anupkumart (ಬ್ಲಾಗ್ ಬರಹಗಳು)
ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
September 4, 2008 - 12:12pm — anupkumart
ಗುಡಿಗಳದನೆಷ್ಟೊ ಕಟ್ಟಿಹೆವು,
ಹಾಲುತುಪ್ಪವದೆಷ್ಟೊ ಚೆಲ್ಲಿಹೆವು,
ಅಕ್ಕಿಸಕ್ಕರೆಯದೆಷ್ಟೊ ಎರಚಿಹೆವು,
ಬಾಳೆವೀಳ್ಯವದೆಷ್ಟೊ ಮುರಿದಿಹೆವು!
ಜನ್ಮಾಷ್ಟಮಿ ಜಯಂತಿಗಳೆಷ್ಟೊ
ಆಗ ಉರುಳು-ಸಾಷ್ಟಾಂಗಗಳೆಷ್ಟೊ!
ಪ್ರಾರ್ಥನೆಯದೇನು ಬರೀ ನಾಮ ಸ್ತೋತ್ತ್ರ
ಪೂಜೆಯೆಲ್ಲಾ ಪ್ರೋಕ್ಷಣೆ ನೇವೇದ್ಯ ಮಂತ್ರ !
ಉಳ್ಳವರ ಒಪ್ಪತ್ತು ದೇವನನೊಲಿಸುವ ಪರಿಯೈ?
ದೀನರ ಒಪ್ಪತ್ತಿಗೆ ದೇವನೊಲಿಯದಿರುವನೈ? ಮುಂದೆ ಓದಿ »

ಕನ್ನಡದಲ್ಲಿ ಬರೆದ mnc bank cheque .. not accepted ಅಂತೆ !
August 12, 2008 - 11:45am — anupkumartಕಳೆದ ವಾರ ಕನ್ನಡದಲ್ಲಿ ಬರೆದ mnc bank cheque ನನಗೇ ವಾಪಸ್ ಬಂದಿತು. "Not accepted" ಎಂಬ ದುರ:ಂಕಾರದ ಉತ್ತರವಿತ್ತು ! ನಮ್ಮ ನಾಡಿನಲ್ಲಿ ನಮ್ಮ ಭಾಷೆಗೆ ದೊರೆಯುತ್ತಿರುವ ಉತ್ತರವಿದು ! ಮುಂದೆ ಓದಿ »

ಮೊಗ್ಗಿನ ಮನಸು.. ಉತ್ತಮವಾದ ಸಂದೇಶ
July 25, 2008 - 11:21am — anupkumartಕನ್ನಡದಲ್ಲಿ ’ಸಮಾಜಕ್ಕೆ ಸಂದೇಶವನ್ನು ರವಾನಿಸುವ’ ಸಿನಿಮಾ ಅತೀ ವಿರಳ ಎಂದರೆ ತಪ್ಪಾಗಲಾರದು. ಮಚ್ಚು, ಲಾಂಗು, ದುರ್ಭಾಷೆ, ಅರೆನಗ್ನ ಸಂಸ್ಕೃತಿಯನ್ನು ನಿರ್ಭಯವಾಗಿ ಸಾರುತ್ತಿರುವ ಸಿನಿಮಾಲೋಕದಲ್ಲಿ ಈಗೀಗ ಒಂದು ಮೊಗ್ಗು ಅರಳಿದ. ಮುಂದೆ ಓದಿ »

- anupkumart ರವರ ಬ್ಲಾಗ್
- Login or register to post comments
- 173 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮೌನವೇ ಸೃಷ್ಟಿಯೊಳಿರದಿರೆ ನೀನು... ಬೇರೆಲ್ಲಿಯೂ ನೀನಿಲ್ಲ
July 13, 2008 - 12:05pm — anupkumartಕಳೆದ ವಾರ ಮಡಿಕೇರಿಯ ತಲಕಾವೇರಿಯಲ್ಲಿ ಮಳೆಗಾಲದ ದಿನಗಳಾದ್ದರಿಂದ ಮೋಡಗಳು ರಾಶಿರಾಶಿಯಾಗಿ ಮುಗಿಲನ್ನೂ ಬೆಟ್ಟ ಕಾಡು ಕಣಿವೆಗಳನ್ನೂ ತುಂಬಿಕೊಂಡಿದ್ದವು. ಮೊದಲ ಮಳೆಗಳು ಸುರಿದು ಸುತ್ತಲಿನ ಹಸುರೆಲ್ಲಾ ತೊಯ್ದು ನವಚೇತನದಿಂದ ಪ್ರಶಾಂತದಲ್ಲೇ ರಾರಾಜಿಸುತ್ತಿತ್ತು. ಮುಂದೆ ಓದಿ »

- anupkumart ರವರ ಬ್ಲಾಗ್
- Login or register to post comments
- 161 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ತಿರಿಚಿ ಬರೆದ ಇತಿಹಾಸ ...
September 2, 2007 - 11:54pm — anupkumart
ಎಸ್ ಎಲ್ ಭೈರಪ್ಪನವರು NCERT ಸಭೆಯ ಸದಸ್ಯರಾಗಿದ್ದಾಗ ಇತಿಹಾಸದ ಪಠ್ಯಪುಸ್ತಕಗಳು ಹೇಗಿರಬೇಕೆಂಬುದನ್ನು ಆಗಿನ ಕಾಂಗ್ರೆಸ್ ನವರು ನಿರ್ಧರಿಸುತ್ತಿದ್ದುದಾಗಿಯೂ, ಅದಕ್ಕೆ ಭೈರಪ್ಪನವರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದುದಾಗಿಯೂ ತಿಳಿಸಿದ್ದಾರೆ.
ಇವುಗಳಲ್ಲಿ ಪ್ರಮುಖವಾದುವು:
೧. ಭಾರತೀಯ ಸಂಸ್ಕೃತಿಯ ಮೇಲೆ ಹೊರಗಿನವರ ದಾಳಿ ಮುಂದೆ ಓದಿ »



RSS: