sreeedhar (ಲೇಖನಗಳು)
ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ
July 3, 2007 - 11:36pm — sreeedhar"ತುಂಗಾ ಮೂಲ ಚಳುವಳಿ"ಯ ಕೆಲವು ಸಂಗತಿಗಳು:
" ತುಂಗಾ ಮೂಲ ಚಳುವಳಿ" ಕುರಿತಾಗಿ ದಿನಾಂಕ ೧/೭/೨೦೦೭ ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಹಳ ಲಘುವಾಗಿ ಬರೆದಿದ್ದಾರೆ. ಅದು ಶ್ರೀ. ಅನಂತಮೂರ್ತಿಯವರನ್ನು ಲೇವಡಿ ಮಾಡಲು ಬರೆದದ್ದು. ಇದು ಅತ್ಯಂತ ಬೇಜವಾಬ್ದಾರಿ ನಡುವಳಿಕೆಯಾಗಿದ್ದು ಇದನ್ನು ನಾವು ಖಂಡಿಸುತ್ತಿದ್ದೇವೆ. 'ತುಂಗಾ ಮೂಲ ಉಳಿಸಿ ಹೋರಾಟ' ಈ ನಾಡಿನ ಕೋಟ್ಯಾಂತರ ಜನರ, ರೈತರ ಬದುಕಿನಮೇಲೆ ನೇರವಾಗಿ ಪರಿಣಾಮ ಬೀರುವ ತುಂಗಾ- ಭದ್ರಾ ನದಿಗಳ ಉಳಿವಿನ ಹೋರಾಟವದು. ಈ ಅಹಿಂಸಾತ್ಮಕ ಆಂದೋಳನಕ್ಕೆ ಜನಕೋಟಿಯ ಮನಸ್ಸು- ಹೃದಯದ ಬೆಂಬಲ ದೊರಕುವಂತೆ ಮಾಡಿ ಸರ್ಕಾರವನ್ನು ಮಣಿಸಿದ್ದು ಅನಂತಮೂರ್ತಿಯವರ ನಾಯಕತ್ವ. ನಮ್ಮ ಕಾಲದ ಈ ಮಹತ್ವದ ಘಟನೆಯ ಹಿಂದಿನ ಸಂಗತಿಗಳನ್ನು ತಿಳಿಸದೇ ಹೋದರೆ ಹೀನ ಮನಸ್ಸಿನ ಜನ ಸತ್ಯವನ್ನೇ ತಿರುಚಿಬಿಡುತ್ತಾರೆಂದು ಈ ಕೆಳಗಿನ ಮಾಹಿತಿಗಳನ್ನು ನಾವು ನೀಡಬೇಕಾಗಿದೆ.
ಯಾವುದೇ ಚಳುವಳಿಗಳಿರಲಿ ಅದೊಂದು ರೀತಿಯಲ್ಲಿ ರಿಲೇ ಓಟದಂತೆ. ಕೊನೆಯ ಹಂತದ 'ಲ್ಯಾಪಿ'ನಲ್ಲಿ ಗುರಿಮುಟ್ಟುವವನು ಹಿಂದಿನವರ ಎಲ್ಲಾ ಸರಿ-ತಪ್ಪುಗಳನ್ನೂ ಹೆಗಲಮೇಲೆ ಹೊತ್ತು-ಬಳಸಿಕೊಂಡು ಗೆಲುವನ್ನು ಸಾಧಿಸಬೇಕು. ನಮ್ಮ ದೇಶದ ಸ್ವಾತಂತ್ರ ಹೋರಾಟವನ್ನೂ ಹೀಗೇ ನೋಡಿದರೆ ಗಾಂಧೀಜಿಯವರ ನಾಯಕತ್ವ ಕೊನೆಯಲ್ಲಿ ನಮಗೆ ಬಿಡುಗಡೆಯನ್ನು ನೀಡಿತು. ಈ ಕೊನೆಯ ಹಂತವೇ ಬಹಳ ಸೂಕ್ಷ್ಮ ಮತ್ತು ಆತಂಕಭರಿತವಾದದ್ದು. ಏಕೆಂದರೆ ನಿಜಕ್ಕೂ ನಮಗೆ ಯಶಸ್ಸು ಸಿಗಬಹುದೆಂಬ ಸಂಪೂರ್ಣ ನಂಬಿಕೆ ಹೋರಾಟಗಾರರಲ್ಲಿ ಇರುವುದಿಲ್ಲ. ಇಲ್ಲಿ ಸಿನಿಕತನ, ಅನುಮಾನಗಳೆಲ್ಲಾ ಇದ್ದೇ ಇರುತ್ತವೆ. ನಾವೇನು ನೂರಕ್ಕೆ ನೂರು ದೇವರನ್ನು ನಂಬುವವರೇ? ಈ ರೀತಿಯ ಅಂತಿಮ ಗಳಿಗೆಯ ಮನಸ್ಸಿನ ಸ್ಥಿತಿ ಹೋರಾಟವನ್ನು ಹಿಂಸಾ ಮಾರ್ಗದತ್ತ ತಳ್ಳುವುದನ್ನು ನಾವು ನೋಡುತ್ತಲೇ ಇರುತ್ತೇವೆ. ನಿಜಕ್ಕೂ ಅಹಿಂಸಾ ಮಾರ್ಗದಿಂದಲೇ ಕೊನೆಯ ಹಂತದ ಜಯವನ್ನು ಸಾಧಿಸಬೇಕೆಂದರೆ ನಾಯಕತ್ವದಲ್ಲಿ ಅಸೀಮ ಜಾಣತನ, ಚಾಲೂಕುತನ,ಯಾರನ್ನೂ ದ್ವೇಶಿಸದೇ ಎಲ್ಲರ ಮನಸ್ಸನ್ನು ತಟ್ಟುವ ಪ್ರಾಮಾಣಿಕತೆ- ಇವೆಲ್ಲವೂ ಮೇಳೈಸಿರಬೇಕಾಗುತ್ತದೆ. ಗಾಂಧೀಜಿ ಇದರಲ್ಲಿ ನಿಪುಣರಾಗಿದ್ದರಿಂದಲೇ ರಕ್ತಪಾತವಿಲ್ಲದೇ ಸ್ವಾತಂತ್ರ ದೊರಕಿತು. ಮುಂದೆ ಓದಿ »








RSS: