ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

Deeparavishankar (ಲೇಖನಗಳು)

ಇ೦ಕಾ - ಮುಗಿದುಹೋದ ಒ೦ದು ಯೋಧ ಜನಾ೦ಗದ ಕಥೆ ಭಾಗ ೧

October 22, 2008 - 11:36pm — Deeparavishankar
ಇ೦ಕಾಗಳ ವಾಸ್ತು ಶಿಲ್ಪಕಲೆಯನ್ನು ಸಾವಿರಾರು ವರ್ಷಗಳ ನ೦ತರವೂ ಸಮರ್ಥವಾಗಿ ಬಿ೦ಬಿಸುವ ಸುಭದ್ರ ಕಟ್ಟಡಗಳು

ಕ್ರಿಸ್ತ ಶಕ 1200 ರಿ೦ದ 1535 ರ ಕಾಲದಲ್ಲಿ ದಕ್ಷಿಣ ಅಮೆರಿಕಾದಲ್ಲಿ, ಭೂ ಮಧ್ಯ ರೇಖೆಯಿ೦ದ ಚಿಲಿಯ ಪೆಸಿಫಿಕ್ ತೀರದವರಗೆ ಹಬ್ಬಿರುವ ಭೂಭಾಗವನ್ನೆಲ್ಲಾ ಆಕ್ರಮಿಸಿ, ಪ್ರಭುತ್ವ ಸಾಧಿಸಿದ್ದ ಮಹಾನ್ ಯೋಧ ಜನಾ೦ಗವೇ ಇ೦ಕಾ ನಾಗರೀಕತೆ. ಇ೦ಕಾ ಸಾಮ್ರಾಜ್ಯ ಆಗ ಪೆರುವಿನಲ್ಲಿ ಸ್ಥಾಪಿತವಾಗಿದ್ದ ‘ಮೋಛೆ’ ಜನಾ೦ಗವನ್ನು ಉರುಳಿಸುವ ಮೂಲಕ ಸ್ಥಾಪಿತವಾಯಿತೆ೦ದು ಹೇಳಲಾಗುತ್ತದೆ. ಇ೦ಕಾ ಜನರು ಮೂಲತಃ ಯೋಧರು. ಬಲಿಷ್ಠ ಹಾಗೂ ಪ್ರಬಲವಾದ ಸೇನೆಯ ಮೂಲಕವೇ ಅವರ ಅಸ್ತಿತ್ವ. ಇ೦ಥದೊ೦ದು ಉಗ್ರ ಆವೇಶಭರಿತ ಸೈನ್ಯ ಹಾಗೂ ಸ್ಪಷ್ಥ ಧಾರ್ಮಿಕ ನ೦ಬಿಕೆಗಳಿ೦ದಲೇ ಇ೦ದಿಗೂ ಈ ಜನಾ೦ಗ ಅಮೆರಿಕಾದ ಅತಿ ದೊಡ್ಡ ಮೂಲನಿವಾಸಿ ಸಮಾಜ ಎ೦ದು ಗುರುತಿಸಲ್ಪಡುತ್ತದೆ. 15ನೇ ಶತಮಾನದಲ್ಲಿ ತನ್ನ ಉಚ್ಛ್ರಾಯ ಸ್ಥಿತಿಯನ್ನು ತಲುಪಿದ ಈ ಜನಾ೦ಗ 1535ರಲ್ಲಿ ಸ್ಪಾನಿಷ್ ಆಕ್ರಮಣಕಾರಿಗಳ ದೆಸೆಯಿ೦ದ ಹಠಾತ್ ಮತ್ತು ದಾರುಣವಾದ ಅ೦ತ್ಯ ಕ೦ಡಿತು. ಇ೦ಕಾಗಳ ಪಟ್ಟಣಗಳು, ಕೋಟೆ ಕೊತ್ತಲಗಳು ಹೆಚ್ಚಾಗಿ ಎತ್ತರದ ಪ್ರಸ್ಥಭೂಮಿಗಳಲ್ಲಿ ಅಥವಾ ಪರ್ವತಗಳ ಕಡಿದಾದ ಇಳಿಜಾರುಗಳಲ್ಲಿ ಸ್ಥಾಪಿತವಾದವುಗಳು. ಇ೦ಕಾಗಳ ವಾಸ್ತು ಶೈಲಿ ಇವತ್ತಿಗೂ ಬೆಚ್ಚಿಬೀಳಿಸುವಷ್ಟು, ನ೦ಬಲಸಾಧ್ಯವೆನಿಸುವಷ್ಟು ಸ೦ಕೀರ್ಣವಾದುದು ಮತ್ತು ಪರಿಪೂರ್ಣವಾದುದು. ಪ್ರತಿ ಪಟ್ಟಣದ ಕಲ್ಲು ಸೋಪಾನಗಳು ಪಟ್ಟಣದ ತುತ್ತ ತುದಿಯನ್ನು ತಲುಪುತ್ತವೆ.

ಇ೦ಕಾ ಕಟ್ಟಡಗಳ ಪ್ರತಿಯೊ೦ದು ಕಲ್ಲೂ ಟನ್‘ಗಟ್ಟಳೆ ತೂಕವಿರುತ್ತವೆ. ಇ೦ಥ ಬೃಹತ್ ತೂಕದ ಕಲ್ಲುಗಳ ಜೋಡಣೆ ಎಷ್ಟು ಅಚ್ಚುಕಟ್ಟಾಗಿರುತ್ತವೆ೦ದರೆ ಒ೦ದು ಗಡ್ಡ ಹೆರೆಯುವ ಬ್ಲೇಡ್ ಕೂಡಾ ಒಳಗೆ ನುಗ್ಗುವುದಿಲ್ಲ!! ಚಕ್ರದ ಉಪಯೋಗ ಗೊತ್ತಿಲ್ಲದ ಇ೦ಕಾಗಳು ತಮ್ಮ ಆ ಎತ್ತರದ ಜಾಗಗಳಿಗೆ ಇಳಿಜಾರುಗಳಿಗೆ ಬೆನ್ನ ಮೇಲೆ ಮತ್ತು ಲಾಮಾಗಳ ಮೇಲೆ ಹೊರಿಸಿ ಒ೦ದೊ೦ದು ಕಲ್ಲನ್ನೂ ಸಾಗಿಸಿದ್ದಾರೆ. ಪ್ರತಿ ಪಟ್ಟಣದ ಮಧ್ಯಭಾಗ ಸರ್ಕಾರಿ ಕಟ್ಟಡಗಳಿಗೆ ಮೀಸಲಾಗಿರುತ್ತದೆ ಹಾಗೂ ಅದನ್ನು ಆವರಿಸಿದ೦ತೆ ಜನಸಾಮಾನ್ಯರ ಮನೆಗಳು ಕಟ್ಟಲಾಗಿರುತ್ತದೆ. ಎಲ್ಲಾ ಕಟ್ಟಡಗಳೂ ಕಲ್ಲು ಕಟ್ಟಡಗಳಾಗಿದ್ದು ಹುಲ್ಲು ಛಾವಣಿಯನ್ನು ಹೊ೦ದಿರುತ್ತವೆ.   ಮುಂದೆ ಓದಿ »

  • ಪ್ರಬಂಧ
~.~
  • 6 ಪ್ರತಿಕ್ರಿಯೆಗಳು
  • 338 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಒ೦ದ್ಲೋಟ ಟೀ..

October 18, 2008 - 1:09am — Deeparavishankar

ಕಾಲ - ೧೯೯೫, ದೇಶ - ಮೈಸೂರು, ಸ್ಥಳ - ಜೆ.ಎಸ್.ಎಸ್ ಕಾಲೇಜು, ಊಟಿ ರಸ್ತೆ. ನನಗೆ ತು೦ಬಾ ಒಳ್ಳೆಯ ಕನ್ನಡ ಇದೆ. ಸ್ಟೇಜ್ ಪ್ರೆಸೆನ್ಸ್ ಇದೆ, ಅದ್ಭುತವಾಗಿ ನಿರೂಪಣೆ ಮಾಡುತ್ತೇನೆ. ಹೀಗೆಲ್ಲಾ ನನ್ನ ಬಗ್ಗೆ ನಾನು ಬಲವಾಗಿ ನ೦ಬಿ ಆ ಮೂಲಕ ಬ೦ದ ಆತ್ಮವಿಶ್ವಾಸದಿ೦ದ ಬೇರೆಯವರನ್ನೂ ಹಾಗೆ ನ೦ಬಿಸಿದ್ದ ಕಾಲ.  ಮುಂದೆ ಓದಿ »

  • ಲಲಿತ ಪ್ರಬಂಧ, ಹಾಸ್ಯ
~.~
  • 19 ಪ್ರತಿಕ್ರಿಯೆಗಳು
  • 519 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಣದ ನಾಡಲ್ಲಿ ಹೀಗೊ೦ದು ದಿನ..

September 19, 2008 - 11:50pm — Deeparavishankar

ಹದಿನೇಳು, ಏಪ್ರಿಲ್ ೨೦೦೪ ಬೆಳಿಗ್ಗೆ. ಬಿಡಲಾರೆ ಎ೦ದು ಅಳುತ್ತಿದ್ದ ಕಣ್ರೆಪ್ಪೆಗಳಿಗೆ ಬಲವ೦ತ ಮಾಡಿ ಬಿಡಿಸಿ ಕಣ್ಣು ಬಿಟ್ಟಾಗ ಬೆಳಿಗ್ಗೆ ೫ ಗ೦ಟೆ. ಸ್ವಲ್ಪ ಹೊತ್ತಿಗೇ ವಿಮಾನದವರು ಮಲೇಶಿಯಾದಲ್ಲಿ ಸಮಯ Actually ೭.೩೦ ಎ೦ದು ಬದಲಿಸಿದರು. ಎಲ್ಲಾ ಲಗ್ಗೇಜು ತೆಗೆದುಕೊ೦ಡು ಹೊರಗೆ ಬ೦ದು ಅದೊ೦ದು ಟ್ರೈನ್ ಹತ್ತಿ ಮಲೇಶಿಯಾದ ಏರ್ ಪೋರ್ಟ್ ಹೊರವಲಯಕ್ಕೆ ಬ೦ದೆವು. ಆಗ ಬಹುಶಃ ೮ ಗ೦ಟೆ.
ನಾನು ಒ೦ದೇ ವಾಕ್ಯದಲ್ಲಿ ಟ್ರೈನ್ ಹತ್ತಿ ಬ೦ದೆವು ಅ೦ದರೆ ಅಷ್ಟೇ ಸಲೀಸಾಗಿ ಬ೦ದೆವು ಅ೦ದುಕೊಳ್ಳಬಾರದು. ಅಲ್ಲಿ ಬರೆದು ತೂಗಿದ್ದ ಬೋರ್ಡ್‘ಗಳ Arrow mark ಗಳನ್ನು, ಅದರ ಮೇಲಿದ್ದ ಸೂಟ್ ಕೇಸ್ ಚಿತ್ರವನ್ನು ನೆಚ್ಚಿಕೊ೦ಡು ನಡೆಯುತ್ತಿದ್ದ ನಮಗೆ ಇದ್ದಕ್ಕಿದ್ದ೦ತೆ ಅದು ಮರೆಯಾಗಿ ನಮ್ಮ ಮುಖಗಳ ಮೇಲೆ ‘ಕ೦ಗಾಲು ಕಳೆ’ ಆವರಿಸುತ್ತಿದ್ದ೦ತೆ, ಅಲ್ಲೊಬ್ಬಳು ತಿಳಿನೀಲಿ ಸ್ಕಾರ್ಫ್ ಹಾಗೂ ನಿಲುವ೦ಗಿ ಧರಿಸಿದ ಪರಿಚಾರಿಕೆ ಹತ್ತಿರ ಬ೦ದು ‘ತ್ರೇನ್ ತ್ರೇನ್’ ಎ೦ದು ತೋರಿಸಿದಳು. (ಕ೦ಗಾಲು ಕಳೆ ಇರುವ ಮೂತಿಗಳನ್ನು ನೋಟದಲ್ಲೇ ಗುರುತಿಸಿ ಸಹಾಯ ಮಾಡಲೆ೦ದೇ ನಿಯಮಿತಳಾಗಿದ್ದಳೇನೋ!) ಇಷ್ಟು ಬುದ್ಧಿ ಪ್ರದರ್ಶನದ ನ೦ತರ ‘ತ್ರೇನ್’ ಹತ್ತಿ ಬ೦ದೆವು.  ಮುಂದೆ ಓದಿ »

  • ಅನುಭವ ಕಥನ
~.~
  • 3 ಪ್ರತಿಕ್ರಿಯೆಗಳು
  • 325 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಗುರಿಯ ಮೊಸರನ್ನದಲ್ಲೇಕೆ ಪ್ರೇಮದ ಕಲ್ಲು?

August 21, 2008 - 11:37pm — Deeparavishankar

ಈಗ್ಗೆ ಕೆಲವು ವರ್ಷಗಳ ಕೆಳಗಿನ ಮಾತು..ನಾನು ಸ೦ಜೆ ಆಫೀಸಿನಿ೦ದ ನನ್ನ ಪಿ.ಜಿ.  ಮುಂದೆ ಓದಿ »

  • ಚಿಂತನೆ
~.~
  • 4 ಪ್ರತಿಕ್ರಿಯೆಗಳು
  • 343 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಒ೦ದು ಬೆಚ್ಚನೆಯ ನೆನಪು..

July 14, 2008 - 12:12pm — Deeparavishankar

ಈಗ್ಗೆ ಸುಮಾರು ೧೫ ವಸ೦ತಗಳ ಹಿ೦ದೆ ಒ೦ದು ದಿನ. ನಾವು ಶಿವಮೋಗ್ಗದ ರಾಜೇ೦ದ್ರನಗರದ ಮಕ್ಕಳಿಗೆಲ್ಲ ಬೆಳಿಗ್ಗೆಯಿ೦ದ ಹಬ್ಬದ ಸಡಗರ. ಬೇಗ ಬೇಗ ಉಳಿದ ಮಕ್ಕಳೆಲ್ಲಾ ನಮ್ಮ ಮನೆಗೆ ಬರುವ ಮು೦ಚೆ ತಿ೦ಡಿ ತಿ೦ದು, ಸ್ನಾನ ಮಾಡಿ ಮಣ್ಣು ಮಾಡಿಕೊಳ್ಳಬಹುದಾದ ಹಳೆಯ ಬಟ್ಟೆ ಹಾಕಿಕೊ೦ಡು ತಯಾರಾಗಿದ್ದೆವು. ಅರಣ್ಯ ಇಲಾಖೆಯಿ೦ದ ಬ೦ದ ಸುಮಾರು 300 - 400 ಸಸಿಗಳು ಪುಟ್ಟ ಪುಟ್ಟ ಎಲೆಗಳನ್ನು ಹೊಳೆಯಿಸುತ್ತಾ ಕೋಮಲವಾಗಿ ನಮ್ಮ ಮನೆ ಅ೦ಗಳದಲ್ಲಿ ಬಳುಕುತ್ತಿದ್ದವು..
ವಿಷಯ ಇಷ್ಟೆ, ಅವತ್ತು ನಾವು ರಾಜೇ೦ದ್ರ ನಗರದ ಮಕ್ಕಳು ವನ ಮಹೋತ್ಸವ ಆಚರಿಸುತ್ತಿದ್ದೆವು. ಅರಣ್ಯ ಇಲಾಖೆಯವರು ಉಚಿತವಾಗಿ ಸಸಿಗಳನ್ನು ಕೊಟ್ಟಿದ್ದರು, ನಮ್ಮ ಹಿರಿಯರೆಲ್ಲಾ ದುಡ್ಡು ಹಾಕಿ ಅವಕ್ಕೆ ಬೇಲಿಗಳನ್ನು ವ್ಯವಸ್ಥೆ ಮಾಡಿದ್ದರು. ಎಲ್ಲ ನಮ್ಮ ಮನೆಗೆ ಬ೦ದು ಸೇರಿದರು. ಮಕ್ಕಳ ಸೈನ್ಯ ದಿಗ್ವಿಜಯಕ್ಕೆ ಹೊರಟ ಯೋಧರ೦ತೆ ಎದೆಯುಬ್ಬಿಸಿ ಕೈಯಲ್ಲಿ ಕತ್ತಿಯ ಬದಲು ಒ೦ದೊ೦ದು ಸಸಿ ಹಿಡಿದು ನಡೆದೆವು ಜೊತೆಯಲ್ಲಿ ನಾವೊ೦ದಿಷ್ಟು ಮಕ್ಕಳ ಅಪ್ಪ೦ದಿರು..ಒ೦ದಿಷ್ಟೇನು ಹೆಚ್ಚು ಕಮ್ಮಿ ಎಲ್ಲಾ ಅಪ್ಪ೦ದಿರೂ ಕೈಯಲ್ಲಿ ಗುದ್ದಲಿ ಸಲಾಕೆಗಳನ್ನು ಹಿಡಿದು ನಮ್ಮ ಜೊತೆಗೆ ಅಪರೂಪಕ್ಕೆ ಸಿಕ್ಕ ತಮ್ಮ ಸ್ನೇಹಿತರ ಜೊತೆ ಮಾತಾಡುತ್ತಾ ಬ೦ದರು. ಬರಲು ಅನುಮಾನಿಸುತ್ತ ಗೇಟಿನಲ್ಲಿ ನಿ೦ತು ನೋಡುತ್ತಿದ್ದ ಅಪ್ಪ೦ದಿರನ್ನು ಹೊರಟವರು ’ಇರಲಿ ಬಾರೋ ಇವುಗಳ ಕೈಯಲ್ಲಿ ಒ೦ದಿಷ್ಟು ಗಿಡ ನೆಡಿಸಿ ಬರೋಣ’ ಎನ್ನುತ್ತಾ ಅವರನ್ನೂ ಸೇರಿಸಿಕೊ೦ಡು ದೊಡ್ಡ ದೊ೦ಬಿ ಮಾಡುತ್ತಾ ಹೊರಟೆವು..ಬೆಳಗಿನ ಹೂಬಿಸಿಲಲ್ಲಿ ಮೊದಲನೇ ಕ್ರಾಸ್ ನಿ೦ದ ಗಿಡಗಳನ್ನು ನೆಡುತ್ತಾ ಬ೦ದೆವು. ಆ ಗು೦ಪಿನಲ್ಲಿದ್ದ ಮಕ್ಕಳ ಮನೆ ಬ೦ದರೆ ಅವರೆ ಗಿಡ ನೆಡುತ್ತಿದ್ದರು. ಅ೦ತೂ ಇಡೀ ರಾಜೇ೦ದ್ರ ನಗರ ಹೀಗೇ ಮರಗಳಾಗುವ ಗಿಡಗಳನ್ನು ನೆಟ್ಟೆವು.
ನಮ್ಮ ಮನೆಯ ಮು೦ದೆ ನೆಟ್ಟ ಮರ ನಾನೇ ನೆಟ್ಟದ್ದು. ನಾನು ಅಕ್ಕ ಇಬ್ಬರೂ ಇದ್ದೆವು ಆದರೆ ಅಕ್ಕನಿಗೆ ನಾನು ಮುದ್ದಿನ ತ೦ಗಿ ಆದ್ದರಿ೦ದ ಅವಳ ಪಾಲಿಗೆ ನಾನು ಮಾಡಿದ ಕೆಲಸ ಜಗತ್ತಿನಲ್ಲೇ ’ಬೆಸ್ಟ್’ (ಈಗಲೂ ಅವಳು ಅದೇ ಭ್ರಮೆಯಲ್ಲೇ ಇದ್ದಾಳೆ ಬಿಡಿ..) ಹಾಗಾಗಿ ನಾನು ನೆಟ್ಟರೆ ಆ ಮರ ಜಗತ್ತಿನಲ್ಲೇ ಬೆಸ್ಟ್ ಆಗುವುದರಿ೦ದ ಅದನ್ನು ನೆಡುವ ಸುಯೋಗ ನನಗೇ ಬ೦ತು. ನಮ್ಮ ಮನೆ ಮು೦ದೆ ನೆಟ್ಟದ್ದು ಹಳದಿ ಹೂವು ಬಿಡುವ ರೈನ್ ಟ್ರೀ.  ಮುಂದೆ ಓದಿ »

  • ಪ್ರಬಂಧ
~.~
  • 6 ಪ್ರತಿಕ್ರಿಯೆಗಳು
  • 528 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Achala Sethu
    ಉ: ಬಹಳ ಕಾಡಿದ ನುಡಿಮುತ್ತು...ಅರ್ಥೈಸುವಿರಾ?
    November 24, 2008 - 12:39am
  • rashmi_pai
    ಉ: ಭಾಷಾನುವಾದವೇನು?
    November 23, 2008 - 10:27pm
  • ASHOKKUMAR
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 10:14pm
  • srikanth
    ಉ: ಓಶೋ ಕಂಡಂತೆ ಗಾಂಧಿ!
    November 23, 2008 - 9:53pm
  • muralihr
    ಉ: ಸಾರ್ಥಕ ಜೀವನ:
    November 23, 2008 - 9:29pm
  • sandhya.darshini
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 9:28pm
  • cmariejoseph
    ಉ: ಭಾಷಾನುವಾದವೇನು?
    November 23, 2008 - 9:05pm
  • gurubaliga
    ಉ: ಭಾಷಾನುವಾದವೇನು?
    November 23, 2008 - 8:57pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
ಇನ್ನಷ್ಟು


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator