ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › User account

apr (ಲೇಖನಗಳು)

ಬರುತ್ತಿದೆ ಬಾನ ನಾಟಕ - ಸೂರ್ಯಗ್ರಹಣ

July 29, 2008 - 9:23pm — apr
ಸೂರ್ಯಗ್ರಹಣದ ಮನಮೂಹಕ ದೃಶ್ಯ

ಮುಂದಿನ ಶುಕ್ರವಾರ (1.8.2008) ಸಂಜೆ ನಾಲ್ಕರಿಂದ ಐದು ಗಂಟೆಯ ನಡುವೆ ಒಂದು ಸುಂದರ ಬಾನನಾಟಕ ನಿಮಗಾಗಿಯೋ ಎನ್ನುವಂತೆ ನಿಸರ್ಗ ಪ್ರದರ್ಶಿಸಲಿದೆ. ಮೋಡ ಮತ್ತು “ಮುಂಗಾರು ಮಳೆ”ಯ ಕಿರಿಕಿರಿ ಇಲ್ಲದೇ ಹೋದರೆ ನೀವು ಅದನ್ನು ಎಚ್ಚರಿಕೆಯಿಂದ ನೋಡಿ ಆನಂದಿಸಬಹುದು. ಅಂದು ಸಂಜೆ ಸೂರ್ಯನ ಸ್ವಲ್ಪಾಂಶ ಮರೆಯಾಗುವ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಲಿದೆ.
ನಿಮಗೆ ಗೊತ್ತು, ಬೆಳಕು ಪಾರದರ್ಶಕ ಗಾಜಿನ ಮೂಲಕ ಹಾದು ಹೋದರೆ ನೆರಳು ಉಂಟಾಗದು. ಆದರೆ ಅಪಾರದರ್ಶಕ ವಸ್ತುವಿನ ಮೇಲೆ ಪಾತವಾದಾರೆ? ವಸ್ತು ಬೆಳಕನ್ನು ತಡೆಯುತ್ತದೆ - ಇನ್ನೊಂದು ಬದಿಯಲ್ಲಿ ನೆರಳು ಉಂಟಾಗುತ್ತದೆ. ಸೂರ್ಯನ ಬಿಸಿಲಿನಲ್ಲಿ ಗಿಡ ಮರಗಳ ನೆರಳು ಉಂಟಾಗುವುದು ಹೀಗೆಯೇ. ಇವು ಭೂಮಿಯಲ್ಲಿ ಬೆಳಕಿನ ನೆರಳಿನಾಟ. ಇಂಥದೇ ನೆರಳಿನಾಟ ಬಾನಾಂಗಣದಲ್ಲಿ ಸಂಭವಿಸಿದಾಗ ಚಂದ್ರ ಗ್ರಹಣ ಅಥವಾ ಸೂರ್ಯಗ್ರಹಣ ಘಟಿಸುತ್ತದೆ.
ಕತ್ತಲೆ ಕೋಣೆಯಲ್ಲಿ ಮೇಣದ ಬತ್ತಿ ಇದೆ ಎಂದು ಊಹಿಸಿಕೊಳ್ಳಿ. ಅದರೆದುರು ಒಂದು ಅಪಾರದರ್ಶಕ ಚೆಂಡನ್ನು ಹಿಡಿದಿದ್ದೀರಿ. ಚೆಂಡಿನ ನೆರಳು ಬೀಳುತ್ತಿದೆ ಗೋಡೆಯ ಮೇಲೆ. ಮೇಣದ ಬತ್ತಿ ಮತ್ತು ಚೆಂಡನ್ನು ಜೋಡಿಸುವ ರೇಖೆಯ ಭಾಗದಲ್ಲಿ ನೆರಳು ಅತ್ಯಂತ ಗಾಢವಾಗಿದ್ದರೆ, ಉಳಿದ ಭಾಗದಲ್ಲಿ ಅರೆ ನೆರಳು ಮುಸುಕಿರುತ್ತದೆ. ವಿಜ್ಞಾನದ ಭಾಷೆಯಲ್ಲಿ ಗಾಢ ನೆರಳಿನ ಭಾಗವನ್ನು “ಅಂಬ್ರ” ಎಂದೂ, ಅರೆ ನೆರಳಿನ ಭಾಗವನ್ನು “ಪಿನಂಬ” ಎಂದೂ ಕರೆಯುತ್ತೇವೆ. ಅಂಬ್ರದ ಭಾಗದಿಂದ ನಿಮಗೆ ಮೇಣದ ಬತ್ತಿ ಗೋಚರಿಸದು. ಏಕೆಂದರೆ ಮೇಣದ ಬತ್ತಿಯನ್ನು ಚೆಂಡು ಸಂಪೂರ್ಣ ಮರೆಮಾಡಿರುತ್ತದೆ.  ಮುಂದೆ ಓದಿ »

  • ಜ್ಞಾನವಾಹಿನಿ
~.~
  • 2 ಪ್ರತಿಕ್ರಿಯೆಗಳು
  • 260 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಆಧುನಿಕ ಖಗೋಲವಿಜ್ಞಾನದ ಗೆಲಿಲಿಯೋ - ಫ್ರೆಡ್ ಹಾಯ್ಲ್

July 28, 2008 - 11:32pm — apr
ಉಪನ್ಯಾಸಕ ಯಾಯ್ಲ್

ಸದಾ ತೀವ್ರ ಬೌಧ್ಧಿಕ ವಾದ ವಿವಾದಗಳಲ್ಲಿ ನಿರತರಾಗಿರುತ್ತ, ಉತ್ಸಾಹದ ಬುಗ್ಗೆಯಾಗಿದ್ದ ಸುಪ್ರಸಿದ್ಧ ಖಗೋಳ ವಿಜ್ಞಾನಿ ಫ್ರೆಡ್ ಹಾಯ್ಲ್ ಅಗೋಸ್ತ್ 20, 2001 ರ೦ದು ನಿಧನರಾದಾಗ ಬ್ರಿಟಿಷ್ ಬ್ರಾಡ್ ಕಾಸ್ಟಿ೦ಗ್ ಕ೦ಪೆನಿ (BBC) ಬಿತ್ತರಿಸಿತು : " ವಿಶ್ವದ ಉಗಮವನ್ನು ವಿವರಿಸುವ ಸಿದ್ಧಾ೦ತಕ್ಕೆ " ಬಿಗ್ ಬ್ಯಾ೦ಗ್ " (Big Bang) ಎ೦ಬ ಸು೦ದರ ಹೆಸರನ್ನು ಟ೦ಕಿಸಿದ ಶ್ರೇಷ್ಟ ಬ್ರಿಟಿಷ್ ಖಗೋಳ ವಿಜ್ಞಾನಿ ಹಾಯ್ಲ್ ನಿಧನರಾದರು. ಅವರಿಗೆ 86 ವಷ೯ ವಯಸ್ಸಾಗಿತ್ತು. ಯಾವ ಸಿದ್ಧಾ೦ತಕ್ಕೆ ಬಿಗ್ ಬ್ಯಾ೦ಗ್ ಎ೦ಬ ಹೆಸರಿತ್ತು ಅದರ ಅಭೂತಪೂರ್ವ ಜನಪ್ರಿಯತೆಗೆ ಕಾರಣರಾದರೊ, ಅದೇ ಸಿದ್ಧಾ೦ತವನ್ನು ತಮ್ಮ ಜೀವನದುದ್ದಕ್ಕೂ ಅವರು ಟೀಕಿಸಿದರು, ಪ್ರಶ್ನಿಸಿದರು."

ಹಾಯ್ಲ್ ಅವರ ಆಪ್ತ ಸ್ನೇಹಿತ ಮತ್ತು ಹಲವು ಸ೦ಶೋಧನೆಗಳಲ್ಲಿ ಸಹಭಾಗಿಯಾಗಿಯಾಗಿದ್ದ , ಇ೦ಗ್ಲ೦ಡಿನ ವೇಲ್ಸ್ ಕಾಲೇಜಿನಲ್ಲಿ ಗಣಿತ ವಿಭಾಗ ಮುಖ್ಯಸ್ಥರಾಗಿರುವ ಚ೦ದ್ರಾ ವಿಕ್ರಮ ಸಿ೦ಘೆ ಹೇಳುವಂತೆ "ಈ ವಿಶ್ವವನ್ನು ನಾವು ನೋಡುವ ದೃಷ್ಟಿಯನ್ನು ಕಳೆದ ನೂರು ವಷ೯ಗಳಲ್ಲಿ ಯಾವ ವಿಜ್ಞಾನಿಯೂ ಹಾಯ್ಲ್ ಅವರ೦ತೆ ಬದಲಾಯಿಸಿದರೆ೦ದು ನನಗನ್ನಿಸುವುದಿಲ್ಲ. "  ಮುಂದೆ ಓದಿ »

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • 3 ಪ್ರತಿಕ್ರಿಯೆಗಳು
  • 178 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

July 4, 2008 - 10:11pm — apr
ಜಿಟಿಏನ್

ಮೈಸೂರಿನ ೨೫೪೩೭೫೯ ಸಂಕ್ಯೆಗೆ ದೂರವಾಣಿ ಕರೆ ಮಾಡಿದರೆ, ನೀವಿನ್ನು ಎಂದಿನ ಗಂಭೀರ ಧ್ವನಿ "ನಮಸ್ಕಾರ, ಜಿ.ಟಿ.ನಾರಾಯಣರಾವ್" ಎಂದಿಗೂ ಕೆಳದು. ಸರಸ್ವತೀಪುರಂನಲ್ಲಿರುವ "ಅತ್ರೀ" ಮನೆಯ ಗೇಟನ್ನು ಮೆಲ್ಲಗೆ ತೆರೆದರೂ ಸಾಕು, ಮನೆಯೊಳಗಿಂದ ಹೊರ ಬಂದು, ಎರಡೂ ಕೈ ಜೋಡಿಸಿ ನಮಸ್ಕಾರ ಮಾಡುತ್ತ "ಸುಖ ಪ್ರಯಾಣವಾಯಿತೇ" ಎಂದು ಕೇಳಿ ಸ್ವಾಗತಿಸುತ್ತಿದ್ದ ಜಿ.ಟಿ.ನಾರಾಯಣ ರಾವ್, ಹೃಸ್ವವಾಗಿ ಜಿಟಿಎನ್ ಇನ್ನಿಲ್ಲ. "ಮುಗಿಯದ ಪಯಣ" ಕೃತಿಯ ಕರ್ತೃ ಇಹದ ಬಾಳಿನ ಪಯಣ ಮುಗಿಸಿ ವಿಶ್ವ ರಹಸ್ಯದಲ್ಲಿ ಲೀನವಾಗಿದ್ದಾರೆ.

ಜಿಟಿಎನ್ ಗುರುವಾರ (೨೬.೬.೨೦೦೮) ಸಂಜೆ ಸ್ನೇಹಿತರ ಮನೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಲೇಖನವನ್ನು ಕಂಪ್ಯೂಟರ್ ಪರದೆ ಮೇಲೆ ಓದುತ್ತ ಇದ್ದಾಗ "ಎಲ್ಲ ಮಂಜಾಗುತ್ತಿದೆ" ಎಂದರಂತೆ. ಮನೆಯವರು ಶರಬತ್ತು ಕೊಟ್ಟರು. ಕುಡಿದು ಮತ್ತೆ ಓದಲು ತೊಡಗುತ್ತಿದ್ದಂತೆ ನಿದ್ದೆಗೆ ಜಾರಿದರು. ಆ ನಿದ್ದೆ ಮಾತ್ರ ದೀರ್ಘ ನಿದ್ರೆಯಾಯಿತು. ಮತ್ತೆಂದೂ ಏಳದ ನಿದ್ರೆಯಾಯಿತು. ಈ ಭುವಿಯ ಯಾವ ಶಕ್ತಿಯೂ ಅವರನ್ನು ನಿದ್ದೆಯಿಂದ ಎಚ್ಚರಿಸಲು ಸಾಧ್ಯವಾಗದ ನಿದ್ದೆಯದು.
ಅವರಿಗೆ ಎಂಬತ್ತಮೂರರ ವಯಸ್ಸು. ವಯಸ್ಸಿಗೆ ಅನುಗುಣವಾಗಿ ದೇಹ ಕೃಷವಾಗಿತ್ತು - ಹಕ್ಕಿಯಂತಾಗಿತ್ತು. ಆದರೆ ಜೀವನೋತ್ಸಾಹ ಅದೇ ಇತ್ತು. ಜಿಟಿಎನ್ ಸ್ಮೃತಿ ಕಳೆದುಕೊಂಡ ಸುದ್ದಿ ಬಂದಾಗ ಅವರು ಮತ್ತೆ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆ ಇತ್ತು. ಏಕೆಂದರೆ ನಾಲ್ಕೈದು ವರ್ಷಗಳ ಹಿಂದೆ ಅವರ ದೇಹ ಸ್ಥಿತಿ ತೀರ ಹದಗೆಟ್ಟಿತ್ತು. ಆ ಸಂದರ್ಭದಲ್ಲಿ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದಾಗ ಅವರು ಹೇಳುತ್ತಿದ್ದರು "ಸೋರುತಿಹುದು ಮನೆಯ ಮಾಳಿಗೀ" ಅವರಿಗೆ ತಮಾಷೆ. ನಮಗೆ?ಮ್ಮ "ಮುಗಿಯದ ಪಯಣ" ದಲ್ಲಿ "ಯಮ ಸದನ ನೋಡಿ ಬಂದೆ" ಎಂಬ ಅಧ್ಯಾಯದಲಿ ಈ ಬಗ್ಗೆ ಬರೆದಿದ್ದಾರೆ. ಸಾವು ಬದುಕಿನ ಹೋರಾಟದಲ್ಲಿ ಜಯಶಾಲಿಯಾಗಿ ಮರಳಿದ ಜಿಟಿಎನ್ ಅವರಿಗೆ ನಾನು ಬರೆದೆ "ಜವರಾಯ ಬಂದರೂ ನಿಮ್ಮನ್ನು ಕರೆದೊಯ್ಯಲಿಲ್ಲ, ನಮಗಾಗಿ" ಆದರೆ ಈ ಬಾರಿ ಹಾಗಾಗಲೇ ಇಲ್ಲ. ಜವರಾಯ ತಣ್ಣಗೆ ಬಂದ ಯಾರಿಗೂ ಹೇಳದೇ - ಅವರನ್ನು ಓಯ್ದೇ ಬಿಟ್ಟ.
ಮೈಸೂರಿಗೆ ಧಾವಿಸಿ, ಅತ್ರಿ ಮನೆ ತಲುಪುವಾಗ ನಡು ಮಧ್ಯಾಹ್ನ. ಹೊರಗಡೆ ಜನರೋ ಜನರು. ಒಳಗೆ ಹಜಾರದಲ್ಲಿ ಜಿಟಿಎನ್ ಮಲಗಿದ್ದರು ಹೂವಿನ ರಾಶಿಯನ್ನೇ ಹೊದ್ದು. ಮೂಕದಲ್ಲೊಂದು ನಗುವಿನ ಸೆಳೆ. ಪಕ್ಕದ ಅವರ ಆಧ್ಯಯನ ಕೊಠಡಿಯಲ್ಲಿ ಪುಸ್ತಕಗಳ ರಾಶಿ. ಬಿಳಿ ಹಾಳೆಯ ಮೇಲೆ ಬರೆಡಿಟ್ಟ ಟಿಪ್ಪಣಿ, ಅತ್ರಿಸೂನು ಕವನದ ಸಾಲುಗಳು. ಎಲ್ಲವೂ ಇದ್ದುವು. ಆದರೆ ಇವೆಲ್ಲವುಗಳಿಗೆ ಅರ್ಥ ಕೊಡುವ, ಮಾತು ನೀಡುವ, ಚಿತ್ರವಾಗುವ, ರೂಪಕವಾಗುವ ಆ ಚೇತನ ಮಾತ್ರ ಅಲ್ಲಿರಲಿಲ್ಲ. ಅನಿಕೇತನ ಹುಡುಕುತ್ತ ಹೊರಟಿತ್ತೇ? ಗೊತ್ತಿಲ್ಲ.  ಮುಂದೆ ಓದಿ »

  • ಪ್ರಬಂಧ
~.~
  • Login or register to post comments
  • 197 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಮೊದಲ ಚಿತ್ರ
    September 6, 2008 - 5:14am
  • hpn
    ಉ: ಬಿಗುಮಾನದ ಚಿತ್ರಗಳು
    September 6, 2008 - 4:20am
  • hpn
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    September 6, 2008 - 2:53am
  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
ಇನ್ನಷ್ಟು


ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator