tejaswi avara maayaaloka
ತೇಜಸ್ವಿ ಅವರು ಎಂದಿನಂತೆಯೇ ತಮ್ಮ ಪರಿಸರದ 'ಅತ್ಯಂತ ನಿಕೃಷ್ಟ'ಎಂದು ನಾವೆಲ್ಲಾ ಭಾವಿಸುವ ಸಾಮಾನ್ಯ ಜನರ 'ದೈನಿಕ' ದಲ್ಲಿಯೂ,ಅವರ ಪೀಕಲಾಟಗಳ ನಡುವೆಯೂ ಮಹತ್ತಾದುದನ್ನು ಕಾಣಬಲ್ಲವರಾಗಿದ್ದಾರೆ. ಇದು ಶ್ರೇಷ್ಠ ಸಾಹಿತಿಯ ಲಕ್ಷಣ. ಅಲ್ಲವೆ? ಕುವೆಂಪು (ಮಲೆಗಳಲ್ಲಿ..) ಕಾರಂತರು (ಬೆಟ್ಟದಜೀವ..). ಆದರೆ ತೇಜಸ್ವಿ ಅವರ ವಿಶೇಷತೆಯೆಂದರೆ ತೀರ ಇತ್ತೀಚಿನ ವಿದ್ಯಾಮಾನಗಳನ್ನೂ ಒಳಗೊಂಡೂ ಸಾರ್‍ವತ್ರಿಕವಾದ ಕಾಣ್ಕೆಗಳನ್ನು ನೀಡುವುದು. . ಈಗ ಕಾಣೆಯಾಗಿರುವ ದೊಡ್ಡ ವಿಮರ್ಶಕರೊಬ್ಬರು ಹೇಳುತ್ತಿದ್ದರು: ಉತ್ತಮ ಸಾಹಿತ್ಯ 'ಮೀಡಿಯೋಕ್ರಸಿ'ಯನ್ನೂ ತಾಳಿಕೊಳ್ಳಬೇಕು ಎಂದು. ಹಾಗೆ ತೇಜಸ್ವಿ ಸಾಹಿತ್ಯ 'ಮೀಡಿಯೋಕ್ರಸಿ'ಯನ್ನು ತಾಳಿಕೊಳ್ಳುತ್ತಾ ಎಲ್ಲ ಬಗೆಯ ಓದುಗರನ್ನೂ ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗುತ್ತದೆ.

- klnsimha ರವರ ಬ್ಲಾಗ್
- Login or register to post comments
- 947 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಕನ್ನಡ ಲಿಪಿ ಬಳಸಿ
ಕನ್ನಡ ಲಿಪಿ ಬಳಸಿ ಬರೀರಿ. ಚೆಂದವಾಗಿರುತ್ತೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ತೇಜಸ್ವಿ
ನನಗೆ ಆಗ ಬರಹ ಸಿಕ್ಕಿರಲಿಲ್ಲ. ಇನ್ನುಮೇಲೆ ಹಾಗೆಯೇ ಬರೆಯುವೆ.
ತಗೋಬೇಕು
ತೇಜಸ್ವಿಯವರ ಹೊಸ ಪುಸ್ತಕವನ್ನು ತಗೋಬೇಕು. ಆ ಪುಸ್ತಕ ಬಿಡುಗಡೆ ಆದದ್ದು ಗೊತ್ತಿರಲಿಲ್ಲ.ಯಾಕೆ ಕನ್ನಡ ಪುಸ್ತಕಗಳಿಗೆ ಪ್ರಚಾರ ಮಾಡುವುದಿಲ್ಲ!
ಕನ್ನಡ ಲಿಪಿ ಬಳಸಿದ್ರೆ ಚೆನ್ನಗಿರುತ್ತೆ.ಕನ್ನಡವನ್ನು ಇಂಗ್ಲೀಷ್ ನಲ್ಲಿ ಓದೋದು ತುಂಬ ಕಷ್ಟದ ಕೆಲಸ.
ತೇಜಸ್ವಿ
ಸಾಧಾರಣವಾಗಿ ತೇಜಸ್ವಿಯವರು ಪುಸ್ತಕ "ಬಿಡುಗಡೆ ಸಮಾರಂಭ" ಎಲ್ಲ ಮಾಡೋದಿಲ್ಲ ಎಂಬುದು ತಿಳಿದುಬಂತು.
ಸತ್ಯವಾದ ಮಾತು!
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
"ಮಾಯಾಲೋಕ"ದ ಬಗ್ಗೆ
ತೇಜಸ್ವಿಯವರ ಪುಸ್ತಕದ ಬಗ್ಗೆ ಬೇಳೂರು ಸುದರ್ಶನ ಅವರ ಅಭಿಪ್ರಾಯಗಳನ್ನು ಇಲ್ಲಿ ಓದಿ.
ಸಿಗೋಣ,
ಪವನಜ
-----------
Vishva Kannada
Think globally, Act locally
Re: "ಮಾಯಾಲೋಕ"ದ ಬಗ್ಗೆ
ಸಿಗೋಣ,
ಪವನಜ
ಧನ್ಯವಾದ ಪವನಜ ಹಾಗೂ ಸುದರ್ಶನರಿಗೆ. ಅದ್ಭುತವಾದ ವಿಮರ್ಶೆ. ಆದರೆ 250 ಪುಟದ ಪುಸ್ತಕಕ್ಕೆ 222 ರೂ. ಬೆಲೆ ಕನ್ನಡದ ಮಟ್ಟಿಗೆ ಸ್ವಲ್ಪ ಹೆಚ್ಚೇ. ಏನಂತೀರಾ?
ಮಾಯಾಲೋಕ ಇನ್ನಷ್ಟು
ಈ ದಿನದ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿರುವ "ಜೋಗಿ"ಯವರ ಲೇಖನ ಓದಿ. ಅವರೂ "ಮಾಯಾಲೋಕ"ದ ಬಗ್ಗೆ ಬರೆದಿದ್ದಾರೆ(?!). ಜೋಗಿಯವರ ಲೇಖನಕ್ಕಿಂತ ಬೇಳೂರು ಸುದರ್ಶನ ಅವರ ವಿಮರ್ಶೆ ಎಷ್ಟೋ ಪಾಲು ಚೆನ್ನಾಗಿದೆ. ಇದು ಒಬ್ಬ ಸಾಮಾನ್ಯ ಓದುಗನಾಗಿ ನನ್ನ ಅಭಿಪ್ರಾಯ. ಜೋಗಿಯವರಂತಹ ಹಿರಿಯ, ಅನುಭವಿ ಲೇಖಕರಿಂದ ಇಂತಹ ಕಾಟಾಚಾರದ ಲೇಖನವನ್ನು ನಾನು ಖಂಡಿತ ನಿರೀಕ್ಷಿಸಿರಲಿಲ್ಲ. ಕಾದಂಬರಿಯಿಂದ ಕೆಲವು ಪ್ಯಾರಾಗಳನ್ನು ಹಾಗೆಯೇ ಕೊಟ್ಟು ಮಧ್ಯೆ ಮಧ್ಯೆ ತೇಜಸ್ವಿಯವರ ಇತೆರ ಪುಸ್ತಕಗಳನ್ನು ತಾನು ಓದಿದ್ದೇನೆಂಬ ಪಾಂಡಿತ್ಯ ಪ್ರದರ್ಶನದಿಂದ ಏನೂ ಪ್ರಯೋಜನವಿಲ್ಲ. ಓದುಗರು ಒಂದು ವಿಮರ್ಶೆಯಿಂದ ಏನನ್ನು ಬಯಸುತ್ತಾರೆ? ಅವರಿಗದು ಸಿಗುತ್ತಿದೆಯೋ ಎಂಬುದಷ್ಟೆ ಓದುಗನಿಗೆ ಮುಖ್ಯವಾಗುತ್ತದೆ.
ಸಿಗೋಣ,
ಪವನಜ
-----------
Vishva Kannada
Think globally, Act locally
Re:ಮಾಯಾಲೋಕ ಇನ್ನಷ್ಟು
ಆ ಲೇಖನವನ್ನು ಬೆಳಗ್ಗೇನೆ ಓದಿದ್ದೆ.ಜೋಗಿಯವರು ಏನೋ ಕಾಟಾಚಾರಕ್ಕೆ ಬರ್ದಿದ್ದಾರೆ ಅನ್ನಿಸಿತ್ತು. ಮಾಯಲೋಕದಿಂದ ನಾನು ಏನನ್ನು ನಿರೀಕ್ಷಿಸಬಹುದು ಅಂತ ಲೇಖನ ಓದಿ ಆದ ಮೇಲೂ ಗೊತ್ತಾಗ್ಲಿಲ್ಲ.