ಅನಾಥ ಬದುಕು

0

ಸದಾ ನಗುವ ಮೊಗದ ಹಿಂದೆ 
ಅಡಗಿದೆ ಹೇಳಲಾಗದ ನೋವು 
ಮನದಲ್ಲಿ ಸೇರಿ ಹೋಗಿದೆ ಯಾವುದೋ ನೆನವು
ಈ ಬಾಲೆಯ ಬಾಳಲ್ಲಿ .... 
 
ದಿಕ್ಕು ತೋಚದ ದಾರಿಯಲ್ಲಿ 
ಒಂಟಿತನ ಒಂದೇ ಕಂಡಿದೆ 
ಕನಿಕರ ಇಲ್ಲದ ಜಗದಲ್ಲಿ 
ಕಷ್ಟವೇ ಜೊತೆಯಾಗಿದೆ 
 
ಬಂದು ಬಳಗ ಯಾರು ಇಲ್ಲದ 
ಈ ಅನಾಥ ಬದುಕಿಗೆ 
ಸಾವಿರಾರು ಕೋಟಿ ಜನರಲಿ 
ಯಾರೂ ಇಲ್ಲವಾದರೆ ..?
 
ದುಃಖದ ಕೋಡಿ ಒಡೆದಿದೆ 
ಕಣ್ಣಲಿ ಕಂಬನಿ ಸುರಿದಿದೆ 
ನೆನಪಿನ ಮುಂಗಾರಿನಲ್ಲಿ ಅಂಬರ ನೋಡುತ್ತಾ 
ಸಂಧ್ಯಾ ಸಮಯದಿ 
ಜೀವನ ಸಾಗಿದೆ ಕತ್ತಲಲಿ....

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.