ಸಿಹಿ ಸಿಹಿ ಸುದ್ಧಿ. ಸುಧಾ ತೇಲಿ ಬರುತ್ತಿದ್ದಾಳೆ.
ಗೆಳೆಯರೆ, ಈಚೆಗಷ್ಟೇ ಎಂ.ಎಸ್.ಎನ್ ಕನ್ನಡದ ಬಗ್ಗೆ ನಿಮಗೆಲ್ಲರಿಗೂ ತಿಳಿಸಿದ್ದೆ. ಈಗ ಮತ್ತೊಂದು ಮೈಲಿಗಲ್ಲು ಸೇರ್ಪಡೆಯಾಗಿದೆ.
ನಮ್ಮ ನೆಚ್ಚಿನ "ಸುಧಾ" ವಾರಪತ್ರಿಕೆ ಇನ್ನು ಮುಂದೆ ಅಂತರ್ಜಾಲದಲ್ಲಿ ಎಲ್ಲರಿಗೂ ಸಿಗಲಿದೆ. ಇನ್ನು ಮುಂದೆ ಜಗತ್ತಿನ ಯಾವ ಮೂಲೆಯಲ್ಲಿದ್ದರೂ "ಸುಧಾ" ಓದಬಹುದು.
ಸಂತೋಷಕರವಾದ ಸುದ್ಧಿ ತಾನೇ. ಇರಲಿ. ವಾವ್, ಅಂತ ತುಂಬಾ ಬೀಗುವುದು ಬೇಡ. ಸುಧಾ ಸದ್ಯಕ್ಕೆ ಈ-ಪೇಪರ್ ಆಗಿ ಮಾತ್ರವೇ ಸಿಗಲಿದೆ. ಮುಂದೆ ಮತ್ತೂ ಚೆನ್ನಾದ ತಾಣವಾಗಿ ಹೊರಬರಲಿ ಎಂದು ಹಾರೈಸೋಣ.
ಹಾಗೆಯೇ, ಇಂದೇ ಕರಿಸಿರಿಯಾನ ಓದುವುದನ್ನು ಮರೆಯಬೇಡಿ. (ಪುಟ ೨೬). ಡಾ||ಕೆ.ಎನ್.ಗಣೇಶಯ್ಯ ಎನ್ನುವವರು "ವಿಜಯನಗರದ ನಿಧಿ" ಯ ಬಗ್ಗೆ ಕುತೂಹಲಕರವಾದ ಅಂಶಗಳುಳ್ಳ ಧಾರಾವಾಹಿಯನ್ನು ಬರೆಯುತ್ತಿದ್ದಾರೆ.

- Login or register to post comments
- 935 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಧನ್ಯವಾದಗಳು
ಸುನಿಲರೇ,
ನಾನು ಮೊದಲಿಗೆ ಸುಧಾ ಪತ್ರಿಕೆ ಕೈಲಿದ್ದರೆ ಪೂರ್ಣವಾಗಿ ಓದದೆ ಬಿಡುತ್ತಿರಲಿಲ್ಲ; ಆದರೆ ಏಕೋ ಬರುಬರುತ್ತಾ ಎಲ್ಲೋ ಮೂಲೆಯಲ್ಲಿರುತ್ತಿದ್ದ ಜಾಹಿರಾತುಗಳು ಪುಟದಗಲ ಕಾಣತೊಡಗಿ, ಬರಹಗಳ ಗುಣಮಟ್ಟ ಕುಸಿದಹಾಗಾಗಿ, ಬರುಬರುತ್ತಾ ಓದುವುದೇ ತಪ್ಪಿಹೋಗಿದೆ. ಆದರೆ ಕೊಳ್ಳದೆಯೇ ಓದುವವರು ಹೆಚ್ಚಾಗಿರುವಾಗ ಈಝೈನ್ ನಲ್ಲಿ ಪ್ರಕಟವಾದರೆ, ಇನ್ನೇನು ಗತಿಯೋ! ಕನಿಷ್ಠಪಕ್ಷ ೨ ವಾರಗಳಷ್ಟು ಮೊದಲೇ ಹೊಸಪ್ರತಿ ಬರುವುದರಿಂದ ಪರಿವೆಯಿಲ್ಲ ಎನ್ನುವಿರೇನು? ಏನೇ ಆಗಲಿ, ಸಂಪರ್ಕದ ಕೊಂಡಿ ನೀಡಿದ್ದಕ್ಕೆ ಧನ್ಯವಾದಗಳು.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉದಯ ಕುಮಾರ್
ಉದಯ ಕುಮಾರ್ ನಾವಡ
ಧನ್ಯವಾದಗಳು ಸುನಿಲ್ ರವರೆ ನಿಮ್ಮಈ ಮಹತ್ವ ಪೂರ್ಣ ಮಾಹಿತಿಗೆ.