ವಿನಾಯಕ (ಬ್ಲಾಗ್ ಬರಹಗಳು)
SEZ
August 9, 2008 - 12:25pm — ವಿನಾಯಕ
ಹಕ್ಕಿ ಉಲಿದಿದೆ ಇಂದು ತನ್ನ ಗೂಡಲೆ ನಿಂದು
ತನ್ನ ಪರಿಧಿಗಳೊಳಗಿನ ಪುಟ್ಟ ಕೂಗು
ಮಾಮರದ ಕೊಂಬೆಯಲಿ ಹಂಗಿನರಮನೆ ಗೂಡು
ಕೊನೆಯಿರದ ಅವಲಂಬನೆಯ ಕೊರಗು.. |
ತನ್ನ ಗೂಡಿನ ಕಡೆಗೆ ಕಣ್ಣು ನೆಟ್ಟವರಿಲ್ಲ
ಕಣ್ಗಳಿರುವುದು ಎಲ್ಲ ಮರದ ಹಣ್ಗಳೆಡೆಗೆ
ಗುರಿಯಿರದ ಕಲ್ಲುಗಳು ಒಂದಾದ ಮೇಲೊಂದು
ತಗುಲಿದ್ದು ಹಣ್ಣಿಗಲ್ಲ..ತನ್ನ ಎದೆಗೆ ! |
ಮುಂದೆ ಓದಿ »

ರಾಧೆಗೊಬ್ಬನಿದ್ದ ಕೃಷ್ಣ
July 16, 2008 - 11:48pm — ವಿನಾಯಕನನ್ನ ಪರಿಧಿಗಳೊಳಗೆ ನಿನ್ನ ಪರಿಪರಿ ನೆನೆದು
ಕನ್ನೆ ಕನಸುಗಳೆಲ್ಲ ನಿನ್ನ ಮುರಲಿಗೆ ನಲಿದು
ರಾಧೆ ನೆನೆವಳು ನಿನ್ನ ಬಾರಯ್ಯ ಕೃಷ್ಣ
ಭುವಿಯ ತೋಳಲಿ ಪೊರೆದಂತೆನ್ನ ಪೊರೆಯಲು ಬಂದು
ನನ್ನ ಕಣ್ಗಳಿಗೊಲವ ಸುರಿಸು ನೋಟದೆ ಕೊಂದು
ಒಡಲ ಬೇಗೆಗೆ ಇಂದು ಬೇಡ ಮೃಗತೃಷ್ಣ
ಹರಿವ ಯಮುನೆಗು ಇಲ್ಲಿ ನಿನ್ನ ವಿರಹದ ತಪನ
ಗೋಪ ನಂದನದಲ್ಲು ಇಲ್ಲ ಚಿಲಿಪಿಲಿ ರಣನ
ಹೂಗೆ ಧನ್ಯತೆಯಿಲ್ಲ ನೀ ಬರದೆ ರಂಗ
ಹಸಿರ ತೃಣಗಳಿಗಿಲ್ಲ ನಿನ್ನ ಪಾದಸ್ಪರ್ಶ
ಮೇವ ಗೋಗಳಿಗಿಲ್ಲ ನಿನ್ನ ಕೊಳಲಿನ ಕರ್ಷ
ಮಂಕು ಬಡಿದಂತಿಹವು ಜಿಂಕೆ ಸಾರಂಗ ಮುಂದೆ ಓದಿ »

- ವಿನಾಯಕ ರವರ ಬ್ಲಾಗ್
- Login or register to post comments
- 178 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಸಂಕ್ರಾಂತಿಗೊಂದಿಷ್ಟು ಎಳ್ಳು-ಬೆಲ್ಲ...
January 15, 2008 - 5:12pm — ವಿನಾಯಕ
ಹರಕುಬಟ್ಟೆಯ ನರನ
ತಿರುಕನೆಂ ಜರೆಯದಿರು
ಮರುಕವಿಲ್ಲದ ಮನವು ಹರಕಲ್ಲವೇ?
**********************************
ಸಾಗರದ ಅಲೆಯಿರಲಿ
ನಾಗರದ ಹೆಡೆಯಿರಲಿ
ಬಾಗದೇ ಮೇಲೇರಿದಾಗಲೆಲ್ಲ ?
********************************** ಮುಂದೆ ಓದಿ »

- ವಿನಾಯಕ ರವರ ಬ್ಲಾಗ್
- Login or register to post comments
- 247 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: