kannadakanda (ಚರ್ಚೆಯ ವಿಷಯಗಳು)
ಮುಸುಱ್/ಮುಸುಱು
September 5, 2008 - 9:31am — kannadakandaಮುಸುಱ್, ಮುಸುಱು (ಕ್ರಿಯಾಪದ)=ಮುತ್ತು, ಆವರಿಸು, ಮುಗಿಬೀೞು
ಉದಾಹರಣೆ: ಸಕ್ಕರೆಗೆ ಇಱುವೆಗಳು ಮುಸುಱುತ್ತವೆ.
ಭೂತಕೃದ್ವಾಚಿ: ಮುಸುಱಿ
ವರ್ತಮಾನಕೃದ್ವಾಚಿ: ಮುಸುರ್ವ/ಮುಸುಱುವ

- Login or register to post comments
- 29 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ನರೆ
September 3, 2008 - 12:55am — kannadakandaನರೆ (ವಿಶೇಷಣ, ನಾಮಪದ)=ಮುಪ್ಪು,
ನರೆಗೂದಲು= ಮುಪ್ಪಿನ ಸಂಕೇತವಾದ ಬಿಳಿಗೂದಲು
ಉದಾಹರಣೆ
ನರೆ ಬಂದ ನರರ್ ಮೆಲ್ದಿರೆ
ತರುಣತ್ವಮನೆಯ್ದುವರ್
ಅಂದರೆ ಮುಪ್ಪು ಬಂದ ಮನುಷ್ಯರು ರುಚಿ ನೋಡಿದರೆ ಯೌವನವನ್ನು ಹೊಂದುವರು.

- Login or register to post comments
- 38 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಅರಲ್/ಅರಳ್
September 3, 2008 - 12:33am — kannadakandaಅರಲ್(ಕ್ರಿಯಾಪದ)=ವಿಕಾಸವಾಗು, ದೊಡ್ದದಾಗು. ಕೇಶಿರಾಜನ ಪ್ರಕಾರ ಲಾಂತ. ಆದರೆ ಹೊಸಗನ್ನಡದಲ್ಲಿ ಳಾಂತ.
ಭೂತಕೃದ್ವಾಚಿ: ಅರಲ್ದ/ಅರಳ್ದ/ಅರಲಿ/ಅರಳಿ
ಭವಿಷ್ಯತ್ಕೃದ್ವಾಚಿ: ಅರಲ್ವ/ಅರಳ್ವ/ಅರಲುವ/ಅರಳುವ
ಅರಲ್/ಅರಳ್ (ನಾಮಪದ)= ಹೂವು, ಭತ್ತ, ರಾಗಿ, ಜೋಳ ಮುಂತಾದುವನ್ನು ಹೆಚ್ಚಿನ ಶಾಖದಲ್ಲಿ ಕಾಯಿಸಿದಾಗ ವಿಕಾಸವಾದ ತಿನ್ನುವ ಪದಾರ್ಥ. ಮುಂದೆ ಓದಿ »

ಮೋದು
September 1, 2008 - 3:14pm — kannadakandaಮೋದು=ಗುದ್ದು, ಢಿಕ್ಕಿ ಹೊಡೆ. ಹೊಡೆ
ಉದಾಹರಣೆ ರನ್ನನ ಗದಾಯುದ್ಧದಿಂದ ಕುಳಿಕನ ಪಲ್ಗಳಂ ಕಿೞ್ತೆತ್ತಿ ಮೋದಿದರಾರ್
ಭೂತಕೃದ್ವಾಚಿ: ಮೋದಿ
ಭವಿಷ್ಯತ್ಕೃದ್ವಾಚಿ: ಮೋದುವ

ನೀಱೆ ಬೆಚ್ಚಿ ಬೆಱಗಾದಳು
September 1, 2008 - 1:17am — kannadakandaಕನ್ನೆ ನಕ್ಕಾಗ ಮೊಗದಾವರೆಯಿಕ್ಕೆಲಗಳ
ಕೆನ್ನೆಗಳೊಳ್ ಗುೞಿ ಮೂಡೆ
ಚೆನ್ನಾದುದೆಂದು ನಾ ಹರುಸದಿಂ ನೋಡಲು
ಕನ್ನೆ ಬೆಚ್ಚಿ ಬೆಱಗಾದಳು||

- Login or register to post comments
- 48 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: