rashmi_pai (ಲೇಖನಗಳು)
ಬಾಡದಿರು ಸ್ನೇಹದ ಹೂವೇ...
August 2, 2008 - 6:38pm — rashmi_paiಸ್ನೇಹದ ಅಂಗಳದಲ್ಲಿ ಕಿರು ನಗೆ ಬೀರುತ್ತಾ ಮತ್ತೊಮ್ಮೆ ಫ್ರೆಂಡ್‌ಶಿಪ್ ಡೇ ಸನ್ನಿಹಿತವಾಗಿದೆ. ಸ್ನೇಹಬಂಧದಲ್ಲಿನ ಗೆಳತನದ ಸವಿಯನ್ನು ನೆನಪಿಸಲು ಮೊಬೈಲ್, ಇಮೇಲ್ ಇನ್‌ಬಾಕ್ಸ್‌ಗಳಿಗೆ ಬಂದು ಸೇರುವ ಸಂದೇಶಗಳೆಷ್ಟು? ಸ್ನೇಹಿತರನ್ನು ಪರಸ್ಪರ ಹೆಣೆಯುವ ಅಂತರ್ಜಾಲ ಸಾಮಾಜಿಕ ಸಮೂಹಗಳಾದ ಆರ್ಕುಟ್, ಫೇಸ್ ಬುಕ್ ಮೊದಲಾದವುಗಳ ಮೂಲಕ ತಲುಪುವ ರಂಗುರಂಗಿನ ಸ್ಕ್ರಾಪ್‌ಗಳು. ಗೆಳೆತನದ ಸ್ನೇಹವನ್ನು ಬಿಂಬಿಸಲು ಎಷ್ಟೆಷ್ಟು ವಿಧಾನಗಳು?. ಒಂದಂತೂ ನಿಜ, ಕಾಲ ಬದಲಾಗುತ್ತಿದ್ದಂತೆ ಗೆಳೆತನದ ರೂಪವೂ ಬದಲಾಗುತ್ತಾ ಬರುತ್ತಿದೆ. ಪುರಾಣಗಳಲ್ಲಿ ಕೃಷ್ಣ -ಸುಧಾಮನ ಗೆಳೆತನದ ಕತೆಯನ್ನು ಓದಿ ಬೆಳೆದವರು ನಾವು. ಇಂತಹ ಗೆಳೆತನವು ಇಂದು ನಮ್ಮೆಲ್ಲೆಡೆಯಲ್ಲಿದೆಯೇ? ಇದ್ದರೂ ಅಪರೂಪವಾಗಿದ್ದು, ಅಂತಹ ಗೆಳೆತನವನ್ನು ಸವಿದವರು ನಿಜವಾಗಿಯೂ ಭಾಗ್ಯಶಾಲಿಗಳೆಂದೇ ಹೇಳಬೇಕು. ಯಾಕೆಂದರೆ ಇದು ಕಲಿಯುಗ! ಇಂದು ತಮ್ಮ ಕಾರ್ಯಸಾಧನೆಗಾಗಿ ಗೆಳೆತನವನ್ನು ಬಳಸಿಕೊಳ್ಳುತ್ತಿರುವವರೇ ಹೆಚ್ಚು. ಏನೇ ಇರಲಿ, ಫ್ರೆಂಡ್‌ಶಿಪ್ ಡೇ ಬಂತೆಂದರೆ ಫ್ರೆಂಡ್‌ಶಿಪ್ ಬ್ಯಾಂಡ್ ಕೈಗೆ ಬಿಗಿದ ಮಾತ್ರಕ್ಕೆ ಗೆಳೆತನದ ಭರವಸೆಯನ್ನು ನಿಭಾಯಿಸಿದಂತೆ ಆಗುತ್ತದೆಯೇ? ಯೇ ದೋಸ್ತಿ ಹಮ್ ನಹೀ ಚೋಡೆಂಗೆ..ಎಂದು ನಮ್ಮ ಆಟೋಗ್ರಾಫ್‌ನಲ್ಲಿ ಬರೆದ ಗೆಳೆಯ ಗೆಳತಿಯರು ಎಲ್ಲಿದ್ದಾರೋ ಎಂಬುದು ನಮಗಿಂದು ತಿಳಿದಿಲ್ಲವಾದರೂ ಅಂದಿನ ಗೆಳೆತನದ ಸಿಹಿ-ಕಹಿ ನೆನಪುಗಳು ಮನಸ್ಸಿನಲ್ಲಿ ಎಂದೂ ಹಚ್ಚ ಹಸುರಾಗಿಯೇ ಇವೆ. ಮುಂದೆ ಓದಿ »

ಅವಸ್ಥೆ
July 28, 2008 - 2:58pm — rashmi_paiನಮ್ಮ ಮುರುಕಲು ಗುಡಿಸಲ ಒಳಗೆ
ಬುಡ್ಡಿ ದೀಪದ ಸುತ್ತ
ಪಿಸು ಮಾತುಗಳು ಹುಟ್ಟುವುದಿಲ್ಲ
ಸ್ನೇಹ ಮಾತ್ರ ಪಸರಿಸುವ ನಮ್ಮವರ
ಗೋಡೆ, ಬೇಲಿಗಳಲ್ಲಿ ಕಳ್ಳಿ ಗಿಡಗಳೂ ಬೆಳೆಯುವುದಿಲ್ಲ
ಹಗಲಿರುಳು ದುಡಿದ ಕೈ ಕಾಲುಗಳ
ಚಾಚಿ ಮಲಗುವೆನೆಂದರೆ
ಅಷ್ಟೂ ಜಾಗವೂ ಇಲ್ಲಿಲ್ಲ ಬಿಡಿ,
ಹೊಟ್ಟೆ ಹಸಿದಾಗ ಕೆಲವೊಮ್ಮೆ
ಪಾತ್ರೆ ತಳದಲ್ಲಿ ಗಂಜಿ ನೀರೂ ಇರುವುದಿಲ್ಲ ಮುಂದೆ ಓದಿ »

ಬನ್ನಿ, ಬಾಲ್ಯಕ್ಕೆ ಮರಳೋಣ...
July 26, 2008 - 8:01pm — rashmi_paiಬದಲಾಗುತ್ತಿರುವ ಈ ನವಯುಗದ ಜೀವನದಲ್ಲಿ 'ಮಹತ್ವ'ವಾದುದನ್ನು ಸಾಧಿಸಬೇಕೆನ್ನುವ ಹಂಬಲ. ಎಲ್ಲದರಲ್ಲೂ ಮುಂದೆ ಬರಬೇಕೆಂಬ ತುಡಿತ. ಹಣ, ಗೌರವ, ಪ್ರೀತಿ, ಸೌಂದರ್ಯ ಎಲ್ಲವನ್ನೂ ಒಟ್ಟೊಟ್ಟಿಗೆ ಪಡೆಯಬೇಕೆಂಬ ತೀವ್ರ ಆಸೆಗಳಲ್ಲಿ ನಮ್ಮನ್ನು ನಾವೇ ಮರೆಯುತ್ತಿದ್ದೇವೆ. ಅಲ್ಲವೇ? ಕೆಲಸದ ಒತ್ತಡದಲ್ಲಿ 'ನೆಮ್ಮದಿ' ಎಂಬುದು ಅಪರೂಪದ ಸಂಗತಿಯಾಗಿರುವಾಗ ಬಾಲ್ಯದ ಕೆಲವು ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿ, ಮುಖದಲ್ಲಿ ನಗು ಬೀರಲಿರುವ ಒಂದು ಪುಟ್ಟ ಪ್ರಯತ್ನವಿದು.
ಈ ಕೆಳಗಿನ ಘಟನೆಗಳನ್ನು ಓದುವಾಗ ಬಾಲ್ಯದ ಚಿತ್ರಣವನ್ನು ಮನಸ್ಸಿಗೆ ತಂದು ಕೊಳ್ಳಿ...ಕಳೆದು ಹೋದ ಆ ಬಾಲ್ಯದ ನೆನಪುಗಳು ಎಷ್ಟು ಚೆನ್ನಾಗಿವೆ ಅಲ್ಲವಾ?
1. ಹಬ್ಬಕ್ಕಾಗಿ ಹೊಸ ಉಡುಪು ತಂದಾಗ ಅದನ್ನು ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸಿದ್ದು. ಅಬ್ಬಾ ಅದರ ಪರಿಮಳ! ಹಬ್ಬಕ್ಕಾಗಿ ದಿನ ಎಣಿಸುತ್ತಾ ಕಾಲ ಕಳೆದದ್ದು.
2. ತರಗತಿಯಲ್ಲಿರುವ ಖಾಲಿ ಬೆಂಚಿನ ಒಂದು ತುದಿಯಲ್ಲಿ ನಾವೊಬ್ಬರೇ ಕುಳಿತು ಕೊಂಡಾಗ ಬೆಂಚು ಮೇಲಕ್ಕೇರಿದನ್ನು ನೆನೆಸಿದರೆ ಎದೆ' ಝಲ್' ಎನ್ನಲಿಲ್ಲವಾ?
3.ಮಾವಿನ ಮರಕ್ಕೇರೆ, ಬಾವಲಿಯಂತೆ ಹಣ್ಣನ್ನು ಕೊಯ್ಯದೆಯೇ ಕಚ್ಚಿ ತಿಂದದ್ದು.
4. ಗೇರು ಹಣ್ಣು ತಿಂದು ರಸ ಅಂಗಿಗೆ ಉಜ್ಜುತ್ತಿದ್ದದ್ದು. ಅಂಗಿಯಲ್ಲಿ ಗೇರು ಹಣ್ಣಿನ ಕಲೆ ಎಷ್ಟಿತ್ತು ಅಲ್ಲವಾ? ಮುಂದೆ ಓದಿ »

ಮರಣವೇ ನೀನೇಕೆ ಕಾಡುವೆ?
July 24, 2008 - 3:28pm — rashmi_paiಮರಣವೇ ನೀನೇಕೆ ಕಾಡುವೆ
ನಿನಗೆ ನೀಡಲು ನನ್ನೊಡಲಲ್ಲಿ
ಏನಿದೆ ಹೇಳು?
ಬರೀ ಮಾಂಸದ ಮುದ್ದೆ
ದೇಹದಲಿ, ರಕ್ತ ಹೀರಲು ಬರುವಿಯಾ ನೀನು
ಅದೂ ಖಾಲಿಯಾಗಿದೆ ಎಂದೋ
ನರವ್ಯೂಹಗಳಲ್ಲಿ ಜಾಲಾಡಿದರೆ
ನಿನಗೆ ದಕ್ಕಬಹುದು ಒಂದಿಷ್ಟು
ಧಮನಿಗಳಲ್ಲೋಡುತಿಹ ಕಿಚ್ಚಿನಾ ಕಿಡಿಗಳು
ಎಚ್ಚರಿಕೆ! ತರಬಹುದು ಇದು ನಿನಗೆ ಆಘಾತ!!
ನಾನಂದು ನಿನ್ನ ಕಾಲ್ತುಳಿತದೊಳು ಮುಂದೆ ಓದಿ »

- Login or register to post comments
- 169 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಚಾ(ವ)ಡಿ ಪಟ್ಟಾಂಗ
July 23, 2008 - 6:57pm — rashmi_paiಮಾತು ನುಡಿದರೆ ಮುತ್ತಿನಂತಿರಬೇಕೆಂಬುದು ಕವಿವಾಣಿ. ಮಾತಿನ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ವರ್ಣಿಸಿದರೂ ಮಾತಿನ ಬಗ್ಗೆ ಮಾತೇ ಮುಗಿಯುವುದಿಲ್ಲ. ಮಾತು ಎಂದರೆ ಏನು ಮತ್ತು ಹೇಗೆ ಎಂದು ಹೇಳುತ್ತಾ ಹೋದರೆ ಬರಿ ಮಾತಿನಲ್ಲಿಯೇ ಸಮಯ ವ್ಯರ್ಥವಾಗುತ್ತದೆ ಯಾಕೆಂದರೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ! ಮುಂದೆ ಓದಿ »

- Login or register to post comments
- 169 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: