poornimas (ಲೇಖನಗಳು)
ಗಣಪ ಶಾಲೆಗೆ ಸೇರಿದ್ದು
September 2, 2008 - 10:49pm — poornimasಪುಟ್ಟ ಗಣಪ
ಶಾಲೆಗೆ ಸೇರಿದ
ಪಾಠ ಕಲಿಯಕ್ಕೆ.
ಅ ಆ ಇ ಈ
ಎ ಬಿ ಸಿ ಡಿ
ಲೆಕ್ಕ ಬಿಡಿಸಕ್ಕೆ.
ದೊಡ್ಡ ಸೈಜಿನ
ಯೂನಿಫಾರಮ್
ಎಲ್ಲೂ ಸಿಗಲಿಲ್ಲ.
ಅಪ್ಪನ ಬೆಲ್ಟೂ
ಇವನ ಸೊಂಟಕೆ
ಸಾಕಾಗೋದಿಲ್ಲ.
ಅಂಗ್ಡಿಗೆ ಹೋಗಿ
ಈಶ್ವರ ತಂದನು
ದೊಡ್ಡ ಥಾನು ಬಟ್ಟೆ.
ಪಾರ್ವತಿ ಕಷ್ಟದಿ
ಹೊಲಿದುಕೊಟ್ಟಳು
ಅಂಗಿ ಚಡ್ಡಿ ಬಟ್ಟೆ.
ಇವನ ಸೊಂಡಿಲೇ
ಟೈ ಥರ ಇಹುದು
ಬೇರೆ ಏನೂ ಬೇಡ.
ಸೆಕೆಯಲಿ ಬೆವರಿ ಮುಂದೆ ಓದಿ »

ವಸಂತಗೀತ....ಯುಗಾದಿ ಶುಭಾಶಯಗಳು
April 7, 2008 - 9:37pm — poornimas**** ಎಲ್ಲರಿಗೂ ಸರ್ವಧಾರಿ ಸಂವತ್ಸರ ಯುಗಾದಿ ಶುಭಾಶಯಗಳು. ****
ವಸಂತ ಗೀತ
-----------
ವಸಂತ ಋತುರಾಜ
ಒಲಿದು ಬರುತಿಹನೆಂದು
ಚೆಲುವ ಚಪ್ಪರವಾಯ್ತು
ಭೂರಮೆಯ ಒಡಲು.
ಹೊಸ ಚಿಗುರ ಹಸೆಯಿಟ್ಟು
ಹೊಸ್ತಿಲಲಿ ಕಾದಿಹಳು.
ನಸುಗೆಂಪು ಹೂಬಳೆ ತೊಟ್ಟು
ಆರತಿಯ ಬೆಳಗುವಳು.
ಉಷೆಯ ಓಕುಳಿಯಲ್ಲಿ
ಎಳೆಬಿಸಿಲ ಹಣತೆ.
ಮಿಡಿಯರಳಿ ನಾಚಿದ
ಮಾವು ಹೂವಿನ ಅಕ್ಷತೆ.
ಹೊಸಯುಗದ ಹೊಸಗೀತ ಮುಂದೆ ಓದಿ »

- Login or register to post comments
- 205 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಕೆಲವು ಹನಿಗವನಗಳು
January 11, 2008 - 8:00pm — poornimasಜೀವನ
------
ರೀತಿಯಂತೆ, ನೀತಿಯಂತೆ
ಯಾರು ವಿಧಿಸಿದರು ಸ್ವಾಮಿ
ಬದುಕಿಗೊಂದು ಅಳತೆ ಮಾಪನ.
ಅಳತೆಗೆ ಸಿಕ್ಕುವುದಲ್ಲ,
ಅನುಭೂತಿಗೆ ದಕ್ಕುವುದು ಜೀವನ.
ಮೂರ್ಖತನ
---------
ಬೊಚ್ಚುಬಾಯಿಂದ ಬೊಚ್ಚುಬಾಯಿಗೆ
ಬೆಳದಿಂಗಳನ್ನೇ ಅಂಗೈಲಿ
ಹಿಡಿದಿಟ್ಟಂತೆ ಬದುಕಿದ
ಶತಾಯುಷಿಗೆ ಕೊಡುಗೆ
’ಬದುಕಲು ಕಲಿಯಿರಿ’ ಹೊತ್ತಗೆ !

- Login or register to post comments
- 292 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಕೋಷ್ಟಕ ಕವಿತೆ - ಒಂದು ಪ್ರಯೋಗ
November 27, 2007 - 11:12pm — poornimasನಂಗಿಷ್ಟವಾಗೋದು
ಗಣಿತಾ ಮತ್ತು ಕವಿತಾ.
ಇಬ್ಬರಿಗೂ ಮಣೀತಾ
ಈ ನನ್ನ ಕೊರೆತ ![]()

ಮಗು - ನಗು
November 6, 2007 - 6:45pm — poornimas ಮಗು - ನಗು
*********
ಮಗುವೆ ನೀನು ನಗುತಲಿರಲು
ಗೆಜ್ಜೆ ಘಲಿರು ಉಲಿಯುತಿರಲು
ಗಿಲಕಿ ಗಿಲಿರು ಗೀತವಿರಲು
ಬದುಕು ಬೆಳಕು ಬೆಳದಿಂಗಳು.
ಕಣ್ಣಿನಂದ ನೋಟ ಹೊಳಪು
ಕೆನ್ನೆ ನೋಡಿ ಎಷ್ಟು ನುಣುಪು!
ಕಾಲು ಬಡಿವ ಆಟ ಹುರುಪು
ಮುಗ್ಧ ಮನವು ಹಾಲು ಬಿಳುಪು.
ಅಂಬೆಗಾಲ ನಂದಲಾಲ
ಬೆಣ್ಣೆ ಮೆದ್ದ ತುಂಟಬಾಲ
ಕಣ್ಣಲೇಕೆ ನೀರ ಜಾಲ?
ಕೊಡಲೊಲ್ಲಳೆ ತಾಯಿ ಹಾಲ? ಮುಂದೆ ಓದಿ »


RSS: