hene (ಬ್ಲಾಗ್ ಬರಹಗಳು)
ಪರವಲ್ ಪುರಾಣ
July 20, 2007 - 2:50pm — heneಫ್ರಿಜ್ಜು ಭಣಭಣ ಅನ್ನುತ್ತಿದ್ದ ಒಂದು ದಿನ. ಏನು ಅಡಿಗೆ ಮಾಡಲಪ್ಪಾ ಅಂತ ಯೋಚಿಸುತ್ತಿದ್ದೆ. ಇದನ್ನ ಯೋಚಿಸೋದು ಕವನ ಬರೆದಷ್ಟೇ ಕಷ್ಟ...ಅಥವಾ ಕೆಲವು ಸಲ ಸುಲಭ. ಆದರೆ ಈವತ್ತು ಕಷ್ಟದ ದಿನ. ಬೆಳಗಾತೆದ್ದು ದಿನಾ ಇದೇ ಮಂಡೆಬಿಸಿಯಾಯ್ತಲ್ಲ ಅಂತ ಅಂದುಕೊಳ್ಳೋದಕ್ಕೂ ಫೋನ್ ಬರೋದಕ್ಕೂ ಸರಿ ಹೋಯ್ತು. 'ಇವತ್ತು ಸಾಯಂಕಾಲ ನೀವಿಬ್ಬರೂ ಮನೇಲಿ ಇರ್ತೀರಾ?' 'ಹೂಂ ಇರ್ತೀವಿ, ಏನು, ಈ ಕಡೆ ಬರ್ತಿದೀರಾ?' 'ಹೌದು, ನಾನೂ ನನ್ನ ಸ್ನೇಹಿತಾನೂ ಬರೋಣ ಅಂತ ಇದ್ವಿ. ಆದ್ರೆ ನೀನು ಅಡಿಗೆ-ಗಿಡಗೆ ಏನೂ ಮಾಡೋಕೆ ಹೋಗ್ಬೇಡ, ಅಷ್ಟೊತ್ತು ನಾವು ಇರಲ್ಲ' 'ಅಯ್ಯೋ ಹಾಗಂದ್ರೆ ಹೇಗೆ, ಬಂದ ಮೇಲೆ ಊಟಮಾಡಿಕೊಂಡೇ ಹೋಗಿ' 'ಸರಿ ಹಾಗಾದ್ರೆ, ಸಂಜೆ ಸಿಗೋಣ' 'ಆಯ್ತು ಬನ್ನಿ.'
ಫೋನಿಟ್ಟೆ, ತಲೆ ಚಿತ್ರಾನ್ನ ಆಯ್ತು. ಫೋನ್ ಮಾಡಿದವರು ಅಪರೂಪದವರೇನು ಅಲ್ಲ. ಊರಿಗೆ ಬಂದಾಗೆಲ್ಲ ನಮ್ಮ ಮನೇಗೆ ಬರ್ತಿರ್ತಾರೆ. ಒಂದೇ ಟ್ರಿಪ್ಪಲ್ಲಿ ಎರಡು ಮ್+ಊ+ರು ಸಲ ಬಂದರೂ ಬಂದರೇ. ಆಗೊಂದು ಈಗೊಂದು ಸಿನೆಮಾ ತೆಗೆಯೋದು, ನಾಟ್ಕ ಆಡ್ಸೋದು, ಇನ್ನೂ ಏನೇನೋ ಮಾಡೋದು ಅವರ ಕೆಲಸ. ಆದರೆ ನಮಗೆ ಅವರೊಂಥರಾ घर की मुर्गी ಇದ್ದ ಹಾಗೆ (...दाल बराबर - ಹಿಂದಿಯಲ್ಲಿ ಹಿಂದುಳಿದವರಿಗೆ = ಸಾಕಿದ ಕೋಳಿ ಪುಳ್ಚಾರಿಗಿಂತ ಕಡೆ ಅಂತ). ಪರಿಪರಿಯಾಗಿ ಮಾಡಿ ಹಾಕಬೇಕಂತೇನೂ ಇಲ್ಲ. ಒಂದು ಅನ್ನ, ಪುಳ್ಚಾರೇ ಸಾಕು. ಜೀವಮಾನದಲ್ಲೇ ಇನ್ನು ಇಂಥ ಸಾರು ಸಿಗತ್ತೋ ಇಲ್ಲವೋ ಅನ್ನೋ ಥರ ಸುರಿದು ಉಂಡು ಬಟ್ಟಲು ಕೀಸಿ ಬೆರಳು ನೆಕ್ಕುವವರು. ಅಂಥದ್ದರಲ್ಲಿ ಅವರಿಗೊಂದು ಅಡಿಗೆ ಮಾಡಿ ಹಾಕುವುದೆಂದರೆ ಕಡಿಗೆ ಕೊಚ್ಚುವಷ್ಟು ದೊಡ್ಡ ಕೆಲಸವೇನೂ ಅಲ್ಲ. ಆದರೆ,ಅವರು ಸಿನೆಮಾ ಮಾಡೋಷ್ಟೇ ಸಲೀಸಾಗಿ ಸೌಂಟೂ ಹಿಡೀತಾರೆ, ರು..ಚ್ಚಿಯಾಗಿ ಅಡಿಗೇನೂ ಮಾಡ್ತಾರೆ! ಇಂಥಾ ನಳನಿರ್ದೇಶಕನಿಗೆ ಬರೀ ಒಂದು ಸಾರು ಮಾಡಿಹಾಕೋದೇ? ಸಾಧ್ಯವೇ ಇಲ್ಲ. ಮುಂದೆ ಓದಿ »








RSS: