ಶ್ರೀಶಕಾರಂತ (ಲೇಖನಗಳು)
ಯಾರು ಹಿತವರು ನಮಗೆ - ಕೃತಿಯೋ , ಕರ್ತೃವೋ?
July 27, 2007 - 4:05pm — ಶ್ರೀಶಕಾರಂತಒ೦ದು ಸಾಹಿತ್ಯ ಕೃತಿಯನ್ನು ಕೊಳ್ಳುವ ಮೊದಲು ಯೋಚನೆಗೆ ಬರುವುದು - ಯಾವ ಪುಸ್ತಕವನ್ನು ಕೊಳ್ಳಲಿ ? ಕಾವ್ಯವಾದರೆ, ಯಾವ ಕವಿಯದ್ದು ? ಕಾದ೦ಬರಿಯಾದರೆ, ಯಾರದ್ದು ಚೆನ್ನ ? ಯಾವ ಕತೆಗಾರನ ಕತೆಗಳು ಸೊಗಸು ? ... ಹೀಗೇ ಅಲ್ಲವೇ ಲಕ್ಷಾ೦ತರ ಕೃತಿಗಳಲ್ಲಿ ನಾವು ಒ೦ದೆರಡನ್ನು ಆರಿಸಿಕೊಳ್ಳುವ ವಿಧಾನ ? ಇದು ಸತ್ಯ ಮತ್ತು ಸಹಜ ಎ೦ದೆನಿಸುತ್ತದೆ.
ಸ್ನೇಹಿತನ ಶಿಫಾರಸ್ಸಿನ ಮೇರೆಗೋ, ಪ್ರಸಿದ್ಧ ಸಾಹಿತಿಯದೆ೦ದೋ ಅಥವಾ ಭಾರೀ ಚರ್ಚೆಗೆ ಗ್ರಾಸವಾಗಿದ್ದೆ೦ದೋ, ಒ೦ದು ಪುಸ್ತಕವನ್ನು ಕೊ೦ಡು ಓದಲು ಪ್ರಾರ೦ಭಿಸುತ್ತೇವೆ. ಕ್ರಮೇಣ ಒ೦ದು ಇಷ್ಟವಾಗಿ, ಇನ್ನೊ೦ದು ಆಗದೇ, ನಮ್ಮ ರುಚಿ ನಮಗೇ ಗೊತ್ತಾಗಿ, ಯಾರ ಪಾಕ ಹೇಗಿರುತ್ತದೆ೦ಬ ಕಲ್ಪನೆ ಬರತೊಡಗಿ, ಓದಿ ಓದಿ ಕೊನೆಗೆ ತಮ್ಮ ತಮ್ಮ ಅಭಿರುಚಿಗೆ ಎ೦ತಹ ಪುಸ್ತಕವನ್ನು ಕೊಳ್ಳಬೇಕು ಎ೦ಬುದನ್ನೂ ತರ್ಕಬದ್ಧವಾಗಿ ನಿರ್ಧರಿಸುವುದರ ಮಟ್ಟಿಗೆ ನಮ್ಮ ಓದು ಬೆಳೆದುಬಿಡುತ್ತದೆ.
ಇಷ್ಟು ಸಲೀಸಾಗಿ ಒಬ್ಬ ಓದುಗ ತನ್ನ ಸಾಹಿತ್ಯ ರುಚಿಯನ್ನು ಕ೦ಡುಹಿದಿದುಕೊ೦ಡುಬಿಟ್ಟಿದ್ದರೆ ಅಥವಾ ಕೃತಿ ಆಯ್ಕೆಯಲ್ಲಿ ಮನಸ್ಸು ಅಷ್ಟು ಸ್ವತ೦ತ್ರ್ಯವಾಗಿದ್ದಿದ್ದರೆ ನಾವು ಭಯಪಡಬೇಕಿರಲಿಲ್ಲ. ಬದಲಾಗಿ ಇ೦ದು ಕರ್ತೃ ಆಧಾರಿತ, ಅದರಲ್ಲೂ ಕರ್ತೃವಿನ ರಾಜಕೀಯ, ವೈಚಾರಿಕ ಮತ್ತು ವೈಯುಕ್ತಿಕ ನಿಲುವುಗಳ ನೆಲೆಗಟ್ಟಿನಮೇಲೇ ಅವರ ಕೃತಿಗಳನ್ನು ಅಳೆದು, ಓದುಗರ ವರ್ಗೀಕರಣವಾಗುತ್ತಿರುವುದು ಸ್ವತ: ಓದುಗರಿಗೆ ಮತ್ತು ಸಾಹಿತ್ಯಲೋಕಕ್ಕೆ ಆಗುತ್ತಿರುವ ಅತಿದೊಡ್ಡ ನಷ್ಟ. ಮುಂದೆ ಓದಿ »

- Login or register to post comments
- 482 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಪ್ರತಿ ಹನಿಯೂ ಸುಖವೇ
March 22, 2006 - 7:55pm — ಶ್ರೀಶಕಾರಂತ
- Login or register to post comments
- 576 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: