keshav (ಬ್ಲಾಗ್ ಬರಹಗಳು)
ಒಂದಿಷ್ಟು ನೀಲುಗಳು
April 9, 2008 - 5:23am — keshav"ಮುಂದಿನ ಜನ್ಮ ಅಂತ ಒಂದಿದ್ದರೆ
ಗಂಡಿನ ಚಪಲ ಇರುವ ಹೆಣ್ಣಾಗಿ ಹುಟ್ಟಿಸಯ್ಯಾ"
ಅಂತ ಗಂಡ ಬರೆದ ಪದ್ಯ ಸಿಕ್ಕು
ಮದುವೆ ರ್ರೇಷ್ಮಸೀರೆಗಳ ನಡುವೆ ಅಡಿಗಿಸಿಟ್ಟ
ನೂರಾರು ಗ್ರೀಟಿಂಗ್ ಕಾರ್ಡುಗಳನ್ನು ನೆನೆಸಿಕೊಂಡು
ಮುಸಿ ಮುಸಿ ನಕ್ಕಳು
-----------------------------------------------------------
ಪಾಂಡಿತ್ಯದ ಭಾರದಿಂದ ಹತ್ತು ಓದಿಗೂ ದಕ್ಕದ ಕವಿತೆ ಮುಂದೆ ಓದಿ »

ಹರವಬೇಡ ಕೂದಲು
April 6, 2008 - 7:05am — keshavಇದು ನಾನು ಬರೆದ ಶಾಯ್ರಿ ಅಲ್ಲ, ನನ್ನ ತಂದೆ ಬರೆದದ್ದು. ಅವರ ೭೦ನೇ ವರ್ಷದ ನೆನಪಿನಲ್ಲಿ ಅವರು ಆಗಾಗ ಬರೆದ ಸಾಲುಗಳನ್ನು ಜೋಡಿಸಿ ನನ್ನ ಅಣ್ಣ ಪುಸ್ತಕ ಮಾಡಿಸುತ್ತಿದ್ದಾನೆ. ಅದರಲ್ಲಿನ ಒಂದು ಶಾಯ್ರಿ ಇಲ್ಲಿದೆ, ನನಗೆ ಇಷ್ಟವಾಯಿತು.
ಹೀಗೆ ಹರವ ಬೇಡ ನಿನ್ನ ಕೇಶರಾಶಿ ಮುಂದೆ ಓದಿ »

ವಯಸು ಮತ್ತು ಮನಸು
January 6, 2008 - 6:12pm — keshav
ಯಶವಂತ ಚಿತ್ತಾಲರ 'ಕತೆಯಾದಳು ಹುಡುಗಿ’ ಯನ್ನು ಒಂದೇ ರಾತ್ರಿ (ರಾತ್ರಿ ೯ ರಿಂದ ೩ ರ
ವರೆಗೆ) ಒಂದೇ ಗುಕ್ಕಿನಲ್ಲಿ ಓದಿದಾಗ ನನಗೆ ಹದಿನೇಳೋ ಹದಿನೆಂಟೋ ವರ್ಷ. ಈಗದೆಲ್ಲ
ನೆನಪಾಗುತ್ತಿರುವುದು ಹದಿನೇಳೋ ಹದಿನೆಂಟೋ ವರ್ಷದ ನಂತರ ಮತ್ತೆ ಅವರ ’ಐವತ್ತೊಂದು
ಕತೆಗಳು’ ಓದಿದಾಗ.
ಮುಂದೆ ಓದಿ »

- keshav ರವರ ಬ್ಲಾಗ್
- Login or register to post comments
- 315 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮಾತಾಡ್ ಮಾತಾಡ್ ಮಲ್ಲಿಗೆ
November 12, 2007 - 4:14am — keshavಮಲ್ಲಿಗೆ ಇಂಗ್ಲೆಂಡಿನಲ್ಲೂ ಮಾತಾಡಿತು!ಜೊತೆಗೆ ನಾಗತಿಹಳ್ಳಿಯವರೂ ಮಾತಾಡಿದರು!! ಹಾಡುಗಳನ್ನೆಲ್ಲ (ಒಂದನ್ನು ಬಿಟ್ಟು)ಕತ್ತರಿಸಿ, ಇಂಗ್ಲೀಷ್ ಅನುವಾದಗಳನ್ನು (subtitles) ಸೇರಿಸಿ, ಕನ್ನಡಿಗರು-ಯು.ಕೆಯವರು ಇಂಗ್ಲೆಂಡಿನ ರೆಡ್ದಿಂಗ್ನಲ್ಲಿ ನಮಗೆಲ್ಲ ತೋರಿಸಿದರು.
ನಾನೀಗ ಬರೆಯಹೊರಟಿರುವುದು ಖಂಡಿತ ಚಿತ್ರದ ವಿಮರ್ಶೆಯಲ್ಲ. ಇದು ಅನಿವಾಸಿಯಲ್ಲದ ಕನ್ನಡಿಗರಿಗೆ ಹಳೆಯ ಚಿತ್ರ ಮತ್ತು ನಾಗತಿಹಳ್ಳಿಯವರು ಹೇಳಿದಂತೆ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಓಡಿರದ ಚಿತ್ರ. ಈಗಾಗಲೇ ಈ ಚಿತ್ರದ ಬಗ್ಗೆ ಒಳ್ಳೆಯ ಮತ್ತು ಕೆಟ್ಟ ವಿಮರ್ಶೆಗಳು ಪತ್ರಿಕೆಗಳಲ್ಲಿ, ಬ್ಲಾಗುಗಳಲ್ಲಿ ಬಂದಿವೆ. ಮುಂದೆ ಓದಿ »




RSS: