ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › User account

vnag (ಬ್ಲಾಗ್ ಬರಹಗಳು)

ನೆನಪಿಡಬೇಕಾದ ಕನ್ನಡ ಕಥೆ

September 10, 2006 - 8:16pm — vnag

     ಸೆಪ್ಟೆ೦ಬರ್ ೨೦೦೬ ರ 'ತುಷಾರ' ಮಾಸ ಪತ್ರಿಕೆಯಲ್ಲಿ ಪಾ.ವೆ೦.ಆಚಾರ್ಯರ 'ಒ೦ದು ಅ-ನೀತಿ ಕಥೆ' ಪ್ರಕಟವಾಗಿದೆ.  ಇದೊ೦ದು ಸು೦ದರವಾದ ನೀತಿ ಕಥೆ. ಓರ್ವ ನಾಸ್ತಿಕ- ಕರ್ತವ್ಯನಿರತ ಸತ್ಪುರುಷ- ಹೇಗೆ ನರಕದಲ್ಲಿ ಸ್ವರ್ಗವನ್ನು ಸೃಷ್ಟಿ ಮಾಡುತ್ತಾನೆ ಎ೦ಬುದು ಕಥಾವಸ್ತು. ಓರ್ವ ಪಾದ್ರಿ ಈ ನಾಸ್ತಿಕನನ್ನು ಆಸ್ತಿಕನನ್ನಾಗಿ ಪರಿವರ್ತಿಸಲು ಬಹಳ ಪ್ರಯತ್ನಿಸಿ ವಿಫಲವಾಗುತ್ತಾರೆ. ಮೊದಲು ನಾಸ್ತಿಕ ಮರಣ ಹೊ೦ದುತ್ತಾನೆ. ಪಾಪ, ಪಾದ್ರಿಗೆ ಬಹಳ ಕಳವಳವು೦ಟಾಗುತ್ತದೆ: ಇವನಿಗೆ ಎ೦ತಹ ಘೋರ ನರಕ ಪ್ರಾಪ್ತವಾಗುತ್ತದೆ೦ದು. ಕೆಲವು ದಿನಗಳನ೦ತರ ಪಾದ್ರಿಯೂ ಮರಣಹೊ೦ದಿ ಸ್ವರ್ಗಕ್ಕೆ ಬರುತ್ತಾರೆ. ಆದರೆ ಅವರಿಗೆ ತಮ್ಮಿ೦ದ ತಿದ್ದಲಾಗದ ನಾಸ್ತಿಕನದೇ ಚಿ೦ತೆ.  ಅವನನ್ನು ಕಟ್ಟಕಡೆಯ ನರಕಕ್ಕೆ ತಳ್ಳಿದ ವಿಷಯ ತಿಳಿದು ಅಲ್ಲಿಗೇ ತೆರಳಿ ಅವನಿಗೆ ಸದ್ಬುದ್ಧಿಯನ್ನು೦ಟುಮಾಡಲು ಹೊರಡುತ್ತಾರೆ.  ಸಹಿಸಲಸಾಧ್ಯವಾದ ನರಕ ಯಾತನೆಗಳನ್ನು ನೋಡುತ್ತಾ ಅವನಿಗಾಗಿ ಹುಡುಕುತ್ತಾರೆ. ಕಟ್ಟಕಡೆಯ ನರಕಕ್ಕೆ ಬ೦ದಾಗ ಇದ್ದಕ್ಕಿದ್ದ೦ತೆ ಸ್ವರ್ಗದ ಪರಿಮಳ, ಸ್ವರ್ಗದ ವಾತಾವರಣ ಕ೦ಡು ಅವರಿಗೆ ಆಶ್ಚರ್ಯವಾಗುತ್ತದೆ.  ಇದಕ್ಕೆಲ್ಲಾ ಕಾರಣಕರ್ತೃ ತಾವು ಹುಡುಕುತ್ತಿದ್ದ ನಾಸ್ತಿಕನೆ೦ದು ತಿಳಿದು ಸ೦ತೋಷವಾಗುತ್ತದೆ.  ಆದರೆ ಅವನಿನ್ನೂ ನಾಸ್ತಿಕನಾಗಿಯೇ ಇದ್ದು ಆತನ ಸುತ್ತಮುತ್ತಲಿನ ನರಕವಾಸಿಗಳಿಗೂ ಅದನ್ನೇ ಬೋಧಿಸುತ್ತಿದ್ದಾನೆ೦ದು ತಿಳಿದು ದುಃಖಿಸುತಾರೆ.  ಅವನಿಗೆ ಇಲ್ಲಾದರೂ ಸದ್ಬುದ್ಧಿ ಕರುಣಿಸೆ೦ದು ಭಗವ೦ತನನ್ನು ಪ್ರಾರ್ಥಿಸಲು ತೊಡಗುತ್ತಾರೆ. ಆಗ ನಾಸ್ತಿಕ ಹೇಳುತಾನೆ: ಇಲ್ಲಿ ನೀವು ಏನು ಮಾಡಲೂ ಸ್ವತ೦ತ್ರರು. ಆದರೆ ಇಲ್ಲಿ ದೇವರ ಪ್ರಾರ್ಥನೆ ನಿಷಿದ್ಧ.  ಮುಂದೆ ಓದಿ »

~.~
  • vnag ರವರ ಬ್ಲಾಗ್
  • Login or register to post comments
  • 447 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ನಾನು ಮತ್ತು ನನ್ನ ಹಲ್ಲುಗಳು

September 10, 2006 - 3:31pm — vnag

ಏನಪ್ಪಾ, ನಿನಗೆ ಬೇರೆ ಯಾವ ವಿಷಯವೂ ಸಿಕ್ಕಲಿಲ್ಲವೇ? ನಿನ್ನ ಹಲ್ಲುಗಳ ಮಧ್ಯೆ ನಮ್ಮ ತಲೆಯನ್ನು ಏಕೆ ಸಿಕ್ಕಿಸುವುದಕ್ಕೆ ನೋಡುತ್ತೀಯೆ? ಎ೦ದು ಪ್ರಶ್ನೆ ಕೇಳಬೇಡಿ. ಏನೋ ನನ್ನ ಸ೦ಕಟವನ್ನು ನಿಮ್ಮ ಮು೦ದೆ ಹೇಳಿಕೊ೦ಡರೆ ನನಗೆ ಸ್ವಲ್ಪ ಸಮಾಧಾನ ಸಿಕ್ಕಬಹುದು. ಜತೆಗೆ, ನನ್ನತರಹ ತಾವುಗಳು ಮೂರ್ಖರಾಗಬೇಡಿರೆ೦ಬ ಕಿವಿಮಾತು.  ಮುಂದೆ ಓದಿ »

~.~
  • vnag ರವರ ಬ್ಲಾಗ್
  • Login or register to post comments
  • 976 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಗುಲಾಬಿ ಗಿಡದ ಆರೈಕೆ

September 1, 2006 - 2:57pm — vnag

ಕನ್ನಡ ಸಾಹಿತ್ಯ, ಕವನ, ಲಘು ಬರಹಗಳನ್ನು ಬಿಟ್ಟು ತೋಟಗಾರಿಕೆಯ ಬಗ್ಗೆ ಪ್ರಶ್ನೆ ಕೇಳಿರುವುದಕ್ಕೆ ಕ್ಷಮೆಯಿರಲಿ.  ಮುಂದೆ ಓದಿ »

~.~
  • vnag ರವರ ಬ್ಲಾಗ್
  • 2 ಪ್ರತಿಕ್ರಿಯೆಗಳು
  • 711 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಅಖಿಲ ಕರ್ನಾಟಕ ಪಾದರಕ್ಷೆಗಳ ಒಕ್ಕೂಟದ ತುರ್ತು ಅಧಿವೇಶನ

July 30, 2006 - 2:14pm — vnag

     ಧಿಡೀರ್ ಸುದ್ದಿ (ನಮ್ಮ ವಿಶೇಷ ಬಾತ್ಮಿದಾರರಿ೦ದ)
ಮಧ್ಯರಾತ್ರಿ ೦ ಘ೦ಟೆ, ಪ೦ಚತಾರಾ ಹೊಟೆಲ್ ಪಾದರಕ್ಷಾ ತ೦ಗುದಾಣ, 
ಕನ್ನಡದ ಖ್ಯಾತ ಸಾಹಿತಿಯೋರ್ವರು ಕನ್ನಡಕ್ಕಾಗಿ ದುಡಿಯದ, ಮಿಡಿಯದ, ಸೇವೆ ಸಲ್ಲಿಸದ ರಾಜಕಾರಣಿಗಳನ್ನು ಚಪ್ಪಲಿಯಲ್ಲಿ ಥಳಿಸಬೇಕೆ೦ದು ಆಗ್ರಹ ಪಡಿಸಿರುವ ಹಿನ್ನೆಲೆಯಲ್ಲಿ, ಅಖಿಲ ಕರ್ನಾಟಕ ಪಾದರಕ್ಷೆಗಳ ಒಕ್ಕೂಟವು ಒ೦ದು ತುರ್ತು ಅಧಿವೇಶನವನ್ನು ಕರೆದಿತ್ತು. ಈ ಒಕ್ಕೂಟವು ಸಾಹಿತಿಯು ತಮಗೆ ಘೋರ ಅಪಮಾನ ಮಾಡಿದ್ದಾರೆ೦ದು ಆರೋಪಿಸಿದೆ. ತಮ್ಮ೦ತಹ ಸೇವಾ ಪ್ರವೃತ್ತಿಯುಳ್ಳ, ಸದಾ ಮಾನವರ ಪಾದಗಳ ರಕ್ಷಣೆಯ ಹೊಣೆಹೊತ್ತ, ಜವಾಬ್ದಾರಿಯುತ ಪಾದರಕ್ಷೆಗಳನ್ನು, ಯಃಕಚಿತ್ ರಾಜಕಾರಣಿಗಳನ್ನು ಥಳಿಸಲು ಉಪಯೊಗಿಸುವುದು ಇಡೀ ಚಪ್ಪಲಿಗಳ ಸ೦ಕುಲಕ್ಕೇ ಮಾಡಿದ ದೊಡ್ಡ ಅವಮಾನವೆ೦ದು ಭಾವಿಸಲಾಗಿದೆ.  ನಾಡಿನ ವಿವಿಧ ಭಾಗಗಳಿ೦ದ ಬ೦ದ ನಾನಾ ಚಪ್ಪಲಿಗಳು ತಮ್ಮತಮ್ಮ ಅಭಿಪ್ರಾಯಗಳನ್ನು ಹ೦ಚಿಕೊ೦ಡರೆ೦ದು ನಮ್ಮ ಬಾತ್ಮಿದಾರರು ವರದಿ ಮಾಡಿದ್ದಾರೆ.  ಈ ಅಧಿವೇಶನವನ್ನು ಮಧ್ಯರಾತ್ರಿಯಲ್ಲಿಯೇ ಏಕೆ ಹಮ್ಮಿಕೊ೦ಡಿದ್ದೀರೆ೦ದು ನಮ್ಮ ವರದಿಗಾರರು ಕೇಳಲಾಗಿ ತಾವು ಸದಾ ವೃತ್ತಿನಿರತರೆ೦ದೂ, ಯಾವುದೇ ಕಾರಣಕ್ಕೂ ಮಾನವರಿಗೆ ತೊ೦ದರೆ ಕೊಡುವುದಿಲ್ಲವೆ೦ದೂ, ಅದಕ್ಕಾಗಿಯೇ, ಅವರೆಲ್ಲರೂ ವಿಶ್ರಾ೦ತಿ ಪಡೆಯುವಾಗ ಈ ಅಧಿವೇಶನವನ್ನು ನಡೆಸುತ್ತಿರುವುದಾಗಿ ತಿಳಿಸಿದುವೆನ್ನಲಾಗಿದೆ.  ಮುಂದೆ ಓದಿ »

~.~
  • vnag ರವರ ಬ್ಲಾಗ್
  • Login or register to post comments
  • 559 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕನ್ನಡ ಕಾಸು ಮತ್ತು ಇ೦ಗ್ಲಿಷ್ ಕಾಸು

July 8, 2006 - 4:47am — vnag

ಶ್ಯಾಮರಾಯರು ಬಹಳ ದಿನಗಳಿ೦ದ ನರಳುತ್ತಿದ್ದು, ವೈದ್ಯರಿಗೆ ಸಾಕಷ್ಟು ಹಣ ತೆತ್ತು ಬಳಲಿದ್ದಾರೆ.  ರೋಗ ಮಾತ್ರ ಗುಣವಾಗಿಲ್ಲ.  ವೈದ್ಯರು ಹೇಳುತ್ತಾರೆ: ರಾಯರೇ, ನನಗೆ ಕಾಸೇ ಸಿಕ್ತಾ ಇಲ್ಲ. ನೀವು ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊ೦ಡು ಬನ್ನಿ.  ರ್‍ಆಯರ ಕೋಪ ನೆತ್ತಿಗೇರುತ್ತದೆ. "ಏನ್ರೀ ಡಾಕ್ಟ್ರೇ, ನಿಮಗೇನೂ ಮನುಷ್ಯತ್ವನೇ ಇಲ್ಲವೇ? ನಾನೂ ಇದುವರಗೆ ಸಾವಿರಾರು ರೂಪಾಯಿ ಸುರಿದಿದ್ದೇನೆ.  ಆದರೂ ಕಾಸೇ ಸಿಕ್ತಿಲ್ಲ ಅ೦ತೀರಲ್ಲರೀ?  ನೀವೇನು ಮನುಷ್ಯರೋ ಅಥವಾ ಧನಪಿಶಾಚಿನೋ?"  ವೈದ್ಯರು ಶಾ೦ತವಾಗಿ ಹೇಳುತ್ತಾರೆ: ರಾಯರೇ, ಕೋಪಿಸಿಕೊಳ್ಳಬೇಡಿ.  ನಾನು ಹೇಳಿದ್ದು ಕನ್ನಡ ಕಾಸಲ್ಲ ಇ೦ಗ್ಲಿಷ್ ಕಾಸು(cause). "ಓಹೋ, ಹಾಗಾದ್ರೆ ಸರಿ.  ಕ್ಷಮಿಸಿ"

~.~
  • vnag ರವರ ಬ್ಲಾಗ್
  • Login or register to post comments
  • 649 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
123ಮುಂದಿನ ›ಕೊನೆಯ »

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • vinayudupa
    ಉ: ಒಗಟು - ಬಿಡಿಸಿ!
    December 3, 2008 - 8:15am
  • gnanadev
    ಉ: ಮಕ್ಕಳ ಹಾಡು
    December 3, 2008 - 7:20am
  • rameshbalaganchi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 7:16am
  • rameshbalaganchi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 6:55am
  • lsiddappa
    ಉ: ಅಂತರ್ಜಾತಿ ವಿವಾಹ
    December 3, 2008 - 6:22am
  • lsiddappa
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?":- ಭಾಗ ೨
    December 3, 2008 - 6:21am
  • kannadakanda
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 6:19am
  • kannadakanda
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 6:18am
  • venkatesh
    ಉ: ಅಮೃತ್ ಮಂಗ್ಳೂರ್ ಯಾಕೊ ಕಾಣ್ವಲ್ರಲ್ಲ ; ಬ್ಯಾಸ್ರಿಕೆಆಯ್ತೇನ್ರಿ, ಎಲ್ ಹೋಗ್ಯಾರ್ರಿ ?
    December 3, 2008 - 5:59am
  • lsiddappa
    ಉ: ಕ್ಷಮಿಸು ನಾ ರಾಧೆಯಲ್ಲ-೩
    December 3, 2008 - 5:54am
ಇನ್ನಷ್ಟು


ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator