ಅಪ್ಪ (ಅಣ್ಣ) ನ ದಿನ.

0

ಇಂದಿಗೆ ನನ್ನ ಅಣ್ಣನಿಗೆ ೩೨ ವರ್ಷ, ೧ ತಿಂಗಳು, ೧೪ ದಿನಗಳಾದವು. ನಾನು ಹುಟ್ಟಿದ ಮೇಲೆಯೇ ಅಲ್ಲವೇ ನನ್ನ ಅಣ್ಣನು ತಂದೆಯಾದದ್ದು? ಹಾಗಾಗಿ, ಅಣ್ಣನಿಗೂ ಕೂಡ ನನ್ನಷ್ಟೇ ವಯಸ್ಸು. ಅಲ್ವಾ ಅಣ್ಣಾ? ಚಿಕ್ಕಂದಿನಿಂದಲೂ ನಾನು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ನನಗೆ ಪ್ರೋತ್ಸಾಹ ನೀಡಿ, ಸಲಹೆ ನೀಡಿ, ನನ್ನ ಸ್ವಂತ ಕಾಲಿನ ಮೇಲೆ ನಿಲ್ಲುವ ಹಾಗೆ ಮಾಡಿರುವ ಆ ನನ್ನ ಜನಕನಿಗೆ ಇದೋ ನನ್ನ ವಂದನೆ. 


ಅಣ್ಣ, 
ನಾನು ಜನಿಸಿದಾಗಿನಿಂದ ನಡೆಯಲು ಆರಂಭಿಸುವವರೆಗೂ ನನ್ನನ್ನು ಎತ್ತಿ, ಮುದ್ದಾಡಿರುವೆ. ನಿದ್ದೆ ಮರೆತುಕೊಂಡು ಅಳುತ್ತಿದ್ದಾಗ ಲಾಲಿ ಹಾಡುಗಳನ್ನು ಅದೆಷ್ಟು ಹೇಳಿರುವೆಯೋ ಅವೆಲ್ಲ ನನಗೆ ನೆನಪಿದೆ. ನೀನು ನನಗೆ ಯಾವಾಗಲೂ 'ತೂಗುವೆ ರಂಗನ, ತೂಗುವೆ ಕೃಷ್ಣನ, ತೂಗಿ ಜೋ ಜೋ ಹಾಡುವೆ' ಎಂಬ ಲಾಲಿ ಹಾಡನ್ನು ಹೇಳಿ, ನನ್ನನ್ನು ಮಲಗಿಸುತ್ತಿದ್ದೆ. ಈಗಲೂ, ಈ ಹಾಡನ್ನು ಕೇಳಿದಾಗ ನನಗೆ ನಿದ್ದೆ ಬರುತ್ತದೆ. ಅಷ್ಟು ಅಕ್ಕರೆ, ವಾತ್ಸಲ್ಯದಿಂದ ನೀನು ಹಾಡುತ್ತಿದ್ದೆ. ನನ್ನನ್ನು ನೀನು ಸ್ನೇಹಿತನಂತೆ ಕಾಣುತ್ತಿದ್ದೆ. ನಿನ್ನನ್ನು ನಾನು ಹಿರಿಯ ಮಿತ್ರನಂತೆ ಇಂದಿಗೂ ಆದರುಸುತ್ತಿರುವೆ. ಏನಾದರೂ ಸಲಹೆ ಬೇಕಾದರೆ ಮೊದಲು ಆ ವಿಷಯದ ಬಗ್ಗೆ ವಿಶ್ಲೇಷಿಸಿ ನಂತರ ನಿನ್ನನ್ನೇ ಕೇಳುವುದು. ನೀನು ಅದನ್ನು ಕೂಲಂಕುಶವಾಗಿ ಪರಿಶೀಲಿಸಿ ನಂತರ ಒಂದು ನಿರ್ಧಾರಕ್ಕೆ ಬಂದು ಅದನ್ನು ನನಗೆ ಅರ್ಥವಾಗುವಂತ ಸಲಹೆ ನೀಡಿರುವೆ. ನಿನ್ನ ಬಗ್ಗೆ ನನಗೆ ಬಹಳ ಅಭಿಮಾನವಿದೆ. 
 
ನಾನು ಬೆಳೆದಂತೆಲ್ಲಾ, ನಾನು ನನ್ನ ಸ್ವಂತ ಬುದ್ಧಿಯಿಂದ, ಆತ್ಮವಿಶ್ವಾಸದಿಂದ ತೆಗೆದುಕೊಂಡಂತಹ ನಿರ್ಧಾರಗಳನ್ನು ಪ್ರೋತ್ಸಾಹಿಸಿರುವೆ. ಹಾಗೆಯೇ, ಕೆಲವೊಮ್ಮೆ ಅತಿ ಬುದ್ಧಿವಂತಿಕೆಯಿಂದ, ಆತುರದಲ್ಲಿ ತೆಗೆದುಕೊಂಡಂತಹ ನಿರ್ಧಾರಗಳನ್ನು ಖಂಡಿಸಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಾಗೆ ಮಾಡಿರುವೆ. ನೀನು ನನ್ನ ಕೆಲಸ ಕಾರ್ಯಗಳನ್ನು ಚೆನ್ನಾಗಿ ವಿಮರ್ಶಿಸಿರುವೆ. ಮಾಡಿದ ಕಾರ್ಯಗಳಲ್ಲಿ ಗೆದ್ದಾಗ, ಅಹಂಕಾರದಿಂದ ಬೀಗದೇ, ಹಾಗೆಯೇ ಕೆಲವು ಬಾರಿ ಸೋತಾಗ, ಬೇಸರದಿಂದ ಕುಗ್ಗದೇ, ಎಲ್ಲವನ್ನು ಸಮಾನ ರೀತಿಯಲ್ಲಿ ನೋಡುವ ಹಾಗೆ ನನಗೆ ಪಾಠವನ್ನು ಹೇಳಿರುವೆ. 
 
ನನ್ನನ್ನು ತೀಡಿ, ತಿದ್ದಿ, ಒಬ್ಬ ಸತ್ಪ್ರಜೆಯನ್ನಾಗಿ ಮಾಡಿರುವ ನಿನಗೆ ನಾನು ಏನು ಮಾಡಿದರೂ ಸಾಲದು. ನನ್ನ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳುವಂತೆ ಮಾಡಿರುವ ನೀನು, ನನ್ನ ತಂದೆಯೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಇಂದಿಗೂ ನನ್ನನ್ನು ಅತಿ ಹತ್ತಿರದಿಂದ ನೋಡಿ, ನನ್ನ ತಪ್ಪುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅದಕ್ಕೆ ಸರಿಯಾದ ದಾರಿಯನ್ನು ತೋರಿಸಿ, ನನ್ನ ಬೆನ್ನೆಲುಬಾಗಿ ನಿಂತಿರುವ ನಿನಗೆ ನಾನು ಕೃತಜ್ಞನಾಗಿರುವೆ. 
 
ಬರೆಯಲು ಪದಗಳು ಸಾಲುತ್ತಿಲ್ಲ, ಕಣ್ಣಲ್ಲಿ ಆನಂದಬಾಷ್ಪ ನಿಲ್ಲುತ್ತಿಲ್ಲ. 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಸರಣಿ: 
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚೆನ್ನಾಗಿದೆ ಬರಹ. ಚಿಕ್ಕವಳಿದ್ದಾಗ ಅಪ್ಪ ನನಗೆ ಓದಲೆಂದು ಬಹಳಷ್ಟು ಪುಸ್ತಕಗಳನ್ನು ತರುತ್ತಿದ್ದರು. ಅನುಪಮ ನಿರಂಜನರ "ದಿನಕ್ಕೊಂದು ಕಥೆ" ನನ್ನ ನೆಚ್ಚಿನ ಪುಸ್ತಕಗಳಲ್ಲೊಂದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದ ಸುಮಾ. ಹಾಗೆಯೇ ನಿಮ್ಮ ಅನುಭವವನ್ನು ಹಂಚಿಕೊಡಿದ್ದಕ್ಕೆ ಥ್ಯಾಂಕ್ಸು. ಅಂದಹಾಗೆ, ಲೇಖನವನ್ನು ಸೇರಿರುವಾಗ ಲೇಖನ ವರ್ಗಗಳು ಕಾಣಿಸ್ತಿಲ್ಲ. ತೆಗೆಯಲಾಗಿದೆಯೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಲೇಖನ ವಿಭಾಗದಲ್ಲಿ ವರ್ಗಗಳನ್ನು ಈಗ ಸೇರಿಸಲಾಗಿದೆ. ಇದನ್ನು ನಮ್ಮ ಗಮನಕ್ಕೆ ತಂದದಕ್ಕೆ ಧನ್ಯವಾದಗಳು, ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>>ಲೇಖನ ವಿಭಾಗದಲ್ಲಿ ವರ್ಗಗಳನ್ನು ಈಗ ಸೇರಿಸಲಾಗಿದೆ. ನನಗೆ ಇನ್ನೂ ಕಾಣಿಸ್ತಿಲ್ಲ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅನಿಲ್ ರಮೇಶರವರೆ, ಸುಂದರ ಅಭಿವ್ಯಕ್ತಿ. ನನ್ನ ಅಣ್ಣನ ನೆನಪಾಯಿತು.ನನಗೆ ಬದುಕು ಕಟ್ಟಿಕೊಟ್ಟ ಪ್ರೀತಿಯ ಸ್ನೇಹಿತ ಅಣ್ಣ. ವಂದನೆಗಳು. -ಭಾಗ್ವತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಭಾಗ್ವತರೇ, ಧನ್ಯವಾದಗಳು! -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಭಾವಪೂರ್ಣ ಬರಹ, ಅನಿಲ್. ಅಪ್ಪನ ಬಗ್ಗೆ ಬರೆದಷ್ಟೂ ಬಾಕಿ ಉಳಿದಿರುತ್ತದೆ... ಹೆಜ್ಜೆ ಹೆಜ್ಜೆಗೂ ನಾವು ಅಪ್ಪನವರಿಂದ ಪಡೆದ ಮಾರ್ಗದರ್ಶನವನ್ನು ಪಟ್ಟಿ ಮಾಡಿದರೆ, ನಾವು ಸವೆಸಿದ ದಾರಿಯಷ್ಟೇ ಉದ್ದವಾದೀತೇನೋ ಅಂತನಿಸುವುದೂ ಇದೆ. ಹಾಗೇಯೇ ಹಲವಾರು ತಿಂಗಳುಗಳ ಕಾಲ ಅದ್ಯಾಕೋ ದೂರ ಉಳಿದಿದ್ದ ತಾವು, ಸಂಪದದಂಗಳದಲ್ಲಿ ಮತ್ತೊಮ್ಮೆ ಕಾಲಿಟ್ಟಿರುವುದು ಸಂತಸ ನೀಡಿದೆ. ಇನ್ನು ಇಲ್ಲಿಂದ ಹೇಳದೇ ಕೇಳದೇ ದಯವಿಟ್ಟು ಕಾಲ್ಕೀಳಬೇಡಿ! -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆಸು ಹೆಗ್ಡೆ ಅವರೇ, ಅಪ್ಪನ ದಿನದಂದು ಮಾತ್ರ ಅವರ ಬಗ್ಗೆ ಬರೆದರೆ ಉತ್ಪ್ರೇಕ್ಷೆಯಾದೀತು. ಹಾಗಾಗಿ ಸಂಕ್ಷಿಪ್ತವಾಗಿ ಬರಹದ ರೂಪದಲ್ಲಿ ಪ್ರಕಟಿಸಿರುವೆ. ಹೌದು, ಸಂಪದಕ್ಕೆ ಮತ್ತೆ ಬಂದಿರುವೆ. ಎಷ್ಟು ದಿನಗಳು ಸಂಪದದಲ್ಲಿರುವೆನೆಂದು ಹೇಳಲಾರೆ. ಇರುವಷ್ಟು ದಿನ ಇಲ್ಲಿ ನಿಮ್ಮಗಳೊಂದಿಗೆ ಒಡನಾಟವನ್ನಂತೂ ಬೆಳೆಸಿಕೊಳ್ಳುವೆ. -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅನಿಲ್!!!!!!!!!!!!!!! ಅಬ್ಬಾ ಬಹಳ ದಿನಗಳ ನಂತರ. ಖುಷಿಯಾಯಿತು. ರಾಜ್ ಸುಧಾರಾಣಿ ಹಾಡಿದ "ನಿನ್ನಂಥ ಅಪ್ಪ ಇಲ್ಲಾ" ಹಾಡು ರಶ್ಮಿ ತಂದೆ ಬಗ್ಗೆ ಬರೆದ ಲೇಖನ ನೋಡಿದಾಗ ನೆನಪಾಯಿತು. ಗಂಡು ಮಕ್ಕಳೂ ಸಹ ಅಪ್ಪನನ್ನು ಪ್ರೀತಿಸುವುದರಲ್ಲಿ ಕಮ್ಮಿ ಇಲ್ಲ ಎಂಬುದಕ್ಕೆನಿಮ್ಮ ಈ ಬರಹ ಸಾಕ್ಷಿ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶರೇ, ಹೌದು, ಸುಮಾರು ಒಂದು ವರ್ಷದ ಬಳಿಕ ಮತ್ತೆ ಬರೆಯಲು ಸುರು ಮಾಡಿರುವೆ. ಹಾಗಾಗಿ ಮತ್ತೆ ಇಲ್ಲಿಗೆ ಬಂದಿರುವೆ. ಲೇಖನ ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು. -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಭಾವಪೂರ್ಣ ಬರಹ ಅನಿಲ್. -ಷಣ್ಮುಖಪ್ರಿಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು. -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.