ರುಚಿ ಸಂಪದ
|
May 21, 2013
6
209
ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಯನ್ನು ತೊಳೆದು ನೆನೆಸಿಡಿ. ಬದನೆ ಕಾಯಿಯನ್ನು ಉರುಟುರುಟಾಗಿ ತೆಳ್ಳಗೆ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿಡಿ. ನೆನೆದ ಅಕ್ಕಿ, ಉದ್ದಿನ ಬೇಳೆ , ಧನಿಯ, ಜೀರಿಗೆ, ಒಣ ಮೆಣಸಿನ ಕಾಯಿ, ಹುಣಿಸೆ ಹಣ್ಣು ಮತ್ತು ಉಪ್ಪನ್ನು ಒಟ್ಟಿಗೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿದ ಹಿಟ್ಟು ಸಾಧಾರಣ ದೋಸೆ ಹಿಟ್ಟಿನ ಹದ ಇರಬೇಕು. ಈ ಹಿಟ್ಟಿಗೆ ಕತ್ತರಿಸಿಕೊಂಡ ಬದನೆ ಕಾಯಿಯನ್ನು ಹಾಕಿ. ಅರ್ಧ ಗಂಟೆಯ ನಂತರ ದೋಸೆ ಕಾವಲಿಯ ಮೇಲೆ ತೆಳ್ಳಗೆ ಹರಡಿ ಎರಡೂ ಬದಿ ಬೇಯಿಸಿ. ರುಚಿಯಾದ ಚಟ್ಟಿ ತಯಾರಾಯಿತು. ಬಿಸಿ ಬಿಸಿ ಅನ್ನವನ್ನು ಕೊಬ್ಬರಿ ಎಣ್ಣೆಯೊಂದಿಗೆ ಕಲೆಸಿಕೊಂಡು ತುತ್ತಿಗೊಂದು ತುಂಡು ಚಟ್ಟಿಯನ್ನು ಸೇರಿಸಿಕೊಂಡು ತಿನ್ನಲು ರುಚಿಯಾಗಿರುತ್ತದೆ. ಖಾರ ಕಡಿಮೆ ಹಾಕಿ ಹಾಗೆಯೂ ತಿನ್ನಬಹುದು. |
May 17, 2013
0
69
ವಿಧಾನ :
ಬೆಲ್ಲಕ್ಕೆ ಸ್ವಲ್ಪ ನೀರು ಬೆರೆಸಿ ಬಾಣಲೆಯಲ್ಲಿ .. ಒಲೆಯ ಮೇಲಿಡಬೇಕು ಮಂದ ಉರಿಯಲ್ಲಿ ... ಅದು ಪಾಕವಾಗಿ ನೊರೆ ನೊರೆಯಾಗಿ ಉಕ್ಕಲು ಶುರು ಮಾಡಿದಾಗ .. ಬೆಂದ ಅನ್ನ , ತುಪ್ಪ, ಕಾಯಿ ತುರಿ ಹಾಕಿ ಚೆನ್ನಾಗಿ ಗೊಟಾಯಿಸಬೆಕು. ಎಲ್ಲವೂ ಚೆನ್ನಾಗಿ ಒಂದು ಮಿಶ್ರಣವಾಗಿದ ಮೇಲೆ ... ಏಲಕ್ಕಿ ಪುಡಿ, ಚಿಟಿಕೆ ಪಚ್ಕರ್ಪೂರ , ಗೋಡಂಬಿ ಮತ್ತು ದ್ರಾಕ್ಷಿ ತುಪ್ಪದಲ್ಲಿ ಹುರಿದು ಹಾಕಿದಲ್ಲಿ.. ಕಾಯನ್ನ ಸಿದ್ದ.
ಈ ತಿಂಡಿಯನ್ನು ಮಾಡಿದ ದಿನ ಅದರ ಸುವಾಸನೆಯಿಂದ ಮನೆಯೆಲ್ಲಾ ಒಂದು ರೀತಿಯ ಮದುವೆ ಮುಂಜಿ ವಾತಾವರಣ.. ಮಾಡಿದ ಮನಸ್ಸಿಗೂ ಸಂತೋಷ!!! ತಿಂದವರಿಗೂ ತೃಪ್ತಿ
ಮಾಡಿ ನೋಡಿ ಹೇಗಿತ್ತು ಎಂದು ನಿಮ್ಮ ಅನಿಸಿಕೆಯನ್ನು ಇಲ್ಲಿ ಬರೆಯಿರಿ
|
|
May 09, 2013
0
77
ನೆನೆಸಿದ ರಾಗಿಗೆ ತೆಂಗಿನ ತುರಿ ಸೇರಿಸಿ ರುಬ್ಬಿ ಸೋಸಿ ಹಾಲು ತೆಗೆಯಿರಿ.ಇದಕ್ಕೆ ಬೆಲ್ಲ,ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಿರಿ.ತುಪ್ಪ ಏಲಕ್ಕಿಸೇರಿಸಿ. ತಳಬಿಟ್ಟಾಗ ತುಪ್ಪ ಸವರಿದ ತಟ್ಟೆಯಲ್ಲಿ ಹರಡಿ.ಆರಿದಮೇಲೆ ಕತ್ತರಿಸಿ. ಮೇಲೆ ತುಪ್ಪ ಹಾಕಿ ಸವಿಯಿರಿ.
(ಡಯಟ್ ನಲ್ಲಿರುವವರು ತುಪ್ಪ ಮತ್ತು ಕಾಯಿತುರಿ ಹಾಕದೆ ಮಾಡಬಹುದು.)
ಅರ್ಧ ಕಪ್ ನೆನೆಸಿದ ರಾಗಿ ಮತ್ತು ಅರ್ಧ ಕಪ್ ನೆನೆಸಿದ ಗೋಧಿ ಸೇರಿಸಿ ಕೂಡಾ ಹಾಲುಬಾಯಿ ಮಾಡಬಹುದು.ಮಾಡುವ ವಿಧಾನ ಮೇಲಿನಂತೆ.
ಹಾಲುಬಾಯಿಯನ್ನು ಜೋನಿಬೆಲ್ಲದಲ್ಲಿ ಮಾಡಿದರೆ ತುಂಬಾ ರುಚಿಯಾಗಿರುತ್ತದೆ.
ಜೋನಿಬೆಲ್ಲ -ಮಲೆನಾಡಿನ ಕಬ್ಬಿನ ಆಲೆಮನೆಗಳಲ್ಲಿ ತಯಾರಿಸುವ ಪರಿಶುದ್ಧವಾದ ಡಬ್ಬಿಬೆಲ್ಲ.
|
April 29, 2013
2
255
ನೆನೆಸಿದ ರಾಗಿಯನ್ನು ರುಬ್ಬಿ ಸೋಸಿ ಹಾಲು ತೆಗೆಯಿರಿ.ಅದಕ್ಕೆ ಬೆಲ್ಲದ ಪುಡಿ ಸೇರಿಸಿ ರುಬ್ಬಿ.ನಂತರ ಹಾಲು, ಬಾದಾಮಿ ತರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಇದನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಕುಡಿಯಿರಿ.
ರಾಗಿ ಎಂದಾಕ್ಷಣ ಮೂಗು ಮುರಿಯುವವರಿಗೆ ಇದನ್ನು ರಾಗಿಯದ್ದು ಎಂದು ಹೇಳದೆ ಕುಡಿಯಲು ಕೊಟ್ಟು ನೋಡಿ. |
|
April 25, 2013
5
279
ಮೊದಲು ಬೆಣ್ಣೆ ಹಣ್ಣಿನ ತಿರುಳು,ಸಕ್ಕರೆ ಮತ್ತು ೧ ಕಪ್ ಹಾಲನ್ನು ಮಿಕ್ಸಿಗೆ ಹಾಕಿ ತಿರುಗಿಸಿ.ನಂತರ ಉಳಿದ ಹಾಲನ್ನು ಸೇರಿಸಿ ಮತ್ತೊಮ್ಮೆ ತಿರುಗಿಸಿ.ರುಚಿಕರವಾದ ಬೆಣ್ಣೆಹಣ್ಣಿನ ಮಿಲ್ಕ್ ಶೇಕ್ ನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಸವಿಯಿರಿ.
|
April 22, 2013
4
286
ನೆನೆಸಿದ ಬಾದಾಮಿಯ ಸಿಪ್ಪೆ ತೆಗೆದು ಬೇಯಿಸಿದ ಕ್ಯಾರೆಟ್ ಹೋಳುಗಳ ಜತೆ ರುಬ್ಬಿಟ್ಟುಕೊಳ್ಳಿ.
ಒಂದು ಲೋಟ ಹಾಲಿಗೆ ಸಕ್ಕರೆ ಸೇರಿಸಿ ಕುದಿಯಲಿಡಿ.ಸ್ವಲ್ಪ ಹಾಲಿನಲ್ಲಿ ಕಸ್ಟರ್ಡ್ ಪೌಡರನ್ನು ಕಲಸಿ ಕುದಿಯುತ್ತಿರುವ ಹಾಲಿಗೆ ಸೇರಿಸಿ ಕೈಯಾಡಿಸಿ ಮತ್ತೆ ಕುದಿಸಿ, ಆರಲು ಬಿಡಿ. ತಣ್ಣಗಾದ ಮೇಲೆ, ಇದರ ಜತೆಯಲ್ಲಿ ರುಬ್ಬಿದ ಕ್ಯಾರೆಟ್,ಉಳಿದ ಹಾಲು ಎಲ್ಲವನ್ನು ಮಿಕ್ಸಿಗೆ ಹಾಕಿ ತಿರುವಿ. ಇದನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಸವಿಯಿರಿ.
ಕ್ಯಾರೆಟ್ ತಿನ್ನದ ಮಕ್ಕಳು ಕೂಡ ಇದನ್ನು ಇಷ್ಟಪಟ್ಟು ಕುಡಿಯುತ್ತಾರೆ.
|
|
April 21, 2013
0
65
ಅಕ್ಕಿಯನ್ನು ತೊಳೆದು ನೆನೆಸಿಡಿ. ಕಲ್ಲಂಗಡಿ ಹಣ್ಣನ್ನು ತೊಳೆದು ಹಸಿರು ಸಿಪ್ಪೆಯನ್ನು ತೆಳ್ಳಗೆ ತೆಗೆಯಿರಿ. ನಂತರ ಕತ್ತರಿಸಿ ಕೆಂಪು ಹಣ್ಣಿನ ಭಾಗವನ್ನು ಬೇರ್ಪಡಿಸಿ ಉಳಿದ ಬಿಳಿ ಭಾಗವನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ. ನೆನೆದ ಅಕ್ಕಿಯನ್ನು ನೀರು ಬಸಿದು ಮಿಕ್ಸಿಗೆ ಹಾಕಿ. ಜೊತೆಯಲ್ಲೇ ಹೆಚ್ಚಿಟ್ಟುಕೊಂಡ ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಹೊಳುಗಳನ್ನೂ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಿಕ್ಸಿ ಮಾಡುವಾಗ ನೀರನ್ನು ಹಾಕುವ ಅಗತ್ಯವಿಲ್ಲ. ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಬಗ್ಗಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅಳತೆಗೆ ತಕ್ಕಂತೆ ನೀರನ್ನು ಹಾಕಿ. ಹಿಟ್ಟು ಸಾಧಾರಣ ಬರಿ ಅಕ್ಕಿ ದೋಸೆ ಹಿಟ್ಟಿನ ಹದ ( ನೀರು ದೋಸೆಯ) ಇರಬೇಕು. |
March 22, 2013
0
282
ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು, ಪುಡಿ ಮಾಡಿ. ಇದಕ್ಕೆ ರುಚಿಗೆ ತಕ್ಕ ಷ್ಟು ಉಪ್ಪು ಮತ್ತು ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ ಕಲೆಸಿ . ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಲು ಇಡಿ, ಬ್ರೆಡ್ ಸ್ಲೈಸ್ನ ಬ್ರೌನ್ ಬಣ್ಣದ ಅಂಚನ್ನು ತೆಗೆದು ಬಿಳಿ ಭಾಗವನ್ನು ಮಾತ್ರ ಉಳಿಸಿಕೊಳ್ಳಿ. ಬ್ರೆಡ್ ಸ್ಲೈಸ್ನ್ನು ನೀರಿನಲ್ಲಿ ಅದ್ದಿ, ಕೈಯಿಂದ ನೀರನ್ನು ಒತ್ತಿ ತೆಗೆದು, ಅದರಲ್ಲಿ ಆಲೂಗಡ್ಡೆ ಮಿಶ್ರಣವನ್ನು ತುಂಬಿ, ಅದನ್ನು ರೋಲ್ ಮಾಡಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿದರೆ ರುಚಿಯಾದ ಬ್ರೆಡ್ ರೋಲ್ ಸಿದ್ಧ. |
|
March 19, 2013
0
211
ಮೊದಲು ಹುಣಿಸೆ ರಸ ಮಾಡಿಕೊಳ್ಳೋಣ :
ಹುಣಿಸೆ ಹಣ್ಣನ್ನು ಒಂದು ಸಣ್ಣ ಬೌಲಿನಲ್ಲಿ ನೆನೆ ಹಾಕಿ. ನೆಂದ ನಂತರ ರಸ ಕಿವಿಚಿಕೊಳ್ಳಿ. ಈಗ ಹಸಿ ಮೆಣಸಿನಕಾಯಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಿಕ್ಸಿ ಮಾಡುವಾಗ ನೀರಿನ ಬದಲಿಗೆ ಹುಣಿಸೆ ರಸ ಹಾಕಿ. ಕೊನೆಯಲ್ಲಿ ಬೆಲ್ಲವನ್ನೂ ಹಾಕಿ ರಸ ತಯಾರಿಸಿಕೊಳ್ಳಿ. ಈರುಳ್ಳಿ, ಟೊಮ್ಯಾಟೋ, ಸೌತೆ ಕಾಯಿ, ಅನಾನಸು, ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ.
|
March 11, 2013
6
560
ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಇವುಗಳನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಅಗಲ ಬಾಯಿಯ ಪಾತ್ರೆಗೆ ಮೊಸರನ್ನು ಹಾಕಿ ಅದಕ್ಕೆ ಉಪ್ಪು, ಅಡುಗೆ ಸೋಡಾ, ಜೀರಿಗೆ, ಹೆಚ್ಚಿಟ್ಟುಕೊಂಡ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಇವುಗಳನ್ನು ಹಾಕಿ ಚೆನ್ನಾಗಿ ಕಲಕಿ ಮಿಶ್ರ ಮಾಡಿ. ನಂತರ ಈ ಮಿಶ್ರಣಕ್ಕೆ ಮೈದಾ ಹಿಟ್ಟನ್ನು ಹಾಕಿ ಕಲೆಸಿ. (ಹಿಟ್ಟು ಸಾಧಾರಣವಾಗಿ ಉದ್ದಿನ ವಡೆಯ ಹಿಟ್ಟಿನ ಹದ ಇರಬೇಕು) ದಪ್ಪ ತಳದ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ. ಎಣ್ಣೆ ಕಾದ ನಂತರ ಕಲೆಸಿದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಎಣ್ಣೆಯಲ್ಲಿ ಬಿಡಿ. ಹೊಂಬಣ್ಣ ಬರುವವರೆಗೂ ಕರಿಯಿರಿ. ಬಿಸಿ ಬಿಸಿ ಮಂಗಳೂರು ಬಜ್ಜಿ ಸಾಯಂಕಾಲ ಟೀ ಜೊತೆ ಸವಿಯಲು ಬಲು ರುಚಿಯಾಗಿರುತ್ತದೆ. |
|
March 11, 2013
3
264
ನೀರಿನಲ್ಲಿ ನೆನೆಹಾಕಿದ ಅಕ್ಕಿಯೊಂದಿಗೆ ಬಾಳೆಹಣ್ಣನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪುಡಿ ಮಾಡಿದ ಸಕ್ಕರೆ, ಏಲಕ್ಕಿ, ಶುಂಠಿ ಹಾಗೂ ತುರಿದ ಕೊಬ್ಬರಿ ಇವೆಲ್ಲವನ್ನು ಮಿಶ್ರ ಮಾಡಿ ಚೆನ್ನಾಗಿ ನಾದಿ. ಸಣ್ಣ ಸಣ್ಣ ಆಕಾರದಲ್ಲಿ ಉಂಡೆ ಮಾಡಿ. ತುಪ್ಪ/ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಿರಿ. ಬಿಸಿ ಬಿಸಿ ಬಲು ರುಚಿ . |
March 08, 2013
2
299
ಕುಕ್ಕರಿನಲ್ಲಿ ತೊಗರಿ ಬೇಳೆ, ನೀರು, ಅರಿಶಿನ ಮತ್ತು ಒಂದು ಚಮಚ ಎಣ್ಣೆ ಹಾಕಿ ಮೂರು – ನಾಲ್ಕು ಬಾರಿ ಕೂಗಿಸಿ, ಕೆಳಗಿಳಿಸಿಕೊಳ್ಳಿ. ಹುಣಿಸೆ ಹಣ್ಣನ್ನು ಸಣ್ಣ ಬೌಲಿನಲ್ಲಿ ನೆನೆಸಿಡಿ. ತರಕಾರಿಯನ್ನು ಹೋಳುಗಳನ್ನಾಗಿ ಮಾಡಿಟ್ಟುಕೊಳ್ಳಿ. ದಪ್ಪ ತಳದ ಬಾಣಲೆಗೆ ಕೊತ್ತಂಬರಿ ಬೀಜ, ಮೆಂತೆ, ಸಾಸಿವೆ, ಉದ್ದಿನ ಬೇಳೆ, ಬ್ಯಾಡಗಿ ಮೆಣಸಿನ ಕಾಯಿ ಮತ್ತು ಒಂದು ಚಮಚ ಎಣ್ಣೆ ಹಾಕಿ ಹುರಿಯಿರಿ. ಕೆಳಗಿಳಿಸುವ ಒಂದು ನಿಮಿಷ ಮೊದಲು ಕರಿಬೇವಿನ ಎಸಳನ್ನು ಹಾಕಿ ಬಾಡಿಸಿ. ಕೆಳಗಿಳಿಸಿದ ನಂತರ ತೆಂಗಿನ ತುರಿ ಹಾಕಿ ಬಾಡಿಸಿ. ಹುರಿದ ಮಸಾಲೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಒಂದು ಅಗಲ ಬಾಯಿಯ ಪಾತ್ರೆಗೆ ಬೆಂದ ಬೇಳೆಯನ್ನು ಬಗ್ಗಿಸಿಕೊಂಡು ಹೆಚ್ಚಿಟ್ಟುಕೊಂಡ ತರಕಾರಿಯನ್ನು ಹಾಕಿ ಹದವಾಗಿ ಬೇಯಿಸಿ. ತರಕಾರಿ ಬೆಂದ ನಂತರ ರುಬ್ಬಿದ ಮಸಾಲೆಯನ್ನು ಹಾಕಿ. |




