pqrshanth (ಬ್ಲಾಗ್ ಬರಹಗಳು)
ಕನ್ನಡದಲ್ಲಿ ಕಾರ್ಟೂನ್‍ಗಳು
March 3, 2006 - 3:47pm — pqrshanthEnglishನ ಕಾರ್ಟೂನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಒಂದು ಪ್ರಯ್ತ್ನ. ಕೇಶವ ಮತ್ತು ನಾರಾಯಣಾರಾಗಿ - Calvin and Hobbes. ಸಾಂಬಶಿವನಾಗಿ - Dilbert ಗೋವಿಂದನಾಗಿ - Garfield ನಿಮ್ಮ ಮುಂದೆ ಬರುತ್ತಿದ್ದಾರೆ, ಓದಿ ನಿಮ್ಮ ಅಭಿಪ್ರಾಯ ತಿಳಿಸಿ -- http://kannadacartoons.blogspot.com/ ಮುಂದೆ ಓದಿ »

ಬಸ್ ಕಂಡಕ್ಟರ್
February 21, 2006 - 5:10pm — pqrshanthಹಳೆಯ ಕಡತಗಳಿಂದ -- ಚೆನ್ನೈನಲ್ಲಿದ್ದಾಗಿನ ನನ್ನ ಒಂದು ಅನುಭವ
Adyar? ಪ್ರಶ್ನೆಯಲ್ಲಿ ಕರ್ತೃವಿಲ್ಲ-ಕ್ರಿಯಾಪದವಿಲ್ಲ ಮುಂದೆ ಓದಿ »

- pqrshanth ರವರ ಬ್ಲಾಗ್
- Login or register to post comments
- 685 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ನೆನಪುಗಳು
February 8, 2006 - 8:18pm — pqrshanthಎಲ್ಲಿ ಹೋದಿರಿ ಅಂದಿನ ದಿನಗಳೆ ನೆನಪುಗಳನು ಬಿತ್ತಿ,
ಮನದಲಿ ಸವಿ ನೆನಪುಗಳನು ಬಿತ್ತಿ
ಹೊಂಗೆಯ ನೆರಳಲಿ ಗೋಲಿಯ ಆಡುತ ಕಾಲಕಳೆವ ಬನ್ನಿ
ಹುಣಿಸೆಯ ಕೊಂಬೆಗೆ ಹಗ್ಗವ ಕಟ್ಟಿ ಜೋಕಾಲೆಯಾಡುವ ಬನ್ನಿ
ಮೂಡಣ ಬಾನಲಿ ಸೂರ್ಯನ ಜೊತೆಗೆ ಮೇಲೇರುವ ಬನ್ನಿ
ತುಂಬಿದ ಕೆರೆಗೆ ಕಲ್ಲನು ಎಸೆಯುತ ಮುಸ್ಸಂಜೆ ಸವಿಯ ಬನ್ನಿ
ಚಂದಿರನಿಲ್ಲದ ಬಾನಂಗಳದಲ್ಲಿ ತಾರೆಗಳೆಣಿಸುವ ಬನ್ನಿ
ತಿಂಗಳ ಬೆಳಕಲಿ ಕೈತುತ್ತನು ತಿನ್ನುತ ಹರಟೆ ಹೊಡೆವ ಬನ್ನಿ
ತೋಟಕೆ ನುಗ್ಗಿ ಬಾವಿಗೆ ಧುಮುಕಿ ಈಜು ಕಲಿವ ಬನ್ನಿ
ಮಾವಿನ ಮರಕೆ ಕಲ್ಲನು ಹೊಡೆದು ಹಣ್ಣ ಕೆಡವ ಬನ್ನಿ
ಮನದ ನೆನಪುಗಳು ಮಾಸುವ ಮುನ್ನ
ದೇಹದ ಶಕ್ತಿ ಕುಂದುವ ಮುನ್ನ ಒಮ್ಮೆ ಮರಳಿ ಬನ್ನಿ ಮುಂದೆ ಓದಿ »


RSS: