ಅರ್ಥವನ್ನು ಹುಡುಕುತ್ತಾ...

0

ಬೀchi ಅವರ ಒಂದು ಪುಸ್ತಕ ಓದುವಾಗ ಕಂಡುಬಂದ ಈ ಕೆಳಗಿನ ಸಾಲಿನ ಒಳ ಅರ್ಥ ಹುಡುಕ್ಕುತ್ತಿರುವೆ.. ಸಹಾಯ ಮಾಡುವಿರ..


"ಹಸುವಿನ ಚರ್ಮದ ಒಂದು ಮುಖ್ಯ ಉಪಯೋಗ - ಅದರ ದೇಹದಲ್ಲಿನ ಎಮಿಕೆ, ಮಾಂಸ ಮುಂತಾದವು ಹೊರಗೆ ಬೀಳದಂತೆ ಅದು ಭದ್ರವಾಗಿ ತಡೆದು ಹಿಡಿಯುತ್ತದೆ".


--ಸಂದೀಪ್ ಗೌಡ


 


 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಇದರಲ್ಲಿ ಒಳ ಅರ್ಥವೇನು ಬಂತು? ಅರ್ಥ ಸ್ಪಷ್ಟವೇ ಇದೆ. ಹಸುವಿಗಾಗಲೀ ನಮಗಾಗಲೀ ಚರ್ಮ ಇಲ್ಲದಿದ್ದರೆ ದೇಹದೊಳಗಿನ ಅಂಗಾಂಗಗಳು ಹೊರಗೆ ಬೀಳುತ್ತಿರಲಿಲ್ಲವೇ ? ಓ, ನೀವು ಹಸುವಿನ ಚರ್ಮ ಎಂದಾಗ ಜೀವಂತ ಹಸುವನ್ನು ಕಲ್ಪಿಸಿಕೊಂಡಿಲ್ಲ ಅಂತ ಕಾಣುತ್ತದೆ. ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಎಲ್ಲಾ ವಿಚಾರವನ್ನು ತರ್ಕಬದ್ದವಾಗಿ ಹೇಳುವ ಬೀchi ರವರ ಈ ಮಾತನ್ನು ಕೇವಲ ಪದಗಳ ಅರ್ಥದಿಂದ ಅಳೆಯಲು ಸಾದ್ಯವೇ.. ಪ್ರತಿಕ್ರಿಯೆಗೆ ಧನ್ಯವಾದಗಳು ಸಂದೀಪ್ ಗೌಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬೀಚಿಯವರ ಮಾತುಗಳು ಯಾವಾಗಳು ಸರಳವಾಗಿರಲ್ಲ. ಅದರ ಅರ್ಥ ಬೇರೆಯೆ ಇರುತ್ತದೆ. ಮನುಷ್ಯನಿಗೆ ಹಸುವಿನ ಚರ್ಮದ ಉಪಯೋಗ ನಾನರೀತಿ ಇರುತ್ತದೆ. ಗೋವಿನ ಹಾಡು ಕೇಳಿಲ್ಲವೆ, ಕಡೆಗೆ ಹಸುವಿಗು ಒಂದು ಉಪಯೋಗವಿದೆ ಅಂತ ತಿಳಿಸಿದ್ದಾರೆ... ಅನ್ನಿಸುತ್ತೆ ಆದರೆ ಯಾವುದೆ ವಾಕ್ಯ ಅಥವ ಪದಗಳನ್ನು ಬಿಡಿಯಾಗಿ ಓದುವಾಗ ಅರ್ಥೈಸುವುದು ಕಷ್ಟ ಯಾವ ಸಂದರ್ಬದಲ್ಲಿ ಹೇಳುತ್ತಿದ್ದಾರೆ, ಅದರ ಹಿಂದಿನ ವಾಕ್ಯಗಳೇನು ಮುಂದಿನ ವಾಕ್ಯಗಳೇನು ಅನ್ನುವುದು ತಿಳಿಯದೆ ಒಂದು ಬಿಡಿ ವಾಕ್ಯ ಅಥವ ಪದಕ್ಕೆ ಅರ್ಥ ನೀಡುವುದು ಕಷ್ಟವೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಸಾರಥಿ ಅವರೇ,, ನೀವು ಹೇಳಿದ ಹಾಗೆ <<ಯಾವುದೆ ವಾಕ್ಯ ಅಥವ ಪದಗಳನ್ನು ಬಿಡಿಯಾಗಿ ಓದುವಾಗ ಅರ್ಥೈಸುವುದು ಕಷ್ಟ>> ಆದರೆ ಬೀchi ರವರ ಈ ವಾಕ್ಯಕ್ಕೆ ಹಿಂದು ಮುಂದು ಇಲ್ಲ, ಸಂದರ್ಭವೂ ಇಲ್ಲ.. ಇದೊಂದು ಸ್ವತಂತ್ರ ವಾಕ್ಯ. ಅಂದಹಾಗೆ ಇದು ಬೀchi ರವರ ಬೆಳ್ಳಿ ತಿಮ್ಮ 108 ಹೇಳಿದ ಪುಸ್ತಕದಲ್ಲಿರುವ ವಾಕ್ಯ... ಸಂದೀಪ್ ಗೌಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.