pvravi (ಲೇಖನಗಳು)
ಕಾಲ ಪ್ರಯಾಣ - ಭಾಗ ೩
January 27, 2006 - 7:31am — pvraviನಾ ಕಂಡ ಎಲ್ಲವನ್ನೂ ದಾಖಲೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದೆ. ಆದರೆ ದಾಖಲೆ ಎಲ್ಲಿ ಮಾಡಲಿ? ಕೊನೆಗೆ ನನ್ನ ಶರ್ಟಿನ ಜೇಬಿನಲ್ಲಿದ್ದ ಪೆನ್ನೊಂದು ನೆನಪಿಗೆ ಬಂತು. ನಾನು ಮಲಗಿದ್ದ ಹಾಸಿಗೆಯ ಪಕ್ಕದಲ್ಲೇ ಬಿಚ್ಚಿಟ್ಟಿದ್ದ ಶರ್ಟ್ ಕೈಗೆತ್ತಿಕೊಂಡೆ. ಅದರೊಳಗಿನ ನನ್ನ ಚೆಕ್ ಸಹಿ ಮಾಡುವ ಪೆನ್ ಸ್ವಲ್ಪ ಒದ್ದೆಯಾಗಿದ್ದರೂ ನನ್ನ ಕೈ ಮೇಲೆ ಗೀಚಿ ನೋಡಿದಾಗ ಬರೆಯುತ್ತಿತ್ತು. ಬರೆಯಲು ಹಾಳೆಗಳೆಲ್ಲಿ? ಈ ಕಾಲದಲ್ಲಂತೂ ಹಾಳೆಗಳು ಸಿಗುವ ಹಾಗಿಲ್ಲ - ಇನ್ನೂ ನಾವು ಕಾಣುವಂತಹ ಹಾಳೆಗಳ ಅವಿಶ್ಕಾರವೇ ಆಗಿರಲಿಲ್ಲ! ಇವರು ಬರೆಯುತ್ತಿದ್ದದ್ದು ಕಲ್ಲು ಶಾಸನಗಳೆಂದು ನಮ್ಮ ಕಾಲದಲ್ಲಿಯೇ ನನ್ನ ಶೋಧನೆಯಿಂದ ಅರಿತಿದ್ದೆ. ಆ ಕಲ್ಲುಗಳ ಮೇಲೆ ಬರೆಯುವುದು ಕಷ್ಟವಷ್ಟೇ ಅಲ್ಲ, ಅಕಸ್ಮಾತ್ ನನ್ನ ಕಾಲಕ್ಕೆ ಹಿಂತಿರುಗುವ ಸಂದರ್ಭ ಬಂದರೆ ಹೇಗೆ ಕೊಂಡೊಯ್ಯುವುದು? ಕಡೆಗೆ ನನ್ನ ಬಿಳಿಯ ಪಂಚೆಯ ಮೇಲೆ ಬರೆಯುವ ನಿರ್ಧಾರ ಮಾಡಿದೆ. ಹಾಗೆ ಬರೆದರೆ ಅದನ್ನು ಉಡುವಹಾಗಿಲ್ಲ. ಮೇಲಾಗಿ ಆ ಪಂಚೆಯುಟ್ಟು ಹೊರಗೆ ಹೋಗಲಾಗದು. ಹಾಗಾಗಿ ಮೊದಲಿಗೆ ಈ ಕಾಲದ ವಸ್ತ್ರಗಳ ಏರ್ಪಾಡು ಮಾಡುವುದು ಸೂತ್ಕವೆನಿಸಿತು. ಮುಂದೆ ಓದಿ »

ಕಾಲ ಪ್ರಯಾಣ - ಭಾಗ ೨
January 20, 2006 - 12:10am — pvraviಭಾಗ ೧ ಇಲ್ಲಿದೆ
ಭಾಗ ೨
ನೀರಿನೊಳಗೇ ನಿಧಾನವಾಗಿ ನಡೆಯಲಾರಂಭಿಸಿದೆ. ಮೊದಲ ಹೆಜ್ಜೆ ಇಟ್ಟ ತಕ್ಷಣವೇ ತಲೆ ಸುತ್ತುವ ಆಭಾಸ. ಕಷ್ಟ ಪಟ್ಟು ನಾಲ್ಕು ಹೆಜ್ಜೆ ನಡೆದು, ನೀರಿನಿಂದ ಹೊರಗೆದ್ದು ಆ ಋತ್ವಿಕನ ಕಾಲುಗಳಬಳಿ ಕುಸಿದುಬಿದ್ದೆ. ನಾನು ಓದಿದ್ದ 'ಸಯನ್ಸ್ ಫಿಕ್ಷನ್' ಕತೆಗಳು ನಿಜ ಎನ್ನುವಂತೆ ಕಾಲ ಪ್ರಯಾಣ ನನ್ನನ್ನು 'ಡಿಸೋರಿಯಂಟ್' ಮಾಡಿದೆ ಎಂದು ಯೋಚಿಸುವಷ್ಟು ತ್ರಾಣವಿತ್ತು. ಆ ಕ್ಷಣದ ನಂತರ ಎಲ್ಲವೂ ಕತ್ತಲಾಯಿತು. ಮುಂದೆ ಓದಿ »

- Login or register to post comments
- 766 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಕಾಲ ಪ್ರಯಾಣ - ಭಾಗ ೧.
January 13, 2006 - 1:38am — pvraviನಾನು ಆರ್ಕಿಯಾಲಾಗಿಕಲ್ ಸರ್ವೇ ಆಫ್ ಇಂಡಿಯಾದ ಒಬ್ಬ ವಿಜ್ಞಾನಿ. ಮೂಲತಃ ಕನ್ನಡವನಾದರೂ ಹರಿಯಾಣಾ ರಾಜ್ಯದ ಬಳಿ ಹಳ್ಳಿಯೊಂದರಲ್ಲಿ ಸಂಶೋಧನೆ ನಡೆಯುತ್ತಿದ್ದ ಕಾರಣ ನಾನು ಅಲ್ಲಿಗೆ ಹೋಗಬೇಕಾಗಿ ಬಂದಿತ್ತು. ನಾನು ಅಲ್ಲಿ ಕೆಲಸ ಮಾಡಬೇಕಾಗಿದ್ದ ಕಾಲಕ್ಕೆ ಆ ಹಳ್ಳಿಯ ಬಳಿ ಇದ್ದ ಪ್ರವಾಸಿ ಮಂದಿರದಲ್ಲಿ ನನ್ನ ವಾಸಕ್ಕೆ ಏರ್ಪಾಡು ಮಾಡಲಾಗಿತ್ತು. ಸರಸ್ವತೀ ನಾಗರೀಕತೆ - ಪ್ರಪಂಚವು ಹೆಚ್ಚಾಗಿ ಸಿಂಧು ಕಣಿವೆ ನಾಗರೀಕತೆಯೆಂದೇ ಅರಿತಿದ್ದ - ಮತ್ತು ಆ ಜನಾಂಗದ ಒಂದು ಊರಿನ ಅವಶೇಶಗಳನ್ನು ಅಗಿದು ಹೊರತೆಗೆಯುತ್ತಿದ್ದೆವು. ಮುಂದೆ ಓದಿ »

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೫)
January 9, 2006 - 11:43pm — pvravi***** ಭಾಗ ೫
ಇಷ್ಟು ಹೊತ್ತಿಗೆ ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗುವ ಸಮಯವಾಗಿತ್ತು. ಊರಾಚೆ ಪಾಳುಬಿದ್ದ ಗುಡಿಯ ಬಳಿ ಹೋದೆ. ಎಲ್ಲೆಡೆ ಊರ್ಣನಾಭಗಳು ಬಲೆ ಕಟ್ಟಿ ಬಾಗಿಲ ಅಡ್ಡಕ್ಕೆ ಕಲ್ಲಿನ ಸ್ಥಂಭವೊಂದು ಬಿದ್ದಿತು. ಕುದುರೆಯ ಜೀನು ಬಿಚ್ಚಿ ಅದನ್ನು ತಿರುಗಿಸಿ ಅದರ ಬೆನ್ನ ಮೇಲೆ ಎರಡು ಏಟು ಕೊಟ್ಟೆ. ಕುದುರೆ ಲಾಯಕ್ಕೆ ಓಡಿತು. ನಾನು ಕೆಲ ಕ್ಷಣಗಳ ಕಾಲ ಮರೆಯಲ್ಲಿ ಕಾಯುತ್ತಿದ್ದೆ. ಎಲ್ಲವೂ ನಿಶ್ಯಬ್ಧವೆನೆಸಿದಮೇಲೆ ನಿಧಾನವಾಗಿ ಎದ್ದು ಬಾಗಿಲ ಅಡ್ಡಕ್ಕೆ ಬಿದ್ದ ಸ್ಥಂಭದಿಂದ ನುಸಿದು ಗುಡಿಯೊಳಗೆ ಹೊಕ್ಕೆ. ಮುಂದೆ ಓದಿ »

- Login or register to post comments
- 675 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೪)
January 9, 2006 - 11:43pm — pvravi*****ಭಾಗ ೪
ನಾನು ವಾತಾಪಿನಗರವನ್ನು ಸೇರಿದಾಗ ಸಂಜೆಯಾಗಿತ್ತು. ಊರಿನಾಚೆ ಸ್ವಲ್ಪ ದೂರದಲ್ಲಿ ಒಂದು ಸ್ಥಳದಲ್ಲಿ ನಿಂತು, ಕುದುರೆಗೆ ನೀರು, ಹುರುಳಿ ಕೊಟ್ಟೆ. ನಾನೂ ಬೆಳಗಿನಿಂದ ಏನೂ ತಿಂದಿರಲಿಲ್ಲ, ಹೊಟ್ಟೆ ಹಸಿದಿತ್ತು ಆದರೆ ತಿನ್ನಲೇನು ಸಿಕ್ಕಲಿಲ್ಲ. ಇನ್ನೂ ಪೂರ್ಣ ಕತ್ತಲೆಯಾಗಿರಲಿಲ್ಲ. ನಾನು ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗಲು ಸ್ವಲ್ಪ ಸಮಯವಿತ್ತು. ಮನೆಗೆ ಹೋಗೋಣವೋ ಬೇಡವೋ ಎಂದು ಸುಮಾರು ಹೊತ್ತು ಯೋಚನೆ ಮಾಡಿದೆ. ನಾನು ಎಲ್ಲರ ಪಾಲಿಗೆ ಸತ್ತು ಹೋಗಿದ್ದೆ. ನಾನು ಕಳುಹಿಸಿದ ಓಲೆ ಮನೆ ಸೇರಿತ್ತೋ ಇಲ್ಲವೋ ಒಂದೂ ತಿಳಿಯದು. ಇನ್ನೂ ಸ್ವಲ್ಪ ಕತ್ತಲಾಗುವವರೆಗೆ ಕಾಯ್ದು ಮನೆ ಕಡೆ ಕುದುರೆ ತಿರುಗಿಸಿದೆ. ಸ್ವಲ್ಪ ದೂರದಲ್ಲೇ ಕುದುರೆಯನ್ನು ಕಟ್ಟಿ ಹಾಕಿ ಮನೆಯವರೆಗೆ ನಡೆದೇ ಹೋದೆ. ಮನೆಯಲ್ಲಿ ಯಾರಿರುವರು ಏನೂ ತಿಳಿಯದು. ಯಾರಿಗಾದರೂ ಕಾಣಿಸಿದರೆ? ನಾನು ಮಹಾರಾಜನ ಬೇಟೆ ತಪ್ಪಿಸಿದಾಗ ನನಗೆ ಗಡ್ಡ ಮೀಸೆಗಳಿರಲಿಲ್ಲ. ಈಗ ಪೂರ್ಣ ಗಡ್ಡ ಮೀಸೆಗಳಿದ್ದವು. ತಲೆಯ ಮೇಲಿದ್ದ ಜಟೆ ಈಗ ಹೋಗಿ ತಲೆ ತುಂಬ ಕೂದಲಿತ್ತು. ಎಂದೂ ತಲೆಗೆ ಪೇಟ ಧರಿಸದವ ಈಗ ಪೇಟ ಧರಿಸಿದ್ದೆ. ಯಾರೂ ನನ್ನನ್ನು ಗುರುತು ಹಿಡಿಯುವಂತೆ ಇರಲಿಲ್ಲ. ಆದರೂ ಮನೆಯೊಳಗೆ ಹೋಗಲು ಹೆದರಿ ಮರೆಯಲ್ಲೇ ಕಾಯ್ದು ನಿಂತೆ. ಮುಂದೆ ಓದಿ »

- Login or register to post comments
- 1084 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: