಾನ್ ಚೇತನ !
ಅವರ ನುಡಿಮಾಣಿಕ್ಯಗಳನ್ನು ಅವರ " ಜೋಳಿಗೆ ಪವಾಡ ಗ್ರಂಥ" ದಿಂದ ಹೆಕ್ಕಿ ತೆಗೆದು ಕೊಟ್ಟಿದ್ದೇನೆ.  ಮುಂದೆ ಓದಿ »

~.~
  • 291 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
12ಮುಂದಿನ ›ಕೊನೆಯ »
Syndicate content

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
  • kalpana
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 10:48pm
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 7, 2008 - 10:36pm
ಇನ್ನಷ್ಟು


ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator