ಸುಮ್ಮನೆ time pass
ಕರ್ನಾಟಕದಲ್ಲಿ...
ಜಾತಿಮತ ಹೆಸರಲ್ಲಿ
ಹೆರಿಗೆ ಕಸ ಕೆಸರಲ್ಲಿ
ಗಂಧದ ಕೊರಡು
ತೇಯುತ್ತಿದೆ
ಅವರಿವರ ಬೇಳೆ
ಬೇಯುತ್ತಿದೆ
ಪ್ರಜಾಸತ್ತೆ
ಹೆದರಿ ಸಾಯುತ್ತಿದೆ!
ಜಾತಿ ಕಸೂತಿ
ಗೌಡರು ಅರೆದ ಮದ್ದು
ಸಿದ್ದುಗೊಂದು ಗುದ್ದು
ಅ ಅ ಹಿಂದ ಹಿಂದಲ್ಲ
ಸವಲತ್ತಲ್ಲಿ ಅವರು ಮುಂದ
ಈಡಿಗ ಕುರುಬರ ಕಣ್ಣು ಕೆಂಪು
ಹೊಡೆದಾಡಿ ಒಳಜಾತಿ
ಚದುರಿ ಮೂಲೆಗುಂಪು
ಮುದ್ದು ಮಕ್ಕಳ ಹೊಟ್ಟೆ ತಂಪು!
ಗಂಗೂಲಿ
ಚಲೋ ಒಳ್ಳೇದಾತು
ಮಾತು ಬಯಲಾಯ್ತು
ಹನ್ನೊಂದು ಜನರ
ನೇತಾರ
ಬಂಗಾಲದ ಸರದಾರ
ಮೇಲೆವರೆಗೆ ಸೇತು
ಹೋದರೂ ಸೋತು
ನಾಯಕತ್ವಕ್ಕೆ ಜೋತು!
- ಗೋಪೀನಾಥ ರಾವ್
raogopi@yahoo.com

- Login or register to post comments
- 960 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಚುಟುಕ
ಚುಟುಕ ಬ್ರಹ್ಮ ದಿನಕರ ದೇಸಾಯಿಯವರ ನಂತರ ಡುಂಡಿರಾಜ್ ಅವರು ಪ್ರಸಿದ್ಧರು. ಅವರಿಗೆ ಸಡ್ಡು ಹೊಡೆಯುವಂತೆ ಇದೆ ನಿಮ್ಮ ಚುಟುಕಗಳು. ಬರ್ಲಿ ಸಾರ್ ಇನ್ನೂ ಹೆಚ್ಚಿನ ಚುಟುಕಗಳು ಬರ್ಲಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ