ಅಡುಗೆಯಲ್ಲೊಂದು ಕ್ರಾಂತಿ!

To prevent automated spam submissions leave this field empty.

ಅಡುಗೆ ಅನಿಲದ ರೀಫಿಲ್ ಬುಕಿಂಗ್ ಈಗ ಎಷ್ಟೊಂದು ಸುಲಭವಾಗಿದೆ! ಇದುವರೆಗೂ ನಿಮ್ಮ ವಿತರಕರು ಕೊಟ್ಟಿರುವ ಯಾವುದೇ ಫೋನ್ ಸಂಖ್ಯೆಗೆ ಡಯಲ್ ಮಾಡಿದರೂ ಆ ಕಡೆಯಿಂದ ಫೋನ್ ಎತ್ತುತ್ತಿರಲಿಲ್ಲ; ಇಲ್ಲವೇ ಫೋನ್ ದುರಸ್ತಿಯಲ್ಲಿದೆ; ಇಲ್ಲಾ ಅವರು ಬೇರೆ ಕರೆಗಳಲ್ಲಿ ನಿರತರಾಗಿದ್ದಾರೆ, ಇತ್ಯಾದಿ ಉತ್ತರಗಳು ಬರುತ್ತಿದ್ದವು. ಈಗ ಅರೆ ನಿಮಿಷದಲ್ಲಿ ಬುಕ್ ಮಾಡಬಲ್ಲ ಸೌಲಭ್ಯವನ್ನು ನೋಡಿದರೆ, ನಾವು ಭಾರತದಲ್ಲಿದ್ದೇವೋ, ಇಲ್ಲಾ ಅಮೇರಿಕಾ, ಅಥವಾ ಯೂರೋಪ್ ಇಲ್ಲವೇ ಜಪಾನಿನಲ್ಲಿದ್ದೇವೋ ಎಂಬ ಸಂಶಯ ಬರುತ್ತದೆ! ಟೆಲಿಫೋನ್ ವ್ಯವಸ್ಥೆಯಲ್ಲಿ ಆದ ಕ್ರಾಂತಿಯ ಬಳಿಕ ನಡೆದ ಕ್ರಾಂತಿ ಇದೇ ಏನೋ!


ಇಂಡೇನ್ ಅನಿಲವಾದರೆ ೮೯೭೦೦೨೪೩೬೫ ಡಯಲ್ ಮಾಡಿ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಬೇಕಾದುದನ್ನು ಆರಿಸಿ. ಎಸ್ ಟಿ ಡಿ ಕೋಡಿನೊಂದಿಗೆ ನಿಮ್ಮ ವಿತರಕರ ಲ್ಯಾಂಡ್ ಲೈನ್ ಸಂಖ್ಯೆಯನ್ನು ನಿಮ್ಮ ಫೋನಿನಲ್ಲಿ ಒತ್ತಿ. ನಿಮ್ಮ ಗ್ರಾಹಕರ ಸಂಖ್ಯೆಯನ್ನು ಎಂಟರ್ ಮಾಡಿ. ನಿಮ್ಮ ವಿತರಕರೊಂದಿಗೆ ನಿಮ್ಮ ಗ್ರಾಹಕ ಸಂಖ್ಯೆ ರಿಜಿಸ್ಟರ್ ಆಯಿತು.


ರೀಫಿಲ್ ಬುಕ್ ಮಾಡಲು ೮೯೭೦೦೨೪೩೬೫ ಡಯಲ್ ಮಾಡಿದರೆ ನಿಮ್ಮ ಗ್ರಾಹಕ ಸಂಖ್ಯೆಯನ್ನು ಹೇಳಲಾಗುತ್ತದೆ. ರೆಕಾರ್ಡೆಡ್ ಸಲಹೆಯಂತೆ ಬುಕಿಂಗಿಗೆ ೧ನ್ನು ಒತ್ತಿದರೆ ಬುಕಿಂಗ್ ಆಯಿತು! ನಿಮ್ಮ ಬುಕಿಂಗ್ ಸಂಖ್ಯೆಯನ್ನೂ ತಿಳಿಸಲಾಗುತ್ತದೆ. ಎಷ್ಟನೇ ಬುಕಿಂಗ್ ಸಂಖ್ಯೆಯವರೆಗೆ ವಿತರಣೆಯಾಗಿದೆಯೆಂದು ತಿಳಿಸಲಾಗುತ್ತದೆ. ಇದರಿಂದ ನಿಮಗೆ ಯಾವಾಗ ವಿತರಣೆಯಾಗಬಹುದೆಂದು ಅಂದಾಜು ಮಾಡಬಹುದು.


ಮೊಬೈಲ್ ಫೋನಿನಲ್ಲಿ ಬುಕ್ ಮಾಡಿದರೆ ತಕ್ಷಣ ನಿಮ್ಮ ಬುಕಿಂಗ್ ಸಂಖ್ಯೆಯನ್ನು ಎಸ್ ಎಮ್ ಎಸ್ ನಲ್ಲಿ ತಿಳಿಸಲಾಗುತ್ತದೆ.


ಗ್ರಾಹಕರಿಗೆ ಸೌಲಭ್ಯವನ್ನು ಕೊಡಬೇಕು ಎಂಬೊಂದೇ ಉದ್ದೇಶವನ್ನು ನಡೆಸಿಕೊಡುವ ಮನಸ್ಸೊಂದಿದ್ದರೆ ನಮ್ಮ ದೇಶದಲ್ಲೂ ಎಲ್ಲವನ್ನೂ ಸಾಧಿಸಬಹುದು ಎಂಬುದಕ್ಕೆ ಇದೊಂದು ಸಾಕ್ಷಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

<"ಗ್ರಾಹಕರಿಗೆ ಸೌಲಭ್ಯವನ್ನು ಕೊಡಬೇಕು ಎಂಬೊಂದೇ ಉದ್ದೇಶವನ್ನು ನಡೆಸಿಕೊಡುವ ಮನಸ್ಸೊಂದಿದ್ದರೆ ನಮ್ಮ ದೇಶದಲ್ಲೂ ಎಲ್ಲವನ್ನೂ ಸಾಧಿಸಬಹುದು ಎಂಬುದಕ್ಕೆ ಇದೊಂದು ಸಾಕ್ಷಿ."> ನಿಜ. ನಮ್ಮಲ್ಲಿ ಅದೇ ಕೊರತೆಯಾಗಿರುವದು. ಗ್ರಾಹಕರಿಗೆ ನಮ್ಮ ವಸ್ತುಗಳನ್ನು ಹೇಗಾದರೂ ಮಾರಿದರಾಯಿತು. ಆಮೇಲೆ ಗ್ರಾಹಕರು ಏನು ಬೇಕಾದರೂ ಮಾಡಿಕೊಳ್ಳಲಿ, ಎನ್ನುವ ಧೋರಣೆಯೇ ಹೆಚ್ಚುಕಮ್ಮಿ ಎಲ್ಲಾ ತಯಾರಕರದು, ವಿತರಕರದು ಹಾಗೂ ಮಾರಾಟಗಾರರದು. After sales service ಎನ್ನುವದು ಇನ್ನೂ ಸೇವಾಮನೋಭಾವದಿಂದ ಕೂಡಿರದೆ nuisance factor ಎಂಬ ಅಭಿಪ್ರಾಯದಿಂದ ಕೂಡಿದೆ. ಆದರಿದು ಕ್ರಮೇಣ ಬದಲಾಗುತ್ತಿರುವ ಸೂಚನೆಗಳಿರುವದು ಆಶಾದಾಯಕ.

ಅನನ್ಯರವರೆ ನೀವು ಹೇಳಿದಂತೆ ವಿತರಕರ ಕಿರಿಕಿರಿ ಇಲ್ಲದೆ ಕ್ಷಣಾರ್ಧದಲ್ಲಿ ಬುಕ್ ಮಾಡಿ ಆಗಿರುತ್ತೆ ಕಂಡಿತ ಇದು ಕ್ರಾಂತಿಕಾರಕ ಬದಲಾವ‌ಣೆ ಸಂದೇಹವೇ ಇಲ್ಲ.

@ ಅನನ್ಯ <<<< "ಈಗ ಅರೆ ನಿಮಿಷದಲ್ಲಿ ಬುಕ್ ಮಾಡಬಲ್ಲ ಸೌಲಭ್ಯವನ್ನು ನೋಡಿದರೆ, ನಾವು ಭಾರತದಲ್ಲಿದ್ದೇವೋ, ಇಲ್ಲಾ ಅಮೇರಿಕಾ, ಅಥವಾ ಯೂರೋಪ್ ಇಲ್ಲವೇ ಜಪಾನಿನಲ್ಲಿದ್ದೇವೋ ಎಂಬ ಸಂಶಯ ಬರುತ್ತದೆ! ಟೆಲಿಫೋನ್ ವ್ಯವಸ್ಥೆಯಲ್ಲಿ ಆದ ಕ್ರಾಂತಿಯ ಬಳಿಕ ನಡೆದ ಕ್ರಾಂತಿ ಇದೇ ಏನೋ">>>> ಒಳ್ಳೆಯ ಬರಹ. ಆದರೆ ಬಹುಶಃ ಸಿಲಿಂಡರ್ ಗಳ ಬಳಕೆಯೇ ಇಲ್ಲದೆ, ಪೈಪುಗಳಲ್ಲಿ ಮನೆಮನೆಗೆ ಗ್ಯಾಸ್ ಪೂರೈಕೆ ಭಾರತದಲ್ಲಿ ಆರಂಭವಾಗಿರುವುದು ನಮ್ಮಲ್ಲಿ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಫೋನ್ ಮಾಡುವ ರಗಳೆಯೇ ಇಲ್ಲ. ವಿದ್ಯುತ್ತಿನ ಬಳಕೆಯಂತೆ ಗ್ಯಾಸ್ ನ ಪೂರೈಕೆ, ಬಿಲ್ ಬರುವುದು ಕೂಡ. ಮುಂಬೈ, ಪೂನಾ, ದೆಹಲಿ ಗಳಲ್ಲಿ ಶುರುವಾಗಿ ಕೆಲ ವರ್ಷಗಳೇ ಕಳೆದಿವೆ. ಅಮೆರಿಕೆಯಲ್ಲಿ ಸುಮಾರು 30 - 40 ವರ್ಷಗಳೇ ಆಗಿರಬೇಕು. ನೋಡಿ http://www.mahanagar... ಮತ್ತು http://en.wikipedia....

ಅದನ್ನು ಮೊನ್ನೆ ನಾ ಉಪಯೋಗಿಸಿ ನೋಡುವ ಭಾಘ್ಯ ಸಿಕ್ಕಿತು !! ನಮ್ಮ ಪಕ್ಕದ ಆಫೀಸಿನ ಒಬ್ಬರು ಗ್ಯಾಸ್ ಬುಕ್ ಮಾಡಲಿತ್ತು, ಅದ್ಕೆ ಬಂದಾಗ ನಾ ಮಾಡಿ ಕೊಟ್ಟೆ ಸರಳವಾಗಿದೆ ... ಒಳ್ಳೆಯ ಪ್ರಯತ್ನ ಯೆಶಶ್ವಿಯಾಗಲಿ.... >>>> ಭಾರತದಲ್ಲಿ ಈ ತರಹದ ಒಳ್ಳೊಳ್ಳೆ ಐಡಿಯಾ ಕೊಡುವವರಿಗೆ, ಒಳ್ಳೆ ಪ್ರೋತ್ಸಾಹವಿಲ್ಲ ಅಸ್ಟೇ, ಅದಕ್ಕೆ ಅಧಿಕಾರಿ ಶಾಹಿಗಳ- ರಾಜಕಾರಣಿಗಳ ತೊಡರುಗಾಲು ಇದ್ದದ್ದೇ ಅದ್ಕೆ ಈ ತರಹದ್ದು ಲೇಟ್ ಆಗೇ ನಮ್ಮಲ್ಲಿ ಆಗೋದು, ಆದರೂ ಆಯ್ತಲ್ಲ -ಆಗುತ್ತಿದೆಯಲ್ಲ ಅನ್ನೋದೇ ಸಮಾಧಾನ ನೋಡಿ,... ಒಳ್ಳೆ ಮಾಹಿತಿ ಬರಹ ವಂದನೆಗಳು...