ನುಡಿಮುತ್ತುಗಳು

November 18, 2013
0

ನಿನ್ನೆ ಮುಗಿದಿದೆ

ಇಂದು ನಿಮಗಿದೆ

ನಾಳೆ ಮತ್ತೊಬ್ಬರಿಗಿದೆ

ಅವಕಾಶ ಎಲ್ಲರಿಗೂ ಇದೆ

ಆದರೆ ಜನಸಂಖ್ಯೆ ಹೆಚ್ಚಿದೆ.

November 14, 2013
0

ಮನಸ್ಸಿದ್ದರೆ  "ಮಾರ್ಗ‌'

ಇಲ್ಲದಿದ್ದರೆ "ಸಲಹೆ"( ಉಚಿತವಾಗಿ)

 

November 14, 2013
0

ಓಡಲು ಸಾದ್ಯವಾಗದಿದ್ದಲ್ಲಿ

ನಿದಾನವಾಗಿ ನಡೆದರೂ 

ಗುರಿ ಮುಟ್ಟಬಹುದು

ಆದರೆ ಹಿಂದಿರುಗಬೇಡಿ.

November 13, 2013
0

ಹಸಿದು ತಿನ್ನುವವನು "ಆರೋಗ್ಯ"

ಹಸಿಯದೆ ತಿನ್ನುವವನು "ಅನಾರೋಗ್ಯ"

ಹಸಿಯದೆ ಹಸಿವೆನ್ನುವವನು "ಅಯೋಗ್ಯ"

November 11, 2013
0

ತೊಂದರೆಗಳ ನಡುವೆ ಅವಕಾಶಗಳೂ ಇರುತ್ತವೆ

ನಾವು ತೊಂದರೆಗಳತ್ತ ಗಮನ ಹರಿಸುತ್ತೆವೆ.

 

November 11, 2013
0

ನಾವು ನಾಳೆ ಉತ್ತಮ ಕೆಲಸವನ್ನು ಮಾಡುತ್ತೇನೆಂದುಕೊಂಡಿದ್ದರೆ

ಅದು ನಿನ್ನೆಗಿಂತ ಕೆಳಮಟ್ಟದಲ್ಲಿರಬಹುದು,

' 'ನಾಳೆ' ಎಂಬದು ನಂಬಿಕೆಯಷ್ಟೆ.

November 09, 2013
0

ಮುಗಿದುಹೊಗುವ ವಸ್ತುಗಳ ಬೆಲೆ ಹೆಚ್ಚು

ಮುಗಿದುಹೊಗದ ವಸ್ತುಗಳ ಬೆಲೆ ಕಡಿಮೆ

ಭಾರತವು ಮುಗಿದು ಹೊಗದ ವಸ್ತುಗಳ ಭಂಡಾರ‌

1ಗ್ರಾಂ ಚಿನ್ನಕ್ಕೆ 10000/ ಸದ್ಯದಲ್ಲೆ

1ಲೀಟರ್ ಪೆಟ್ರೋಲ್ 1000/ ಸದ್ಯದಲ್ಲೆ

1ಕೆಜಿ ಅಕ್ಕಿಗೆ 1ರೂಪಾಯಿ ಸದ್ಯದಲ್ಲೂ ಅಸಾದ್ಯದಲ್ಲೂ.

November 07, 2013
0

ಮಾಡಿದ ಕೆಲಸವನ್ನು ಪೂರ್ಣಗೊಳಿಸುವ ಮುನ್ನ

ಪರೀಕ್ಷಿಸಿಕೊಳ್ಳುವುದು ಉತ್ತಮ‌,ಇಲ್ಲವಾದರೆ

    ಸಮಯದ ವ್ಯರ್ಥವಾಗಬಹುದು.

November 05, 2013
0

ಮನುಷ್ಯನು ಹೆಚ್ಚಾಗಿ ಒಳ್ಳೆಯದ್ದನ್ನು 

ಕಲಿತದ್ದೆಲ್ಲಾ ಪ್ರಾಣಿಗಳಿಂದ‌

ಅದಕ್ಕಾಗಿಯೆ ತನ್ನ ಸುತ್ತ  ಪ್ರಾಣಿಗಳನ್ನೆ ಬಳಸುತ್ತಿರುವ‌ 

ಉದಾಹರಣೆ :‍‍‍ಗೂಬೆ, ಕೊತಿ,ನಾಯಿ,ಹಂದಿ,ಕತ್ತೆ,,,,,,,,,,,,,,,,

 

ಅರ್ಥವಾಗದಿದ್ದರೆ ಪ್ರತಿಕ್ರಿಯಿಸಿ

 

November 05, 2013
0

ಸಾಕಷ್ಟು ಪ್ರಶ್ನೆಗಳಿಗೆ  ಒಂದೇ ಉತ್ತರ‌

            ''ಮೌನ‌"

ಮೌನದ ಮೊದಲ ಮುಖ  "ತಾಳ್ಮೆ"