ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › User account

vikas_negiloni (ಲೇಖನಗಳು)

ಕಾಡಬೆಳದಿಂಗಳು: ಕಾಡುವ ಬೆಳದಿಂಗಳು

May 7, 2007 - 6:58pm — vikas_negiloni

 

 

ಬಿಯರ್‌ ಸವಿಯುತ್ತಾ ಟೀವಿ ನೋಡುತ್ತಿರುವಾಗ ಅಲ್ಲೊಂದು ಸುದ್ದಿ: `ಪಟಾಕಿ ಸಿಡಿಯಿತು' ಎಂದು ವರದಿಯಾದ ಬಾಂಬ್‌ ಸ್ಫೋಟದ ಸುದ್ದಿ ಅದು. ಅದರ ಸಾವಿನ ಸುದ್ದಿಯ ಪೂರ್ವಾಪರವನ್ನು ವರದಿ ಮಾಡುವುದಕ್ಕಾಗಿ ಟೀವಿ ಚಾನಲ್‌ನ ವರದಿಗಾರ್ತಿ ಸುದೇಷ್ಣೆ ರಾತ್ರೋರಾತ್ರಿ ಸ್ಥಳಕ್ಕೆ ತೆರಳುತ್ತಾಳೆ ಮತ್ತು ಆಕೆ ವರದಿ ಮಾಡಿದ ಸುದ್ದಿ ಮರುದಿನ ಟೀವಿಯಲ್ಲಿ ಪ್ರಸಾರವಾಗುತ್ತದೆ. ಸಂಪಾದಕರು ಆಕೆಯನ್ನು ಆಕ್ಷೇ ಪಿಸುತ್ತಾರೆ: ಎಲ್ಲರೂ ವರದಿ ಮಾಡಿದ್ದನ್ನೇ ನೀನೂ ಮಾಡಿದ್ದೀಯಾ. ಏನಾದರೂ ವಿಶೇಷವಾಗಿದ್ದನ್ನು ಮಾಡು.ಅತ್ತ ಬಾಂಬ್‌ ಬ್ಲಾಸ್ಟ್‌ನಲ್ಲಿ ಸತ್ತ ವ್ಯಕ್ತಿಯೊಬ್ಬನ ಜೇಬಲ್ಲಿ ಸದಾಶಿವರಾಯರ ವಿಳಾಸ ಸಿಗುತ್ತದೆ. ಸದಾಶಿವರಾಯರು ಪುಟ್ಟಳ್ಳಿಯವರು. ಅವರ ಮಗ ಸತ್ತಿರಬೇಕು ಎಂದು ಯಾರೋ ಹಳ್ಳಿಗೆ ತಾರು ಕೊಟ್ಟಿದ್ದಾರೆ. ಸದಾಶಿವರಾಯರು ಮಗನನ್ನು ನೋಡಲು ಕಂಪಿಸುವ ಕಾಲೂರುತ್ತಾ ಬೆಂಗಳೂರಿಗೆ ಬಂದಿದ್ದಾರೆ ಮತ್ತು ಹೆಣ ನೋಡಿದ್ದಾರೆ. `ನಿಮ್ಮ ಮಗನ ಹೆಣವಾ?' ಎಂದು ಪೊಲೀಸ್‌ ಸ್ಟೇಷನ್‌ನವರು ಕೇಳುತ್ತಾರೆ. ರಾಯರು ತಲೆ ಆಡಿಸುತ್ತಾರೆ. ಅದು ಹೌದು ಎಂದೂ ಆಗಿರಬಹುದು, ಅಲ್ಲ ಎಂದೂ ಆಗಿರಬಹುದು!

ಸದಾಶಿವರಾಯರು ಊರಿಗೆ ಮರಳುತ್ತಾರೆ ಮತ್ತು ಸತ್ತವ ತಮ್ಮ ಮಗ ಆಗಿರಲಿಲ್ಲ ಎಂದು ಎಲ್ಲ ರಿಗೂ ಸಾರಿ ಹೇಳಿ, ಹತ್ತಿರದವರನ್ನು ಕಳಕೊಂಡವ ರಂತೆ ಸೂತಕದ ಸ್ನಾನ ಮಾಡುತ್ತಾರೆ (ರಾಯರ ಇಪ್ಪ ತ್ತೆಂಟು ವರ್ಷದ ಮಗ ಧ್ರುವ ಓಡಿಹೋದವನು. ಓಡಿಹೋದವನ ಇರುವಿಕೆಯ ಬಗ್ಗೆ ಊರಿಡೀ ಊಹಾಪೋಹಗಳು. ಸದಾಶಿವ ರಾಯರ ನೆನಪಲ್ಲಿ ಬರುವ ಓಡಿಹೋದ ಮಗನ ಮಾತುಗಳು ಕ್ರಾಂತಿಕಾರಿಯಾಗಿವೆ. ಮಗನ ನೋಟ್‌ ಪುಸ್ತಕಗಳಲ್ಲಿ ಕ್ರಾಂತಿಕಾರಿ ಸಾಲುಗಳಿವೆ).  ಮುಂದೆ ಓದಿ »

  • ಸಿನೆಮಾ ವಿಮರ್ಶೆ
~.~
  • 16 ಪ್ರತಿಕ್ರಿಯೆಗಳು
  • 1207 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ದ್ವೀಪದ ಹಿಂದೆ ದೀಪವಿಲ್ಲ: ಖಾಸನೀಸರ ಕುರಿತೊಂದಿಷ್ಟು...

March 30, 2007 - 8:21pm — vikas_negiloni

ಮಾಗಿಕಾಲದ ವಿಪರೀತ ಚಳಿಯಲ್ಲಿ ಅಶ್ವಾರೋಹಿಯೊಬ್ಬ ಹಿಮದಿಂದ ಹೆಪ್ಪುಗಟ್ಟಿದ ನೆಲದ ಗುಂಟ ಸರೋವರವೊಂದನ್ನು ಹುಡುಕಿಕೊಂಡು ಸಾಗುತ್ತಾನೆ. ಇದು ಕತೆ- ಕನಸು- ವಾಸ್ತವತೆ ಎಲ್ಲವನ್ನೂ ಕೂಡಿದ್ದು. ಸೃಷ್ಟಿಯೆಲ್ಲವೂ ಹಿಮಾಚ್ಛಾದಿತವಾಗಿದ್ದು ದಾರಿಯಲ್ಲಿ ಏನನ್ನೂ ಗುರುತಿಸಲಿಕ್ಕಾಗುವುದಿಲ್ಲ. ನಿರ್ಜನವಾದ ಈ ಪ್ರದೇಶದಲ್ಲಿ ತೆಳ್ಳಗಿನ ಹಿಮದ ಪದರಿನ ಮೇಲೆ ಕುದುರೆಯ ಖುರಪುಟದ ಸದ್ದೂ ಇಲ್ಲದೇ ಸಾಗಿರುವ ಈ ಕುದುರೆ ಸವಾರ ಕೊನೆಗೊಮ್ಮೆ ನೆರೆದಿದ್ದ ಜನರ ಚಿಕ್ಕ ಗುಂಪೊಂದನ್ನು ಗಮನಿಸಿ ಕುದುರೆಯನ್ನು ನಿಲ್ಲಿಸುತ್ತಾನೆ. ನೆರೆದಿದ್ದ ಜನ ಅವನನ್ನು ಸುತ್ತುಗಟ್ಟಿ, ತಬ್ಬಿಬ್ಬಾಗಿ ಒಬ್ಬ ಪವಾಡ ಪುರುಷನನ್ನು ನೋಡಿದಂತೆ ನೋಡುತ್ತಾರೆ. ತಾನು ಹುಡುಕುತ್ತಿರುವ ಸರೋವರವನ್ನು ಹೆಸರಿಸಿ `ಅದೆಲ್ಲಿ' ಎಂದು ಕೇಳುತ್ತಾನೆ. ನೆರೆದವರೆಲ್ಲಾ ಮೂಕವಿಸ್ಮಿತರಾದರು. ಅವರಲ್ಲೊಬ್ಬ ಹೇಳುತ್ತಾನೆ: `ನೀವು ಇದುವರೆಗೆ ಬಂದಿದ್ದೇ ಈ ಸರೋವರದ ಮೇಲಿಂದ. ಅದು ದಾರಿಯಲ್ಲ, ಮೇಲೆ ಕಾಣುವ ತೆಳ್ಳಗೆ ಹೆಪ್ಪುಗಟ್ಟಿದ ಹಿಮ'. ಅಶ್ವಾರೋಹಿ ಅವಾಕ್ಕಾದ. ತಾನು ಬಂದಿದ್ದು ನೀರಿನ ಮೇಲಿಂದ! ನಿಶ್ಚಿತವಾಗಿದ್ದ ಸಾವಿನ ಕಲ್ಪನೆಯನ್ನು ಅವನು ಸಹಿಸದಾದ. ಅದರಿಂದಾದ ಆಘಾತದಿಂದ ತತ್‌ಕ್ಷಣ ಅಲ್ಲಿಯೇ ಕುಸಿದು ಬಿದ್ದ.

(`ಅಶ್ವಾರೋಹಿ' ಕತೆಯಿಂದ)
***
 ಮುಂದೆ ಓದಿ »

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 428 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rameshbalaganchi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 6:55am
  • lsiddappa
    ಉ: ಅಂತರ್ಜಾತಿ ವಿವಾಹ
    December 3, 2008 - 6:22am
  • lsiddappa
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?":- ಭಾಗ ೨
    December 3, 2008 - 6:21am
  • kannadakanda
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 6:19am
  • kannadakanda
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 6:18am
  • venkatesh
    ಉ: ಅಮೃತ್ ಮಂಗ್ಳೂರ್ ಯಾಕೊ ಕಾಣ್ವಲ್ರಲ್ಲ ; ಬ್ಯಾಸ್ರಿಕೆಆಯ್ತೇನ್ರಿ, ಎಲ್ ಹೋಗ್ಯಾರ್ರಿ ?
    December 3, 2008 - 5:59am
  • lsiddappa
    ಉ: ಕ್ಷಮಿಸು ನಾ ರಾಧೆಯಲ್ಲ-೩
    December 3, 2008 - 5:54am
  • hamsanandi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 5:10am
  • venkatesh
    ಉ: ಮರುಕಳಿಸಿದ ನೆನಪು
    December 3, 2008 - 4:45am
  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
ಇನ್ನಷ್ಟು


ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ

— ದೇವರ ದಾಸಿಮಯ್ಯ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator