#ಈ_ಫೇಸ್_ಬುಕ್ಕೇ_ಹಾಗೆ

4.25

#ಈ_ಫೇಸ್_ಬುಕ್ಕೇ_ಹಾಗೆ

ಅಪೇಕ್ಷಿತ, ಅನಪೇಕ್ಷಿತ ಅತಿಥಿಗಳ ದಂಡು 
ಅಕ್ಕಾ ಅಮ್ಮಾ ಅಣ್ಣಾ ಅಪ್ಪಾ ದನಿಗಳ ಹಿಂಡು
ನಿಸ್ವಾರ್ಥದ ಲೇಪನ ಸ್ವಾರ್ಥವೇ ರಿಂಗಣ...!!.
ಫೇಸ್ ಬುಕ್ಕೇ ಹಾಗೆ..
 

ಕೊಟ್ಟೂ ಕೊಲುವ ಸಂಬಂಧವಿದು
ದೂರದ ಹಸಿರು ಸಮೃದ್ಧಿಯಿರದು  
ಕ್ಷಣದ ಸ್ಪಂದನೆ ವಿಹಿತವಾಗದು
ಸಂವೇದನೆ ಮಣ್ಣಾಗುವುದು  
ಫೇಸ್ ಬುಕ್ಕೇ ಹಾಗೆ..

ತಾಳ್ಮೆಯೇ ಬದುಕೆನ್ನುವರು
ತಾವಿಗೇ ಬೆಂಕಿ ಹಚ್ಚುವರು 
'ತಾನು' ಹೆಚ್ಚೆಂದು ತೃಣದಂತಾಗಿಸುವರು 
ಫೇಸ್ ಬುಕ್ಕೇ ಹಾಗೆ...
 
_

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.