ಇಲ್ಲೊಂದು ಆಕ್ಸಿಡೆಂಟ್ ಪುರಾಣ!!!ಹರಕೆಕುರಿಯ ಕಥಾಯಣ!!!!!!

4

ನಮಸ್ಕಾರ  ಒಳ್ಳೆ ನವರಾತ್ರಿ ಸಮಯದಲ್ಲಿ   ಇದ್ಯಾವುದೋ ಆಕ್ಸಿಡೆಂಟ್ ಪುರಾಣ ತಂದಾ!!!!!! ಅಂತಾ ಬಯ್ದುಕೋ  ಬೇಡಿ , ನವರಾತ್ರಿಯನ್ನು ನಮ್ಮ ಬ್ಲಾಗ್ ಮಿತ್ರರು ನಗು ನಗುತ್ತಾ ಆಚರಿಸಲಿ ಅಂತಾ ಒಂದು ಹಳೆಯ ನೈಜ ಘಟನೆಯ ಚಳಕು ಇಲ್ಲಿ ಹಾಕಿದ್ದೇನೆ. ಓದಿ  ನೀವು ನಕ್ಕರೆ  ಅದೇ ನನ್ನ ನವರಾತ್ರಿಯ  ಶುಭಾಶಯಗಳು .ಬನ್ನಿ ಹೋಗೋಣ ಬಸ್ಸಿಗೆ. ಯಾರ್ರೀ ತುಮಕೂರು , ತುಮಕೂರು ಬೇಗ ಬನ್ನಿ ರೈಟ್ .......... ಹತ್ತಿ  ಸರ್ ಹತ್ತಿ ಸಾರ್ ......... ಅಂದ ಕಂಡಕ್ಟರ್ ...............................!!! ಬಸ್ಸಿನಲ್ಲಿ ಪ್ರತಿ ನಿತ್ಯ ಪ್ರಯಾಣಿಸುತ್ತಿದ್ದ .....ವಿವಿಧ ಸರ್ಕಾರಿ ಇಲಾಖೆ, ಬ್ಯಾಂಕ್, ಖಾಸಗಿ , ಇತರ ಸಂಸ್ಥೆಯ ಅಧಿಕಾರಿಗಳು, ನೌಕರರು,    ಸ್ಟಾರ್ಟ್ ಆದ ಬಸ್ಸನ್ನು  ದಡ ದಡ ನೆ ಹತ್ತಿ ತಮ್ಮ ತಮ್ಮ ಜಾಗ ಹಿಡಿದರು, ಬಸ್ಸಿನಲ್ಲಿ ಸೀಟ್ ಸಿಕ್ಕವರು ರಾಜ್ಯ ಗೆದ್ದ ಹರುಷದಲ್ಲಿ ಪೇಪರ್ ಓದುತ್ತಾ ಇರುವಂತೆ ನಟಿಸುತ್ತಾ ನಿಂತವರ ಚಲನ ವಲನ ನೋಡುತ್ತಾ ಮನದಲ್ಲಿ ನಗುತ್ತಾ ಮಂಡಿಗೆ ತಿನ್ನುತ್ತಿದ್ದರೆ , ಸೀಟ್ ಸಿಗದೇ ನಿಂತವರು ತಮ್ಮ ಅಸಮಾಧಾನವನ್ನು ಕಂಡಕ್ಟರ್ , ಡ್ರೈವರ್ ಮೇಲೆ ಹಾಕಿ............  ಈ ಬಸ್ಸು ಬಹಳ ಸ್ಲೋ ಕಣ್ರೀ ಇವರ ಕೊಬ್ಬು ಜಾಸ್ತಿಯಾಯ್ತು . ಇವರಿಂದಾಗಿ ನಾವು ಯಾವತ್ತೂ ಸರಿಯಾದ ಟೈಮಿಗೆ ನಮ್ಮ ಕೆಲಸಕ್ಕೆ ಹೊಗೊಕಾಗಲ್ಲಾ ಅಂತಾ ಶಾಪಾ ಹಾಕ್ತಾ ಇರ್ತಿದ್ರೂ........ ಸೀಟ್ ಸಿಗುವುದು ಸಿಗದಿರುವ ಆಟಾ ಎಲ್ಲರಿಗೂ ಒಂದಲ್ಲಾ ಒಂದು ದಿನ  ಅನುಭವ ಆಗುತ್ತಿದ್ದ ಕಾರಣ ಬರುತ್ತಿದ್ದ ಡೈಲಾಗ್ ಗಳು ವೆತ್ಯಾಸವಾಗುತ್ತಿದ್ದವು.... ಹಾಗೆ ಕಳೆಯುತ್ತಿದ್ದ ಪ್ರಯಾಣದಲ್ಲಿ  ಒಮ್ಮೆ ಹೀಗಾಯ್ತು .........................."ದುರಾಸೆ ಪುರ "ದ ಬಳಿ ಬರುತ್ತಿದ ನಮ್ಮ ಎಕ್ಸ್ಪ್ರೆಸ್ಸ್ ಬಸ್ಸಿಗೆ ಒಂದು   "ಕುರಿ ಮರಿ"   ರಸ್ತೆಯ ಒಂದು ಬದಿಯಿಂದ  ಗಾಭರಿ ಯಿಂದ ಓಡಿಬಂದು ಚಲಿಸುತ್ತಿದ್ದ ಬಸ್ಸಿನ  ಎಡಭಾಗದ   ಹಿಂದಿನ ಚಕ್ರಕ್ಕೆ ಸಿಕ್ಕಿ  ಹಾಕಿಕೊಂಡು ಮೃತ ಪಟ್ಟಿತು , ಅದನ್ನು  ಅಟ್ಟಿಸಿಕೊಂಡು ಬಂದ ಚಿಕ್ಕ ಮಗು  ಆ "ಕುರಿ ಮರಿ " ಸತ್ತಿದ್ದನ್ನು ಕಂಡು ಸಂತೋಷದಿಂದ  ನಕ್ಕಿತ್ತು. ಅಲ್ಲೇ ರಸ್ತೆಯಲ್ಲಿದ್ದ  ಹಲವು ಜನರು ಬಸ್ಸನ್ನು ಅಡ್ಡ ಹಾಕಿ  ನಿಲ್ಲಿಸಿ  ಡ್ರೈವರ್ ಹಾಗು ಕಂಡಕ್ಟರ್ ಗೆ ಗೂಸ ಕೊಟ್ಟರು ಬನ್ನಿ  ಸನ್ನಿವೇಶ ನೀವು ನೋಡುವಿರಂತೆ..................................!!!!!!!!!!ಯಾವಾಗ ಕುರಿಮರಿ  ಬಸ್ಸಿನ ಚಕ್ರಕ್ಕೆ ಸಿಕ್ಕಿ ಕೊಂಡಿತೋ  , ಬಸ್ಸು ನಿಂತ ತಕ್ಷಣ  , ಪಾಪ ಡ್ರೈವರ್ ಹತ್ತಿರ ಹೋದ ಒಬ್ಬ  ಲೇ ಯಾರ್ಲಾ  ಅದು ಡೈವರ್ರು  ಇಳಿಲಾ  ಕೇಳಾಕೆ ಅಂತಾ ಹೇಳಿ ಕತ್ತಿನ ಪಟ್ಟಿ ಹಿಡಿದು ಕೊಂಡು ಬಸ್ಸಿನಿಂದ ಎಳೆದುಕೊಂಡಾ , ಅಲ್ಲಾ ಕಣ್ಲಾ ಅನ್ಯಾಯವಾಗಿ ಕುರಿಯ  ಸಾಯ್ಸಿ ಬುಟ್ಟೆ ಅಂತಾ ಎರಡು ಏಟು ಕೊಟ್ಟಾ.  ಬಸ್ಸಿನಲ್ಲಿ ಪ್ರತಿನಿತ್ಯ ಪ್ರಯಾಣಿಸುತ್ತಿದ್ದ ಹಲವು ಪ್ರಯಾಣಿಕರು  ಕೆಳಗೆ ಇಳಿದು ಡ್ರೈವರ್ ರಕ್ಷಣೆಗೆ ಧಾವಿಸಿದರು. ಆಗ ಶುರುವಾಯ್ತು. ಪಂಚಾಯ್ತಿ.{ಸುಲಭವಾಗಿ ಅರ್ಥವಾಗಲು ಒಂದೊಂದು ಕ್ಯಾರಕ್ಟರ್ ಗೆ ಹೆಸರಿಟ್ಟಿದ್ದೀನಿ} .................................................... ...........ಸಪ್ಪೆ  ಕ್ಯಾತಾ :- ಅಲ್ಲಾ ಕಣ್ಲಾ ಡೈವರ್ರು  ಅನ್ನಾಯವಾಗಿ    ಕುರಿಮರಿಯ ತೀರ್ಸಿ ಬುಟ್ಟಲ್ಲಾ.........ಈಗೇನ್   ಮಾಡಬೇಕೂ ಯೋಳು ???? ಡ್ರೈವರ್ :- ಅಲ್ಲಾ ಯಜಮಾನ  ನಾನು ನಿದಾನವಾಗಿ ಬತ್ತಿದ್ದೆ , ಕುರಿಮರಿ ಬಂದು ಹಿಂದಿನ ಚಕ್ರಕ್ಕೆ ಸಿಗಾಕಂದ್ರೆ ನಾನ್ ಏನ್ ಮಾಡ್ಲಿ ಹೇಳು, ಅಂದಾ................................................................!!!!!!!!!. ................................. ಬಸ್ರಾಜ :- ನಾನೂ ನೋಡ್ತಾನೆ ಇವ್ನಿ, ಕುರಿಮರಿ ಬತ್ತಿದ್ದಾಗ ನೀನು ಬಿರೇಕ್ [ಬ್ರೇಕ್] ಹಾಕ್ನೆ ಇಲ್ಲಾ . ಬೊ ಸ್ಪೀಡಾಗಿ ಬಂದು  ಹಿಂದಿನ ಚಕ್ರುಕ್ಕೆ  ಕುರಿ ಸಿಗಾಕ್ಸಿ ಬುಟ್ಟೆ , ನೀನು ಬೇಕೂಂತಲೇ ಇಂಗೆ ಮಾಡಿದ್ದೀಯೇ , ಯೋ ಇವ ಇಂಗೆ ಕನೈಯ್ಯೋ  ನಮ್ಮೂರ ಜನ ಕಂಡ್ರೆ ಆಗಾಕಿಲ್ಲಾ , ಅವತ್ತು  ಪಟ್ಟಣ ದಲ್ಲಿ ಕೈತೊರ್ಸಿದ್ರೆ  ನಿಲ್ಲಿಸದೆ ಮೈಮೇಲೆ ಬಸ್ ಹತ್ತಿಸಕ್ಕೆ ಬತ್ತಾನೆ ಅಂತಾ ತನ್ನ ಹಳೆ ಸೇಡಿನ ಆರೋಪ ಮಾಡಿದಾ................!!!!ಅಷ್ಟರಲ್ಲಿ  ಲಬೋ ಲಬೋ ಅಂತಾ ಬಾಯಿ ಬಡಿದುಕೊಳ್ಳುತ್ತಾ  ಒಂದು ಹೆಂಗಸು ಹಾಗು ಒಂದು ಗಂಡಸು ಬಂದರೂ !!!!!!  ಅಯ್ಯಯ್ಯೋ ಹೊಯ್ತಲ್ಲಾಪ್ಪ ನನ್ನ ಕುರಿ ಹೋದ ತಿಂಗಾ [ ತಿಂಗಳು ]  ತಾನೇ ಸಂತೇಲಿ ಕೊಂದ್ಕಂಡ್ ಬಂದಿದ್ದೆ!!!! ಹಾಳಾದ್ ಬಸ್ಸು  ಸಾಯ್ಸ್ಬುದ್ತೆ ಎನ್ಗಪ್ಪಾ ಬದುಕೋದು ನಮ್ಮಂತಾ ಬಡವರೂ ಅಂತಾ  ಡ್ರೈವರ್ಗೆ ಸಹಸ್ರ ನಾಮ ಸಹಿತ , ಅರ್ಚನೆ ಮಾಡಿ  ಡ್ರೈವರ್ ವಂಶ ಪಾವನ ಮಾಡಿದ್ದಳು.[ ಪಾಪ ಇಂತಹ ಹಳ್ಳಿಗಳ ಕಡೆ ದಿನನಿತ್ಯಾ ಸಂಚರಿಸೋ ಸಾರಿಗೆ ಸಂಸ್ಥೆ / ಖಾಸಗಿ ಬಸ್ಸಿನ  ಸಿಬ್ಬಂದಿಗಳ ಪಾಡೇ ಹಾಗೆ ಆಗಾಗ ಇಂತಹ ಅರ್ಚನೆ ಸಹಸ್ರನಾಮಾರ್ಚನೆ  , ಗೂಸ ತಿನ್ನುವಿಕೆ ನಡೆಯುತ್ತಿರುತ್ತವೆ...].ಇದ್ಯಾಕೋ ನಿಲ್ಲೋ ಲಕ್ಷಣ ಕಾನ್ತಿಲ್ಲಾ ಅನ್ನಿಸಿ ಬಸ್ಸಿನಲ್ಲಿದ್ದ   ಕೆಲವರು ಕೆಳಗೆ ಇಳಿದರೂ ................................................................. ಇಳಿದದ್ದರಲ್ಲಿ ಅವರ ಸ್ವಾರ್ಥವೂ  ಇತ್ತು ಅನ್ನಿ , ಬಸ್ ಡ್ರೈವರ್ ನ ಬಿಡಿಸಿ ಬಸ್ಸನ್ನು ಹೊರಡಿಸಿದರೆ ತಾವು ಕೆಲಸಕ್ಕೆ ಸರಿಯಾದ ಸಮಯಕ್ಕೆ ತಲುಪಬಹುದು ಅನ್ನೋ ತರಾತುರಿ ಯಲ್ಲಿ ಇಳಿದು  ರೀ ಡ್ರೈವರ್ ಅದೇನ್ ಪೈಸಲ್  ಮಾಡಿಬಿಟ್ಟು ಬನ್ರೀ .... ಲೇಟಾಗುತ್ತೆ ಅಂತಾ ಅನ್ನುತ್ತಾ , ಯಾರ್ರೀ  ಕುರಿಯವ್ರು ಅಂತಾ ಪಂಚಾಯ್ತಿ ಶುರುಮಾಡಿದರು.  ನಂತರ ಅಲ್ಲೇ ಇದ್ದ ನಮ್ಮ ಮಲ್ಲಿಕಾರ್ಜುನ ಮೇಷ್ಟ್ರು  ಇಳಿದು ಬಂದು ನ್ಯಾಯ ಶುರುಮಾದಿದ್ರೂ...............ಅವರನ್ನ ಪ್ರೀತಿಯಿಂದ ಮಲ್ಲಿಕ್ ಅನ್ನೋಣ. ಮಲ್ಲಿಕ್ :- ರೀ ಅದ್ಯಾರು ಕುರಿಯವ್ರು ಬನ್ರೀ ಮುಂದಕ್ಕೆ .........!!!!! ಕುರಿ ಮಾಲೀಕರು ಯಜಮಾನ್ರು :- ನಾಮೇ ಸಾ , ಅಂತಾ ಬಂದ್ರೂ .............................!!ಮಲ್ಲಿಕ್ :- ನೋಡಯ್ಯಾ ಯಜಮಾನ  ನಾನೂ ನೋಡ್ತಾ ಇದ್ದೆ  ಬಸ್ನವ್ರ್ದು  ತಪ್ಪಿಲ್ಲಾ ... ಕುರಿ ಓಡಿಬಂದು ಚಕ್ರಕ್ಕೆ ಸಿಗಾಕತು , ಅದೇನು  ಇಸ್ಕಂಡು  ಬಸ್ಸನ್ನು ಬುಟ್ಟು ಬುಡು [ಬಿಟ್ಟು ಬಿಡು ] ......ಕುರಿಮಾಲಿಕರು :- ಹೋದ ತಿಂಗಾ[ ತಿಂಗಳು ]  ತಾನೇ ಕಿರ್ಗಾವಲ್ ಸಂತೇಲಿ  ಎಡ್ಸಾವ್ರಾ[ ಎರಡು ಸಾವಿರಾ ] ಕೊಟ್ಟು ತಂದಿದ್ದೆ.ದಿನಾ ಐವತ್ತು ಕರ್ಚುಮಾಡಿ ಹುಳ್ಳಿ, ಬಾಳೆಹಣ್ಣು, ಎಲ್ಲಾ ಕೊಟ್ಟು ತಯಾರಿ ಮಾಡಿದ್ದೆ ....... ಒಂದೈದು ಸಾವಿರಾ ಆಗ್ಬೈದು ಅಂದಾ. [ ಸತ್ತಿದ್ದ ಕುರಿ ಹಿಂದಿನ ಚಕ್ರದಲ್ಲಿ ಬಿದ್ದಿತ್ತು  ಅದರ ದೇಹದಲ್ಲಿ ಅವನು  ಹೇಳಿದ ತಯಾರಿಯ  ಯಾವ ಲಕ್ಷಣಗಳೂ ಇರಲಿಲ್ಲ ] .........!!!!! ಮಲ್ಲಿಕ್ :- ಯೋ ಯಜಮಾನ ಅವೆಲ್ಲಾ ಬ್ಯಾಡ  ಸುಮ್ನೆ ನೂರ್ ರುಪಾಯಿ ಕೊಡ್ತಾರೆ  ಇಸ್ಕಂಡು ಹೋಗು , ಜಾಸ್ತಿ ಎಳದ್ರೆಗ್ರಾಮಸ್ತರು :- ಹ ಹ ಹ ಅಂತಾ ನಕ್ಕು , ಅಲ್ಲಾ ಸಾ ಅದೇನ್ ತೀರ್ಮಾನ ನಿಮ್ಮದು ಅಂತಾ ಹೇಳಿದ್ರೂ, ಅಲ್ಲೇ ಇದ್ದ ಒಬ್ಬಾ ಲೇ ಈ ಕುರಿಯ ನಮ್ಮೂರ ದ್ಯಾವ್ರ್ಗೆ ಹರಕೆ ಬುಟ್ಟಿತ್ತು ಅಲ್ವೇ ..............................................!!! ಅಂದಾ,   ಎಲ್ಲರಿಗೂ ಹೊಸ ಅಸ್ತ್ರ ಸಿಕ್ಕಿತ್ತು.  ಹೂ ಕಲಾ   [ಹೌದು ಕಣೋ ]   ಈಗ ಇವರ ಕುರಿ ಸತ್ತೊಯ್ತಲ್ಲಾ ಅದಕ್ಕೆ  ಇವ್ರು  ದ್ಯಾವ್ರ್ಗೆ ಗೆ "ಐದ  ಸಾವ್ರಾ" ದಂಡಾ  ಕಟ್ ಬೇಕಾಯ್ತದೆ   ಅಂದಾ ....!!!! ಮೊದಲೇ ಉರಿಯುತ್ತಿದ್ದ ಬೆಂಕಿಗೆ ಅವ ತುಪ್ಪಾ ಸುರಿದು ವಿಜಯದ ನಗೆ ನಕ್ಕಿದ್ದಾ.  ಬಸ್ಸಿನಲ್ಲಿ ಇದ್ದವರಿಗೆಲ್ಲಾ ಇವತ್ತು ತಮ್ಮ ಕೆಲಸದ ಜಾಗದಲ್ಲಿ ಮೇಲಧಿಕಾರಿಗಳಿಂದ , ಸಾರ್ವಜನಿಕರಿಂದ ,ಕೇಳಬೇಕಾದ ಮಾತುಗಳನ್ನು ನೆನೆದು ಮೈ ಚಳಿ ಶುರು ಆಗಿತ್ತು  ಬಸ್ಸಿನ ಡ್ರೈವರ್, ಕಂಡಕ್ಟರ್ ಇಬ್ಬರಿಗೂ  ಏನೂ ತಿಳಿಯದೆ ಬೆಪ್ಪಾಗಿ ನಿಂತಿದ್ದರು. ಇದನೆಲ್ಲಾ  ಗಮನಿಸುತ್ತಿದ್ದ  ಮಲ್ಲಿಕ್   :- ನೋಡ್ರಪ್ಪಾ ಇದು ಸರ್ಕಾರಿ ಬಸ್ಸು ಅನ್ಗೆಲ್ಲಾ ಬಸ್ ನಿಲ್ಸಿ ತೊಂದ್ರೆ ಕೊಡಬಾರದು, ಅದೇನು ಕೊಡ್ತಾರೋ ಇಸ್ಕಂಡು  ಸುಮ್ನೆ ಬಸ್ ಬುಡಿ,  ಕುರಿಯವ್ರಿಗೆ ಇನ್ನೂರು ಹಾಗು ನಿಮ್ಮೂರ್ ದ್ಯಾವ್ರ್ಗೆ ನಾನೇ ತಪ್ಪು ಕಾಣಿಕೆ ನೂರ್ ರುಪಾಯಿ ಹಾಕ್ತೀನಿ ಅಂದ್ರೂ................................!!!! ಗ್ರಾಮಸ್ಥರು :- ಏ ಅದೇನ್ಗಾದ್ದೂ ಸಾ , ಇದ್ಯಾವ್ ಸೀಮೆ ತೀರ್ಮಾನ , ಅದೆಲ್ಲಾ ಆಗಾಕಿಲ್ಲಾ ಬುಡಿ ಸಾ ಅಂದ್ರೂ , ಕೊನೆಗೆ ಒಗ್ಲಿ  "ಯೋಳು"[ ಏಳು ಸಾವಿರಾ ]   ಸಾವ್ರಾ   ಕೊಡ್ಸಿ ಅಂದ್ರೂ  ...........................!!!!ಮಲ್ಲಿಕ್ :- ಅಲ್ಲಾ ಕಣ್ರಪ್ಪಾ ನೀವು ತಪ್ಪು ಮಾಡ್ತಾ ಇದೀರಿ ಅಂತಾ , ಅಲ್ಲೇ ಇದ್ದ  ಕೆಲವು ಮುಖಗಳನ್ನು ನೋಡಿ , ಲೇ ಬಸವ, ಸೀನ, ಕೃಷ್ಣ  ಬನ್ರೋ ಇಲ್ಲಿ  ಅಂದ್ರೂ , .......................................!!!!!  ಆ ಬಹುಷಃ ಹೈಸ್ಕೂಲ್ ಮಕ್ಕಳಿರಬೇಕೂ, ಸಾ ನಮಸ್ತೆ ಸಾ ಅಂತಾ ಓಡಿಬಂದು ನಿಂತವು. [ಆಮೇಲೆ ತಿಳೀತು ಆ ಮಕ್ಕಳು ಅವರ ಶಾಲೆಯ ಮಕ್ಕಳು ಎಂದು ] ಲೇ ನಿಜ ಹೇಳ್ರೋ  ಈ ಕುರಿನ  ದ್ಯಾವ್ರಿಗೆ ಬಿಟ್ಟಿದ್ರೆನೋ ಅಂದ್ರೂಮಕ್ಕಳು:- ಇಲ್ಲಾ ಸಾ ಇದು ಈ ರಾಜೇಶನ ಮನೆ ಕುರಿ ಸಾ ಅಂದವು. ಯಾರೋ ರಾಜೇಶ ಅಂದ್ರೆ ಅದೇ ಎಂಟನೆ ಕ್ಲಾಸಲ್ಲಿ ಇಲ್ವಾ ಸಾ ಅವನವು ಅಂದವುಅಷ್ಟರಲ್ಲಿ ಗ್ರಾಮಸ್ತರ ಕಡೆ ತಿರುಗಿದ  ಮಲ್ಲಿಕ್ ಯಾಕ್ರೈಯ್ಯಾ ಸುಳ್ಳು ಹೇಳ್ತೀರಿ  ಅಂದ್ರೆ ಅಲ್ಲೇ ಇದ್ದ ಒಬ್ಬಾ ಇಲ್ಲಾ ಸಾ ಈಗತಾನೆ  ನಮ್ಮ ಹೈದಾ ಯೋಳ್ದಾ, ಈ ಕುರಿ ಅಲ್ವಂತೆ , ಅದೂ ಇಂಗೆಯ ಇತ್ತಲ್ಲಾ  ಅದಕೆ ಹಂಗಾಯ್ತು ಅಂತಾ ತಿಪ್ಪೆ ಸಾರಿಸಿದ. ಅಲ್ಲಿಗೆ ಹರಕೆ ದಂಡಾ ತಪ್ಪಿತು. ಮುಂದೆ ಸರಿ ಬಿಡ್ರಪ್ಪಾ ಎಂಗೂ ನಮ್ಮ ಟೈಮ್ ವೇಷ್ಟ್ ಮಾಡಿದ್ದೀರಿ ಬನ್ನಿ  ಇನ್ನೇನು ಪೋಲಿಸ್ ಸ್ಟೇಶನ್ ನಲ್ಲೆ ಇತ್ಯರ್ಥ ಆಗ್ಲಿ , ಎಂಗೂ ಬಸ್ಸಿನ ಡ್ರೈವರ್ಗೆ ಹೊಡೆದಿದ್ದೀರಿ, ನಾವೇ ಸಾಕ್ಷಿ ಹೇಳ್ತೀವಿ, ಬಸ್ಸಿನ ನಂಬರ್ ಬರ್ಕೊಳ್ಳಿ  , ಅಂತಾ ತಾಳಿ ಪೋಲಿಸ್ ನವರಿಗೆ ನಾನೇ ಫೋನ್ ಮಾಡ್ತೀನಿ ಅಂತಾ ಫೋನ್ ತೆಗೆದು ಹಲೋ ಅಂದ್ರೂ ಅಷ್ಟೇ .........................................!!!! ಗ್ರಾಮಸ್ಥರು :-  ಏ ಬುಡಿ ಸಾ ಇದಕೆಲ್ಲಾ ಯಾಕೆ ಪೋಲಿಸು , ಕಟ್ಲೆ ಎಲ್ಲಾ  ನಾಮೇ ಸರಿ ಮಾಡ್ಕಂದ್ರಾಯ್ತು    ಅಂತಾ ಹೋಗ್ಲಿ  ಐದು  ಸಾವ್ರಾ ಕೊಡ್ಸಿ ಸಾ ಅಂದ್ರೂ .   ಮಲ್ಲಿಕ್ :- ಮೊದಲೇ ಹಾಕಿದ್ದ ಪಟ್ಟನ್ನು ಬಿಗಿ ಗೊಳಿಸಿ  ನೋಡ್ರಯ್ಯಾ.......,     ನೀವು  ಸರ್ಕಾರಿ ಬಸ್ಸಿನ ಡ್ರೈವರ್ಗೆ ಹೊಡೆದಿರೋದು ಕಂಪ್ಲೇಂಟ್  ಆದ್ರೆ  ನಿಮಗೆ ಹತ್ತು ಸಾವಿರ ದಂಡಾ ಹಾಕಿ , ಜೈಲಿಗೆ ಹಾಕ್ತಾರೆ, ಆಮೇಲೆ ನಿಮ್ಮ ಊರಿಗೆ ಬಸ್ ಬರದಂಗೆ  ಬ್ಯಾರೆ ಕಡೆ ಇಂದ ಬಸ್ ಓಡಿಸ್ತಾರೆ ಆಮೇಲೆ ನಿಮ್ಮ ಮಕ್ಕಳಿಗೆ ತೊಂದ್ರೆ ಯೋಚನೆ ಮಾಡಿ ಅಂದ್ರೂ , ಹೋಗ್ಲಿ  ನಾ ಹೇಳ್ದಂಗೆ   ಐನೂರು ತಗೊಂಡು ಗಾಡಿ ಬಿಡಿ ಅಂದ್ರೂ , ಹಾಗು ಇದಕ್ಕಿಂದ ಜಾಸ್ತಿ ಕೇಳಿದ್ರೆ ಕೊಡಲ್ಲಾ ಅಂತಾ ಜೋರಾಗಿ ಹೇಳಿದ್ರೂ. ಅಂತೂ ಇಂತೂ ನ್ಯಾಯ ತೀರ್ಮಾನ ಆಯ್ತು.  ಕಂಡಕ್ಟರ್ ಐನೂರು ರುಪಾಯಿ ಕುರಿ ಮಾಲಿಕರಿಗೆ ಕೊಟ್ಟಾ .......ಇನ್ನೇನು ಬಸ್ ಹೋಗ ಬೇಕೂ ಅನ್ನೋ ಅಷ್ಟರಲ್ಲಿ ಮಲ್ಲಿಕ್ ಅಯ್ಯೋ ಕಂಡಕ್ಟರ್ ಗಾಡಿ ನಿಲ್ಸು  ಹೋಗಿ ಆ ಕುರಿ ಎತ್ಕಂಬಾ  ಅಂದ್ರೂ  .........!!!! ಅಷ್ಟರಲ್ಲಿ ಕಂಡಕ್ಟರ್ ಕುರಿಯನ್ನು ಬಸ್ಸಿನ  ಲಗ್ಗೇಜ್ ಬಾಕ್ಸ್ಗೆ  ಹಾಕಿಕೊಂಡಾ , ನೋಡ್ರಯ್ಯಾ, ಇವರು ಐನೂರು ರುಪಾಯಿ ಕೊಟ್ರಲ್ಲಾ  ಅದು ಸರ್ಕಾರಿ ದುಡ್ಡು,  ಐನೂರು ಯಾಕೆ ಕೊಟ್ರು ಅಂತಾ ಅವರ ಡಿಪೋದಲ್ಲಿ  ಲೆಕ್ಕ ಕೊಡೋಕೆ ತೋರಿಸ್ಬೇಕೂ ಅಂತಾ ಹೇಳಿ  ಇನ್ಯಾಕೆ ತಡ ಹೊರಡಪ್ಪ, ಅಂತಾ ಹೊರಟೆ ಬಿಟ್ರೂ, ಏನೂ ಮಾಡಲು ತೋಚದ ಗ್ರಾಮಸ್ಥರು   ಐನೂರು ಪಡೆದು  ಮಕ್ಕಳನ್ನು   ಹಾಗೂ ಕುರಿಯನ್ನು ತಮಗೆ ಬಿಟ್ಟು ಕೊಡದೆ  ಬಸ್ಸಿಗೆ ಹಾಕಿಸಿಕೊಂಡು ಹೋದ ಮಲ್ಲಿಕ್  ಮೇಷ್ಟ್ರನ್ನು ಶಪಿಸುತ್ತಾ  ಮನೆಗೆ ತೆರಳಿದರು. ......!!!!  ಬಸ್ಸಿನಲ್ಲಿ ಪ್ರಯಾಣ ಮುಂದುವರೆಯಿತು. ಮಲ್ಲಿಕ್ ಮಾಷ್ಟ್ರು ನೋಡ್ರಯ್ಯ  ಹೆಂಗೂ ಏಟು ತಿಂದು  ಐನೂರು ರುಪಾಯಿ ಕೊಟ್ಟು ಬಂದಿದ್ದೀರಿ  ಮನೆಗೆ ಹೋಗಿ ಬಾಡೂಟ ಮಾಡಿ ಮಾರ್ಲಮಿ  ಮಾಡ್ಕಳಿ  ಅಂತಾ ತಮಾಷೆ ಮಾಡಿದ್ದು ಬಸ್ಸಿನಲ್ಲಿ ಇದ್ದವರಿಗೆ ಅಚ್ಚರಿ ತಂದಿದ್ದು ಸುಳ್ಳಲ್ಲಾ. ಹಿಂಗೆ ನಮ್ಮ ಮಲ್ಲಿಕ್ ಮೇಷ್ಟ್ರು ಹೀರೋ ಆಗಿದ್ರು ಅವತ್ತು.!!!!!   ಇಲ್ಲಿಗೆ ಹರಕೆಯ  ಕಥಾಯಣ ಸಮಾಪ್ತಿಯಾಯಿತು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಸರಣಿ: 
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮಲ್ಲಿಕ್ ಮೇಷ್ತ್ರ ರಾಜಿ ಪಂಚಯ್ತಿ ಚೆನ್ನಾಗಿದೆ. ನಮ್ಮೂರ ಕಡೆ ಇದಕ್ಕೆ ಬಸ್ರೂರ್ ಪಂಚಯ್ತಿ ಅಂತ ಹೇಳುತ್ತಾರೆ. ಒಟ್ಟಿನಲ್ಲಿ ಕುರಿಗೆ ಬೇಗ ಮೋಕ್ಷ ಸಿಕ್ಕಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಅನಿಸಿಕೆಗೆ ಧನ್ಯವಾದಗಳು, ಇಂತಹ ಅನುಭವ ಬಸ್ಸಿನಲ್ಲಿ ಪ್ರಯಾಣಿಸುವ ಎಲ್ಲರಿಗೂ ಆಗುವಂತದೆ ಆಲ್ವಾ???
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಒ0ದು ಒಳ್ಳೇ ಕಾಫಿ ಕುಡಿದ ಅನುಭವವಾಯ್ತು. ಹೊ ನೀವು ಮೈಸೂರಿನವರಲ್ಲವೇ, ಶಿವರಾಮಪೇಟೆಯಲ್ಲಿರುವ 'ಕೂಲ್ ಪಾರ್ಲರ್' ಕಾಫಿ ಕುಡಿದ0ಗಾಯ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹ ಹ ಹ ನಿಮ್ಮ ಅನಿಸಿಕೆ ಚೆನ್ನಾಗಿದೆ , ಮುಂದಿನಸಾರಿ ಬನ್ನಿ ನಮ್ಮ ಊರಿಗೆ ಇಬ್ಬರು ಒಟ್ಟಾಗಿ ಶಿವರಾಮಪೇಟೆ "ಕೂಲ್ ಪಾರ್ಲರ್ " ಕಾಫಿ ಕುಡಿಯುವ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಮಯ ಸಿಕ್ಕಾಗ ಖ0ಡಿತಾ ಬರುತ್ತೇನೆ ಆಗ ತಪ್ಪದೇ 'ಕೂಲ್ ಪಾರ್ಲರ್' ಕಾಫಿ ಕುಡಿಯೋಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅನುಭವ ಕಥೆ ಚೆನ್ನಾಗಿದೆ ...ಸರ್ ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗೋಪಾಲ್ ಮಾ ಕುಲಕರ್ಣಿ :-) ನಿಮ್ಮ ಅನಿಸಿಕೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1 :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:-) :-) :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.