purna (ಲೇಖನಗಳು)
ಅಂತರಾಳದ ಮಾತು......
September 5, 2007 - 6:03pm — purnaಅಂತರಾಳದ ಮಾತು.....
ನೀ ನುಡಿವ ಒಂದೊಂದು ಮಾತು
ಅಚ್ಚಾಗಿಹುದು ಮನದಲ್ಲಿ
ಬುದ್ಧಿಯ ಕೈಗೆ ಸಿಲುಕಿ
ಕೆಣಕುವುದು ನೂರಾಗಿ....
ನೀ ನಗುವ ವೈಖರಿಗೆ
ಹೃದಯ ಮಿಡಿಯುತಿಹುದು
ತಿಳಿನೀರಲಿ ಬಿದ್ದ ಎಲೆಯೊಂದು
ಮೂಡಿಸುವ ಮಧುರ ಅಲೆಗಳ ಹಾಗೆ...
ಮನಸು ಅರಿತದ್ದು ಬುದ್ಧಿ ಅರಿಯಲಾರದು
ಮೌನವೆ ತುಂಬಿಹುದು ಅಂತರಾಳದಲಿ ಮುಂದೆ ಓದಿ »

ಮುನಿಸು...
July 23, 2007 - 12:41pm — purnaಇದಾವ ಮೋಹ ಹೀಗೆ ಕಾಡುತಿದೆ ನನ್ನನು
ಕಪ್ಪು ಛಾಯೆಗಳ ಮಧ್ಯ ತೋರುತಿದೆ ಬೆಳಕನು.
ಸಾಕಿನ್ನು ಮುನಿಸು ದಣಿದಿಹೆನು ನಾನು,
ಬರಬಾರದೆ ಒಮ್ಮೆಯಾದರು ಮನ ತಣಿಸುವ
ತುಂತುರು ಮಳೆಯಾಗಿ ನೀನು.
ಮನಸು ಮನಸುಗಳ ನಡುವೆ ಬೇಲಿಗಳು ಬೆಳೆಯುತಿವೆ
ಸುರಿವ ಹನಿ ಹನಿ ಮಳೆಗೆ ಅಲ್ಲಲ್ಲಿ ಬೆಳೆವ ಕಾಟು ಗಿಡ-ಬಳ್ಳಿಗಳಂತೆ ಮುಂದೆ ಓದಿ »

ಚಳಿರಾಯನ ಮೋಡಿ
January 27, 2007 - 6:16pm — purna
ಬೆಳಗಿನಜಾವದಲಿ ಮೆತ್ತನೆಯ ಮುತ್ತಿಟ್ಟು
ಹೂಗಳನು ಎಬ್ಬಿಸುವ ಈ ನಿನ್ನ ಪರಿ,
ಕೊಮಲೆಯ ಮೈ ಸೋಕಿ ನಲ್ಲನನು ನೆನೆವಂತೆ ಮಾಡುವ ಮುಂದೆ ಓದಿ »





RSS: