savithasr (ಬ್ಲಾಗ್ ಬರಹಗಳು)
ಬಹಳ ಕಾಡಿದ ನುಡಿಮುತ್ತು...ಅರ್ಥೈಸುವಿರಾ?
November 21, 2008 - 12:18pm — savithasr
"ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ."
-ವಿನೋಬಾ ಭಾವೆ
ಮುಂದೆ ಓದಿ »

ನಾ ಕಂಡಂತೆ...ಕನ್ನಡ ರಾಜ್ಯೋತ್ಸವ...ನಮ್ಮಾಫೀಸ್ನಲ್ಲಿ!
November 18, 2008 - 10:39am — savithasr
ಕಾರ್ಯಕ್ರಮ ಯಾವತ್ತು ಮಾಡೋದು? ಹೊಸದಾಗಿ ಏನೇನು ಮಾಡಬಹುದು? ಯಾವ್ಯಾವ ಸ್ಪರ್ಧೆಗಳು? ಮತ್ತು ಯಾರ್ಯಾರು ನಡೆಸಿಕೊಡ್ತಾರೆ…..ಆಸಕ್ತಿ ಇರೋವರೆಲ್ಲಾ ಸೇರಿಕೊಂಡು ಒಂದು ತಿಂಗಳು ಮುಂಚೆನೇ ಮಂತ್ರಾಲೋಚನೆ(discuss) ಮಾಡಿದ್ವಿ.
ಮುಂದೆ ಓದಿ »

ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...!
October 30, 2008 - 11:32am — savithasrದ್ಯುತಿ ಸಂಶ್ಲೇಷಣೆ ಕ್ರಿಯೆ ಎಂದರೇನು?
"ಸಸ್ಯಗಳು ಮಣ್ಣಿನಿಂದ ಖನಿಜಾಂಶವನ್ನು ಮತ್ತು ನೀರನ್ನು ಹೀರಿಕೊಂಡು...ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು, ಪತ್ರಹರಿತ್ತಿನ ಸಹಾಯದಿಂದ ತಮ್ಮ ಆಹಾರವನ್ನು ತಯಾರಿಸಿಕೊಳ್ಳುವ ಕ್ರಿಯೆಯನ್ನ ದ್ಯುತಿ ಸಂಶ್ಲೇಷಣೆ ಕ್ರಿಯೆಯೆನ್ನುವರು."
ಇದು ಆರೇಳನೇ ತರಗತಿಯಲ್ಲಿ ಕಲಿತ ಉತ್ತರ .
ಹೆಚ್ಚಿನ ವಿವರಗಳು: http://en.wikipedia.org/wiki/Photosynthesis
'ದ್ಯುತಿ ಸಂಶ್ಲೇಷಣೆ' ಪದ ಕನ್ನಡದ್ದಲ್ವಂತೆ, ಸಂಸ್ಕೃತದಿಂದ ಎರವಲಾಗಿ ಪಡೆದ ಪದ! ಮುಂದೆ ಓದಿ »

ಮಾಲ್ಗುಡಿ ಡೇಸ್...ಶಂಕರ್ ನಾಗ್ ನೆನಪುಗಳು
September 30, 2008 - 2:41pm — savithasrನನ್ನ ಬಹುದಿನದ ಆಸೆಯಂತೆ...ನೆನ್ನೆ ಅರ್.ಕೆ. ನಾರಾಯಣರ ಎಲ್ಲ ಪುಸ್ತಕಗಳನ್ನ ಮನೆಗೆ ತಗೊಂಡು ಬಂದೆ. "ಮಾಲ್ಗುಡಿ ಡೇಸ್" ಬಹು ಇಷ್ಟವಾದದ್ದು. ಚಿಕ್ಕಂದಿನಲ್ಲಿ ನಾನು ಮತ್ತು ನನ್ನ ತಮ್ಮ ನಮ್ಮಮ್ಮನ ಹತ್ತಿರ ಬೈಸಿಕೊಂಡಾದ್ರೂ ಸರಿ ಪಕ್ಕದ ಮನೆಗೆ ಹೋಗಿ ಮಾಲ್ಗುಡಿ ಡೇಸ್ ಧಾರವಾಹಿಯನ್ನು ನೋಡಿಬರ್ತಿದ್ವಿ.
ಆ ಧಾರವಾಹಿ ನಿರ್ಮಿಸಿದ ನಮ್ಮ ಮೆಚ್ಚಿನ ನಟ ಶಂಕರ್ ನಾಗ್ ನಮ್ಮನ್ನಗಲಿದ ದಿನ ಇಂದು. ನಾಟಕ,ರಂಗಭೂಮಿ,ದೂರದರ್ಶನ,ಚಲನ ಚಿತ್ರರಂಗವನ್ನ ಶ್ರೀಮಂತಗೊಳಿಸಿದ ಅವರ ಸಾಧನೆಗೆ, ನೆನಪಿಗೆ ನನ್ನ ನಮನ.
ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ನಂತರದ ೧೨ ವರ್ಷಗಳಲ್ಲಿ ಕನ್ನಡದ ಸುಮಾರು ೯೦ಕ್ಕೊ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.ಸೆಪ್ಟೆಂಬರ್ ೩೦, ೧೯೯೦ ರಂದು ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ಮರಣ ಹೊಂದಿದರು. ನಿಗೂಡ ರಹಸ್ಯ ಶಂಕರ್ ನಾಗ್ ಅಭಿನಯದ ಕೊನೆಯ ಚಿತ್ರ. ಮುಂದೆ ಓದಿ »

ರೈಲು ಪ್ರಯಾಣ ಬರೀ 5,000 ಕಿ.ಮೀ....!!
September 26, 2008 - 2:55pm — savithasrಮೊನ್ನೆ ನನ್ನ ದೊಡ್ಡಮ್ಮನ ಊರಿಗೆ ಹೋಗೋ ತಯಾರಿಯಲ್ಲಿದ್ದೆ..ಯಾವಾಗಲು ಬಸ್ಸಿನಲ್ಲೇ ಹೋಗೋ ನಾನು ಈ ಸಲ ರೈಲಿನಲ್ಲಿ ಹೋಗೋದು ಅಂತ ಡಿಸೈಡ್ ಮಾಡ್ದೆ..ಇಂತಾ ಚಿಕ್ಕ ವಿಚಾರದಲ್ಲಿ ಡಿಸೈಡ್ ಮಾಡೋದೇನಿದೆ ಅಂತೀರಾ!! ಇದೆ ಇಲ್ದೆ ಏನು?!!ಹಾಗೆ ವಿಚಾರ ಮಾಡಿದಾಗ... ನನಗೆ ನೆನಪಿರೋವಾಗಿಂದ ಈಗಿನವರೆಗೂ ಎಷ್ಟು ಪ್ರಯಾಣ ಮಾಡಿದ್ದೇನೆ ಅಂತ ಒಂದು ಅಂದಾಜು ಲೆಕ್ಕ ಹಾಕಿದೆ. ಮುಂದೆ ಓದಿ »








RSS: