Pradyumna Belavadi (ಚರ್ಚೆಯ ವಿಷಯಗಳು)
ನಮ್ಮ ನಿಜವಾದ ಶತೃ ಯಾರು?
November 10, 2007 - 12:55am — Pradyumna Belavadiಭಾರತ-ಅಮೆರಿಕದೊಡಗಿನ ಪರಮಾಣು ಸಂಧಾನ ಯತ್ನಕ್ಕೆ ಅನೇಕರು ವಿರೋಧಿಸುತ್ತಿದ್ದಾರೆ. ಅದರಲ್ಲಿ, ಸ್ವಯಂ ಘೋಷಿತ ಬಡವರ ಬಂಧು ಎಡರಂಗ ಮತ್ತು ಹಿಂದೂ ಉದ್ಧಾರಕ ಭಾರತೀಯ ಜನತಾ ಪಕ್ಷಗಳ ಮಾತು ಕೇಳಿ ಬರುತ್ತಿವೆ.
ಬಿಜೆಪಿಗೆ ಇದೊಂದು ಸಂಧಿಗ್ಧ ಪರಿಸ್ಥಿತಿ. ಅಧಿಕಾರದಲ್ಲಿದ್ದಾಗ ತಾವೇ ಶುರು ಮಾಡಿದ ಕಾರ್ಯವನ್ನು ವಿರೋಧಿಸಲು ಸಾಕಷ್ಟು ಒದ್ದಾಟ ಅನುಭವಿಸುತ್ತಿದ್ದಾರೆ. ಹಾಗಾಗಿ, ಅವರ ಮಾತುಗಳು ಕೇವಲ ವಿರೋಧ ಪಕ್ಷದ ದುರ್ಬಲ ಅನಿಸಿಕೆಗಳಾಗಿ ಕಂಡು ಬರುತ್ತಿದೆ. ಮತ್ತೆ, ಅವರ ಮಾತುಗಳನ್ನು ಯಾರೂ ಹೆಚ್ಚು ಗಂಭೀರವಾಗಿ ಕೂಡ ತೆಗೆದುಕೊಳ್ಳುತ್ತಿಲ್ಲ. ನನಗೆ ಅನ್ನಿಸುವ ಹಾಗೆ, ಬಿಜೆಪಿಯ ಉದ್ದೇಶ UPA ಮತ್ತು ಎಡರಂಗಗಳ ಮಧ್ಯೆ ಒಡಕನ್ನುಂಟು ಮಾಡುವುದೇ ಆಗಿದೆ.
ಆದರೆ ವಿರೋಧದ ಮುಂಚೂಣಿಯಲ್ಲಿರುವ ಎಡರಂಗ ಈ ವಿಷಯವನ್ನು ಕೇವಲ ತತ್ವ ಬದ್ಧ ಕಾರಣಗಳಿಗಾಗಿ ಮಾತ್ರವಲ್ಲದೆ, UPA ಸರ್ಕಾರವನ್ನು ಹದ್ದಿನಲ್ಲಿಡುವ ತರ್ಕ ಬದ್ಧ ಕಾರಣಗಳೇ ಮುಖ್ಯವಾಗಿದೆ. ದೇಶದ 'ಹಿತ'ದೃಷ್ಟಿಯಿಂದ ಈ ಸಂಧಾನವನ್ನು ವಿರೋಧಿಸುತ್ತಿರುವುದಾಗಿ ಹೇಳುತ್ತಿರುವ ಎಡರಂಗದ ಮಾತು ಹಾಸ್ಯಾಸ್ಪದ ಎನಿಸುತ್ತಿದೆ. ಇದುವರೆವಿಗೂ, ಕಾರ್ಮಿಕರ, ರೈತರ ಪರವಾಗಿ ಕೂಗಾಡುತ್ತಿದ್ದವರಿಂದ ದೇಶದ ಕಳಕಳಿಯ ಬಗ್ಗೆ ಮಾತು ಕೇಳುತ್ತಿರುವುದು ಎಲ್ಲರೂ ಕುತೂಹಲದಿಂದ ಗಮನಿಸುವಂತೆ ಮಾಡಿದೆ. ಮುಂದೆ ಓದಿ »





RSS: