ಶ್ಯಾಮ ಕಶ್ಯಪ
ಸಾವಿರಾರು ಬ್ಲಾಗುಗಳ ನಡುವೆ ಮತ್ತೊಂದು 'different' ಬ್ಲಾಗ್.
ಥಾಮಸ್ ಫ್ರೀಡ್‍ಮನ್: "The Otherside of Outsourcing"
ಮೊನ್ನೆ ಅಂತರ್ಜಾಲದಲ್ಲಿ ಕಾಲಹರಣ ಮಾಡಬೇಕಾದರೆ ಈ ಕೊಂಡಿ ಸಿಕ್ಕಿತು ನೋಡಿ: ಫ್ರೀಡ್‍ಮನ್ ಬೆಂಗಳೂರಿಗೆ ಬಂದು ಜಾಗತೀಕರಣದ ಬಗ್ಗೆ, ಹಾಗು ಅದರಿಂದ ಬೆಂಗಳೂರಿಗೆ ಯಾವತರಹ ಪರಿಣಾಮವಾಗಿದೆ ಎಂಬುದನ್ನು ಈ documentaryಯಲ್ಲಿ ತೋರಿಸಿದ್ದಾರೆ.
ಸುಮಾರು ೪೫ ನಿಮಿಷ ಇದೆ ವೀಡಿಯೋ. ಬ್ರಾಡ್‍ಬ್ಯಾಂಡ್ ಬೇಕಾಗಬಹುದು

- ಶ್ಯಾಮ ಕಶ್ಯಪ ರವರ ಬ್ಲಾಗ್
- Login or register to post comments
- 719 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಔಟ್ ಸೌರ್ಸಿಂಗ್ ನ ಈ ಸೈಡು
ಬ್ರಾಡ್ ಬ್ಯಾಂಡ್ ಇಟ್ಕೊಂಡೂ ಸ್ಟ್ರೀಮಿಂಗ್ ವಿಡಿಯೋ ನೋಡ್ಲಿಕ್ಕಾಗ್ಲಿಲ್ಲ ಮಾರಾಯ್ರೆ, ನಡು ರಾತ್ರಿ ಕೂತು ಡೌನ್ಲೋಡ್ ಮಾಡಿ ನೋಡಿದೆ. ೪೫ ನಿಮಿಷಗಳ ವಿಡಿಯೋ ಒಂದೂವರೆ ಗಂಟೆ ಡೌನ್ಲೋಡ್ ಆಯ್ತು.
ಈ ಫ್ಲಾಶ್ ವಿಡಿಯೋ ನೋಡುವಾಗ ಒಂದು ಅಚ್ಚರಿ ಕಾದಿತ್ತು. ನನ್ನ ಸಹಪಾಠಿಯೊಬ್ಬ ಈ ವೀಡಿಯೋದಲ್ಲಿ ಬರುವ ಕಾಲ್ ಸೆಂಟರ್ sceneಉಗಳಲ್ಲಿದ್ದಾನೆ!
ಒಟ್ಟಾರೆ, ಫ್ರೀಡ್ ಮ್ಯಾನ್ ನಿಜವಾದ "freed man" ತರಹಾನೇ ತನಗಿಷ್ಟ ಬಂದ ಕಡೆಯೆಲ್ಲ ಹೋದಂತಿದೆ. ಅವನು ಹೇಳುತ್ತಿರೋ ಹಲವು ಅಂಶಗಳು ಸರಿ - ಹೌದು. ಆದರೆ ಕೆಲವೊಂದು ಸಂಗತಿಗಳನ್ನ ಒಂದು ವಿಚಿತ್ರ perspectiveನಲ್ಲಿ ತೋರಿಸಿದ್ದಾನೆ.
ಭಾರತೀಯರು ಅಮೇರಿಕನ್ನರನ್ನೇ ಅನುಕರಣೆ ಮಾಡುತ್ತಿರುವುದನ್ನುದ್ದೇಶಿಸಿ - '"There will be no going back to home" ಎಂಬ ಸಂಗತಿಯನ್ನ ಅಮೇರಿಕದ ಲೇಖಕನೊಬ್ಬನು ಹೇಳಿದ್ದು, ಆದರೀಗ "There will be no home outside US, as well" ಆಗಿರೋದು, ಭಾರತವೂ ಮಿನಿ US ಆಗಹೊರಟಿದೆ' ಅಂತ ಫ್ರೀಡ್‍ಮನ್ ಹೇಳಿರೋದು ನಮ್ಮ ನಿಮ್ಮ ಸುತ್ತಲಿರುವ 'ಮಾಡರ್ನ್' ಜನರಿಗೆ ತಲುಪಬೇಕಾಗಿರುವ ಸಂದೇಶ. ಈ ಗ್ಲೋಬಲೈಸೇಶನ್ನಿನಲ್ಲಿ ಲೋಕಲೈಸೇಶನ್ ಬಹಳ ಮುಖ್ಯವೆಂದು ಅವ ವಿವರಿಸುವುದೂ ಸರಿಯಾಗಿ ತಲೆಯ ಮೇಲೇನೆ ಮಟ್ಟಿದಂತಿದೆ.
ಅನಂತಮೂರ್ತಿ ಫ್ರೀಡ್‍ಮನ್ ಗೆ ಹೇಳುವ ಮಾತೂ ಸತ್ಯ ಎನ್ನಿಸುತ್ತದೆ. ಅಮೇರಿಕದವರಿಗೆ 'ಸೋಶಿಯಲ್ ಸೆಕ್ಯುರಿಟಿ' ಉಂಟು, ನಮ್ಮ ಭಾರತದವರಿಗೆ ಬರಿಯ ಫ್ಯಾಮಿಲಿ ಸೆಕ್ಯುರಿಟಿ ಅಷ್ಟೆ. ಹೊರಗೆ ಹೋಗಿ ಇದ್ರೆ ಕಥೇನೆ ಬೇರೆ!
ಅಝೀಮ್ ಪ್ರೇಮ್ಜಿಯವರ ಮಾತು ಕಡ್ಡಿ ತುಂಡು ಮಾಡಿದಂತಿತ್ತು. ನಂದನ್ ನೀಲೇಕಣಿ ಮಾತ್ರ ಇನ್ಫಿಯಲ್ಲಿರೋ ಸಿರಿತನ ತೋರಿಸೋದ್ರಲ್ಲೇ ಜಾಸ್ತಿ ಮನಸ್ಸು ಇಟ್ಟಿದ್ದಹಾಗೆ ಕಾಣಿಸ್ತು.
ಅವನ್ಯಾವನೋ ಗೇಮಿಂಗ್ ಕಂಪೆನಿಯ ಒಬ್ಬ ಅವಿವೇಕಿ "ನಾವು ಸೂಪರ್ ಪವರ್ ಆಗುವೆವು, ನಾವು ರೂಲ್ ಮಾಡುವೆವು" ಅಂತೆಲ್ಲ ಅದರಲ್ಲಿ ಹೇಳಿ ನಮ್ಮ ಮಾನ ತೆಗೆದಿದ್ದಾನೆ. ಅಲ್ಲ, ಸರಿಯಾಗಿ ಬೆಂಗಳೂರು ಸಿಟಿ ಒಂದನ್ನೇ ಈ ಐಟಿಯಿಂದ ಉದ್ಧಾರ ಮಾಡ್ಲಿಕ್ಕಾಗ್ಲಿಲ್ಲ, ಇನ್ನು ಇಡಿ ಇಂಡಿಯವನ್ನು ಬರಿ ಇದರಿಂದಲೇ ಉದ್ಧಾರ ಮಾಡ್ಲಿಕ್ಕಾಗತ್ಯೆ? ಈ ಬಾರಿ $$ ಗೇಟ್ಸ್ ಭಾರತಕ್ಕೆ ಬಂದಾಗ "ನಿಮ್ಮ ದೇಶಕ್ಕೆ ಬೇಕಾಗಿರುವುದು ಐಟಿಯೊಂದಿಗೆ ಮಜಬೂತಾಗಿರೋ ಮ್ಯಾನ್ಯುಫ್ಯಾಕ್ಚರಿಂಗ್ ಸೆಕ್ಟರ್" ಎಂದು ಹೇಳಿದ್ದು ಬಹಳ ಸತ್ಯ ಅನ್ನಿಸುತ್ತದೆ.
ಎಷ್ಟು ದಿನಗಳ ಕಾಲ ಈ ಔಟ್ ಸೌರ್ಸಿಂಗ್ ಉಳಿಯುತ್ತದೆಯೋ ತಿಳಿಯದು, ಏಕೆಂದರೆ ಈಗಾಗಲೇ ನಮ್ಮ ಚೀನೀ ಗೆಳೆಯರೂ ನಮ್ಮವರಿಂದಲೇ ಇಂಗ್ಲಿಷ್ ಕಲೆತು ನಮ್ಮೆಲ್ಲರಿಗಿಂತ ಕಡಿಮೆ ಬೆಲೆಯಲ್ಲಿ ಕೆಲ್ಸ ಮಾಡೋಕ್ ಶುರು ಮಾಡಿದಾರಂತೆ! ಇವತ್ತು ಭಾರತ, ನಾಳೆ ಚೀನ, ಮುಂದೆ ಮತ್ತೊಂದು ದೇಶ. ಆದರೆ ಅಮೇರಿಕಕ್ಕಂತೂ ಏನೂ ಆಗದು, ಬಹುಶಃ. ಗ್ಲೋಬಲೈಸ್ಡ್ ಜಗತ್ತಿನಲ್ಲಿ ಹೆಚ್ಚು ಲಾಭವಾಗುವುದು ಅಮೇರಿಕದಂತಹ ದೇಶಕ್ಕೇ ಅಲ್ವೆ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಹೇಳುವುದನ್ನು ಮರೆತಿದ್ದೆ
ಹೇಳುವುದನ್ನು ಮರೆತಿದ್ದೆ. ಅವನು ಹೇಳುವುದೇನೋ 'the other side' ಅಂತ. ಆದರೆ ನಮಗಿದು ನಮ್ಮ ಸೈಡು. ಅವರ ಸೈಡನ್ನ ನೋಡೋದಿಕ್ಕೆ ನೀವು ಇಲ್ಲಿಗೆ ಬರಬೇಕು. ನಮ್ಮವರು ಇಲ್ಲಿಗೆ ಬಂದು ಒಂದು documentary ಮಾಡಿದ್ರೆ ಚೆನ್ನಾಗಿರೋದು. ಇಲ್ಲಿಯ perspective ಮೇಲೆ ಒಂದು documentary ನನ್ನ ಬಳಿ ಇದೆ. ಅದರ ಪ್ರಕಾರ ಇಲ್ಲಿ ಜನ ಸಿಟ್ಟಿಗೇಳ್ತಾ ಇದಾರೆ. ಹೊಯ್ಕತಾ ಇರೋ ಅಮೇರಿಕನ್ನರ ಕಣ್ಣೊರಸುವುದಕ್ಕೆ ಹೊರಟದ್ದು ಇವ.
ಆದರೆ ಕೆಲವು ವಿಚಾರಗಳನ್ನು ಬೇಕಂತಲೇ ಮುಚ್ಚಿಟ್ಟಂತೆ ತೋರುತ್ತದೆ. ಔಟ್‍ಸೋರ್ಸಿಂಗಿನಿಂದ ಔಟ್‍ಸೋರ್ಸ್ ಮಾಡಿದ ಕಂಪನಿಗಳಿಗಾಗುತ್ತಿರುವ ಲಾಭ ಯದ್ವಾ ತದ್ವ ಅಲ್ವೇ.. ಅದನ್ನ ಹೇಳೋದೇ ಇಲ್ಲ ಇವನು. ನಮ್ಮ ಕೆಲವು ಕೆಲಸಗಳು ಹೋಗ್ತಾವೆ. ಆದರೆ ನಮ್ಮ ದೇಶದ ಉತ್ಪನ್ನಗಳಿಗೆ ಇಲ್ಲಿ ಮಾರುಕಟ್ಟೆ ಇದೆ ಅನ್ನೋದನ್ನ ಮಾತ್ರ ಹೇಳ್ತಾನೆ. (ಅದೇನೋ ಭಾಗಶಃ ಸತ್ಯನೇ) ಆದರೆ ಅಮೇರಿಕನ್ನರಿಗೆ ಬೇಕಾಗಿರೋಷ್ಟು ಮಾರುಕಟ್ಟೆ ನಮ್ಮಲ್ಲಿ ಮತ್ತು ಚೀನಾದಲ್ಲಿಲ್ಲ ಅಂತ ಅಲ್ಲಿಯ ಜನಕ್ಕೂ ಗೊತ್ತಾಗಿದೆ. ಅದಕ್ಕೆ, ನಮ್ಮ ಮಾರುಕಟ್ಟೆ ಮುಕ್ತವಲ್ಲ ಅಂತ ಇಲ್ಲಿಯ ಕಂಪನಿಗಳು ಜನರ ಕಣ್ಣೊರೆಸುವ ಪ್ರಯತ್ನ ಮಾಡುತ್ತಿವೆ. ಆದರೆ ದೊಡ್ಡ ದೊಡ್ಡ ಕಂಪನಿಗಳ ಈ open inside secretನ ಮಾತ್ರ ತೋರಿಸೋದಿಕ್ಕೆ ಹೋಗಿಲ್ಲ ಈ ಚಲನಚಿತ್ರದಲ್ಲಿ. ಅಥವ ಇದಕ್ಕೆ ಕಾರಣ ಫ್ರೀಡ್‍ಮನ್ ನಮ್ಮ ಕಥೆ ಮಾತ್ರ ಹೇಳ್ತಾ ಇದಾನಲ್,ಲ ಅದಕ್ಕಿರಬಹುದು.. ಅಥವ ತನ್ನ ಇತ್ತೀಚಿನ ಬುಕ್ಕಿಗೆ ಹೆಚ್ಚಿನ ಓದುಗರು ಸಿಗಲಿ ಎಂಬುದೂ ಇರಬಹುದು
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
Re: ಹೇಳುವುದನ್ನು ಮರೆತಿದ್ದೆ
ಗೊತ್ತುಂಟು, slashdotನಲ್ಲೇನೆ ದಿನ ಬೆಳಗಾದ್ರೆ (ಔಟ್ ಸೌರ್ಸಿಂಗ್ ಬಗ್ಗೆ ಏನಾದ್ರೂ ಬಂದ್ರೇ ಸಾಕು) ಬೆಂಗಳೂರಲ್ಲಿರೋ ಕ್ರಿಮಿಕೀಟಗಳಿಂದ ಹಿಡಿದು ಎಲ್ಲರನ್ನೂ ಶಪಿಸ್ತಾರೆ. 'ಬ್ರೌನಿಗಳು', 'ಕೈಲಾಗದೋರು', 'ಬೇರೆಯವರ ಹಣ ಲಪಟಾಯಿಸೋರು', ಕೊನೆಗೆ 'ಎಕ್ಸ್ಟ್ರಿಮಿಸ್ಟುಗಳು' ಅಂತೆಲ್ಲಾ ಕಾಮೆಂಟುಗಳಲ್ಲಿ ಹೊಯ್ಕೊತಾ ಇರ್ತಾರೆ. ಯಾರೋ ಒಂದಷ್ಟು ಜನ ಕಾಲ್ ಸೆಂಟರ್, ಬಿ ಪಿ ಓಗಳಲ್ಲಿ ಕೆಲಸ ಮಾಡುತ್ತಿರೋದರಿಂದ (ಇದರಿಂದ US ಕಂಪೆನಿಗಳೇ ತಮ್ಮ ಲಾಭ ಹೆಚ್ಚು ಮಾಡಿಕೊಳ್ಳುತ್ತಿರುವುದು ಎಂಬುದನ್ನು ನಾವು ಮರೆಯಬಾರದು) ಇಡಿಯ ಬೆಂಗಳೂರಿಗೆ ಶಾಪ!
ಇವೆಲ್ಲಾ ಚತುರತೆಿ, ಕಪಟ ನಮ್ಮ ಭಾರತದವರಿಗಾಗಲೇ ಅಭ್ಯಾಸವಾಗಿ ಹೋಗಿದೆ ಎನಿಸುತ್ತದೆ. ಮುಂದಿನ ಸಾರಿ ಅವನು ಭಾರತಕ್ಕೆ ಬಂದರೂ ನಮ್ಮ ಪ್ರೆಸಿಡೆಂಟಿಗೆ ನೀಡುವದಕ್ಕಿಂತ ಹೆಚ್ಚು ಆದರದಲ್ಲಿ ಸಲ್ಯೂಟ್ ಹೊಡೀತಾರೆ (ಆ ವಿಡಿಯೋದಲ್ಲಿ ಮೊದಲ ದೃಶ್ಯ ಹೋಟೆಲಿನ ಕೆಲವರು ಅವನಿಗೆ ಜಬರ್ದಸ್ತು ಸೆಲ್ಯೂಟ್ ಹೊಡೀತಿರೋದನ್ನ ನೋಡಿ). ಗುಲಾಮಗಿರಿ ಇನ್ನೂ ಕಡಿಮೆಯಾಗಿಲ್ಲ, ಬ್ರಿಟಿಷರು ಹೋಗಿ ಇಷ್ಟು ವರ್ಷಗಳಾದ್ರೂ. (ಮೊನ್ನೆ ಮೈಸೂರಿನಲ್ಲಿ ಲಾಡ್ಜಿಂಗ್ ಮಾಡ ಹೋದಾಗ ನಿಂತಿದ್ದ ಭಾರತೀಯರನ್ನೆಲ್ಲ ಹಿಂದಕ್ಕೆ ಹಾಕಿ ಬಂದ ವಿದೇಶಿಯರಿಗೆ ಮೊದಲ ಆದ್ಯತೆ ಕೊಟ್ಟಾಗಲೂ ಹೀಗೆಯೇ ಅನ್ನಿಸಿತ್ತು)
CNN, BBC ನೋಡಿ ಅಭ್ಯಾಸವಿರುವವರಿಗೆ ಈ ಫಿಲ್ಟರಿಂಗ್ 'ಹೆಚ್ಚು' ಅರ್ಥವಾಗತ್ತೆ.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ