ಶಶಾಂಕ (ಬ್ಲಾಗ್ ಬರಹಗಳು)
ಗೂಗಲ್‌ನಲ್ಲಿ...
November 2, 2007 - 4:32am — ಶಶಾಂಕಗೂಗಲ್ನ ಇನ್ನೊಂದು ಪ್ರಾಡಕ್ಟ್...

- ಶಶಾಂಕ ರವರ ಬ್ಲಾಗ್
- Login or register to post comments
- 313 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಎಲ್ಲಾ ಕನ್ನಡದಲ್ಲಿ ಬರೆಯಲು... - 2
December 6, 2006 - 12:33pm — ಶಶಾಂಕ(ಮುಂದುವರೆಯುತ್ತಾ...)
ಬರಹದಿಂದ ಕಾಪಿ ಪೇಸ್ಟ್ ಮಾಡುವ ಬದಲು ನೇರವಾಗೇ ಬ್ರೌಸರ್‌ನಲ್ಲಿ ಟೈಪ್ ಮಾಡಲು ಯಾವುದೇ ಸಾಧನ ಇಲ್ಲವೇ ಅಂತ ಮತ್ತಷ್ಟು ಹುಡುಕಿದೆ. ಆಗ ಇಂಡಿಕ್‌ಐಎಂಇ ಅನ್ನೋ ತಂತ್ರಾಂಶ ಸಿಕ್ಕಿತು, ಆದರೆ ಅದು ಬರೀ ನೆಟ್ಸ್ಕೇಪ್ ಮತ್ತು ಪೈರ್‌ಪಾಕ್ಸ್‌ಗಳಿಗೆ ಮಾತ್ರ ಅಂತಿತ್ತು. ಆಗಲೇ, ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗೆ ನಾನೇ ಒಂದು ಐ.ಎಮ್.ಇ ಮಾಡ್ಬೇಕು ಅಂದುಕೊಂಡಿದ್ದು. ಈಗ ನೀವೂ ಇಂಡಿಕ್‌ಬ್ಬ್ಯಾಂಡ್ (ನಾ ತಯಾರಿಸಿದ ತಂತ್ರಾಂಶ) ಅನ್ನು shanka.homeip.net ಇಂದ ಡೌನ್‌ಲೋಡ್ ಮಾಡ್ಕೋಬಹುದು. ಮುಂದೆ ಓದಿ »

ಹಳೇ ವಿಂಡೋಸ್‌ಗಳಿಗೆ ಐ.ಎಮ್.ಇ - 2
December 2, 2006 - 1:00pm — ಶಶಾಂಕಐ.ಎಮ್.ಇಯನ್ನು ಈ ಕೆಳಗಿನ ಪುಟದಿಂದ ಡೌನ್‌ಲೋಡ್ ಮಾಡ್ಕೋಬಹುದು...
ಐ.ಎಮ್.ಇಯ ಹೆಸರು ಇಂಡಿಕ್‌ಬ್ಯಾಂಡ್ (IndicBand). ಇದು ವಿಂಡೋಸಿನ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ಗೆ ಮಾತ್ರ. ಮುಂದೆ ಓದಿ »

- ಶಶಾಂಕ ರವರ ಬ್ಲಾಗ್
- Login or register to post comments
- 350 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಎಲ್ಲಾ ಕನ್ನಡದಲ್ಲಿ ಬರೆಯಲು...
November 29, 2006 - 10:58pm — ಶಶಾಂಕಸುಮಾರು ಮೂರು ತಿಂಗಳ ಹಿಂದೆ ಕನ್ನಡದ ವಿಕಿಪೀಡಿಯಾವನ್ನು ನಾನು ಮೊದಲನೇ ಸರಿ ನೋಡಿದೆ. ಆದರೆ ಅಲ್ಲಿನ ಅಕ್ಷರಗಳು ಸರಿಯಾಗಿ ಮೂಡದೇ ಇದ್ದಿದ್ದರಿಂದ ನಿರಾಸೆಯಾಯಿತು. ಗೂಗಲ್‌ನಲ್ಲಿ ಸುಮಾರು ಹೊತ್ತು ಸರ್ಚ್ ಮಾಡಿದ ಮೇಲೆ ಯೂನಿಕೋಡಿನ ಕೆಲವು ಪಾಂಟ್‌ಗಳು ಸಿಕ್ಕಿದವು. ಅದರಲ್ಲಿ ಒಂದನ್ನು ಅಚ್ಚುಇಳಿಸಿದ ಮೇಲೆ ವಿಕಿಪೀಡಿಯಾ ಸರಿಯಾಗಿ ಮೂಡಿತು! ಸುಮಾರು ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಲೇಖನಗಳು ಅಲ್ಲಿ ಇದ್ದದ್ದು ನನಗೆ ಆಶ್ಚರ್ಯ ಉಂಟು ಮಾಡಿತು. ಏಕೆಂದರೆ ಯೂನಿಕೋಡ್ ಕನ್ನಡದಲ್ಲಿ ಈಗಾಗಲೇ ಇಷ್ಟೊಂದು ಮುನ್ನಡೆಯಾಗಿದ್ದು ನೋಡಿ. ವಿಕಿಪೀಡಿಯಾದಲ್ಲಿ ನನಗೂ ಏನಾದರೂ ಬರೀಬೇಕು ಅನ್ನಿಸಿತಾದರೂ ಹೇಗೆ ಬರೆಯುವುದು ಎಂದು ತಿಳಿಯಲಿಲ್ಲ. ಮತ್ತೆ ಗೂಗಲ್‌ನಲ್ಲಿ ಸರ್ಚ್ ಮಾಡತೊಡಗಿದೆ. ವಿಂಡೋಸ್ ಎಕ್ಸ್.ಪಿಯಲ್ಲಿ ಯೂನಿಕೋಡ್‌ನಲ್ಲಿ ಬರೆಯುವುದು ಹೇಗೆ ಅನ್ನೋದರ ಬಗ್ಗೆ ಹಲವಾರು ಪುಟಗಳು ಸಿಕ್ಕವು ಆದರೆ ವಿಂಡೋಸ್ ೯೮ ಮತ್ತು ಎಮ್.ಇಯಲ್ಲಿ ಹೇಗೆ ಬರೆಯುವುದು ಅಂತ ಎಲ್ಲೂ ಸಿಕ್ಕಲಿಲ್ಲ. ಸುಮಾರು ದಿನಗಳ ಹುಡುಕಾಡಿದ ಮೇಲೆ ಐ.ಬಿ.ಎಮ್‌ನವರ ಐ.ಎಮ್.ಇ ಸಿಕ್ಕಿತು. ಸುಮಾರು ಆರೋ-ಏಳೋ ಎಮ್‌ಬಿ ಇದ್ದ ಅದನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿದೆ. --- ದೇವರೇ ಬರಬೇಕು ಇನ್ಕ್ರಿಪ್ಟ್ ಕಲಿಸೋಕ್ಕೆ!!! ಮತ್ತೆ ನಿರಾಸೆಯಾಯಿತು. ಬೈಕೋತಾ ಅದನ್ನ ಅನ್-ಇನ್ಸ್ಟಾಲ್ ಮಾಡಿದೆ... ಬ್ಯಾಂಡ್‌ವಿಡ್ತೆಲ್ಲಾ ವೇಸ್ಟಾಯಿತಲ್ಲ ಅಂತ. ಇದಲ್ಲದೇ ಇನ್ನೆಷ್ಟು ತಂತ್ರಾಂಶಗಳನ್ನ ಡೌನ್ಲೋಡ್ ಮಾಡ್ಕೊಂಡಿದಿನೋ, ಗೂಗಲ್‌ನಲ್ಲಿ ಅದೆಷ್ಟು ಬಾರಿ ಸರ್ಚ್ ಮಾಡಿದಿನೋ, ದೇವರಿಗೇ ಗೊತ್ತು! ಸುಮಾರು ಒಂದೂವರೆ ತಿಂಗಳಷ್ಟು ಹುಡುಕಿದರೂ ಏನೂ ಸಿಗಲಿಲ್ಲ. ಅಷ್ಟರಲ್ಲಿ ಒಂದು ದಾರಿ ಗೊತ್ತಾಯಿತು! ಬರಹ ೬ರಲ್ಲಿ ಬರೆದು ಅದನ್ನ ಯೂನಿಕೋಡ್ ಆಗಿ ಕಾಪಿ ಮಾಡಿ, ಯಾವುದಾದರೋ ಯೂನಿಕೋಡ್ ಟೆಕ್ಸ್ಟ್ ಎಡಿಟರ್‌ನಲ್ಲಿ ಅಂಟಿಸಿ, ಮತ್ತೆ ಅಲ್ಲಿಂದ ಕಾಪಿ ಮಾಡಿ ವಿಕಿಪೀಡಿಯಾದಲ್ಲಿ ಅಂಟಿಸಬಹುದು ಅಂತ! ಮುಂದೆ ಓದಿ »

- ಶಶಾಂಕ ರವರ ಬ್ಲಾಗ್
- Login or register to post comments
- 498 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಹಳೇ ವಿಂಡೋಸ್‌ಗಳಿಗೆ ಐ.ಎಮ್.ಇ
November 26, 2006 - 8:50pm — ಶಶಾಂಕವಿಂಡೋಸ್ ೯೮ ಮತ್ತು ಎಮ್.ಇ ಗಳಲ್ಲಿ ಯೂನಿಕೋಡ್ ಸಪೋರ್ಟ್ ಇಲ್ಲ ಆದರೆ ಯೂನಿಕೋಡ್ ಪಾಂಟ್ ಇದ್ದಲ್ಲಿ ಯೂನಿಕೋಡ್‌ನಲ್ಲಿ ಬರೆದ ಅಂತರ್ಜಾಲ ಪುಟಗಳನ್ನು ಓದಬಹುದು. ಆದರೆ ಬರೆಯಲು ಯಾವುದೇ ತಂತ್ರಾಶಗಳಿಲ್ಲ, ಕೆಲವು ಆನ್‌ಲೈನ್ ಟೂಲ್ಸ್‌ಗಳನ್ನು ಬಿಟ್ಟರೆ. ಹಾಗಾಗಿ ನಾನೇ ಒಂದು ಐ.ಎಮ್.ಇಯನ್ನು ತಯಾರಿಸಿದ್ದೇನೆ. ಈ ಐ.ಎಮ್.ಇ ಮೂಲಕ ಯೂನಿಕೋಡ್‌ನಲ್ಲಿರುವ ಎಲ್ಲಾ ಭಾರತದ ಭಾಷೆಗಳಲ್ಲಿ ಯಾವುದೇ ಅಂತರ್ಜಾಲ ಪುಟದಲ್ಲಿ ಬರೆಯಬಹುದಾಗಿದೆ. ಇದು ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಮಾತ್ರ ಕೆಲಸ ಮಾಡುತ್ತದೆ. ಮುಂದೆ ಓದಿ »


RSS: