prasadhegde (ಲೇಖನಗಳು)
ನೀರು-ನೀರವತೆ-ನಗ್ನತೆ
April 2, 2007 - 5:37pm — prasadhegdeಸಂಜೆ,ಮುಸ್ಸಂಜೆಯ ಸಮಯ. ವಿಪರೀತ ಧಗೆ. ಬಗೆ ಬಗೆಯ ಸಸ್ಯವನ್ನು ರಾಶಿ,ರಾಶಿಯಾಗಿ ತನ್ನೊಡಲಲ್ಲಿ ಇಟ್ಟುಕೊಂಡ ಆ ಬೆಟ್ಟದ ಇಳಿಜಾರಿನಲ್ಲಿ ಇಳಿದಿಳಿದು ಹೋದೆ.ಹಸಿರು ಉಡುಗೆಯುಟ್ಟ ಎದುರಿಗಿನ ಬೆಟ್ಟದ ಕಲ್ಲಂಚಿನಿಂದ ಝರಿ,ಝರಿಯಾಗಿ ಆತುರದಿಂದ ಜರಿ ಜರಿದು ತೊರೆಯಾಗಿ ಹರಿ ಹರಿದು ಹೋಗುತ್ತಿದ್ದ ಚಿಕ್ಕಹಳ್ಳ...ಗೂಡಿಗೆ ಮರಳಿದ್ದ ಹಕ್ಕಿಗಳ ಚಿಲಿಪಿಲಿಯ ಹೊರತಾಗಿ ಅಲ್ಲೆಲ್ಲ ನಿಶ್ಯಬ್ದ..ಕಪ್ಪು ಕಪ್ಪು ಕಲ್ಲು ಹಾಸುಗಳು..ಬಿಸಿಲಿಗೆ ಅಷ್ಟಿಷ್ಟು ಕಾದವುಗಳು.
ಬೀಸುಗಾಲು ಹಾಕುತ್ತ ಹತ್ತಿ,ಗುತ್ತಿ ಹೋದ ನಾನು ಅ೦ತಿಮವಾಗಿ ಒಂದು ಬಂಡೆಯ ಮೇಲೆ ಕುಳಿತೆ.ಸಹಜವಾಗಿ ನೀರಿಗಿಳಿದವು ನನ್ನೆರಡು ಕಾಲುಗಳು..ತಂಪೆಂದರೆ ತಂಪಾದ ನೀರು ಅದು. ಕಾಲುಗಳಿಗೆ ಸವರಿಕೊಂಡು ಹೋಗುತ್ತಿದ್ದ ತಣ್ಣನೆಯ ನೀರು ನನಗೆ ಕಾಲವನ್ನೇ ಮರೆಸಿತ್ತು.
ಬೆಳದಿಂಗಳು ಆವರಿಸಿತ್ತು.ಅಲ್ಲಿ ಯಾರೂ ಇರಲಿಲ್ಲ ನನ್ನೊಬ್ಬನ ಹೊರತಾಗಿ.ಪ್ರಕೃತಿ ಮತ್ತು ಅದು ಎಲ್ಲ ಮನುಷ್ಯರನ್ನು ಸೃಷ್ಟಿಸಿದ್ದ ಹಾಗೆ ಸೃಷ್ಟಿಸಿದ್ದ ನಾನು. ಮುಂದೆ ಓದಿ »

ಕನ್ನಡ ರ೦ಗದಲ್ಲಿನ ರಾಮಾಯಣ
March 27, 2007 - 5:28pm — prasadhegdeಮೈಸೂರಿನ ರಂಗಾಯಣದ ಆವರಣ ಮತ್ತು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ ನನ್ನನ್ನು ಬಹಳವಾಗಿ ಸೆಳೆಯುವ ತಾಣಗಳು. ಇಂದಿನ ಅಬ್ಬರದ ದಿನಗಳಲ್ಲಿ ಇಲ್ಲಿ ಒಂದಿಷ್ಟು ಹೊತ್ತು ಕಳೆದರೆ ವಿಶಿಷ್ಟವಾದ ಅನುಭವ ನನ್ನದಾಗುತ್ತದೆ. ನಿರಂತರವಾಗಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ನನ್ನೊಳಗೆ ಸಂವಾದಿಯಾಗಿ ನಿಲ್ಲಬಲ್ಲವು. ನಾನು ಮತ್ತು ನನ್ನಂಥವರು ಈ ಕಾಲಘಟ್ಟದಲ್ಲಿ ಅದ್ಯಾವುದೋ ಆವರಣದೊಳಕ್ಕೆ ಸಿಲುಕಿ ಗೊಂದಲ ಹಾಗು ಅಗತ್ಯವಾಗಿರಬಹುದಾದ,ಅನಗತ್ಯವಾಗಿರಬಹುದಾದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಕೊನೆಗೆ ಕಾಡಹರಟೆಗೆ ಬಂದು ಮುಕ್ತಾಯಗೊಳಿಸುವ ಸಂದರ್ಭದಲ್ಲಿ ಗಂಭೀರರಾಗಿ ಆತಂಕಗೊಳ್ಳುವುದೂ ಇದೆ.
ನಿರಂತರ, ಕೆಲಬಾರಿ ಅನಗತ್ಯ ಅನ್ನಬಹುದಾದ ಆತಂಕ ಮತ್ತು ದಿನನಿತ್ಯದ ಜಂಜಾಟದ,ಗುದ್ದಾಟದ ಬದುಕಿನ ನಡುವೆ ಆಹ್ಲಾದ,ಆಸ್ವಾದಿಸುವ ಕ್ಷಣಗಳನ್ನು ಮೊನ್ನೆ ರವೀಂದ್ರ ಕಲಾಕ್ಷೇತ್ರದ ಆವರಣ ನನಗೆ ಒದಗಿಸಿಕೊಟ್ಟಿತ್ತು. ನೀನಾಸಂ ಮರು ತಿರುಗಾಟದ 'ಕನ್ನಡ ರಾಮಾಯಣ'ನಾಟಕ ಪ್ರದರ್ಶನ ಇತ್ತೀಚಿಗಿನ ಒಂದು ಅದ್ಭುತ ರಂಗ ಸಂವಹನ.ಮನಸ್ಸು ಮತ್ತು ಬುದ್ಧಿಯನ್ನು ಚುರುಕಾಗಿಸಿದ ಈ ಪ್ರದರ್ಶನ ಕನ್ನಡ ರಂಗಭೂಮಿಯಲ್ಲಿನ ಬದಲಾವಣೆ,ಹೊಸ ಅಲೆಯ ಅನ್ವೇಷಣೆಯ ನಡುವೆ ತನ್ನ ತಾಕತ್ತನ್ನು ತೆರೆದಿಟ್ಟಿತ್ತು.
ಹೊಸ ವಿಷಯ ವಸ್ತುವನ್ನು ತೆಗೆದುಕೊಂಡು ಅದನ್ನು ಪ್ರಸ್ತುತಪಡಿಸುವುದು ಸವಾಲು. ಆದರೆ ಜನಮಾನಸದಲ್ಲಿ ನಿತ್ಯ ನಿರಂತರವಾಗಿ ಕಾಡುವ ತುಂಬ ಹಳೆಯದಾದ,ಆಯಾ ಕಾಲದಲ್ಲಿ ಮತ್ತೆ ಮತ್ತೆ ಪ್ರಸ್ತುತವಾಗುವ ರಾಮಾಯಣ ಮಹಾಕಾವ್ಯವನ್ನು ರಂಗರೂಪಕ್ಕಿಳಿಸಿಯೂ ಕಾವ್ಯಾತ್ಮಕತೆಗೆ ಧಕ್ಕೆ ಬರದ ರೀತಿಯಲ್ಲಿ ಅದನ್ನು ವಿಜೃಂಭಿಸುವಂತೆ ಮಾಡಿದ ವೆಂಕಟರಮಣ ಐತಾಳರ ಅದ್ಭುತ ಪ್ರತಿಭೆ ನೋಡುಗರನ್ನು ಆವರಿಸಿತ್ತು.
ಕುವೆಂಪುರವರ ಶ್ರೀ ರಾಮಾಯಣ ದರ್ಶನಂ, ಕುಮುದೇಂದ್ರ ರಾಮಾಯಣ, ಪಾರ್ಥಿ ಸುಬ್ಬನ ಯಕ್ಷಗಾನ ಪ್ರಸಂಗ,..ಹೀಗೆ ಮಹಾ ಮಹಾ ಗ್ರಂಥಗಳನ್ನೆಲ್ಲ ತೆರೆದು, ನೋಡಿ,ಆಯ್ಕೆ ಮಾಡಿ,ಅಳೆದು-ತೂಗಿ,ಬೆಸೆದು ಕಲ್ಪಿಸಿಕೊಂಡು ರಂಗಕ್ಕೆ ತಂದು ನಮ್ಮ ಮನಸ್ಸು ತುಂಬಿಕೊಳ್ಳುವಂತೆ ಮಾಡಿ ಅಪೂರ್ವ ಅನುಭವವನ್ನು ಪ್ರೇಕ್ಷಕರು ತಮ್ಮದಾಗಿಸಿಕೊಳ್ಳುವಂತೆ ರೂಪಿಸಿದ ಐತಾಳರಿಗೆ ತುಂಬು ಧನ್ಯವಾದಗಳು. ಮುಂದೆ ಓದಿ »








RSS: