rajeshnaik111 (ಬ್ಲಾಗ್ ಬರಹಗಳು)
ಯೆರೆ ಗೌಡ - 100 ರಣಜಿ ಪಂದ್ಯಗಳ ಗೌರವ
December 2, 2008 - 10:04pm — rajeshnaik111ಯೆರೆ ಗೌಡ ಈಗ ೧೦೦ ರಣಜಿ ಪಂದ್ಯಗಳ ಸರದಾರ. ಕೆಳೆದೆರಡು ಋತುಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಈಗ ಮತ್ತೆ ರೈಲ್ವೇಸ್-ಗೆ ಮರಳಿದ್ದಾರೆ. ಉದ್ಯೋಗ ನೀಡಿರುವ ರೈಲ್ವೇಸ್ ಬಾಸ್-ಗಳು ಈ ಬಾರಿ ರೈಲ್ವೇಸ್ ಪರವಾಗಿಯೇ ಆಡಬೇಕೆಂದು ತಾಕೀತು ಮಾಡಿರುವಾಗ ಬೇರೆ ದಾರಿ ಕಾಣದೆ ಯೆರೆ ಕರ್ನಾಟಕವನ್ನು ಬಿಟ್ಟು ಮತ್ತೆ ರೈಲ್ವೇಸ್ ಕಡೆ ತೆರಳಿದ್ದಾರೆ. ಮುಂದೆ ಓದಿ »

- rajeshnaik111 ರವರ ಬ್ಲಾಗ್
- Login or register to post comments
- 32 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಛಲಗಾರ ಅನಿಲ್ ಕುಂಬ್ಳೆ
November 3, 2008 - 10:06am — rajeshnaik111ನನ್ನ ಫೇವರಿಟ್ ಕ್ರಿಕೆಟಿಗ ಅಂದರೆ ಅನಿಲ್ ಕುಂಬ್ಳೆ ಮಾತ್ರ. ಕುಂಬ್ಳೆಯನ್ನು ಮೆಚ್ಚಲು ಹಲವಾರು ಕಾರಣಗಳಿವೆ. ಯಾವ ಸನ್ನಿವೇಶದಲ್ಲೂ ಬೌಲಿಂಗ್ ಮಾಡಲು ಅನಿಲ್ ತಯಾರು. ಎಷ್ಟೇ ಹೊತ್ತಿನ ತನಕ ಬೇಕಾದರೂ ಬೌಲ್ ಮಾಡಬಲ್ಲರು. ಈ ಪಿಚ್-ನಲ್ಲಿ ತನಗೆ ಯಾವುದೇ ವಿಕೆಟ್ ದೊರೆಯದು ಎಂದು ಗೊತ್ತಿದ್ದೂ, ಆ ಒಂದು ವಿಕೆಟಿಗಾಗಿ ದಿನಕ್ಕೆ ೪೦ರಷ್ಟು ಓವರುಗಳನ್ನು ಬೌಲ್ ಮಾಡಲು ಸದಾ ತಯಾರಿರುವ ಅಪ್ರತಿಮ ಎಸೆಗಾರ ಅನಿಲ್. ಒಂದು ವಿಕೆಟ್ ದೊರಕಿದ ಕೂಡಲೆ ವಿಶ್ರಮಿಸದೇ ಇನ್ನೊಂದನ್ನು ಯಾವ ರೀತಿಯಲ್ಲಿ ಗಳಿಸಬಹುದು ಎಂಬ ತಯಾರಿಯಲ್ಲಿ ಅನಿಲ್ ತನ್ನನ್ನು ತೊಡಗಿಸಿಕೊಳ್ಳುತ್ತಾರೆ. ತನ್ನ ಇತಿಮಿತಿಗಳ ಅರಿವು ಚೆನ್ನಾಗಿ ಇದ್ದಿದ್ದರಿಂದ ಅನಿಲ್ ೬೧೯ ಟೆಸ್ಟ್ ಹುದ್ದರಿಗಳನ್ನು ಗಳಿಸಲು ಸಾಧ್ಯವಾಯಿತು. ಕ್ರೀಡೆಯ ವಿದ್ಯಾರ್ಥಿ ಎಂದೇ ತನ್ನನ್ನು ಅನಿಲ್ ಪರಿಗಣಿಸಿದ್ದರಿಂದ ಕೊನೆಯವರೆಗೂ ಅನಿಲ್ ಹುದ್ದರಿಗಳನ್ನು ಗಳಿಸುತ್ತಲೇ ಇದ್ದರು. ಮೊದಲ ಹುದ್ದರಿ ಅಲನ್ ಲ್ಯಾಂಬ್ ಮತ್ತು ಕೊನೆಯ ಹುದ್ದರಿ ಮಿಷೆಲ್ ಜಾನ್ಸನ್. ಮುಂದೆ ಓದಿ »

v
October 22, 2008 - 9:47pm — rajeshnaik111a d f e rtd f dd sd f df d

- rajeshnaik111 ರವರ ಬ್ಲಾಗ್
- Login or register to post comments
- 129 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ರಾಯಲ್ ಚಾಲೆಂಜರ್ಸ್, ಬೆಂಗಳೂರು...
May 7, 2008 - 12:36pm — rajeshnaik111ರಾಯಲ್ ಚಾಲೆಂಜರ್ಸ್, ಬೆಂಗಳೂರು. ೭ ಪಂದ್ಯಗಳಲ್ಲಿ ೫ನ್ನು ಸೋತ ಬಳಿಕ ಸಿ.ಇ.ಓ ಚಾರು ಶರ್ಮನನ್ನು ಮನೆಗೆ ಕಳಿಸಲಾಗಿದೆ. ಈ ಲೇಖನವನ್ನು ಬೆಂಗಳೂರು ತಂಡ ತನ್ನೆಲ್ಲಾ ಪಂದ್ಯಗಳನ್ನು ಆಡಿದ ಬಳಿಕ ಬರೆಯಬೇಕೆಂದಿದ್ದೆ. ಆದರೆ ಇದುವರೆಗೆ ಈ ತಂಡ ನೀಡಿದ ಹೀನಾಯ ಪ್ರದರ್ಶನದಿಂದ ಬೇಸತ್ತು ಈಗಲೇ ಗೀಚುತ್ತಿದ್ದೇನೆ. ಮುಂದೆ ಓದಿ »

ಕರ್ನಾಟಕ ಕ್ರಿಕೆಟ್ - ೯
December 9, 2007 - 9:33pm — rajeshnaik111ಮುಲೆವಾ ಧಾರ್ಮಿಚಂದ್: ರಾಜಸ್ಥಾನದಿಂದ ವಲಸೆ ಬಂದು ಬೆಂಗಳೂರಿನಲ್ಲಿ ಬದುಕು ಕಂಡುಕೊಂಡ ಎರಡನೇ ತಲೆಮಾರಿನ ಹುಡುಗ ಧಾರ್ಮಿಚಂದ್. ೧೫ನೇ ವಯಸ್ಸಿನಲ್ಲೇ ಅಂಡರ್-೧೯ ಭಾರತ ತಂಡವನ್ನು ಪ್ರತಿನಿಧಿಸಿ ಎದುರಾಳಿ ತಂಡಗಳನ್ನು ತನ್ನ ಮಾಂತ್ರಿಕ ಆಫ್ ಸ್ಪಿನ್ ದಾಳಿಯಲ್ಲಿ ನುಚ್ಚುನೂರು ಮಾಡಿದವರು ಧಾರ್ಮಿಚಂದ್. ಕರ್ನಾಟಕದ ಪರವಾಗಿ ಎಲ್ಲಾ ವಯೋಮಿತಿಯ ತಂಡಗಳಲ್ಲಿ ಆಡಿದ ಧಾರ್ಮಿಚಂದ್ ಭರ್ಜರಿ ಯಶಸ್ಸು ಕಂಡರು. ಯಾವುದೇ ತರಹದ ಪಿಚ್ ಇರಲಿ, ಅವುಗಳ ಮೇಲೆ ಧಾರ್ಮಿಚಂದ್ ಪಡೆಯುತ್ತಿದ್ದ ಸ್ಪಿನ್ ಕಂಡು ಈರಪ್ಪಳ್ಳಿ ಪ್ರಸನ್ನ ನಿಬ್ಬೆರಗಾಗಿದ್ದರು. ಈ ಹುಡುಗನಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಉಜ್ವಲ ಭವಿಷ್ಯವಿದೆ ಎಂದು ಈರಪ್ಪಳ್ಳಿ ಪ್ರಸನ್ನ ೧೯೯೯ನೇ ಇಸವಿಯಲ್ಲಿ ನುಡಿದಿದ್ದರು. ಅಲ್ಲೇ ಆದದ್ದು ಎಡವಟ್ಟು. ಸರಿಯಾದ ಮಾರ್ಗದರ್ಶನವೆಂಬುವುದು ಧಾರ್ಮಿಚಂದ್-ಗೆ ಮರೀಚಿಕೆಯಾಗಿಯೇ ಉಳಿಯಿತು.
೨೦೦೦-೦೧ ಋತುವಿನಲ್ಲಿ ೧೬ನೇ ವಯಸ್ಸಿನಲ್ಲೇ ಕರ್ನಾಟಕದ ಪರವಾಗಿ ತನ್ನ ಚೊಚ್ಚಲ ಪಂದ್ಯವನ್ನಾಡಿದ ಧಾರ್ಮಿ, ಯಶಸ್ಸು ಕಾಣಲಿಲ್ಲ. ೨೦೦೦-೦೧ ಮತು ೨೦೦೧-೦೨ ಋತುಗಳಲ್ಲಿ ಕೇವಲ ೫ ಪಂದ್ಯಗಳಲ್ಲಿ ಧಾರ್ಮಿಯನ್ನು ಆಡಿಸಲಾಯಿತು. ಈ ೫ ಪಂದ್ಯಗಳಲ್ಲಿ ಒಟ್ಟಾರೆ ೭೦ರಷ್ಟು ಓವರ್-ಗಳನ್ನು ಮಾತ್ರ ಎಸೆದು ಕೇವಲ ೨ ವಿಕೆಟ್ ಗಳಿಸಿದ ಸಾಧನೆ ಯುವ ಆಟಗಾರ ಧಾರ್ಮಿಚಂದ್ ಅವರದ್ದು. ಈ ವೈಫಲ್ಯದಿಂದ ಎದೆಗುಂದಿದ ಧಾರ್ಮಿಗೆ ಸರಿಯಾದ ಮಾರ್ಗದರ್ಶನ ಎಲ್ಲೂ ದೊರೆಯಲಿಲ್ಲ. ಮುಂದೆ ಓದಿ »

- rajeshnaik111 ರವರ ಬ್ಲಾಗ್
- Login or register to post comments
- 901 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: